Gmail ಬಳಕೆದಾರರು ಈಗ ಇಂಟರ್ನೆಟ್ ಇಲ್ಲದೆ ಇಮೇಲ್ ಕಳುಹಿಸಬಹುದು

Gmail without Internet: ಇಂದಿನ ಕಾಲದಲ್ಲಿ ಬಹುತೇಕ ಜನರು ಜಿಮೇಲ್ ಖಾತೆಯನ್ನು ಹೊಂದಿರುತ್ತಾರೆ. ಜಿಮೇಲ್ ಬಳಸಲು ಇಂಟರ್ನೆಟ್ ಬಹಳ ಮುಖ್ಯ. ಆದರೆ, ಇಂಟರ್ನೆಟ್ ಇಲ್ಲದೆ ಜಿಮೇಲ್ ಮೂಲಕ ನೀವು ಮೇಲ್‌ಗಳನ್ನು ಹೇಗೆ ಕಳುಹಿಸಬಹುದು ಎಂಬುದನ್ನು ನಾವು ನಿಮಗೆ ಹೇಳಲಿದ್ದೇವೆ.

Written by - Yashaswini V | Last Updated : Jun 27, 2022, 12:25 PM IST
  • ಜಿಮೇಲ್ ಅನ್ನು ಅನೇಕ ಜನರು ಬಳಸುತ್ತಾರೆ
  • ಆದರೆ ಇಂಟರ್ನೆಟ್ ಇಲ್ಲದಿದ್ದರೂ ಸಹ ನೀವು ಮೇಲ್‌ಗಳನ್ನು ಕಳುಹಿಸಬಹುದು
  • ನೀವು ಜಿಮೇಲ್‌ನಲ್ಲಿ ಇಂಟರ್ನೆಟ್ ಇಲ್ಲದೆಯೇ ಮೇಲ್‌ಗಳನ್ನು ಓದಬಹುದು, ಪ್ರತ್ಯುತ್ತರಿಸಬಹುದು ಮತ್ತು ಹುಡುಕಬಹುದು- ಅದು ಹೇಗೆ ಎಂದು ತಿಳಿಯಿರಿ...
Gmail ಬಳಕೆದಾರರು ಈಗ ಇಂಟರ್ನೆಟ್ ಇಲ್ಲದೆ ಇಮೇಲ್ ಕಳುಹಿಸಬಹುದು  title=
Gmail without Internet

ಇಂಟರ್ನೆಟ್ ಇಲ್ಲದೆ ಜಿಮೇಲ್‌ನಲ್ಲಿ ಮೇಲ್‌ಗಳನ್ನು ಹೇಗೆ ಕಳುಹಿಸುವ ಹಂತ ಹಂತದ ಪ್ರಕ್ರಿಯೆ:  ಅಪ್ಲಿಕೇಶನ್‌ಗಳು ಮತ್ತು ಇಂಟರ್ನೆಟ್‌ನ ಈ ಯುಗದಲ್ಲಿ, ಯಾವುದೇ ಅಪ್ಲಿಕೇಶನ್ ಅನ್ನು ಬಳಸಲು, ನೀವು ಸಾಮಾನ್ಯವಾಗಿ ನಿಮ್ಮ ಮೇಲ್ ಐಡಿಯೊಂದಿಗೆ ಲಾಗ್ ಇನ್ ಆಗಬೇಕಾಗುತ್ತದೆ. ಹಾಗಾಗಿ, ಬಹುತೇಕ ಜನರು ಇಮೇಲ್ ಅನ್ನು ಹೊಂದಿರುತ್ತಾರೆ. ಹೆಚ್ಚಿನ ಜನರು  ಗೂಗಲ್ನ ಮೇಲಿಂಗ್ ಸೇವೆಯಾದ ಜಿಮೇಲ್ ಅನ್ನು ಬಳಸುತ್ತಾರೆ. ಜಿಮೇಲ್‌ನಲ್ಲಿ ಮೇಲ್ ಕಳುಹಿಸಲು ಮತ್ತು ಸ್ವೀಕರಿಸಲು ಇಂಟರ್ನೆಟ್ ಅಗತ್ಯವಿದೆ. ಇಂದು ನಾವು ನಿಮಗೆ ಇಂಟರ್ನೆಟ್ ಇಲ್ಲದೆ ಜಿಮೇಲ್‌ನಲ್ಲಿ ಮೇಲ್ ಕಳುಹಿಸಲು ಸಾಧ್ಯವಾಗುವಂತಹ ಟ್ರಿಕ್ ಬಗ್ಗೆ ಹೇಳಲಿದ್ದೇವೆ. ಬನ್ನಿ ಈ ಟ್ರಿಕ್ ಬಗ್ಗೆ ತಿಳಿಯೋಣ.. 

