ಫ್ಲಿಪ್‌ಕಾರ್ಟ್ ಮಾರಾಟ: ₹30,000 ಸ್ಮಾರ್ಟ್‌ಫೋನ್ ಅನ್ನು ಹತ್ತು ಸಾವಿರಕ್ಕಿಂತ ಕಡಿಮೆ ಬೆಲೆಗೆ ಖರೀದಿಸಿ

ಫ್ಲಿಪ್‌ಕಾರ್ಟ್ ಮಾರಾಟ:  ಇತ್ತೀಚೆಗಷ್ಟೇ ಬಿಡುಗಡೆಯಾಗಿರುವ ಶಿಯೋಮಿಯ 5ಜಿ ಸ್ಮಾರ್ಟ್‌ಫೋನ್ ಅನ್ನು ಅತಿ ಕಡಿಮೆ ಬೆಲೆಯಲ್ಲಿ ಖರೀದಿಸಲು ಸುವರ್ಣಾವಕಾಶ.  ಇತ್ತೀಚಿಗೆ ಬಿಡುಗಡೆಯಾಗಿರುವ ಶಿಯೋಮಿ 11ಐ 5ಜಿ   ಸ್ಮಾರ್ಟ್‌ಫೋನ್ ಅನ್ನು ಫ್ಲಿಪ್‌ಕಾರ್ಟ್ ಸೇಲ್ನಲ್ಲಿ  ಅಗ್ಗದ ದರದಲ್ಲಿ ಖರೀದಿಸಬಹುದು.

Written by - Yashaswini V | Last Updated : Apr 19, 2022, 12:53 PM IST
  • ಹೊಸ ಸ್ಮಾರ್ಟ್‌ಫೋನ್‌ಗಳತ್ತ ಹೊರಟಿರುವ ಜನರು 5G ಫೋನ್‌ಗಳನ್ನು ಖರೀದಿಸುತ್ತಿದ್ದಾರೆ.
  • ₹30,000 ಸ್ಮಾರ್ಟ್‌ಫೋನ್ ಅನ್ನು ಹತ್ತು ಸಾವಿರಕ್ಕಿಂತ ಕಡಿಮೆ ಬೆಲೆಗೆ ಖರೀದಿಸಲು ಸುವರ್ಣಾವಕಾಶ
  • ಶಿಯೋಮಿ 11ಐ 5ಜಿ ಸ್ಮಾರ್ಟ್‌ಫೋನ್ ಮೇಲೆ ಲಭ್ಯವಿರುವ ಕೊಡುಗೆಗಳ ಬಗ್ಗೆ ತಿಳಿಯೋಣ...
ಫ್ಲಿಪ್‌ಕಾರ್ಟ್ ಮಾರಾಟ:  ₹30,000 ಸ್ಮಾರ್ಟ್‌ಫೋನ್ ಅನ್ನು ಹತ್ತು ಸಾವಿರಕ್ಕಿಂತ ಕಡಿಮೆ ಬೆಲೆಗೆ ಖರೀದಿಸಿ  title=
Xiaomi 11i 5G Flipkart offer

