Flipkart Big Saving Days Sale : ಸ್ಮಾರ್ಟ್ ಫೋನ್, ಗೆಜೆಟ್ ಗಳ ಮೇಲೆ ಸಿಗಲಿದೆ 80 ಶೇ. ರಷ್ಟು ರಿಯಾಯಿತಿ

Flipkart Big Saving Days: ಫ್ಲಿಪ್‌ಕಾರ್ಟ್‌ನ ಅಧಿಕೃತ ವೆಬ್‌ಸೈಟ್ ಪ್ರಕಾರ, ಬಿಗ್  ಸೇವಿಂಗ್ ಡೇಸ್ ಸೇಲ್  (FlipkartBigSavingDays) ಜೂನ್ 13 ರಿಂದ ಪ್ರಾರಂಭವಾಗಲಿದ್ದು, ಜೂನ್ 16 ರ ಮಧ್ಯರಾತ್ರಿ 12 ರವರೆಗೆ ಇರಲಿದೆ.  ಆದರೆ ಫ್ಲಿಪ್‌ಕಾರ್ಟ್ ಪ್ಲಸ್ (Flipkart)  ಸದಸ್ಯರಿಗೆ ಇದು ಜೂನ್ 12 ರಿಂದಲೇ  ಪ್ರಾರಂಭವಾಗಿದೆ. 

Written by - Ranjitha R K | Last Updated : Jun 13, 2021, 10:53 AM IST
  • ಜೂನ್ 13 ರಿಂದ 16 ರವರೆಗೆ ಬಿಗ್ ಸೇವಿಂಗ್ ಡೇಸ್ ಸೇಲ್
  • ಮೊಬೈಲ್ ಫೋನ್‌ಗಳು, ಸ್ಮಾರ್ಟ್ ಟಿವಿಗಳು, ಎಸಿ, ಲ್ಯಾಪ್‌ಟಾಪ್‌ ಮೇಲೆ ರಿಯಾಯಿತಿ
  • ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಅಕೌಂಟ್ ಯಿದ್ದರೆ ಸಿಗಲಿದೆ ಮತ್ತಷ್ಟು ಆಫರ್
Flipkart  Big Saving Days Sale :  ಸ್ಮಾರ್ಟ್ ಫೋನ್, ಗೆಜೆಟ್ ಗಳ ಮೇಲೆ ಸಿಗಲಿದೆ 80 ಶೇ. ರಷ್ಟು ರಿಯಾಯಿತಿ  title=
ಜೂನ್ 13 ರಿಂದ 16 ರವರೆಗೆ ಬಿಗ್ ಸೇವಿಂಗ್ ಡೇಸ್ ಸೇಲ್

ನವದೆಹಲಿ : ಇ-ಕಾಮರ್ಸ್ ವೆಬ್‌ಸೈಟ್ ಫ್ಲಿಪ್‌ಕಾರ್ಟ್‌ನಲ್ಲಿ (Flipkart) ಪ್ಲಸ್ ಮೆಂಬರ್ಸ್ ಗಾಗಿ ಬಿಗ್ ಸೇವಿಂಗ್ ಡೇಸ್ ಸೇಲ್  (Big Saving Days Sale)  ಈಗಾಗಲೇ ಪ್ರಾರಂಭವಾಗಿದೆ. ಈ ವಿಶೇಷ ಸೇಲ್ ನಲ್ಲಿ ಲೆಟೆಸ್ಟ್  ಮೊಬೈಲ್ ಫೋನ್‌ಗಳು, ಸ್ಮಾರ್ಟ್ ಟಿವಿಗಳು, ಎಸಿ, ಲ್ಯಾಪ್‌ಟಾಪ್‌, ಸೇರಿದಂತೆ ಹಲವು ಎಲೆಕ್ಟ್ರಾನಿಕ್ ಸಾಧನಗಳಲ್ಲಿ ಭಾರಿ ರಿಯಾಯಿತಿ ಮತ್ತು ಆಫರ್ ಗಳನ್ನು ನೀಡಲಾಗುತ್ತಿದೆ.

