ವರ್ಷದವರೆಗೆ Netflix, Amazon Prime, Disney+Hotstar ಫ್ರೀ ಚಂದಾದಾರಿಕೆಗಾಗಿ ಈ ಕೆಲಸ ಮಾಡಿ

ಮೂರು OTT ಪ್ಲಾಟ್‌ಫಾರ್ಮ್‌ಗಳ ಫ್ರೀ ಚಂದಾದಾರಿಕೆ: ನೀವು ನೆಟ್‌ಫ್ಲಿಕ್ಸ್, ಅಮೆಜಾನ್ ಪ್ರೈಮ್, ಡಿಸ್ನಿ + ಹಾಟ್‌ಸ್ಟಾರ್ ಒಟಿಟಿ ಪ್ಲಾಟ್‌ಫಾರ್ಮ್‌ಗಳ ಚಂದಾದಾರಿಕೆಯನ್ನು ಉಚಿತವಾಗಿ ಪಡೆಯಲು ಸುವರ್ಣಾವಕಾಶವಿದೆ. ಇದಕ್ಕಾಗಿ ನೀವು ಕೇವಲ ಒಂದು ಫಾರ್ಮ್ ಅನ್ನು ಭರ್ತಿ ಮಾಡಬೇಕು. 

Written by - Yashaswini V | Last Updated : Aug 2, 2022, 11:54 AM IST
  • ಮೂರು OTT ಪ್ಲಾಟ್‌ಫಾರ್ಮ್‌ಗಳ ಫ್ರೀ ಚಂದಾದಾರಿಕೆ
  • ನೆಟ್‌ಫ್ಲಿಕ್ಸ್, ಅಮೆಜಾನ್ ಪ್ರೈಮ್, ಡಿಸ್ನಿ + ಹಾಟ್‌ಸ್ಟಾರ್ ಚಂದಾದಾರಿಕೆಯನ್ನು ಉಚಿತವಾಗಿ ಪಡೆಯುವ ಅವಕಾಶ
  • ಇದನ್ನು ಹೇಗೆ ಪದ್ಯುವುದು ಎಂದು ತಿಳಿಯಿರಿ
ವರ್ಷದವರೆಗೆ Netflix, Amazon Prime, Disney+Hotstar ಫ್ರೀ ಚಂದಾದಾರಿಕೆಗಾಗಿ ಈ ಕೆಲಸ ಮಾಡಿ title=
Free Netflix- Amazon Prime- Disney plus Hotstar Subscription

ಉಚಿತ ನೆಟ್‌ಫ್ಲಿಕ್ಸ್, ಅಮೆಜಾನ್ ಪ್ರೈಮ್ ವಿಡಿಯೋ ಡಿಸ್ನಿ + ಹಾಟ್‌ಸ್ಟಾರ್ ಚಂದಾದಾರಿಕೆ: ಇತ್ತೀಚಿನ ದಿನಗಳಲ್ಲಿ ಒಟಿಟಿ ಪ್ಲಾಟ್‌ಫಾರ್ಮ್‌ಗಳ ಕ್ರೇಜ್ ಹೆಚ್ಚಾಗಿದೆ. ನೀವು OTT ಚಾನೆಲ್‌ಗಳಲ್ಲಿ ಶೋಗಳು ಮತ್ತು ಚಲನಚಿತ್ರಗಳನ್ನು ವೀಕ್ಷಿಸಲು ಬಯಸಿದರೆ, ಪ್ರಮುಖ ಒಟಿಟಿ ಪ್ಲಾಟ್‌ಫಾರ್ಮ್‌ಗಳಾದ ನೆಟ್‌ಫ್ಲಿಕ್ಸ್, ಅಮೆಜಾನ್ ಪ್ರೈಮ್ ವಿಡಿಯೋ ಡಿಸ್ನಿ + ಹಾಟ್‌ಸ್ಟಾರ್ ಚಂದಾದಾರಿಕೆಯನ್ನು ಒಂದು ವರ್ಷದವರೆಗೆ ಉಚಿತವಾಗಿ ಪಡೆಯುವ ಒಳ್ಳೆಯ ಅವಕಾಶವಿದೆ. 

ನೀವು ಕೇವಲ ಒಂದೇ ಒಂದು ಫಾರ್ಮ್ ಅನ್ನು ಭರ್ತಿ ಮಾಡುವ ಮೂಲಕ ನೆಟ್‌ಫ್ಲಿಕ್ಸ್, ಅಮೆಜಾನ್ ಪ್ರೈಮ್ ವಿಡಿಯೋ ಡಿಸ್ನಿ + ಹಾಟ್‌ಸ್ಟಾರ್ ಚಂದಾದಾರಿಕೆಯನ್ನು ಸಂಪೂರ್ಣವಾಗಿ ಉಚಿತವಾಗಿ ಪಡೆಯಬಹುದು. 