ಇಂಟರ್ನೆಟ್ ಇಲ್ಲದೆ ಜಿಮೇಲ್‌ ಬಳಕೆ:
ಜಿಮೇಲ್ ಅನ್ನು ಅನೇಕ ಜನರು ಬಳಸುತ್ತಾರೆ. ಆದರೆ ಇಂಟರ್ನೆಟ್ ಇಲ್ಲದಿದ್ದರೂ ಸಹ ನೀವು ಮೇಲ್‌ಗಳನ್ನು ಕಳುಹಿಸಬಹುದು ಮತ್ತು ಸ್ವೀಕರಿಸಬಹುದು ಎಂಬುದು ಹೆಚ್ಚಿನ ಜನರಿಗೆ ತಿಳಿದಿಲ್ಲ. ಜಿಮೇಲ್‌ನ ಆಫ್‌ಲೈನ್ ಮೋಡ್ ಕುರಿತು ನಾವಿಲ್ಲಿ ತಿಳಿಸುತ್ತಿದ್ದೇವೆ. ಇದರಿಂದ ನೀವು ಜಿಮೇಲ್‌ನಲ್ಲಿ ಇಂಟರ್ನೆಟ್ ಇಲ್ಲದೆಯೇ ಮೇಲ್‌ಗಳನ್ನು ಓದಬಹುದು, ಪ್ರತ್ಯುತ್ತರಿಸಬಹುದು ಮತ್ತು ಹುಡುಕಬಹುದು.  ಇದು ಹೇಗೆ ಸಾಧ್ಯ ಎಂಬುದನ್ನು ತಿಳಿಯಲು ಮುಂದೆ ಓದಿ....

ಇದನ್ನೂ ಓದಿ- BSNL: ಬಿಎಸ್ಎನ್ಎಲ್ ಭರ್ಜರಿ ಕೊಡುಗೆ

ಇಂಟರ್ನೆಟ್ ಇಲ್ಲದೆ ಜಿಮೇಲ್‌ನಲ್ಲಿ ಮೇಲ್‌ಗಳನ್ನು ಕಳುಹಿಸಲು ಈ ಐದು ಹಂತಗಳನ್ನು ಅನುಸರಿಸಿ:
ಹಂತ 1:
ಜಿಮೇಲ್‌ ಆಫ್‌ಲೈನ್ ಅನ್ನು ಬಳಸಲು, ಮೊದಲು ನೀವು ನಿಮ್ಮ ಕಂಪ್ಯೂಟರ್ ಅಥವಾ ಲ್ಯಾಪ್‌ಟಾಪ್‌ನಲ್ಲಿ ಗೂಗಲ್ ಕ್ರೋಮ್ ಅನ್ನು ಡೌನ್‌ಲೋಡ್ ಮಾಡಬೇಕು. ಜಿಮೇಲ್‌ ಆಫ್‌ಲೈನ್ ಅನ್ನು ಕ್ರೋಮ್ ಬ್ರೌಸರ್ ವಿಂಡೋದಲ್ಲಿ ಮಾತ್ರ ಬಳಸಬಹುದು ಎಂಬುದು ಗಮನಾರ್ಹ ವಿಷಯ. ನೀವು ಈ ವೈಶಿಷ್ಟ್ಯವನ್ನು ಅಜ್ಞಾತ ಮೋಡ್‌ನಲ್ಲಿ ಬಳಸಲಾಗುವುದಿಲ್ಲ.