ಜೂನ್ 16 ರವರೆಗೆ ಇರಲಿದೆ ಸೇಲ್ : 
ಫ್ಲಿಪ್‌ಕಾರ್ಟ್‌ನ ಅಧಿಕೃತ ವೆಬ್‌ಸೈಟ್ ಪ್ರಕಾರ, ಬಿಗ್  ಸೇವಿಂಗ್ ಡೇಸ್ ಸೇಲ್  (Flipkart Big Saving Days) ಜೂನ್ 13 ರಿಂದ ಪ್ರಾರಂಭವಾಗಲಿದ್ದು, ಜೂನ್ 16 ರ ಮಧ್ಯರಾತ್ರಿ 12 ರವರೆಗೆ ಇರಲಿದೆ.  ಆದರೆ ಫ್ಲಿಪ್‌ಕಾರ್ಟ್ ಪ್ಲಸ್ (Flipkart)  ಸದಸ್ಯರಿಗೆ ಇದು ಜೂನ್ 12 ರಿಂದಲೇ  ಪ್ರಾರಂಭವಾಗಿದೆ. ಇದೇ ವೇಳೆ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಅಕೌಂಟ್ ಇರುವವರಿಗೆ  ಹೆಚ್ಚುವರಿ 10% ತ್ವರಿತ ರಿಯಾಯಿತಿ ಜೊತೆ ಇನ್ನೂ ಅನೇಕ ಆಫರ್ ಗಳನ್ನು ನೀಡಲಾಗುವುದು. 

ಇದನ್ನೂ ಓದಿ : WhatsApp Upcoming Features: ಬಳಕೆದಾರರ ಚಾಟಿಂಗ್ ಅನುಭವ ಬದಲಿಸಲು ಮುಂದಾದ WhatsApp? ಬಳಕೆದಾರರಿಗೇನು ಲಾಭ?

ಎಲೆಕ್ಟ್ರಾನಿಕ್ ವಸ್ತುಗಳ ಮೇಲೆ 80% ವರೆಗೆ ರಿಯಾಯಿತಿ : 
 ಈ ಸೇಲ್ ನಲ್ಲಿ , ಸ್ಮಾರ್ಟ್ ಫೋನ್ ಗಳಲ್ಲದೆ (Smartphone), ಎಲೆಕ್ಟ್ರಾನಿಕ್ ಸಾಧನಗಳು ಮತ್ತು ಪರಿಕರಗಳ ಖರೀದಿಯ ಮೇಲೆ ಸುಮಾರು 80% ವರೆಗೆ ರಿಯಾಯಿತಿ ನೀಡಲಾಗುತ್ತಿದೆ.   ಇದಲ್ಲದೆ, ಸ್ಮಾರ್ಟ್ ವಾಚ್‌ಗಳ (Smartwatch) ಮೇಲೆ 60 ಪ್ರತಿಶತದವರೆಗೆ, ಟ್ಯಾಬ್ಲೆಟ್‌ಗಳಲ್ಲಿ 50 ಪ್ರತಿಶತದವರೆಗೆ ಮತ್ತು ಡೆಸ್ಕ್‌ಟಾಪ್ ಪಿಸಿಗಳು ಮತ್ತು ಲ್ಯಾಪ್‌ಟಾಪ್‌ಗಳಲ್ಲಿ (Laptop) 30 ಪ್ರತಿಶತದಷ್ಟು ರಿಯಾಯಿತಿ ಸಿಗಲಿದೆ. ಇನ್ನು ಟಿವಿಗಳ ಮೇಲೆ 70 ಪ್ರತಿಶತದಷ್ಟು ರಿಯಾಯಿತಿ ಸಹ ಲಭ್ಯವಿರುತ್ತದೆ.

