Elon Musk On Wikipedia: ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ, ಸ್ಪೇಸ್ಎಕ್ಸ್ ಮತ್ತು ಟೆಸ್ಲಾ ಮಾಲೀಕ ಎಲೋನ್ ಮಸ್ಕ್ ಮತ್ತೊಮ್ಮೆ ಸಿದ್ದಿಯಲ್ಲಿದ್ದಾರೆ... ಈ ಬಾರಿ ಅವರು ಸುದ್ದಿಯಲ್ಲಿರುವುದು ಯಾವುದೇ ಹೊಸ ವ್ಯವಹಾರದಿಂದಲ್ಲ ಆದರೆ ವಿಕಿಪೀಡಿಯಾಕ್ಕೆ ಅವರು ನೀಡಿದ ಆಫರ್ನಿಂದಾಗಿ ಎಂದರೆ ನಿಮಗೂ ಆಶ್ಚರ್ಯವಾಗಬಹುದು. X (ಹಿಂದೆ ಟ್ವಿಟರ್) ನಲ್ಲಿ ಅವರು ಹಂಚಿಕೊಂಡ ಒಂದು ಪೋಸ್ಟ್ ನಿಂದ ಇದೀಗ ಸುದ್ದಿ ಮಾಡಿದ್ದಾರೆ. ಈಗ ವಿಕಿಪೀಡಿಯಾ ತನ್ನ ಹೆಸರನ್ನು ಬದಲಾಯಿಸಿದರೆ ಮಸ್ಕ್ 1 ಬಿಲಿಯನ್ ಡಾಲರ್ ನೀಡುವುದಾಗಿ ಘೋಷಿಸಿದ್ದಾರೆ.
ವಿಕಿಪೀಡಿಯಾ ತನ್ನ ಹೆಸರನ್ನು "ಡಿಕಿಪೀಡಿಯಾ" ಎಂದು ಬದಲಾಯಿಸಿದರೆ, ಅದಕ್ಕೆ ಈ ಮೊತ್ತವನ್ನು ನೀಡುವುದಾಗಿ ಎಲೋನ್ ಮಸ್ಕ್ ಹೇಳಿದ್ದಾರೆ. ಮಸ್ಕ್ ತಮ್ಮ ಪೋಸ್ಟ್ ಗೆ ಪ್ರತಿಕ್ರಿಯಿಸಿರುವ ಬಳಕೆದಾರರೊಬ್ಬರು, ವಿಕಿಪೀಡಿಯಾಗೆ ಅದರ ಹೆಸರನ್ನು ಬದಲಾಯಿಸಲು ಸಲಹೆ ನೀಡಿದ್ದಾರೆ ಮತ್ತು ಎಲೋನ್ ಮಸ್ಕ್ ಅವರಿಂದ ಹಣವನ್ನು ಪಡೆದ ಬಳಿಕ ಮತ್ತೆ ತನ್ನ ಹೆಸರನ್ನು ಹಳೆ ಹೆಸರಿಗೆ ಬದಲಾಯಿಸಿಕೊಳ್ಳಬೇಕು ಎಂದು ಹೇಳಿದ್ದಾರೆ.
'ನಾನು ಹುಚ್ಚನಲ್ಲ' ಎಂದ ಮಸ್ಕ್
ಇದಾದ ಮೇಲೆ ಮಸ್ಕ್ ತಮ್ಮದೇ ಆದ ಷರತ್ತನ್ನು ಹಾಕಿದ್ದಾರೆ ಮತ್ತು ನಾನು ಹುಚ್ಚನಲ್ಲ ಎಂದು ಹೇಳಿದ್ದಾರೆ ... ತನ್ನ ಹೆಸರನ್ನು ಬದಲಾಯಿಸಿದ ನಂತರ, ವಿಕಿಪೀಡಿಯಾವು ಕನಿಷ್ಠ ಒಂದು ವರ್ಷದವರೆಗೆ ಅದೇ ಹೆಸರನ್ನು ಇಡಬೇಕಾಗುತ್ತದೆ ಎಂದಿದ್ದಾರೆ. ಇಷ್ಟೆಲ್ಲಾ ಮಾತುಕತೆ ನಡೆದ ಬಳಿಕ ಮಧ್ಯ ಪ್ರವೇಶಿಸಿದ, ವಿಕಿಪೀಡಿಯಾದ ಸಹ-ಸಂಸ್ಥಾಪಕ ಜಿಮ್ಮಿ ವೇಲ್ಸ್ ವಿಕಿಪೀಡಿಯಾ ಮಾರಾಟಕ್ಕಿಲ್ಲ ಎಂದು ಮನವಿ ಮಾಡಿದ್ದಾರೆ.
