Flipkart Offer: ಫ್ಲಿಪ್‌ಕಾರ್ಟ್‌ನಲ್ಲಿ ಐಫೋನ್ 12 ಮಿನಿ ಖರೀದಿಯಲ್ಲಿ ಬಂಪರ್ ಡಿಸ್ಕೌಂಟ್

Flipkart Offer On iPhone 12 Mini: ನೀವೂ ಕೂಡ ಕಡಿಮೆ ಬೆಲೆಯಲ್ಲಿ ಐಫೋನ್ ಖರೀದಿಸುವ ಬಗ್ಗೆ ಯೋಚಿಸುತ್ತಿದ್ದರೆ ಈ ಸುವರ್ಣಾವಕಾಶವನ್ನು ಖಂಡಿತ ಕೈ ತಪ್ಪಲು ಬಿಡಬೇಡಿ. ಸುಮಾರು 60,000 ರೂಪಾಯಿ ಬೆಲೆಯ iPhone 12 Mini ಅನ್ನು 26,000 ರೂಪಾಯಿಗೆ ಖರೀದಿಸಬಹುದು. ಅದು ಹೇಗೆ ಸಾಧ್ಯ? ಎಲ್ಲಿ ಇಷ್ಟು ರಿಯಾಯಿತಿ ದೊರೆಯುತ್ತಿದೆ ಎಂದು ತಿಳಿಯಲು ಈ ಲೇಖನವನ್ನು ತಪ್ಪದೇ ಓದಿ.  

Written by - Yashaswini V | Last Updated : Nov 23, 2022, 07:36 AM IST
  • ಜನಪ್ರಿಯ ಇ-ಕಾಮರ್ಸ್ ಕಂಪನಿ ಫ್ಲಿಪ್‌ಕಾರ್ಟ್ ಐಫೋನ್ 12 ಮಿನಿಯಲ್ಲಿ ಉತ್ತಮ ಕೊಡುಗೆಯನ್ನು ಘೋಷಿಸಿದೆ.
  • iPhone 12 Miniಯ 64GB ರೂಪಾಂತರದ ಬೆಲೆ 59900 ರೂ.
  • ಫ್ಲಿಪ್‌ಕಾರ್ಟ್‌ನಲ್ಲಿ ಐಫೋನ್ 12 ಮಿನಿಯಲ್ಲಿ ಬರೋಬ್ಬರಿ 34 ಸಾವಿರ ರೂಪಾಯಿಗಳ ಡಿಸ್ಕೌಂಟ್ ಲಭ್ಯವಾಗುತ್ತಿದೆ.
Flipkart Offer: ಫ್ಲಿಪ್‌ಕಾರ್ಟ್‌ನಲ್ಲಿ ಐಫೋನ್ 12 ಮಿನಿ ಖರೀದಿಯಲ್ಲಿ ಬಂಪರ್ ಡಿಸ್ಕೌಂಟ್  title=
iPhone 12 Mini Discount in Flipkart

Flipkart Offer On iPhone 12 Mini: ಫ್ಲಿಪ್‌ಕಾರ್ಟ್‌ನಲ್ಲಿ ಪ್ರಸ್ತುತ, iPhone 13, iPhone 12, iPhone 12 Mini, iPhone SE ಮತ್ತು ಇತರ ಐಫೋನ್‌ಗಳ ಮೇಲೆ ಭಾರೀ ಡಿಸ್ಕೌಂಟ್ ಘೋಷಿಸಲಾಗಿದೆ. ಫ್ಲಿಪ್‌ಕಾರ್ಟ್‌ನಲ್ಲಿ ಐಫೋನ್ 12 ಮಿನಿಯಲ್ಲಿ ಭರ್ಜರಿ ರಿಯಾಯಿತಿ ನೀಡಲಾಗುತ್ತಿದೆ. ನೀವು ಕಡಿಮೆ ಬೆಲೆಯಲ್ಲಿ ಐಫೋನ್ ಖರೀದಿಸಲು ಬಯಸಿದರೆ ಯಾವುದೇ ಕಾರಣಕ್ಕೂ ಈ ಸುವರ್ಣಾವಕಾಶವನ್ನು ಮಿಸ್ ಮಾಡಿಕೊಳ್ಳಬೇಡಿ. ಫ್ಲಿಪ್‌ಕಾರ್ಟ್‌ನಲ್ಲಿ ಐಫೋನ್ 12 ಮಿನಿಯಲ್ಲಿ ಬರೋಬ್ಬರಿ 34 ಸಾವಿರ ರೂಪಾಯಿಗಳ ಡಿಸ್ಕೌಂಟ್ ಲಭ್ಯವಾಗುತ್ತಿದೆ. ಏನಿದು ಕೊಡುಗೆ, ಇಷ್ಟು ರಿಯಾಯಿತಿಯನ್ನು ಹೇಗೆ ಪಡೆಯಬಹುದು ಎಂದು ತಿಳಿಯಲು ಮುಂದೆ ಓದಿ...