iPhone  ಸೇರಿದಂತೆ ಈ ಫೋನ್‌ಗಳ ಮೇಲೆ ರಿಯಾಯಿತಿ : 
ಫ್ಲಿಪ್‌ಕಾರ್ಟ್‌ನ ಈ ಸೇಲ್ ನಲ್ಲಿ , ಮೊಟೊರೊಲಾ, ಗೂಗಲ್, ಆಪಲ್, Samsung ಮತ್ತು ಆಸುಸ್, ರಿಯಲ್ಮೆ, ಪೊಕೊ ಮುಂತಾದ ಬ್ರಾಂಡ್‌ಗಳಿಗೆ ಭಾರಿ ರಿಯಾಯಿತಿ ನೀಡಲಾಗುತ್ತಿದೆ. ಸೇಲ್ ನಲ್ಲಿ Google Pixel 4a 26,999 ರೂಗಳಿಗೆ, ಸಿಗಲಿದೆ. ದಲ್ಲದೆ, iQoo 3 ಸ್ಮಾರ್ಟ್‌ಫೋನ್ 24,990 ರೂ.ಗಳ ಆರಂಭಿಕ ಬೆಲೆಯಲ್ಲಿ ಲಭ್ಯವಿರಲಿದೆ. ಪ್ರಸ್ತುತ ಈ ಫೋನ್ ಬೆಲೆ  34,990 ರೂ.  Motorola Razr 5G  ಸಹ ಫ್ಲಿಪ್‌ಕಾರ್ಟ್ ಸೇಲ್ ನ ಭಾಗವಾಗಲಿದ್ದು, ಇದು 89,999 ರೂಗಳಿಗೆ ಲಭ್ಯವಾಗಲಿದೆ, ಫೋನ್‌ನ ಪ್ರಸ್ತುತ ಬೆಲೆ 1,09,999 ರೂ.ಗಳು. 79,999 ರೂಪಾಯಿ ಬೆಲೆಯ iPhone 11 Pro ಈ ಸೇಲ್ ನಲ್ಲಿ 74,999 ರೂಗಳಲ್ಲಿ ಲಭ್ಯವಾಗಲಿದೆ. ಇನ್ನು iPhone XR  ಕೂಡಾ  39,999 ರೂಗಳಿಗೆ ಸಿಗಲಿದೆ.  ಇದಲ್ಲದೆ,  iPhone SE  (2020) 31,999 ರೂಗಳಿಗೆ ಸಿಗಲಿದೆ. ಇಷ್ಟು ಮಾತ್ರವಲ್ಲದೆ, Gionee Max Pro, Infinix Smart 5 ಮತ್ತು Micromax In Note 1 ಮೇಲೆ ಕೂಡಾ ಭಾರೀ ರಿಯಾಯಿತಿ ಸಿಗಲಿದೆ. Redmi Note 9 ಸೇರಿದಂತೆ ಇತರ ಮಾಡೆಲ್ ಗಳ ಮೇಲೆ ಪ್ರಿಪೇಯ್ಡ್ ಡಿಸ್ಕೌಂಟ್ ಕೂಡಾ ಇರಲಿದೆ. 

ಇದನ್ನೂ ಓದಿ : WhatsApp:ವಾಟ್ಸಾಪ್‌ನಲ್ಲಿ ನಿಮ್ಮ ರಹಸ್ಯ ಚಾಟ್ ಅನ್ನು ಮರೆಮಾಡಬೇಕೆ? ಈ ಟ್ರಿಕ್ ಒಮ್ಮೆ ಟ್ರೈ ಮಾಡಿ

ಫ್ಲಿಪ್‌ಕಾರ್ಟ್ ಕ್ರೇಜಿ ಡೀಲ್ಸ್ : 
ಫ್ಲಿಪ್‌ಕಾರ್ಟ್ ನಿರ್ದಿಷ್ಟವಾದ 'ಕ್ರೇಜಿ ಡೀಲ್‌ಗಳನ್ನು' (Crazy Deals) ಆಯೋಜಿಸುತ್ತದೆ.  ಸೀಮಿತ ಅವಧಿಗೆ ಆಯ್ದ ಕೊಡುಗೆಗಳನ್ನು ನೀಡಲಾಗುತ್ತದೆ. ಎಸ್‌ಬಿಐ ಕ್ರೆಡಿಟ್ ಕಾರ್ಡ್ (SBI Credit card)  ಮತ್ತು EMI ವಹಿವಾಟುಗಳಿಗೆ ಶೇಕಡಾ 10 ರಷ್ಟು ತ್ವರಿತ ರಿಯಾಯಿತಿ ಸಿಗಲಿದೆ. ಅಲ್ಲದೆ, ಎಲ್ಲಾ ಉತ್ಪನ್ನಗಳ ಮೇಲೆ ಉತ್ತಮ ಕೊಡುಗೆಗಳು ಸಿಗುತ್ತಿವೆ. ಸೇಲ್ ನಲ್ಲಿಇಎಂಐ ಮತ್ತು ಎಕ್ಸ್ಚೇಂಜ್ ಆಫರ್ ಆಯ್ಕೆ ಕೂಡಾ ಇರಲಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
 

Trending News