Shocking: ಕೇವಲ 3x4 ಸೆಂ.ಮಿ ಗಾತ್ರದ ಈ ಬಟ್ಟೆಯಿಂದ ನೀವು 100 ಎಲ್ಇಡಿ ಬಲ್ಬ್ ಗಳನ್ನು ಉರಿಸಬಹುದಂತೆ

Electricity Generating Fabric: ಕೇವಲ 3x4 ಸೆಂ.ಮಿ ಗಾತ್ರದ ಒಂದು ಬಟ್ಟೆಯಿಂದ ನೀವು 100 ಎಲ್ಇಡಿ ಬಲ್ಬ್ ಗಳನ್ನು ಉರಿಸುವಷ್ಟು ವಿದ್ಯುತ್ ಅನ್ನು ಉತ್ಪಾದಿಸಬಹುದು ಮತ್ತು ಸಣ್ಣ ಇಲೆಕ್ಟ್ರಾನಿಕ್ ಸಾಧನಗಳನ್ನು ಚಾರ್ಜ್ ಮಾಡಬಹುದು ಎಂದು ಹೇಳಿದರೆ ನೀವು ನಂಬುವಿರಾ? ಹೌದು, ನಂಬಲಸಾಧ್ಯವಾದರೂ ಇದು ನಿಜ. ವಿಜ್ಞಾನಿಗಳು ಇಂತಹದ್ದೊಂದು ತಂತ್ರಜ್ಞಾನಕ್ಕೆ ನಾಂದಿ ಹಾಡಿದ್ದಾರೆ.   

Written by - Nitin Tabib | Last Updated : Jun 25, 2022, 02:54 PM IST
  • ವಿಜ್ಞಾನಿಗಳ ವಿಶಿಷ್ಠ ಸಾಧನೆ
  • 3x4 ಸೆಂ.ಮೀ ಗಾತ್ರದ ಬಟ್ಟೆಯಿಂದ ವಿದ್ಯುತ್ ಶಕ್ತಿ ಉತ್ಪಾದನೆ.
  • ಈ ವಿದ್ಯುತ್ ಶಕ್ತಿಯಿಂದ 100 ಎಲ್ಇಡಿ ಬಲ್ಬ್ ಗಳನ್ನು ಬೆಳಗಬಹುದು
Shocking: ಕೇವಲ 3x4 ಸೆಂ.ಮಿ ಗಾತ್ರದ ಈ ಬಟ್ಟೆಯಿಂದ ನೀವು 100 ಎಲ್ಇಡಿ ಬಲ್ಬ್ ಗಳನ್ನು ಉರಿಸಬಹುದಂತೆ title=
Electricity Generating Cloth

Electricity Generating Fabric to charge Small devices and light up to 100 LEDs: ಇಂದಿನ ತಂತ್ರಜ್ಞಾನದ ಯುಗದಲ್ಲಿ ತಂತ್ರಜ್ಞಾನ ಯಾವ ಮಟ್ಟಿಗೆ ಬೆಳೆಯುತ್ತಿದೆ ಎಂಬುದಕ್ಕೆ ನಾವೆಲ್ಲಾ ಸಾಕ್ಷಿಯಾಗಿದ್ದೇವೆ. ಇತ್ತೀಚೆಗಷ್ಟೇ ವಿಜ್ಞಾನಿಗಳು ತಂತ್ರಜ್ಞಾನವೊಂದನ್ನು ಅಭಿವೃದ್ಧಿಪಡಿಸಿದ್ದು, ಇದರಿಂದ ನೀವು ಕೇವಲ ಒಂದು 3x4 ಸೆಂ.ಮಿ ಗಾತ್ರದ ಒಂದು ಬಟ್ಟೆಯಿಂದ ವಿದ್ಯುತ್ತನ್ನು ಉತ್ಪಾದಿಸಬಹುದು ಎಂದು ಹೇಳಲಾಗಿದೆ. ಈ ಬಟ್ಟೆ ಉತ್ಪಾದಿಸುವ ವಿದ್ಯುತ್ ಶಕ್ತಿಯಿಂದ ನೀವು ಹಲವು ಸಣ್ಣ ಉಪಕರಣಗಳನ್ನು ಚಾರ್ಜ್ ಮಾಡಬಹುದು. ಅಷ್ಟೇ ಅಲ್ಲ ಇದರ ವಿದ್ಯುತ್ ಶಕ್ತಿಯಿಂದ ನೀವು 100 ಎಲ್ಇಡಿ ಬಲ್ಬ್ ಗಳನ್ನೂ ಕೂಡ ಉರಿಸಬಹುದು. ಹಾಗಾದರೆ ಬನ್ನಿ ಈ ವಿಶೇಷ ಬಟ್ಟೆ ಯಾವುದು ತಿಳಿದುಕೊಳ್ಳೋಣ.