ಫ್ಲಿಪ್‌ಕಾರ್ಟ್‌ನಲ್ಲಿ iPhone 12 Miniಯಲ್ಲಿ ಲಭ್ಯವಿರುವ ಕೊಡುಗೆಗಳು:
ಜನಪ್ರಿಯ ಇ-ಕಾಮರ್ಸ್ ಕಂಪನಿ ಫ್ಲಿಪ್‌ಕಾರ್ಟ್ ಐಫೋನ್ 12 ಮಿನಿಯಲ್ಲಿ ಉತ್ತಮ ಕೊಡುಗೆಯನ್ನು ಘೋಷಿಸಿದೆ. iPhone 12 Miniಯ 64GB ರೂಪಾಂತರದ ಬೆಲೆ 59900 ರೂ. ಆದರೆ ರಿಯಾಯಿತಿಯ ನಂತರ, ನೀವು ಅದನ್ನು ಕೇವಲ ರೂ.43,999 ಗೆ ಪಡೆಯಬಹುದು. ಇಷ್ಟೇ ಅಲ್ಲ... ನೀವು ಇತರ ವಿನಿಮಯ ಮತ್ತು ಬ್ಯಾಂಕ್ ಕೊಡುಗೆಗಳೊಂದಿಗೆ ಬೆಲೆಗಳನ್ನು ಮತ್ತಷ್ಟು ಕಡಿಮೆ ಮಾಡಬಹುದು.

ಇದನ್ನೂ ಓದಿ- ಆನ್‌ಲೈನ್ ಬ್ಯಾಂಕಿಂಗ್ ಬಳಕೆ ವೇಳೆ ಈ ವಿಷಯಗಳನ್ನು ನೆನಪಿನಲ್ಲಿಟ್ಟರೆ ವಂಚನೆಗೆ ಬಲಿಯಾಗುವುದಿಲ್ಲ!

iPhone 12 Miniಯಲ್ಲಿ ಲಭ್ಯವಿರುವ ವಿನಿಮಯ ಕೊಡುಗೆಗಳು:
ಫ್ಲಿಪ್‌ಕಾರ್ಟ್ ಐಫೋನ್ 12 ಮಿನಿಯಲ್ಲಿ ಬೃಹತ್ ವಿನಿಮಯ ಬೋನಸ್‌ಗಳನ್ನು ನೀಡುತ್ತಿದೆ. ನಿಮ್ಮ ಹಳೆಯ ಸ್ಮಾರ್ಟ್‌ಫೋನ್ ಅನ್ನು ನೀವು ಟ್ರೇಡ್ ಮಾಡಿದರೆ 17,500 ರೂ.ವರೆಗೆ ರಿಯಾಯಿತಿ ಪಡೆಯಬಹುದು. ಇದು iPhone 12 Mini ಬೆಲೆಯನ್ನು ಕೇವಲ 264,99 ರೂ.ಗೆ ಇಳಿಸಲಿದೆ. ಆದಾಗ್ಯೂ, ರಿಯಾಯಿತಿಯು ನಿಮ್ಮ ಹಳೆಯ ಸ್ಮಾರ್ಟ್‌ಫೋನ್‌ನ ಮಾದರಿ ಮತ್ತದರ ಸ್ಥಿತಿಯನ್ನು ಅವಲಂಬಿಸಿರುತ್ತದೆ ಮತ್ತು ನಿಮ್ಮ ಪ್ರದೇಶದಲ್ಲಿ ವಿನಿಮಯದ ಲಭ್ಯತೆಯ ಮೇಲೆ ಅವಲಂಬಿತವಾಗಿರುತ್ತದೆ. ಮೇಲಿನ ಕೊಡುಗೆಗಳು iPhone 12 Miniಯ ಇತರ ರೂಪಾಂತರಗಳಲ್ಲಿ ಸಹ ಮಾನ್ಯವಾಗಿರುತ್ತವೆ.

