ಇನ್ಸ್ಟಾಗ್ರಾಮ್ ಬಳಕೆದಾರರಿಗೊಂದು ಭಾರಿ ಸಂತಸದ ಸುದ್ದಿ, ಇನ್ಸ್ಟಾನಲ್ಲಿ ಇನ್ಮುಂದೆ ನೀವು ಇದನ್ನೂ ಮಾಡಬಹುದು!

Good News For Instagram Users: ಕಂಪನಿಯು ಇದೀಗ ಜಾಗತಿಕವಾಗಿ ಇನ್ಸ್ಟಾಗ್ರಾಮ್ ರೀಲ್ಸ್ ಅನ್ನು ಡೌನ್‌ಲೋಡ್ ಮಾಡುವ ವೈಶಿಷ್ಟ್ಯವನ್ನು ಪರಿಚಯಿಸಿದೆ. ವರ್ಷದ ಆರಂಭದಲ್ಲಿಯೇ ಇದನ್ನು ಜಾರಿಗೆಗೊಳಿಸಲಾಗಿತ್ತು. (Technology News In Kannada)  

Written by - Nitin Tabib | Last Updated : Nov 23, 2023, 07:11 PM IST
  • ಬಳಕೆದಾರರು ರೀಲ್ ಅನ್ನು ಡೌನ್‌ಲೋಡ್ ಮಾಡಲು ಬಯಸದಿದ್ದರೆ, ಅವರು ಅದನ್ನು ನಂತರ ವೀಕ್ಷಿಸಲು ಉಳಿಸಬಹುದು.
  • ಇದಕ್ಕಾಗಿ ಅವರು ಇನ್ಸ್ಟಾಗ್ರಾಮ್ ರೀಲ್ಸ್‌ನಲ್ಲಿ ಬರುವ ಮೂರು ಡಾಟ್ ಐಕಾನ್ ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ.
  • ಅಲ್ಲಿ ಅವರು ಅದನ್ನು ಉಳಿಸುವ ಆಯ್ಕೆಯನ್ನು ಪಡೆಯುತ್ತಾರೆ.
ಇನ್ಸ್ಟಾಗ್ರಾಮ್ ಬಳಕೆದಾರರಿಗೊಂದು ಭಾರಿ ಸಂತಸದ ಸುದ್ದಿ, ಇನ್ಸ್ಟಾನಲ್ಲಿ ಇನ್ಮುಂದೆ ನೀವು ಇದನ್ನೂ ಮಾಡಬಹುದು! title=

ಬೆಂಗಳೂರು: ಇನ್ಸ್ಟಾಗ್ರಾಮ್ ಇದೀಗ ತನ್ನ ಬಳಕೆದಾರರಿಗೆ ಸಾರ್ವಜನಿಕ ಖಾತೆಗಳಿಂದ ರೀಲ್‌ಗಳನ್ನು ಡೌನ್‌ಲೋಡ್ ಮಾಡುವ ಸೌಲಭ್ಯವನ್ನು ಒದಗಿಸುತ್ತಿದೆ. ಈ ವರ್ಷದ ಆರಂಭದಲ್ಲಿ, ಮೆಟಾ-ಮಾಲೀಕತ್ವದ ಕಿರು ವೀಡಿಯೊ ಹಂಚಿಕೆ ವೇದಿಕೆ ಇನ್ಸ್ಟಾಗ್ರಾಮ್ ಯುಎಸ್ ಗಾಗಿ ಇನ್ಸ್ಟಾಗ್ರಾಮ್ ರೀಲ್ಸ್ ಡೌನ್‌ಲೋಡ್ ವೈಶಿಷ್ಟ್ಯವನ್ನು ಪರಿಚಯಿಸಿತ್ತು. ಇದೀಗ ಅದು ಜಾಗತಿಕ ಮಟ್ಟದಲ್ಲಿ ಲಭ್ಯವಾಗುತ್ತಿದೆ. ಇದರರ್ಥ ಇನ್ಮುಂದೆ ಬಳಕೆದಾರರು ರೀಲ್‌ಗಳನ್ನು ಡೌನ್‌ಲೋಡ್ ಮಾಡಲು ಮತ್ತು ಯಾವುದೇ ಥರ್ಡ್ ಪಾರ್ಟಿ ಅಪ್ಲಿಕೇಶನ್ ಇಲ್ಲದೆ ತಮ್ಮ ಸಾಧನದಲ್ಲಿ ಅವುಗಳನ್ನು ಉಳಿಸಲು ಸಾಧ್ಯವಾಗಲಿದೆ. ಆದರೆ, ಕೇವಲ ಪಬ್ಲಿಕ್ ಆಗಿರುವ ಖಾತೆಗಳಿಂದ ರೀಲ್‌ಗಳನ್ನು ಮಾತ್ರ ಡೌನ್‌ಲೋಡ್ ಮಾಡಬಹುದು. ಖಾಸಗಿ ಖಾತೆಗಳಿಗೆ ಈ ಸೌಲಭ್ಯ ಲಭ್ಯವಿಲ್ಲ. ಬನ್ನಿ, ಇನ್ಸ್ಟಾಗ್ರಾಮ್ ನ ಈ ವೈಶಿಷ್ಟ್ಯವನ್ನು ಹೇಗೆ ಬಳಸಬಹುದು ತಿಳಿದುಕೊಳ್ಳೋಣ, (Technology News In Kannada)

