Apple ಕಂಪನಿಯ ಸಮಸ್ಯೆಗಳನ್ನು ಹೆಚ್ಚಿಸಿದ Face Mask

ಆಪಲ್ ತನ್ನ ಹೊಸ ಐಫೋನ್ 12 ಅನ್ನು ಕಳೆದ ವರ್ಷವಷ್ಟೇ ಬಿಡುಗಡೆ ಮಾಡಿತು. ಆದರೆ ಈಗ 2021 ರಲ್ಲಿ ಟಚ್ ಐಡಿ ಎಲ್ಲಾ ಉತ್ಪನ್ನಗಳಲ್ಲಿ ಪ್ರಮುಖ ಲಕ್ಷಣವಾಗಿದೆ. ಆಪಲ್ ತನ್ನ ಹೊಸ ಸ್ಮಾರ್ಟ್‌ಫೋನ್‌ಗಳಿಂದ ಟಚ್ ಐಡಿಯನ್ನು ತೆಗೆದುಹಾಕಿರಬಹುದು ಎಂದು ತಜ್ಞರು ಹೇಳುತ್ತಾರೆ. ಆದರೆ ಟಚ್ ಐಡಿ ವೈಶಿಷ್ಟ್ಯವನ್ನು ಆಪಲ್ ಇನ್ನೂ ಕೆಲವು ಆಪಲ್ ಉತ್ಪನ್ನಗಳಲ್ಲಿ ಬಳಸುತ್ತಿದೆ. ಉದಾಹರಣೆಗೆ, ಐಮ್ಯಾಕ್ ಮತ್ತು ಅಗ್ಗದ ಐಫೋನ್‌ಗಳು ಇನ್ನೂ ಟಚ್ ಐಡಿ ವೈಶಿಷ್ಟ್ಯವನ್ನು ಹೊಂದಿವೆ.

Written by - Yashaswini V | Last Updated : Jan 19, 2021, 06:03 PM IST
  • ಆಪಲ್ ಫೇಸ್‌ಮಾಸ್ಕ್‌ನಿಂದಾಗಿ ತೊಂದರೆ ಅನುಭವಿಸುತ್ತಿದೆ
  • ಹಲವು ಫೋನ್ ಗಳಲ್ಲಿ ಫೇಸ್ ಐಡಿ ಬಳಸುತ್ತಿಲ್ಲ
  • ಈ ಹಳೆಯ ವೈಶಿಷ್ಟ್ಯವು ಹಿಂತಿರುಗುತ್ತದೆ
Apple ಕಂಪನಿಯ ಸಮಸ್ಯೆಗಳನ್ನು ಹೆಚ್ಚಿಸಿದ Face Mask title=
New Apple technology

ನವದೆಹಲಿ : ಇತ್ತೀಚಿನ ದಿನಗಳಲ್ಲಿ ಒಂದೆಡೆ ಕರೋನಾವೈರಸ್ ಎಲ್ಲೆಡೆ ತಲ್ಲಣ ಸೃಷ್ಟಿಸಿದ್ದರೆ ಇನ್ನೊಂದೆಡೆ ಫೇಸ್ ಮಾಸ್ಕ್ ಧರಿಸುವುದರ ಬಗ್ಗೆ ಸಾಕಷ್ಟು ಮಂದಿ ತೊಂದರೆ ಅನುಭವಿಸುತ್ತಿದ್ದಾರೆ. ಈ ಫೇಸ್‌ಮಾಸ್ಕ್‌ನಿಂದಾಗಿ ನಾವು-ನೀವು ಮಾತ್ರವಲ್ಲ ದೊಡ್ಡ ದೊಡ್ಡ ಟೆಕ್ ಕಂಪನಿಗಳು ಸಹ ಈಗ ಇದರಿಂದ ಅಸಮಾಧಾನಗೊಳ್ಳುತ್ತಿವೆ. ಫೇಸ್ ಮಾಸ್ಕ್ ಆಪಲ್ಗೆ ದೊಡ್ಡ ಸಮಸ್ಯೆಯನ್ನು ತಂದಿದೆ. ಮೊದಲ ಬಾರಿಗೆ ಫೇಸ್ ಮಾಸ್ಕ್ ನಿಂದಾಗಿ ಟೆಕ್ ಕಂಪನಿ ಆಪಲ್ ತನ್ನ ಹಳೆಯ ತಂತ್ರಜ್ಞಾನವನ್ನು ಮರಳಿ ತರಬೇಕಾಗಿದೆ.

ಫೇಸ್ ಐಡಿಯಲ್ಲಿ ತೊಂದರೆ ಎದುರಿಸುತ್ತಿರುವ ಆಪಲ್ : 
ಐಫೋನ್ ಅನ್ಲಾಕ್ ಮಾಡಲು ಫೇಸ್ ಐಡಿ ಬಳಸಲಾಗುತ್ತದೆ. ಆದರೆ ಕರೋನಾ ಯುಗದಲ್ಲಿ ಅತ್ಯಗತ್ಯವಾಗಿರುವ ಫೇಸ್ ಮಾಸ್ಕ್ (Face Mask) ನಿಂದಾಗಿ ಬಳಕೆದಾರರಿಗೆ ಫೇಸ್ ಐಡಿ ಬಳಸಲು ಕಷ್ಟವಾಗುತ್ತಿದೆ. ಈ ಕಾರಣದಿಂದಾಗಿ ಆಪಲ್ ಐಫೋನ್ ಬಳಕೆದಾರರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಹಾಗಾಗಿ ಕಂಪನಿಯು ಮತ್ತೆ ತನ್ನ ಟಚ್ ಐಡಿ ವೈಶಿಷ್ಟ್ಯವನ್ನು ಪರಿಚಯಿಸುವ ಬಗ್ಗೆ ಚಿಂತಿಸುತ್ತಿದೆ. 2017 ರ ನಂತರ ಕಂಪನಿಯು ಟಚ್ ಐಡಿ ವೈಶಿಷ್ಟ್ಯವನ್ನು ತೆಗೆದುಹಾಕಿದೆ ಎಂಬುದು ಗಮನಿಸಬೇಕಾದ ವಿಷಯವಾಗಿದೆ.

