Earth Realigns With Neptune: ಇಂದು ಆಗಸ ಅದ್ಭುತ ಖಗೋಳ ಘಟನೆಗೆ ಸಾಕ್ಷಿಯಾಗಲಿದೆ, ಭೂಮಿಯ ತೀರಾ ಹತ್ತಿರಕ್ಕೆ ಬರಲಿದೆ ಈ ನಿಗೂಢ ಗ್ರಹ

Earth Realigns With Neptune - ಇಂದು ನೆಪ್ಚೂನ್ ಭೂಮಿಯ ಸುಮಾರು 240 ಮಿಲಿಯನ್ ಕಿ.ಮೀ ಹತ್ತಿರಕ್ಕೆ ಬರಲಿದೆ ಮತ್ತು 4.3 ಬಿಲಿಯನ್ ಕಿ.ಮೀ ದೂರದಲ್ಲಿ ಇರಲಿದೆ. ಸೌರವ್ಯೂಹದ (Solar System)  ಮೂರನೇ ಅತಿದೊಡ್ಡ ಗ್ರಹವಾದ ನೆಪ್ಚೂನ್ 14 ಚಂದ್ರಗಳನ್ನು ಹೊಂದಿದೆ. ಈ ಗ್ರಹವು ಹಿಮಾವೃತವಾಗಿದೆ ಮತ್ತು ಇಲ್ಲಿ ತಾಪಮಾನವು ಮೈನಸ್ 214 ಡಿಗ್ರಿ ಸೆಲ್ಸಿಯಸ್ ಆಗಿರುತ್ತದೆ.

Written by - Nitin Tabib | Last Updated : Sep 14, 2021, 02:15 PM IST
  • ನೆಪ್ಚ್ಯೂನ್ ಸೌರಮಂಡಲದ ಅತ್ಯಂತ ದೂರದ ಗ್ರಹವಾಗಿದೆ
  • ಇದರ ಬೆಳಕು ಭೂಮಿಗೆ ಬರಲು 4 ಗಂಟೆಗಳ ಸಮಯಾವಕಾಶ ಬೇಕು.
  • ಸೂರ್ಯನ ಬೆಳಕು ಭೂಮಿಗೆ ತಲುಪಲು ಕೇವಲ 8 ನಿಮಿಷಗಳು ಮಾತ್ರ ಬೇಕಾಗುತ್ತದೆ.
Earth Realigns With Neptune: ಇಂದು ಆಗಸ ಅದ್ಭುತ ಖಗೋಳ ಘಟನೆಗೆ ಸಾಕ್ಷಿಯಾಗಲಿದೆ, ಭೂಮಿಯ ತೀರಾ ಹತ್ತಿರಕ್ಕೆ ಬರಲಿದೆ ಈ ನಿಗೂಢ ಗ್ರಹ title=
Earth Realigns With Neptune

ನವದೆಹಲಿ: Earth Realigns With Neptune - ನೆಪ್ಚೂನ್, ಸೌರವ್ಯೂಹದ  (Solar System) ಅತ್ಯಂತ ನಿಗೂಢ ಮತ್ತು ಬೃಹದಾಕಾರದ ಗ್ರಹವಾಗಿದೆ. ಇಂದು ಭೂಮಿಗೆ ಅದು ಅತ್ಯಂತ ಹತ್ತಿರ ಬರಲಿದೆ. ಸೆಪ್ಟೆಂಬರ್ 14 ರಂದು, Neptune ಭೂಮಿಗೆ ಅತ್ಯಂತ ಹತ್ತಿರವಾಗಿರುತ್ತದೆ ಮತ್ತು ಈ ಖಗೋಳ ಘಟನೆಯು (Astronimical Event) ತುಂಬಾ ವಿಶಿಷ್ಟವಾಗಿರಲಿದೆ.

