Google Search ಬಂದ್ ಮಾಡುವುದಾಗಿ ಬೆದರಿಕೆ ಹಾಕಿದ Google

Google Search Operation Shut - ಯಾವುದೇ ಅಡೆತಡೆ ಇಲ್ಲದೆ ವೆಬ್ ಸೈಟ್ ಗಳನ್ನು ಸರ್ಚ್ ಇಂಜಿನ್ ಗೆ ಜೋಡಿಸುವುದು  ಸರ್ಚ್ ಇಂಜಿನ್ ನ ಮೂಲಭೂತ ಕಾರ್ಯವಾಗಿದೆ. ಸರ್ಚ್ ಇಂಜಿನ್ ನಲ್ಲಿ ಆರ್ಥಿಕವಾಗಿ ಕಂಟೆಂಟ್ ಹಾಗೂ ಆರ್ಟಿಕಲ್ ಗಳನ್ನು ಜೋಡಿಸುವ ಕಾನೂನು ರೂಪಗೊಂಡರೆ, ಗೂಗಲ್ ಬಳಿ ಸರ್ಚ್ ಇಂಜಿನ್ ಅನ್ನು ಸ್ಥಗಿತಗೊಳಿಸುವ ಹೊರತು ಬೇರೆ ದಾರಿಯೇ ಉಳಿಯುವದಿಲ್ಲ ಎಂದು ಗೂಗಲ್ ಎಂಡಿ ಮೇಲ್ ಸಿಲ್ವಾ ಹೇಳಿದ್ದಾರೆ.

Written by - Nitin Tabib | Last Updated : Jan 22, 2021, 07:26 PM IST

    ಸರ್ಚ್ ಇಂಜಿನ್ ಸೇವೆಯನ್ನು ಸ್ಥಗಿತಗೊಳಿಸುವ ಬೆದರಿಕೆ ಹಾಕಿದ ಗೂಗಲ್

    ಕಂಟೆಂಟ್ ಗಾಗಿ ಹಣ ಪಾವತಿ ಪ್ರಕರಣ.

    ಈ ಕುರಿತು ಸಿದ್ಧಗೊಳ್ಳುತ್ತಿದೆ ನೂತನ ಕಾನೂನು.

Google Search ಬಂದ್ ಮಾಡುವುದಾಗಿ ಬೆದರಿಕೆ ಹಾಕಿದ Google title=
Google Search Operation Shut (File Image)

Google Search Operation Shut - ನವದೆಹಲಿ: ಇಂಟರ್ನೆಟ್ ದೈತ್ಯ ಗೂಗಲ್ ತನ್ನ ಸರ್ಚ್ ಎಂಜಿನ್ ಸೇವೆಯನ್ನು ಸ್ಥಗಿತಗೊಳಿಸುವುದಾಗಿ ಬೆದರಿಕೆ ಹಾಕಿದೆ. ಈ ಸೇವೆಯ ಮೇಲೆ ಹೆಚ್ಚಿನ ಒತ್ತಡ ಹೇರಿದರೆ ಸರ್ಚ್ ಇಂಜಿನ್ ಸೇವೆಯನ್ನು ಸ್ಥಗಿತಗೊಳಿಸಲಾಗುವುದು ಎಂದು ಕಂಪನಿ ಹೇಳಿದೆ. ಆಸ್ಟ್ರೇಲಿಯಾದಲ್ಲಿ ಮಿಡಿಯಾ ಕಂಪನಿಗಳಿಗೆ ಪೇಮೆಂಟ್ ನೀಡಲು ನೂತನ ಕಾನೂನು ಜಾರಿಗೊಳಿಸಲಾಗುತ್ತಿದೆ.  ಟೆಕ್ ದಿಗ್ಗಜ ಕಂಪನಿ ಈ ಹೊಸ ಕಾನೂನಿಗೆ ತನ್ನ ಆಕ್ಷೇಪ ವ್ಯಕ್ತಪಡಿಸಿದೆ.