ಹಂತ 2: ನಿಮ್ಮ ಡೆಸ್ಕ್‌ಟಾಪ್ ಅಥವಾ ಲ್ಯಾಪ್‌ಟಾಪ್‌ನಲ್ಲಿ ಕ್ರೋಮ್ ವಿಂಡೋವನ್ನು ತೆರೆದ ನಂತರ, ನೀವು ಜಿಮೇಲ್‌ ಆಫ್‌ಲೈನ್ ಸೆಟ್ಟಿಂಗ್‌ಗಳಿಗೆ ಹೋಗಬೇಕು ಅಥವಾ ' https://mail.google.com/mail/u/0/#settings/offline ' ಲಿಂಕ್ ಅನ್ನು ಕ್ಲಿಕ್ ಮಾಡಬೇಕು  .

ಹಂತ 3: ನೀವು ಈ ಲಿಂಕ್ ಅನ್ನು ಕ್ಲಿಕ್ ಮಾಡಿದ ತಕ್ಷಣ ನಿಮ್ಮ ಮುಂದೆ ಹೊಸ ವಿಂಡೋ ತೆರೆಯುತ್ತದೆ. ಈ ವಿಂಡೋದಲ್ಲಿ, 'ಆಫ್‌ಲೈನ್ ಮೇಲ್ ಅನ್ನು ಸಕ್ರಿಯಗೊಳಿಸಿ' ಎಂಬ ಆಯ್ಕೆ ಇರುತ್ತದೆ. ಈಗ ನೀವು ಈ ಆಯ್ಕೆಯನ್ನು ಕ್ಲಿಕ್ ಮಾಡಬೇಕು. 

ಹಂತ 4: ಈಗ ನೀವು ನಿಮ್ಮ  ಅಗತ್ಯಕ್ಕೆ ಅನುಗುಣವಾಗಿ ಸೆಟ್ಟಿಂಗ್‌ಗಳನ್ನು ಬದಲಾಯಿಸಬೇಕು ಅಥವಾ ಕಸ್ಟಮೈಸ್ ಮಾಡಬೇಕು. ಇಲ್ಲಿ ನೀವು ಎಷ್ಟು ದಿನಗಳ ಮೇಲ್‌ಗಳನ್ನು ಸಿಂಕ್ ಮಾಡಲು ಬಯಸುತ್ತೀರಿ ಎಂಬುದನ್ನು ಆಯ್ಕೆ ಮಾಡಬಹುದು. ಇದರಿಂದ ನೀವು ಆಫ್‌ಲೈನ್ ಮೋಡ್‌ನಲ್ಲಿಯೂ ಸಹ ಆ ದಿನಗಳ ಮೇಲ್‌ಗಳನ್ನು ಪಡೆಯಬಹುದು. 

ಹಂತ 5: ಈ ರೀತಿಯಲ್ಲಿ ನೀವು ಈ ಪ್ರಕ್ರಿಯೆಯ ಅಂತಿಮ ಹಂತವನ್ನು ತಲುಪಿದ ಬಳಿಕ 'ಬದಲಾವಣೆಗಳನ್ನು ಉಳಿಸಿ' ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ. 

ಈ ರೀತಿಯಾಗಿ ನೀವು ನಿಮ್ಮ ಜಿಮೇಲ್‌  ಆಫ್‌ಲೈನ್ ಮೋಡ್ ಅನ್ನು ಸಕ್ರಿಯಗೊಳಿಸುತ್ತೀರಿ ಮತ್ತು ಅದನ್ನು ಸುಲಭವಾಗಿ ಬಳಸಲು ಸಾಧ್ಯವಾಗುತ್ತದೆ.

ಇದನ್ನೂ ಓದಿ- ಗೂಗಲ್ ನಲ್ಲಿ ಈ ಐದು ವಿಷಯಗಳ ಬಗ್ಗೆ ಸರ್ಚ್ ಮಾಡಿದರೆ ಜೈಲು ಪಾಲು ಗ್ಯಾರಂಟಿ ..!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News