ಪುನರಾರಂಭಗೊಳ್ಳಲಿದೆ ಟಚ್ ಐಡಿ :
ಬ್ಲೂಮ್‌ಬರ್ಗ್‌ನ ವರದಿಯ ಪ್ರಕಾರ, ಆಪಲ್ ಮತ್ತೆ ಟಚ್ ಐಡಿ ವೈಶಿಷ್ಟ್ಯವನ್ನು ಪರಿಚಯಿಸಲು ಸಿದ್ಧತೆ ನಡೆಸಿದೆ. ಫೇಸ್‌ಮಾಸ್ಕ್‌ನಿಂದಾಗಿ ಐಫೋನ್, ಐಮ್ಯಾಕ್ ಮತ್ತು ಇತರ ಉತ್ಪನ್ನಗಳಲ್ಲಿ ಫೇಸ್ ಐಡಿಯನ್ನು ಇನ್ನು ಮುಂದೆ ಬಳಸಲಾಗುವುದಿಲ್ಲ. ಅ

ಇದನ್ನೂ ಓದಿ - ಶೀಘ್ರದಲ್ಲೇ ಬರಲಿದೆ iPhone 13 ಈವರೆಗಿನ ಅತಿ ಸ್ಲಿಮ್ Smartphone

ಈ ವೈಶಿಷ್ಟ್ಯವು 2021 ರಲ್ಲಿ ಬರುವ ನಿರೀಕ್ಷೆಯಿದೆ :
ಕಳೆದ ವರ್ಷ ಕಂಪನಿಯು ತನ್ನ ಹೊಸ ಐಫೋನ್ 12 (iPhone 12) ಅನ್ನು ಬಿಡುಗಡೆ ಮಾಡಿತು. ಆದರೆ ಈಗ 2021 ರಲ್ಲಿ ಟಚ್ ಐಡಿ ಎಲ್ಲಾ ಉತ್ಪನ್ನಗಳಲ್ಲಿ ಪ್ರಮುಖ ಲಕ್ಷಣವಾಗಿದೆ.

ಆಪಲ್ ತನ್ನ ಹೊಸ ಸ್ಮಾರ್ಟ್‌ಫೋನ್‌ಗಳಿಂದ ಟಚ್ ಐಡಿಯನ್ನು ತೆಗೆದುಹಾಕಿರಬಹುದು ಎಂದು ತಜ್ಞರು ಹೇಳುತ್ತಾರೆ. ಆದರೆ ಟಚ್ ಆಪಲ್ ಇನ್ನೂ ಕೆಲವು ಆಪಲ್ (Apple) ಉತ್ಪನ್ನಗಳಲ್ಲಿ ಇದೆ. ಉದಾಹರಣೆಗೆ ಕೆಲವು ಹಳೆಯ ಐಮ್ಯಾಕ್ ಮತ್ತು ಅಗ್ಗದ ಐಫೋನ್‌ಗಳು ಇನ್ನೂ ಟಚ್ ಐಡಿ ವೈಶಿಷ್ಟ್ಯವನ್ನು ಹೊಂದಿವೆ.

ವರದಿಗಳ ಪ್ರಕಾರ ಆಪಲ್ ತನ್ನ ಹೊಸ ಉತ್ಪನ್ನಗಳ ಪರದೆಯೊಳಗೆ ಟಚ್ ಐಡಿ ವೈಶಿಷ್ಟ್ಯವನ್ನು ನೀಡಬಹುದು. ಪರದೆಯ ಮೇಲೆ ಎಲ್ಲಿಯಾದರೂ ಫಿಂಗರ್ ಪ್ರಿಂಟ್ ಅನ್ನು ಅನ್ಲಾಕ್ ಮಾಡಬಹುದು.

ಇದನ್ನೂ ಓದಿ - ಹೊಸ Featuresನೊಂದಿಗೆ ಬರುತ್ತಿದೆ WhatsApp..! ವೈಶಿಷ್ಟ್ಯತೆಗಳೇನು ಗೊತ್ತಾ?

ಅದಾಗ್ಯೂ ಟಚ್ ಐಡಿಯನ್ನು ಮತ್ತೆ ತರಲು ತಯಾರಿ ನಡೆಸುತ್ತಿರುವ ಕಂಪನಿಗಳಲ್ಲಿ ಆಪಲ್ ಮೊದಲ ಕಂಪೆನಿಯಲ್ಲ ಎಂಬುದು ಗಮನಾರ್ಹ. ಈ ಹಿಂದೆ ಸ್ಯಾಮ್‌ಸಂಗ್ (Samsung) ಮತ್ತು ಹುವಾವೇ ಈಗಾಗಲೇ ತಮ್ಮ ಹ್ಯಾಂಡ್‌ಸೆಟ್‌ಗಳಲ್ಲಿ ಇನ್-ಸ್ಕ್ರೀನ್ ಟಚ್ ಐಡಿ ನೀಡಲು ಪ್ರಾರಂಭಿಸಿವೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News