ಇನ್ಸ್ಟಾಗ್ರಾಮ್ ರೀಲ್ಸ್ ಡೌನ್‌ಲೋಡ್ ವೈಶಿಷ್ಟ್ಯ
ಇನ್‌ಸ್ಟಾಗ್ರಾಮ್ ಮುಖ್ಯಸ್ಥ ಆಡಮ್ ಮೊಸ್ಸೆರಿ ಅವರು ತಮ್ಮ ಇನ್‌ಸ್ಟಾಗ್ರಾಮ್ ಚಾನೆಲ್ ಐಜಿ ಅಪ್‌ಡೇಟ್‌ಗಳಲ್ಲಿ ಸಾರ್ವಜನಿಕ ಖಾತೆಗಳಿಂದ ಇನ್‌ಸ್ಟಾಗ್ರಾಮ್ ರೀಲ್‌ಗಳನ್ನು ಡೌನ್‌ಲೋಡ್ ಮಾಡುವ ವೈಶಿಷ್ಟ್ಯವು ಇದೀಗ ಜಾಗತಿಕವಾಗಿ ಲಭ್ಯವಿದೆ ಎಂದು ಹೇಳಿದ್ದಾರೆ. ನೀವು ಈಗ ಸಾರ್ವಜನಿಕ ಖಾತೆಗಳಲ್ಲಿ ಹಂಚಿಕೊಂಡಿರುವ ರೀಲ್‌ಗಳನ್ನು ನಿಮ್ಮ ಮೊಬೈಲ್ ಗೆ ಡೌನ್‌ಲೋಡ್ ಮಾಡಬಹುದು. ಡೌನ್‌ಲೋಡ್ ಮಾಡಿದ ರೀಲ್‌ನಲ್ಲಿ ರಚನೆಕಾರರ ಇನ್ಸ್ಟಾಗ್ರಾಮ್ ಹ್ಯಾಂಡಲ್‌ನ ವಾಟರ್‌ಮಾರ್ಕ್ ಗೋಚರಿಸಲಿದೆ. 2023 ರ ಆರಂಭದಲ್ಲಿ ಇದನ್ನು ಯುಎಸ್‌ಗೆ ಬಿಡುಗಡೆ ಮಾಡಲಾಗಿದೆ ಎಂದು ಅವರು ಬಹಿರಂಗಪಡಿಸಿದ್ಧರೂ. ಇದೀಗ ಈ ಸೌಲಭ್ಯವು ಜಾಗತಿಕವಾಗಿ ಲಭ್ಯವಿದೆ ಎಂದಿದ್ದಾರೆ.