ನಿಬ್ಬೇರಗಾಗಿಸುವ ತಂತ್ರಜ್ಞಾನ ಅಭಿವೃದ್ಧಿಪಡಿಸಿದ ವಿಜ್ಞಾನಿಗಳು Nanyang Technological University (NTU), Singapore  ವಿಜ್ಞಾನಿಗಳು ಈ ಹೊಸ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದ್ದು, ಇದರಲ್ಲಿ 3x4 ಸೆಂ.ಮಿ ಗಾತ್ರದ ಬಟ್ಟೆಯ ಮೂಲಕ ವಿದ್ಯುತ್ ಉತ್ಪಾದಿಸಬಹುದು ಎನ್ನಲಾಗಿದೆ. ಈ ವಿದ್ಯುತ್ ಶಕ್ತಿಯಿಂದ ನಾವು ಸಣ್ಣ ಉಪಕರಣಗಳನ್ನು ಚಾರ್ಜ್ ಮಾಡಬಹುದು ಮತ್ತು 100 ಎಲ್ಇಡಿ ಬಲ್ಬ್ ಗಳನ್ನು ಉರಿಸಬಹುದು ಎಂದು ವಿಜ್ಞಾನಿಗಳು ತಮ್ಮ ವಾದ ಮಂಡಿಸಿದ್ದಾರೆ. ಈ ಬಟ್ಟೆ ಒಂದು ಸ್ಟ್ರೆಚೆಬಲ್ ಹಾಗೂ ವಾಟರ್ ಪ್ರೂಫ್ ಬಟ್ಟೆಯಾಗಿರಲಿದ್ದು, ಇದು ಮನುಷ್ಯರ ಶರೀರದಿಂದ ಕೂಡ ವಿದ್ಯುತ್ ಶಕ್ತಿಯನ್ನು ಉತ್ಪಾದಿಸಬಲ್ಲದು ಎಂದು ವಿಜ್ಞಾನಿಗಳು ಹೇಳಿದ್ದಾರೆ. 'ಅಡ್ವಾನ್ಸ್ ಮಟೀರಿಯಲ್' ನಲ್ಲಿ ಪ್ರಕಟಗೊಂಡ ಒಂದು ಲೇಖನದಲ್ಲಿ ಈ ಕಾನ್ಸೆಪ್ಟ್ ಕುರಿತು ಉಲ್ಲೇಖಿಸಲಾಗಿದೆ.

3x4 ಸೆಂ.ಮಿ ಗಾತ್ರದ ಬಟ್ಟೆ ವಿದ್ಯುತ್ ಶಕ್ತಿ ಉತ್ಪಾದಿಸಬಲ್ಲದು
ಲೇಖನದ ಪ್ರಕಾರ, ಈ 3x4cm ಬಟ್ಟೆಯ ಮೇಲೆ ಟೈಪ್ ಮಾಡುವ ಮೂಲಕ ವಿದ್ಯುತ್ ಉತ್ಪಾದಿಸಬಹುದು ಎನ್ನಲಾಗಿದೆ. ಈ ಪ್ರಕ್ರಿಯೆಯನ್ನು ಎರಡು ರೀತಿಯಲ್ಲಿ ಪೂರ್ಣಗೊಳಿಸಬಹುದು. ಈ ಬಟ್ಟೆಯನ್ನು ಒತ್ತಿ ಅಥವಾ ಹಿಸುಕುವ ಮೂಲಕ ಪೀಜೋಎಲೆಕ್ಟ್ರಿಸಿಟಿಯನ್ನು ಉತ್ಪಾದಿಸಬಹುದು ಮತ್ತು ಈ ಬಟ್ಟೆಯನ್ನುಇತರ ಬಟ್ಟೆ ಅಥವಾ ನಮ್ಮ ಚರ್ಮಕ್ಕೆ ಸಂಪರ್ಕಿಸುವ ಮೂಲಕ ಟ್ರೈಬೋಎಲೆಕ್ಟ್ರಿಕ್ ಎಫೆಕ್ಟ್‌ನಿಂದ ವಿದ್ಯುತ್ ಅನ್ನು ಸಹ ಉತ್ಪಾದಿಸಬಹುದು.

