ನವದೆಹಲಿ: Google Chrome Zero Day Hack - ಮಹತ್ವಪೂರ್ಣ ಹ್ಯಾಕ್ ವೊಂದು ಪತ್ತೆಯಾದ ನಂತರ 2 ಶತಕೋಟಿಗೂ ಹೆಚ್ಚು ಗೂಗಲ್ ಕ್ರೋಮ್ ಬಳಕೆದಾರರಿಗೆ ತಮ್ಮ ಬ್ರೌಸರ್‌ಗಳನ್ನು ಅಪ್‌ಡೇಟ್ ಮಾಡಲು ಎಚ್ಚರಿಕೆ ನೀಡಲಾಗಿದೆ. ಈ ದಾಳಿಯು ಬಹುತೇಕ ಎಲ್ಲಾ ಗೂಗಲ್ ಕ್ರೋಮ್ ಬಳಕೆದಾರರನ್ನು ಹ್ಯಾಕ್ ಮಾಡುವ ಅಪಾಯಕ್ಕೆ ಸಿಲುಕಿಸಿದೆ. ಗೂಗಲ್ ಕ್ರೋಮ್‌ನಲ್ಲಿ ಹೊಸ Zero Day Hack Exploite ಪತ್ತೆಯಾದ ಬಳಿಕ ಗೂಗಲ್ ಸ್ವತಃ ತನ್ನ ಬ್ಲಾಗ್ ಪೋಸ್ಟ್‌ನಲ್ಲಿ ಹ್ಯಾಕ್ ಅನ್ನು ಖಚಿತಪಡಿಸಿದೆ. ಪೋಸ್ಟ್ ಹೀಗಿದೆ, 'ನಾವು ಹಿಂದೆ CVE-2021-30563 ಹೆಸರಿನ Zero Day Hack Exploite ಬಗ್ಗೆ ಎಚ್ಚರಿಕೆ ನೀಡಿದ್ದೆವು ಮತ್ತು ಈಗ ಇನ್ನೊಂದು Exploite ಹೊರಹೊಮ್ಮಿದೆ, ಇದು ಕೂಡ ಅಷ್ಟೇ ಅಪಾಯಕಾರಿಯಾಗಿದ್ದು, ಇದನ್ನು CVE-2021-37973 ಎಂದು ಹೆಸರಿಸಲಾಗಿದೆ.' "CVE-2021-37973 ತುಂಬಾ ಅಪಾಯಕಾರಿಯಾಗಿದೆ" ಎಂದು ಬ್ಲಾಗ್‌ನಲ್ಲಿ, Google ಹೇಳಿಕೊಂಡಿದೆ.
ಏನಿದು Zero Day Hack?
Zero Day Hack Exploite ಆಗಿದ್ದು, ಸೈಬರ್ ಅಪರಾಧಿಗಳು ಇದರ ಲಾಭವನ್ನು ಪಡೆಯುವಲ್ಲಿ ಸಫಲರಾಗುತ್ತಾರೆ. ಗೂಗಲ್ ಗೆ ಈ ಕುರಿತು ಪತ್ತೆಯಾಗುವ ಮೊದಲೇ ಇದು ಅಪಾಯಕಾರಿ ರೀತಿಯಲ್ಲಿ ಹರಡಿದೆ. ಇದನ್ನು ತಡೆಯಲು ಗೂಗಲ್ ಪ್ಯಾಚ್ ಬಿಡುಗಡೆ ಮಾಡುವ ಮೊದಲೇ ಇದು ಸುಮಾರು 2.65 ಬಿಲಿಯನ್ ಬಳಕೆದಾರರನ್ನು ಅಪಾಯಕ್ಕೆ ದೂಡಿದೆ.
ನಿಮ್ಮ ಗೂಗಲ್ ಕ್ರೋಮ್ ಅನ್ನು ತಕ್ಷಣ ಅಪ್ಡೇಟ್ ಮಾಡಿ
ಗೂಗಲ್ ಕ್ರೋಮ್ ಬ್ಲಾಗ್ ಪ್ರಕಾರ, ಈ ಹ್ಯಾಕ್ ಕುರಿತು ಯಾವುದೇ ಥರ್ಡ್ ಪಾರ್ಟಿಯಿಂದ ಈ ಹ್ಯಾಕ್ ಪತ್ತೆಯಾಗಿಲ್ಲ ಮತ್ತು ಸ್ವತ ಗೂಗಲ್ ಉದ್ಯೋಗಿಗಳೇ ಈ ಹ್ಯಾಕ್ ಕುರಿತು ಪತ್ತೆಹಚ್ಚಿದ್ದು, ಎಲ್ಲಾ ಬಳಕೆದಾರರು ತಮ್ಮ ಗೂಗಲ್ ಕ್ರೋಮ್ ಅಪ್ಗ್ರೇಡ್ ಮಾಡಬೇಕು ಮತ್ತು ತಕ್ಷಣಕ್ಕೆ ಮಾಡಬೇಕು ಎಂದು ಸೂಚಿಸಲಾಗಿದೆ.
ಗೂಗಲ್ ತನ್ನ ಬ್ಲಾಗ್ ನಲ್ಲಿ ಅಪಾಯದ ಶ್ರೇಣಿಯನ್ನು ಬಹಿರಂಗಪಡಿಸಿದೆ.
