Apple iPhone 13 ಖರೀದಿದಾರರಿಗೆ ಶುಭ ಸುದ್ದಿ!: ಬೆಲೆಯಲ್ಲಿ ಭಾರಿ ಕಡಿತ, ಈಗ ಎಷ್ಟಿದೆ ನೋಡಿ..

6 ಸಾವಿರ ರೂ.ಗಳ ಡಿಸ್ಕೌಂಟ್ ಜೊತೆಗೆ ನೀವು ಉತ್ತಮ ಸ್ಥಿತಿಯಲ್ಲಿರುವ ಹಳೆಯ ಐಫೋನ್ ಅನ್ನು ಎಕ್ಸ್​ಚೇಂಜ್ ಆಫರ್​ ನಲ್ಲಿ ಖರೀದಿಸಬಹುದು.

Written by - Puttaraj K Alur | Last Updated : Nov 16, 2021, 08:37 AM IST
  • Appleನ iPhone 13 ಖರೀದಿದಾರರಿಗೆ ಭಾರೀ ರಿಯಾಯತಿ ಆಫರ್ ಲಭ್ಯವಿದೆ
  • 79,900 ರೂ. ಬೆಲೆಯ iPhone 13 ನಿಮಗೆ ಈಗ 55,990 ರೂ.ಗೆ ಸಿಗಲಿದೆ
  • ಡಿಸ್ಕೌಂಟ್ ಜೊತೆಗೆ ಐಫೋನ್ ಅನ್ನು ಎಕ್ಸ್​ಚೇಂಜ್ ಆಫರ್​ ನಲ್ಲಿ ಖರೀದಿಸಬಹುದು
Apple iPhone 13 ಖರೀದಿದಾರರಿಗೆ ಶುಭ ಸುದ್ದಿ!: ಬೆಲೆಯಲ್ಲಿ ಭಾರಿ ಕಡಿತ, ಈಗ ಎಷ್ಟಿದೆ ನೋಡಿ..    title=
iPhone 13 55,990 ರೂ.ಗೆ ಸಿಗಲಿದೆ

ನವದೆಹಲಿ: Appleನ iPhone 13 ಸಾಕಷ್ಟು ದುಬಾರಿಯಾಗಿದೆ. ಪ್ರತಿಯೊಬ್ಬರೂ ಈ ಫೋನ್ ಖರೀದಿಸಲು ಸಾಧ್ಯವಿಲ್ಲ. ಹೀಗೆ ಹೇಳುವವರಿಗೆ ಶುಭ ಸುದ್ದಿಯೊಂದು ಸಿಕ್ಕಿದೆ. ಐಫೋನ್ 13ರ ಬೆಲೆಯನ್ನು ಕಡಿಮೆ ಮಾಡಲಾಗಿದೆ. ಹೌದು, iPhone 13 128GB ಮಾಡೆಲ್ ಈಗ 55,990 ರೂ.ಗೆ ಲಭ್ಯವಿದೆ. ಬಿಡುಗಡೆಯ ಸಮಯದಲ್ಲಿ79,900 ರೂ. ಇದ್ದ ಈ ಫೋನ್ ಬೆಲೆ ಇದೀಗ ಭಾರೀ ಕಡಿಮೆಯಾಗಿದೆ. ಸೆಪ್ಟೆಂಬರ್‌ನಲ್ಲಿ Apple iPhone 13 ಸರಣಿಯನ್ನು ಬಿಡುಗಡೆ ಮಾಡಿತ್ತು. ಇದರಲ್ಲಿ iPhone 13 Mini, iPhone 13, iPhone 13 Pro ಮತ್ತು iPhone 13 Pro Max ಸೇರಿವೆ.

6 ಸಾವಿರ ರೂ. ರಿಯಾಯಿತಿ ಸಿಗಲಿದೆ

Apple ವಿತರಕರ ಅಧಿಕೃತ ವೆಬ್‌ಸೈಟ್ IndiaiStore.com ನಲ್ಲಿ iPhone 13 ಸ್ಮಾರ್ಟ್‌ಫೋನ್ ಸರಣಿಯಲ್ಲಿ ದೊಡ್ಡ ರಿಯಾಯಿತಿ ಇದೆ. ನೀವು ಸ್ಟೋರ್‌ನಿಂದ iPhone 13 ಅನ್ನು ಖರೀದಿಸಲು ಬಯಸಿದರೆ HDFC ಬ್ಯಾಂಕ್ ಕಾರ್ಡ್‌ನೊಂದಿಗೆ ಪಾವತಿ ಮಾಡಬೇಕು. ಹೀಗೆ ಮಾಡಿದರೆ 6 ಸಾವಿರ ರೂ.ಗಳ ರಿಯಾಯಿತಿ ಪಡೆಯುತ್ತೀರಿ. ನೀವು EMI ಆಯ್ಕೆಯನ್ನು ಆರಿಸಿಕೊಂಡರೂ ಈ ರಿಯಾಯಿತಿ ಅನ್ವಯಿಸುತ್ತದೆ. ಆಗ ಇದು ನಿಮಗೆ 73,900 ರೂ.ಗೆ ಸಿಗಲಿದೆ.