ಉಚಿತ ಒಟಿಟಿ ಚಂದಾದಾರಿಕೆಗಾಗಿ ಈ ಫಾರ್ಮ್ ಅನ್ನು ಭರ್ತಿ ಮಾಡಬೇಕು :
ನೆಟ್‌ಫ್ಲಿಕ್ಸ್, ಅಮೆಜಾನ್ ಪ್ರೈಮ್ ವಿಡಿಯೋ ಮತ್ತು ಡಿಸ್ನಿ + ಹಾಟ್‌ಸ್ಟಾರ್, ಈ ಮೂರಕ್ಕೂ ಉಚಿತ ಪ್ರವೇಶವು ಟೆಲಿಕಾಂ ಕಂಪನಿ ಜಿಯೋದ ಪೋಸ್ಟ್‌ಪೇಯ್ಡ್ ಯೋಜನೆಗಳಲ್ಲಿ ಲಭ್ಯವಿದೆ. ನೀವು ಈ ಒಟಿಟಿ ಚಂದಾದಾರಿಕೆಗಳ ಲಾಭವನ್ನು ಪಡೆಯಲು ಬಯಸಿದರೆ, ನೀವು ಜಿಯೋದ ಈ ಪೋಸ್ಟ್‌ಪೇಯ್ಡ್ ಯೋಜನೆಗೆ ಅರ್ಜಿ ಸಲ್ಲಿಸಬೇಕು ಮತ್ತು ಅದರ ಫಾರ್ಮ್ ಅನ್ನು ಭರ್ತಿ ಮಾಡಬೇಕು. ಎಲ್ಲಾ ಮೂರು ಒಟಿಟಿ ಅಪ್ಲಿಕೇಶನ್‌ಗಳಿಗೆ ಪ್ರವೇಶವನ್ನು ನೀಡುವ ಒಂದು ಸಾವಿರ ರೂಪಾಯಿಗಳಿಗಿಂತ ಅಗ್ಗವಾಗಿರುವ ಯೋಜನೆಗಳು ಯಾವುವು ಎಂಬುದನ್ನು ತಿಳಿಯೋಣ...

ಇದನ್ನೂ ಓದಿ- ಇಂದು ಭಾರತದಲ್ಲಿ ಬಿಡುಗಡೆಯಾಗಲಿದೆ ಇನ್ಫಿನಿಕ್ಸ್ ನ ಅದ್ಭುತ ಸ್ಮಾರ್ಟ್‌ಫೋನ್

399 ರೂ .ಗಳ ಅಗ್ಗದ ಯೋಜನೆ: 
ಜಿಯೋದ ಈ ಪೋಸ್ಟ್‌ಪೇಯ್ಡ್ ಪ್ಲಾನ್‌ನ ಬೆಲೆ 399 ರೂ. ಆಗಿದ್ದು, ಇದರಲ್ಲಿ ನಿಮಗೆ ಪ್ರತಿ ತಿಂಗಳು 75ಜಿಬಿ ಇಂಟರ್ನೆಟ್, ಯಾವುದೇ ನೆಟ್‌ವರ್ಕ್‌ನಲ್ಲಿ ಅನಿಯಮಿತ ಕರೆ ಮತ್ತು ದಿನಕ್ಕೆ 100 ಉಚಿತ ಎಸ್ಎಂಎಸ್ ಸೌಲಭ್ಯವನ್ನು ನೀಡಲಾಗುತ್ತದೆ. ಈ ಯೋಜನೆಯು Netflix, Amazon Prime Video ಮತ್ತು Disney+Hotstar ಗೆ ಒಂದು ವರ್ಷದ ಉಚಿತ ಪ್ರವೇಶದೊಂದಿಗೆ ಬರುತ್ತದೆ. 