'High CVE-2021-37973: ಪೋರ್ಟಲ್ ನಲ್ಲಿ ಉಚಿತ ಉಪಯೋಗಿಸಿ. Google TAG ನಿಂದ ಕ್ಲೆಮೆಂಟ್ ಲಿಸಿಗ್ನೆ ವರದಿ ಮಾಡಲಾಗಿದೆ, 2021-09-21 ರಂದು ಗೂಗಲ್ ನ ಪ್ರಾಜೆಕ್ಟ್ ಝೀರೋನಿಂದ ಸರ್ಜೇಯಿ ಗ್ಲೆಜುನೋವ್ ಹಾಗೂ ಮಾರ್ಕ್ ಬ್ರಾಂಡ್ ಅವರಿಂದ ತಾಂತ್ರಿಕ ಸಹಾಯದ ಜೊತೆಗೆ' ಎನ್ನಲಾಗಿದೆ. ಇದಲ್ಲದೆ, 'ಅಭಿವೃದ್ಧಿ ಚಕ್ರದಲ್ಲಿ ನಮ್ಮೊಂದಿಗೆ ಕೆಲಸ ನಿರ್ವಹಿಸಿದ ಎಲ್ಲಾ ಭದ್ರತಾ ಸಂಶೋಧಕರಿಗೆ ನಾವು ಧನ್ಯವಾದಗಳನ್ನು ಅರ್ಪಿಸುತ್ತೇವೆ. ಏಕೆಂದರೆ ಇದರಿಂದ ನಾವು ಬಗ್ (Virus In Google Chrome) ಅನ್ನು ಸ್ಥಿರ ಚಾನಲ್ ಗೆ ತಲುಪುವುದನ್ನು ತಪ್ಪಿಸಬಹುದು. ಇದಕ್ಕಿಂತಲೂ ದೊಡ್ಡ ವಿಷಯ ಎಂದರೆ 2 ಶತಕೋಟಿ ಗೂಗಲ್ ಕ್ರೋಮ್ ಬಳಕೆದಾರರಿಗೆ Google ಫಿಕ್ಸ್ ಜಾರಿಗೊಳಿಸಿದೆ' ಎಂದು ಬರೆಯಲಾಗಿದೆ.
ಇದನ್ನೂ ಓದಿ-NASA: ಇಂದು ಭೂಮಿಗಪ್ಪಳಿಸಲಿದೆ Geomagnetic Storm, ಹಲವು ದೇಶಗಳಿಗೆ Black Out ಅಪಾಯ!
Google Chrome ಬ್ರೌಸಿಂಗ್ ಸುರಕ್ಷಿತವಾಗಿದೆಯೋ ಅಥವಾ ಇಲ್ಲವೋ ಹೇಗೆ ತಿಳಿಯಬೇಕು?
>> ಮೊದಲು ಬ್ರೌಸರ್ ನ ಸೆಟ್ಟಿಂಗ್ ವಿಭಾಗಕ್ಕೆ ಭೇಟಿ ನೀಡಿ.
>> ನಂತರ 'ಹೆಲ್ಪ್' ಮೇಲೆ ಕ್ಲಿಕ್ಕಿಸಿ.
>> ಈಗ About Google Chrome ಮೇಲೆ ಕ್ಲಿಕ್ಕಿಸಿ.
>> Google Chrome ವರ್ಶನ್ 94.0.4606.61 ಅಥವಾ ಅದಕ್ಕಿಂತ ಹೆಚ್ಚಿನ ವರ್ಷನ್ ಸುರಕ್ತಿತವಾಗಿವೆ.
>> ಒಂದು ವೇಳೆ ನಿಮ್ಮ ಬಳಿ ಈ ವರ್ಶನ್ ಇಲ್ಲ ಎಂದಾದಲ್ಲಿ ನೀವು ಏನನ್ನು ಮಾಡಲು ಸಾಧ್ಯವಿಲ್ಲ. ಕೇವಲ ನಿರೀಕ್ಷೆ ಮಾಡಿ ಅಥವಾ ನಿಮ್ಮ ಸಿಸ್ಟಂ ಅನ್ನು ಬಂದ್ ಮಾಡಿ.
ಇದನ್ನೂ ಓದಿ-UPI Payment: Internet ಇಲ್ಲದೆಯೂ ಕೂಡ ಮೊಬೈಲ್ ಪೇಮೆಂಟ್ ಮಾಡಬಹುದು! ಇಲ್ಲಿದೆ ಜಬರ್ದಸ್ತ್ ಟ್ರಿಕ್
ಗೂಗಲ್ ಕ್ರೋಮ್ ಅಪ್ಗ್ರೇಡ್ (Google Ghrome Update) ಮಾಡಿದ ಬಳಿಕ ಎಲ್ಲವನ್ನು ಮೊದಲಿನ ಸ್ಥಿತಿಗೆ ತರಲು ಸಿಸ್ಟಂ ಅನ್ನು ರೀಸ್ಟಾರ್ಟ್ ಮಾಡಿ. ಇದು ಅಪ್ಗ್ರೇಡ್ ಮಾಡುವಷ್ಟೇ ಮಹತ್ವದ್ದಾಗಿದೆ.
ಇದನ್ನೂ ಓದಿ-ಶೀಘ್ರದಲ್ಲೇ ಈ ಮೊಬೈಲ್ ಪೋನ್ ಗಳಲ್ಲಿ ಬಂದ್ ಆಗಲಿದೆ WhatsApp..!
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