ಇದನ್ನೂ ಓದಿ-Oukitel WP19- ಫುಲ್ ಚಾರ್ಜ್‌ನಲ್ಲಿ 7 ದಿನಗಳವರೆಗೆ ಕಾರ್ಯನಿರ್ವಹಿಸುತ್ತಂತೆ ಈ ಸ್ಮಾರ್ಟ್‌ಫೋನ್

ಈ ಬಟ್ಟೆಯನ್ನು ತೊಲಿಯುವುದರಿಂದ ಅಥವಾ ಅದನ್ನು ಮದಚುವುದರಿಂದ ಅದರ ಕಾರ್ಯಕ್ಷಮತೆಯ ಮೇಲೆ ಯಾವುದೇ ರೀತಿಯ ಪರಿಣಾಮ ಉಂಟಾಗುವುದಿಲ್ಲ ಎಂದು ಸಂಶೋಧಕರು ಹೇಳುತ್ತಾರೆ. ಇದಲ್ಲದೆ, ಐದು ತಿಂಗಳವರೆಗೆ ಈ ಬಟ್ಟೆಯ ಔಟ್ ಪುಟ್ ನಲ್ಲಿ  ಯಾವುದೇ ಕೊರತೆ ಎದುರಾಗುವುದಿಲ್ಲ ಎಂದು ವಿಜ್ಞಾನಿಗಳು ಹೇಳಿದ್ದಾರೆ.

ಇದನ್ನೂ ಓದಿ-ಈ ಸ್ಮಾರ್ಟ್ ಫೋನ್ ಗಳನ್ನೂ ಸುಲಭವಾಗಿ ಹ್ಯಾಕ್ ಮಾಡುವ ಹ್ಯಾಕರ್‌ಗಳು ..!

100 ಎಲ್ಇಡಿ ಬಲ್ಬ್ ಗಳನ್ನು ಬೆಳಗಬಹುದು!
ವಿಜ್ಞಾನಿಗಳ ಪ್ರಕಾರ, ಡಿಜಿಟಲ್ ವಾಚ್‌ಗಳು, ಫಿಟ್‌ನೆಸ್ ಬ್ಯಾಂಡ್‌ಗಳು ಮತ್ತು LCD ಸ್ಕ್ರೀನ್‌ಗಳಂತಹ ಅನೇಕ ಸಣ್ಣ ಎಲೆಕ್ಟ್ರಾನಿಕ್ ಸಾಧನಗಳನ್ನು ಈ ಬಟ್ಟೆಯಿಂದ ಚಾರ್ಜ್ ಮಾಡಬಹುದು ಎಂಬುದು ಇಲ್ಲಿ ಲ್ಲೆಖನೀಯ. ಈ ಬಟ್ಟೆಯನ್ನು ವಿದ್ಯುತ್ ಶಕ್ತಿ ಶೇಖರಣಾ ಸಾಧನಗಳೊಂದಿಗೆ ಸಂಯೋಜಿಸಬಹುದು. ಈ ಬಟ್ಟೆಯಿಂದ ಉತ್ಪಾದಿಸುವ ವಿದ್ಯುತ್‌ನಿಂದ 100 ಎಲ್‌ಇಡಿ ಬಲ್ಬ್‌ಗಳನ್ನು ಬೆಳಗಿಸಬಹುದು ಎಂದು ಹೇಳಲಾಗುತ್ತಿದೆ.

ಇದನ್ನೂ ನೋಡಿ- 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
 

Trending News