ಇದನ್ನೂ ಓದಿ-ಮನೆಯ ಯಾವ ಜಾಗದಲ್ಲಿ ವೈಫೈ ರೂಟರ್ ಅನ್ನು ಅಳವಡಿಸಿದರೆ ಇಂಟರ್ನೆಟ್ ವೇಗ ಜಾಸ್ತಿ ಸಿಗುತ್ತೆ?
ಮುಖಪುಟದಲ್ಲಿ ಕಾಣಿಸಿಕೊಂಡ ಸ್ಕ್ರೀನ್ ಶಾಟ್
ಮಸ್ಕ್ ವಿಕಿಪೀಡಿಯಾದ ಮುಖಪುಟದ ಸ್ಕ್ರೀನ್ಶಾಟ್ ಅನ್ನು ಹಂಚಿಕೊಂಡಿದ್ದಾರೆ, ಅಲ್ಲಿ "ವಿಕಿಪೀಡಿಯಾ ಮಾರಾಟಕ್ಕಿಲ್ಲ" ಎಂದು ಬರೆಯಲಾಗಿದೆ ಮತ್ತು "ಜಿಮ್ಮಿ ವೇಲ್ಸ್ನಿಂದ ವೈಯಕ್ತಿಕ ಮನವಿ" ಎಂದು ಸಹ ತೋರಿಸಿದೆ. ಇದಲ್ಲದೆ, ವಿಕಿಮೀಡಿಯಾ ಫೌಂಡೇಶನ್ಗೆ ಇಷ್ಟು ಹಣ ಏಕೆ ಬೇಕು ಎಂದು ಮಸ್ಕ್ ಹೇಳಿದ್ದಾರೆ? ವಿಕಿಮೀಡಿಯಾ ಫೌಂಡೇಶನ್ ವಿಕಿಪೀಡಿಯಾವನ್ನು ನಿರ್ವಹಿಸುತ್ತದೆ.
ಇದನ್ನೂ ಓದಿ-ಗೂಗಲ್ ಕ್ರೋಮ್ ನಲ್ಲಿ ಶೀಘ್ರದಲ್ಲೇ ಕಾಣಿಸಿಕೊಳ್ಳಲಿದೆ ಈ ಕೃತಕ ಬುದ್ಧಿಮತ್ತೆ ವೈಶಿಷ್ಟ್ಯ, ಬಳಕೆದಾರರಿಗೇನು ಲಾಭ?
ತಮಾಷೆ ಮಾಡಿದ ಮಸ್ಕ್
ಹೆಚ್ಚುವರಿಯಾಗಿ, ಮಸ್ಕ್ ತನ್ನ ವಿಕಿಪೀಡಿಯಾ ಪ್ರೊಫೈಲ್ ಪುಟಕ್ಕೆ ಹಸುವಿನ ಸಗಣೆಯ ಎಮೋಜಿಯನ್ನು ಸೇರಿಸಬಹುದೇ ಎಂದು ಕೇಳಿದ್ದಾರೆ. ಮಸ್ಕ್ ಅವರ ಈ ತಮಾಷೆಯ ಟ್ವಿಟರ್ನಲ್ಲಿ ಲಕ್ಷಾಂತರ ವೀಕ್ಷಣೆಗಳು ಮತ್ತು ಲೈಕ್ಗಳನ್ನು ಪಡೆದುಕೊಂಡಿದೆ. ಇದರೊಂದಿಗೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಅದನ್ನು ವೀಕ್ಷಿಸಿದ್ದಾರೆ.
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.