ಫ್ಲಿಪ್‌ಕಾರ್ಟ್ ಮಾರಾಟ:  ಬಹುನಿರೀಕ್ಷಿತ 5ಜಿ ಸೇವೆ ಈ ವರ್ಷ ಭಾರತದಲ್ಲಿ ಬಿಡುಗಡೆಯಾಗಲಿದೆ ಎಂದು ಹೇಳಲಾಗುತ್ತಿದೆ. ಹೀಗಾಗಿಯೇ ಇತ್ತೀಚಿನ ದಿನಗಳಲ್ಲಿ  5ಜಿ ಸ್ಮಾರ್ಟ್‌ಫೋನ್‌ಗಳಿಗೆ ಬೇಡಿಕೆ ಹೆಚ್ಚಾಗಿದ್ದು, ದೊಡ್ಡ ದೊಡ್ಡ ಮೊಬೈಲ್ ಕಂಪನಿಗಳು  5ಜಿ ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸುತ್ತಿವೆ. ಆದರೆ 4ಜಿ  ಸ್ಮಾರ್ಟ್‌ಫೋನ್‌ಗಳಿಗೆ ಹೋಲಿಸಿದರೆ  5ಜಿ ಸ್ಮಾರ್ಟ್‌ಫೋನ್‌ಗಳ ಬೆಲೆ ತುಂಬಾ ಹೆಚ್ಚು. ಆದರೆ, ಈ ಬಗ್ಗೆ ಚಿಂತಿಸುವ ಅಗತ್ಯವಿಲ್ಲ.  ಇ-ಕಾಮರ್ಸ್ ವೆಬ್‌ಸೈಟ್‌ಗಳಲ್ಲಿ ಲಭ್ಯವಿರುವ ಆಫರ್‌ಗಳ ಮೂಲಕ ಫೋನ್ ಅನ್ನು ಅತ್ಯಂತ ಅಗ್ಗದ ದರದಲ್ಲಿ ಖರೀಸಬಹುದು. ಪ್ಲಿಪ್‌ಕಾರ್ಟ್ ಅಂತಹದ್ದೇ ಒಂದು ಸೇಲ್ ಅನ್ನು ಪರಿಚಯಿಸಿದೆ. ಈ ಮಾರಾಟದಲ್ಲಿ  ಇತ್ತೀಚಿಗೆ ಬಿಡುಗಡೆಯಾಗಿರುವ ಶಿಯೋಮಿ 11ಐ 5ಜಿ   ಸ್ಮಾರ್ಟ್‌ಫೋನ್ ಅನ್ನು  ಅಗ್ಗದ ದರದಲ್ಲಿ ಖರೀದಿಸಬಹುದು.

ಫ್ಲಿಪ್‌ಕಾರ್ಟ್ ಮಾರಾಟ:  ₹30,000 ಸ್ಮಾರ್ಟ್‌ಫೋನ್ ಅನ್ನು ಹತ್ತು ಸಾವಿರಕ್ಕಿಂತ ಕಡಿಮೆ ಬೆಲೆಗೆ ಖರೀದಿಸಲು ಸುವರ್ಣಾವಕಾಶ :
ಹೌದು, ಫ್ಲಿಪ್‌ಕಾರ್ಟ್ ಮಾರಾಟದಲ್ಲಿ  ಇತ್ತೀಚೆಗಷ್ಟೇ ಬಿಡುಗಡೆಯಾದ 6ಜಿಬಿ ರಾಮ್+ 128ಜಿಬಿ ಸಂಗ್ರಹಣಾ ಸಾಮರ್ಥ್ಯದ ಶಿಯೋಮಿ 11ಐ 5ಜಿ   ಸ್ಮಾರ್ಟ್‌ಫೋನ್ ಅನ್ನು ಕಡಿಮೆ ಬೆಲೆಯಲ್ಲಿ ಖರೀದಿಸಲು ಉತ್ತಮ ಕೊಡುಗೆಗಳನ್ನು ಪರಿಚಯಿಸಲಾಗಿದೆ. ಶಿಯೋಮಿ 11ಐ 5ಜಿ   ಸ್ಮಾರ್ಟ್‌ಫೋನ್  6ಜಿಬಿ ರಾಮ್+ 128ಜಿಬಿ ರೂಪಾಂತರದ ಲಾಂಚಿಂಗ್ ಬೆಲೆ 29,000ರೂ. ಆದರೆ ಈ ಫೋನ್ ಫ್ಲಿಪ್‌ಕಾರ್ಟ್‌ನಲ್ಲಿ ರೂ 24,999 ಗೆ  ಲಭ್ಯವಿದೆ.   ಅಂದರೆ, ಫೋನ್ ಮೇಲೆ 5 ಸಾವಿರ ರೂ.ಗಳ ಸಂಪೂರ್ಣ ರಿಯಾಯಿತಿ ನೀಡಲಾಗುತ್ತಿದೆ. ಇದರೊಂದಿಗೆ ಬ್ಯಾಂಕ್ ಕೊಡುಗೆಗಳು ಮತ್ತು ವಿನಿಮಯ ಕೊಡುಗೆಗಳೂ ಲಭ್ಯವಿದೆ. ಇದರಿಂದಾಗಿ ಫೋನ್‌ನ ಬೆಲೆ ಗಮನಾರ್ಹವಾಗಿ ಇಳಿಕೆಯಾಗಲಿದೆ.