599ರೂ.ಗಳ ಯೋಜನೆ:
ಜಿಯೋದ ಇನ್ನೊಂದು ಜನಪ್ರಿಯ ಯೋಜನೆ ಎಂದರೆ 599ರೂ.ಗಳ ಪೋಸ್ಟ್‌ಪೇಯ್ಡ್ ಪ್ಲಾನ್‌. ಇದರಲ್ಲಿ ಗ್ರಾಹಕರಿಗೆ  100ಜಿಬಿ ಇಂಟರ್ನೆಟ್, ಪ್ರತಿದಿನ 100 ಎಸ್ಎಂಎಸ್ ಮತ್ತು ಅನಿಯಮಿತ ಧ್ವನಿ ಕರೆಗಳನ್ನು ನೀಡುತ್ತದೆ.   ಈ ಯೋಜನೆಯಲ್ಲಿ, ನಿಮಗೆ ನೆಟ್‌ಫ್ಲಿಕ್ಸ್, ಅಮೆಜಾನ್ ಪ್ರೈಮ್ ವಿಡಿಯೋ ಮತ್ತು ಡಿಸ್ನಿ + ಹಾಟ್‌ಸ್ಟಾರ್‌ನ ಒಂದು ವರ್ಷದ ಉಚಿತ ಚಂದಾದಾರಿಕೆಯನ್ನು ನೀಡಲಾಗುತ್ತಿದೆ. 

799 ರೂ. ಪೋಸ್ಟ್‌ಪೇಯ್ಡ್ ಪ್ಲಾನ್:
799 ರೂ ಬೆಲೆಯ ಜಿಯೋದ ಈ ಯೋಜನೆಯಲ್ಲಿ 150ಜಿಬಿ ಡೇಟಾ ಮಾತ್ತು 200ಜಿಬಿ ರೋಲ್‌ಓವರ್ ಡೇಟಾವನ್ನು ನೀಡಲಾಗುತ್ತಿದೆ. ಈ ಫ್ಯಾಮಿಲಿ ಪ್ಲಾನ್ ನಲ್ಲಿ ನಿಮಗೆ ಎರಡು ಹೆಚ್ಚುವರಿ ಸಿಮ್ ಕಾರ್ಡ್‌ಗಳು, ಯಾವುದೇ ನೆಟ್‌ವರ್ಕ್‌ನಲ್ಲಿ ಅನಿಯಮಿತ ಕರೆ ಮತ್ತು ಅನಿಯಮಿತ ಎಸ್ಎಂಎಸ್ ಸೌಲಭ್ಯವನ್ನು ನೀಡಲಾಗುತ್ತಿದೆ. ನೆಟ್‌ಫ್ಲಿಕ್ಸ್, ಅಮೆಜಾನ್ ಪ್ರೈಮ್ ವಿಡಿಯೋ ಮತ್ತು ಡಿಸ್ನಿ + ಹಾಟ್‌ಸ್ಟಾರ್‌ಗೆ ಚಂದಾದಾರಿಕೆಗಳು ಸಹ ಈ ಯೋಜನೆಯ ಭಾಗವಾಗಿದೆ. 

ಇದನ್ನೂ ಓದಿ- 5G Spectrum ಹರಾಜು ಪ್ರಕ್ರಿಯೆಯಲ್ಲಿ ಬಾಜಿ ಹೊಡೆದ ಜಿಯೋ, 1.5 ಲಕ್ಷ ಕೋಟಿ ರೂ.ರೇಸ್ ನಲ್ಲಿ ಹಿಂದೆ ಬಿದ್ದ ಅಡಾನಿ ನೆಟ್ವರ್ಕ್

ಅತ್ಯಂತ ದುಬಾರಿ ಯೋಜನೆ :
999 ರೂ.ಗೆ ಲಭ್ಯವಿರುವ ಈ ಪೋಸ್ಟ್‌ಪೇಯ್ಡ್ ಯೋಜನೆಯಲ್ಲಿ 200GB ಹೈ ಸ್ಪೀಡ್ ಡೇಟಾ, 500GB ರೋಲ್‌ಓವರ್ ಡೇಟಾ, ಅನಿಯಮಿತ ಧ್ವನಿ ಕರೆ ಮತ್ತು SMS ಸೌಲಭ್ಯ ಮತ್ತು ಮೂರು ಸಿಮ್ ಕಾರ್ಡ್‌ಗಳನ್ನು ನೀಡಲಾಗುತ್ತಿದೆ. ಈ ಯೋಜನೆಗಳು Netflix, Amazon Prime Video ಮತ್ತು Disney + Hotstar ನ ಸದಸ್ಯತ್ವದೊಂದಿಗೆ ಬರುತ್ತವೆ. ಒಂದು ಸಾವಿರ ರೂಪಾಯಿಗಿಂತ ಕಡಿಮೆ ಬೆಲೆಯ OTT ಯೋಜನೆಗಳ ಪಟ್ಟಿಯಲ್ಲಿ ಇದು ಅತ್ಯಂತ ದುಬಾರಿ ಯೋಜನೆಯಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News