ಇದನ್ನೂ ಓದಿ: ALERT: ಈ 7 ಆಪ್ ನಿಮ್ಮ ಫೋನ್ ನಲ್ಲಿದ್ದರೆ ತಕ್ಷಣಕ್ಕೆ ಡಿಲೀಟ್ ಮಾಡಿ, ಕಾರಣ Google ಅವುಗಳನ್ನು ಡಿಲೀಟ್ ಮಾಡಿದೆ

ಕೇವಲ 55,990 ರೂ.ಗಳಲ್ಲಿ ಪಡೆಯಬಹುದು

6 ಸಾವಿರ ರೂ.ಗಳ ಡಿಸ್ಕೌಂಟ್ ಜೊತೆಗೆ ನೀವು ಉತ್ತಮ ಸ್ಥಿತಿಯಲ್ಲಿರುವ ಹಳೆಯ ಐಫೋನ್ ಅನ್ನು ಎಕ್ಸ್​ಚೇಂಜ್ ಆಫರ್​ ನಲ್ಲಿ ಖರೀದಿಸಬಹುದು. iStore ನಿಮಗೆ 18,000 ರೂ.ಗಳ ಹೆಚ್ಚುವರಿ ರಿಯಾಯಿತಿ ಸಿಗದಲಿದೆ. ಭಾರತದಲ್ಲಿ iPhone XR 64GB ವಿನಿಮಯ ಮೌಲ್ಯವು ಸುಮಾರು 18,000 ರೂ. ಇದೆ. ಹೀಗಾಗಿ ನೀವು iPhone 11 ಅಥವಾ ಉನ್ನತ ಮಾದರಿಯನ್ನು ಖರೀದಿಸಿದರೆ ನಿಮಗೆ ಹೆಚ್ಚಿನ ರಿಯಾಯಿತಿ ಸಿಗಲಿದೆ. ಇದಲ್ಲದೆ ನೀವು 3 ಸಾವಿರ ರೂ.ಗಳ(Exchange Incentive) ಹೆಚ್ಚುವರಿ ರಿಯಾಯಿತಿ ಕೂಡ ಪಡೆಯಲಿದ್ದೀರಿ. ಇದರಿಂದ ನಿಮಗೆ iPhone 13 ಸುಮಾರು 55,990 ರೂ.ಗೆ ಸಿಗಲಿದೆ.

ಈ ವಿನಿಮಯ ಕೊಡುಗೆಯು Apple ಅಧಿಕೃತ ಟ್ರೇಡ್-ಇನ್ ಪೂರೈಕೆದಾರರಾದ Cashify ಮತ್ತು Servifyಗೆ ಮಾತ್ರ ಅನ್ವಯಿಸುತ್ತದೆ. ಅಂದರೆ ನೀವು ಈ ಆಫರ್ ಅನ್ನು ಇಲ್ಲಿ ಖರೀದಿಸಬೇಕಾಗುತ್ತದೆ. ಅದೇ ರೀತಿ iPhone 13 Mini, iPhone 13 Pro ಮತ್ತು iPhone 13 Pro Max ನಲ್ಲಿಯೂ ಇದೇ ರಿಯಾಯಿತಿ ಲಭ್ಯವಿದೆ. ಇವುಗಳ ಬೆಲೆ ಕ್ರಮವಾಗಿ 45900 ರೂ., 96900 ರೂ. ಮತ್ತು 1,06,900 ರೂ. ಇದೆ.

ಇದನ್ನೂ ಓದಿ: PUBG New State: ಲಾಂಚ್ ಆಗುತ್ತಲೇ ಕಮಾಲ್ ಸೃಷ್ಟಿಸಿದ PUBG ನ್ಯೂ ಸ್ಟೇಟ್, ಗೂಗಲ್ ಪ್ಲೇ ಸ್ಟೋರ್‌ನಲ್ಲಿ 10 ಮಿಲಿಯನ್ ಡೌನ್‌ಲೋಡ್‌

iPhone 13 ವೈಶಿಷ್ಟ್ಯಗಳು

iPhone 13 ಫೋನ್ 2532x1170 ಪಿಕ್ಸೆಲ್‌ಗಳ ರೆಸಲ್ಯೂಶನ್‌ನೊಂದಿಗೆ 6.1-ಇಂಚಿನ OLED ಡಿಸ್ಪ್ಲೇಯೊಂದಿಗೆ ಬರುತ್ತದೆ. ಇದು ಆಪಲ್‌ನ A15 ಬಯೋನಿಕ್ ಚಿಪ್‌ಸೆಟ್‌ನಿಂದ ಕಾರ್ಯನಿರ್ವಹಿಸಲಿದ್ದು, ಶೇ.50ರಷ್ಟು ಹೆಚ್ಚು ಪರಿಣಾಮಕಾರಿಯಾಗಿದೆ ಎಂದು ಕಂಪನಿ ಹೇಳಿಕೊಂಡಿದೆ. ಇದು iOS 15 ಮತ್ತು 3240mAh ಬ್ಯಾಟರಿಯೊಂದಿಗೆ ಬರುತ್ತದೆ. ಇದು 12MP ಕ್ಯಾಮೆರಾ ಲೆನ್ಸ್ ಮತ್ತು 12MP ಅಲ್ಟ್ರಾ-ವೈಡ್ ಲೆನ್ಸ್ ಅನ್ನು ಹೊಂದಿದೆ. ಇದರ ಮುಂಭಾಗದಲ್ಲಿ 12MP 23mm ಅಗಲದ ಲೆನ್ಸ್ ಇದೆ. ಐಫೋನ್ 13 ಸ್ಟಾರ್ಲೈಟ್, ಮಿಡ್ನೈಟ್, ಬ್ಲೂ, ಪಿಂಕ್ ಮತ್ತು ರೆಡ್ 5 ಬಣ್ಣಗಳಲ್ಲಿ ಲಭ್ಯವಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News