ಇದನ್ನೂ ಓದಿ- ಹತ್ತು ಸಾವಿರ ರೂಪಾಯಿಗಿಂತ ಕಡಿಮೆ ಬೆಲೆಯಲ್ಲಿ ಉತ್ತಮ ಸ್ಮಾರ್ಟ್‌ಫೋನ್ ಖರೀದಿಸಲು ಒಳ್ಳೆಯ ಅವಕಾಶ

ಶಿಯೋಮಿ 11ಐ 5ಜಿ   ಸ್ಮಾರ್ಟ್‌ಫೋನ್ ಬ್ಯಾಂಕ್ ಕೊಡುಗೆಗಳು: 
ಫ್ಲಿಪ್‌ಕಾರ್ಟ್‌ ಮಾರಾಟದಲ್ಲಿ ಶಿಯೋಮಿ 11ಐ 5ಜಿ   ಸ್ಮಾರ್ಟ್‌ಫೋನ್ ಅನ್ನು ಖರೀದಿಸಲು ನೀವು ಐಸಿಐಸಿಐ ಕ್ರೆಡಿಟ್ ಕಾರ್ಡ್ ಬಳಸಿದರೆ ಎರಡು ಸಾವಿರ ರೂ.ಗಳ ತ್ವರಿತ ರಿಯಾಯಿತಿ ಲಭ್ಯವಿದೆ. ಇದಲ್ಲದೆ, ಎಕ್ಸ್ಟ್ರಾ 500 ರೂ. ಡಿಸ್ಕೌಂಟ್ ಕೂಡ ಸಿಗಲಿದೆ. ಇದರಿಂದ ಫೋನ್ ದರ 22,499 ರೂ.ಗಳವರೆಗೆ ಕಡಿಮೆಯಾಗಲಿದೆ. ಇದರೊಂದಿಗೆ ವಿನಿಮಯ ಕೊಡುಗೆಯನ್ನು ಪಡೆದರೆ ಫೋನ್‌ನ ಬೆಲೆ ಗಮನಾರ್ಹವಾಗಿ ಕಡಿಮೆಯಾಗುತ್ತದೆ.

ಇದನ್ನೂ ಓದಿ- Job Opportunity: ಒಂದು ಲಕ್ಷ ಜನರಿಗೆ ಉದ್ಯೋಗಾವಕಾಶ ಕಲ್ಪಿಸಲಿರುವ ಗೇಮಿಂಗ್ ಪ್ಲಾಟ್ ಫಾರ್ಮ್ Winzo

ಶಿಯೋಮಿ 11ಐ 5ಜಿ   ಸ್ಮಾರ್ಟ್‌ಫೋನ್ ವಿನಿಮಯ ಕೊಡುಗೆ:
ಶಿಯೋಮಿ 11ಐ 5ಜಿ   ಸ್ಮಾರ್ಟ್‌ಫೋನ್ ಮೇಲೆ ಹದಿಮೂರು ಸಾವಿರ ರೂಪಾಯಿಗಳವರೆಗೆ ವಿನಿಮಯ ಕೊಡುಗೆ ಸಹ ಲಭ್ಯವಿದೆ. ನಿಮ್ಮ ಹಳೆಯ  ಸ್ಮಾರ್ಟ್‌ಫೋನ್ ಅನ್ನು ನೀವು ಎಕ್ಸ್ಚೇಂಜ್ ಮಾಡುವ ಮೂಲಕ ಈ ಡಿಸ್ಕೌಂಟ್ ಲಭ್ಯವಾಗಲಿದೆ. ಆದರೆ, ನಿಮ್ಮ ಹಳೆಯ ಫೋನ್ ಉತ್ತಮ ಸ್ಥಿತಿಯಲ್ಲಿದ್ದರೆ ಹಾಗೂ ಮಾಡೆಲ್ ಇತ್ತೀಚಿನದಾಗಿದ್ದರೆ ಮಾತ್ರ 13 ಸಾವಿರ ರೂಪಾಯಿಗಳ ರಿಯಾಯಿತಿ ಲಭ್ಯವಿರುತ್ತದೆ.  ಈ ಕೊಡುಗೆಯ ಸಂಪೂರ್ಣ ಲಾಭವನ್ನು ಪಡೆಯಲು ಸಾಧ್ಯವಾದರೆ ಫೋನ್‌ನ ಬೆಲೆ 9,499 ರೂ.ಗಳಿಗೆ ಮನೆಗೆ ಕೊಂಡೊಯ್ಯಬಹುದು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News