ಪ್ರಕರಣ ಏನು?
ನಮ್ಮ ಪಾಲುದಾರ ವೆಬ್ ಸೈಟ್ wionews.com ನಲ್ಲಿ ಪ್ರಕಟಗೊಂಡ ವರದಿಯ ಪ್ರಕಾರ ಈ ಸುದ್ದಿ ಆಸ್ಟ್ರೇಲಿಯಾದಿಂದ ಹೊರಬಂದಿದೆ. ಅಲ್ಲಿನ ಸರ್ಕಾರ ಮಾಧ್ಯಮಗಳ ಹಿತರಕ್ಷಣೆಗಾಗಿ ಈ ಕಾನೂನನ್ನು ಜಾರಿಗೆ ತ್ತರುತ್ತಿದೆ. ಈ ನಿಯಮದ ಅಡಿ ಯಾವುದೇ ಸಾಮಾಜಿಕ ಮಾಧ್ಯಮ ಕಂಪನಿ ಅಥವಾ ಇಂಟರ್ನೆಟ್ ಕಂಪನಿ ಮಾಧ್ಯಮ ಕಂಪನಿಗಳ ಆರ್ಟಿಕಲ್ ಅಥವಾ ಕಂಟೆಂಟ್ ಬಳಕೆ ಮಾಡಿದರೆ, ಆ ಕಂಪನಿ ಕಂಟೆಂಟ್ ಗಾಗಿ ಹಣ ಪಾವತಿಸಬೇಕು ಎನ್ನಲಾಗಿದೆ.

ಇದನ್ನು ಓದಿ- GMAIL ನ ಈ Top Secret Feature ಗಳು ನಿಮಗೂ ಗೊತ್ತಿರಲಿಕ್ಕಿಲ್ಲ

ಆಸ್ಟ್ರೇಲಿಯಾ ಸರ್ಕಾರದ ಈ ಹೊಸ ಕಾನೂನಿಗೆ ಅಮೇರಿಕಾದ ಟೆಕ್ ದೈತ್ಯ ಗೂಗಲ್ (Google) ವಿರೋಧ ವ್ಯಕ್ತಪಡಿಸಿದೆ ಎನ್ನಲಾಗಿದೆ. ಅಷ್ಟೇ ಅಲ್ಲ ಈ ಹೊಸ ಕಾನೂನನ್ನು ಬದಲಾಯಿಸದೆ ಹೋದಲ್ಲಿ ಆಸ್ಟ್ರೆಲಿಯಾದಲ್ಲಿ ಸರ್ಚ್ ಇಂಜಿನ್ ಸೇವೆಯನ್ನು ಸ್ಥಗಿತಗೊಳಿಸುವುದಾಗಿ ಕಂಪನಿ ಬೆದರಿಕೆ ಹಾಕಿದೆ. ಅಷ್ಟೇ ಅಲ್ಲ ಒಂದು ವೇಳೆ ಸರ್ಚ್ ಮಾಡುವ ವೇಳೆ ಮಾಧ್ಯಮಗಳ ವರದಿಗಳು ಪ್ರಕಟಗೊಂಡರೆ, ಆ ವರದಿಗಳಿಗೆ ಹಣ ಪಾವತಿಸಲಾಗುವುದಿಲ್ಲ ಎಂದು ಕಂಪನಿ ಸ್ಪಷ್ಟಪಡಿಸಿದೆ.

ಇದನ್ನು ಓದಿ- Whatsapp ಬಳಕೆದಾರರೇ ಎಚ್ಚರ..! google searchನಲ್ಲಿ ಲೀಕ್ ಆಗಿದೆ ವಾಟ್ಸ್ಆ್ಯಪ್ ಗ್ರೂಪ್ ಲಿಂಕ್

ಯಾವುದೇ ಅಡೆತಡೆ ಇಲ್ಲದೆ ವೆಬ್ ಸೈಟ್ ಗಳನ್ನು ಸರ್ಚ್ ಇಂಜಿನ್ ಗೆ ಜೋಡಿಸುವುದು  ಸರ್ಚ್ ಇಂಜಿನ್ ನ ಮೂಲಭೂತ ಕಾರ್ಯವಾಗಿದೆ. ಸರ್ಚ್ ಇಂಜಿನ್ ನಲ್ಲಿ ಆರ್ಥಿಕವಾಗಿ ಕಂಟೆಂಟ್ ಹಾಗೂ ಆರ್ಟಿಕಲ್ ಗಳನ್ನು ಜೋಡಿಸುವ ಕಾನೂನು ರೂಪಗೊಂಡರೆ, ಗೂಗಲ್ ಬಳಿ ಸರ್ಚ್ ಇಂಜಿನ್ ಅನ್ನು ಸ್ಥಗಿತಗೊಳಿಸುವ ಹೊರತು ಬೇರೆ ದಾರಿಯೇ ಉಳಿಯುವದಿಲ್ಲ ಎಂದು ಗೂಗಲ್ ಎಂಡಿ ಮೇಲ್ ಸಿಲ್ವಾ ಹೇಳಿದ್ದಾರೆ.

ಇದನ್ನು ಓದಿ-Google New Search Feature: Covid-19 Vaccine ಮಾಹಿತಿಗಾಗಿ Google ನಿಂದ ಹೊಸ ಸರ್ಚ್ ವೈಶಿಷ್ಟ್ಯ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News