iPhone 12 Mini ಖರೀದಿಯಲ್ಲಿ ಲಭ್ಯವಿರುವ ಬ್ಯಾಂಕ್ ಕೊಡುಗೆಗಳು:
ಐಫೋನ್ ಖರೀದಿಯಲ್ಲಿ ಇನ್ನೂ ಹೆಚ್ಚಿನ ಲಾಭವನ್ನು ಪಡೆಯಲು ಬ್ಯಾಂಕ್ ಕೊಡುಗೆಗಳು ಕೂಡ ನಿಮಗೆ ಸಹಕಾರಿಯಾಗಿವೆ. ಬ್ಯಾಂಕ್ ಕೊಡುಗೆಗಳ ಮೂಲಕ ಗ್ರಾಹಕರು ಸುಮಾರು ಶೇ. 10 ರಷ್ಟು ರಿಯಾಯಿತಿಯನ್ನು ಪಡೆಯಬಹುದು. ಫೆಡರಲ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ವಹಿವಾಟಿನ ಮೇಲೆ ಗ್ರಾಹಕರು ರೂ 1500 ವರೆಗೆ ರಿಯಾಯಿತಿ ಪಡೆಯಬಹುದು. ಹೆಚ್ಚುವರಿಯಾಗಿ, Flipkart Axis ಬ್ಯಾಂಕ್ ಕ್ರೆಡಿಟ್ ಕಾರ್ಡ್ ಹೊಂದಿರುವವರು ಕ್ರೆಡಿಟ್ ಕಾರ್ಡ್ ವಹಿವಾಟಿನ ಮೇಲೆ 5 ಪ್ರತಿಶತ ತ್ವರಿತ ರಿಯಾಯಿತಿಯನ್ನು ಪಡೆಯಬಹುದು.  

ಇದನ್ನೂ ಓದಿ- Best Broadband Plans: ಅತ್ಯಂತ ಕಡಿಮೆ ಬೆಲೆಗೆ ಅತ್ಯುತ್ತಮ ಬ್ರಾಡ್‌ಬ್ಯಾಂಡ್ ಯೋಜನೆ! ಇಲ್ಲಿದೆ ವಿವರ

iPhone 12 ಮಿನಿ ವಿಶೇಷಣಗಳು:
ಐಫೋನ್ 12 ಮಿನಿ ವೆನಿಲ್ಲಾ ಮಾದರಿಯ ಐಫೋನ್ 12 ನಂತೆಯೇ ಅದೇ ವೈಶಿಷ್ಟ್ಯಗಳನ್ನು ಹೊಂದಿದೆ. ಆದರೆ ಇದು 5.4 ಇಂಚಿನ ಡಿಸ್ಪ್ಲೇ ಹೊಂದಿದೆ. ಸ್ಮಾರ್ಟ್‌ಫೋನ್‌ನಲ್ಲಿ ಎರಡು 12-ಮೆಗಾಪಿಕ್ಸೆಲ್ ಕ್ಯಾಮೆರಾಗಳಿವೆ, ಅದು ಫೋಟೋಗಳನ್ನು ಹೆಚ್ಚು ಸ್ಪಷ್ಟವಾಗಿ ಸೆರೆಹಿಡಿಯುತ್ತದೆ. ಇದು Apple ನ ಹೊಸ A14 ಬಯೋನಿಕ್ ಚಿಪ್‌ಸೆಟ್ ಅನ್ನು ಹೊಂದಿದೆ. iPhone 12 Mini 5G ಸಂಪರ್ಕ ಮತ್ತು MagSafe ವೈರ್‌ಲೆಸ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News