ಅಷ್ಟೇ ಅಲ್ಲ, ಸಾರ್ವಜನಿಕ ಖಾತೆ ಹೊಂದಿರುವ ಬಳಕೆದಾರರು ತಮ್ಮ ರೀಲ್ ಅನ್ನು ಯಾರಾದರೂ ಡೌನ್‌ಲೋಡ್ ಮಾಡಲು ಬಯಸದಿದ್ದರೆ, ಅವರು ಈ ವೈಶಿಷ್ಟ್ಯವನ್ನು ಸಹ ಆಫ್ ಮಾಡಬಹುದು ಎಂದು ಅವರು ತಮ್ಮ ಪೋಸ್ಟ್‌ನಲ್ಲಿ ಈ ಮಾಹಿತಿಯನ್ನು ನೀಡಿದ್ದಾರೆ.

ಇದನ್ನೂ ಓದಿ-ಸುಮಾರು 171 ಕಿ.ಮೀ ರೆಂಜ್ ಇರುವ ಈ ಅತ್ಯಂತ ಅಗ್ಗದ ಇ-ಬೈಕ್ ಭಾರತದಲ್ಲಿ ಬಿಡುಗಡೆ, ಬೆಲೆ ಕೇವಲ ಇಷ್ಟೇ!

 ಅಲ್ಲದೆ, ಬಳಕೆದಾರರು ರೀಲ್ ಅನ್ನು ಡೌನ್‌ಲೋಡ್ ಮಾಡಲು ಬಯಸದಿದ್ದರೆ, ಅವರು ಅದನ್ನು ನಂತರ ವೀಕ್ಷಿಸಲು ಉಳಿಸಬಹುದು. ಇದಕ್ಕಾಗಿ ಅವರು ಇನ್ಸ್ಟಾಗ್ರಾಮ್  ರೀಲ್ಸ್‌ನಲ್ಲಿ ಬರುವ ಮೂರು ಡಾಟ್ ಐಕಾನ್ ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ. ಅಲ್ಲಿ ಅವರು ಅದನ್ನು ಉಳಿಸುವ ಆಯ್ಕೆಯನ್ನು ಪಡೆಯುತ್ತಾರೆ. ಇದರ ಮೇಲೆ ಕ್ಲಿಕ್ ಮಾಡುವ ಮೂಲಕ, ಅವರು ಅದನ್ನು ನಂತರ ವೀಕ್ಷಿಸಲು ಅಪ್ಲಿಕೇಶನ್‌ನಲ್ಲಿ ರೀಲ್ ಅನ್ನು ಉಳಿಸಬಹುದು.

ಇದನ್ನೂ ಓದಿ-ಗೂಗಲ್ ಪೇ ಬಳಕೆದಾರರಿಗೊಂದು ಎಚ್ಚರಿಕೆ, ಯುಪಿಐ ಪೆಮೆಂಟ್ ಮಾಡುವ ಮುನ್ನ ಇದನ್ನು ಖಚಿತಪಡಿಸಿ!

ಹಂಚಿಕೆ ಬಟನ್ ಮೂಲಕ ಡೌನ್‌ಲೋಡ್ ಮಾಡಲು ಸಾಧ್ಯವಾಗುತ್ತದೆ
ರೀಲ್‌ಗಳನ್ನು ಡೌನ್‌ಲೋಡ್ ಮಾಡುವುದು ಹೇಗೆ ಎಂದು ಆಡಮ್ ಮೊಸ್ಸೆರಿ ಮುಂದೆ ವಿವರಿಸಿದ್ದಾರೆ. ರೀಲ್ ಅನ್ನು ಡೌನ್‌ಲೋಡ್ ಮಾಡಲು, ಬಳಕೆದಾರರು ರೀಲ್‌ನಲ್ಲಿ ನೀಡಲಾದ ಹಂಚಿಕೆ ಬಟನ್ ಅನ್ನು ಬಳಸಬೇಕಾಗುತ್ತದೆ. ಈ ವೈಶಿಷ್ಟ್ಯವು ಸಾಕಷ್ಟು ಉಪಯುಕ್ತವಾಗಿದೆ. ಇದೀಗ ಬಳಕೆದಾರರು ಯಾವುದೇ ಥರ್ಡ್ ಪಾರ್ಟಿ ಅಪ್ಲಿಕೇಶನ್ ಇಲ್ಲದೆ ಇನ್ಸ್ಟಾಗ್ರಾಮ್  ರೀಲ್ ಅನ್ನು ಡೌನ್‌ಲೋಡ್ ಮಾಡಬಹುದು.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News