ಭೂಮಿಯ ತುಂಬಾ ಹತ್ತಿರಕ್ಕೆ ಬರಸಿದೆ ನೆಪ್ಚ್ಯೂನ್
ಆದರೆ ವಿಜ್ಞಾನಿಗಳು ಹೇಳುವ ಪ್ರಕಾರ ನೆಪ್ಚ್ಯೂನ್ (Neptune) ಭೂಮಿಗೆ (Earth) ಹತ್ತಿರ ಬರುವಿಕೆಯನ್ನು ಹತ್ತಿರ ಎಂದು ಹೇಳಲಾಗುವುದಿಲ್ಲ ಎನ್ನಲಾಗಿದೆ. ಏಕೆಂದರೆ ಈ ಗ್ರಹ ಭೂಮಿಯಿಂದ ತುಂಬಾನೇ ದೂರದಲ್ಲಿದೆ. ನೆಪ್ಚ್ಯೂನ ಬರಿಗಣ್ಣಿನಿಂದ (Nekked Eye) ನೋಡಲಾಗದ ಸೌರಮಂಡಲದ ಏಕಮಾತ್ರ ಗ್ರಹವಾಗಿದೆ.

ಮಂಗಳವಾರ ಸೆಪ್ಟೆಂಬರ್ 14ರಂದು ನೆಪ್ಚ್ಯೂನ್ ಭೂಮಿಯ ತುಂಬಾ ಹತ್ತಿರಕ್ಕೆ ಬರಲಿದೆ. ಇದನ್ನು ನೀವು ಮಧ್ಯರಾತ್ರಿಯವೇಳೆ ದೂರದರ್ಶಕದ (Telescope) ಸಹಾಯದಿಂದ ವಿಕ್ಷೀಸಬಹುದು. ರಾತ್ರಿಯ ಹೊತ್ತು ಚಂದ್ರನ ಬೆಳಕಿನಲ್ಲಿ ನೆಪ್ಚ್ಯೂನ್ ತುಂಬಾ ಹೊಳಪಾಗಿ ಕಾಣಿಸಲಿದೆ.

ಸೌರಮಂಡಲದ (Solar System) ಮೂರನೇ ಅತಿ ದೊಡ್ಡ ಗ್ರಹ
ನೆಪ್ಚ್ಯೂನ್ ಭೂಮಿಗೆ ಸುಮಾರು 24 ಕೋಟಿ ಕಿ.ಮೀ ಗಳಷ್ಟು  ಹತ್ತಿರಕ್ಕೆ ಬಂದು 4.3 ಬಿಲಿಯನ್ ಕಿ.ಮೀಗಳಷ್ಟು ದೂರದಲ್ಲಿರಲಿದೆ. ಸೌರಮಂಡಲದ ಮೂರನೇ ಅತಿ ದೊಡ್ಡ ನಕ್ಷತ್ರವಾಗಿರುವ ನೆಪ್ಚ್ಯೂನ್ ಗೆ ಒಟ್ಟು 14 ಚಂದ್ರಗಳು (Moons) ಅಂದರೆ ಉಪಗ್ರಹಗಳಿವೆ. ಈ ಗ್ರಹ ಸಂಪೂರ್ಣ ಮಂಜಿನಿಂದ ಆವೃತ್ತವಾಗಿದ್ದು ಇಲ್ಲಿನ ತಾಪಮಾನ ಸುಮಾರು 214 ಡಿಗ್ರೀ ಸೆಲ್ಸಿಯಸ್ ಇರುತ್ತದೆ.

ಇದನ್ನೂ ಓದಿ-NASA Study: 9 ವರ್ಷಗಳ ಬಳಿಕ ಚಂದ್ರನ ಸ್ಥಿತಿಯಲ್ಲಿ ಬದಲಾವಣೆ, ಇಡೀ ವಿಶ್ವಕ್ಕೆ ಎದುರಾಗಲಿದೆ ಭಾರಿ ಅಪಾಯ!

ಅತ್ಯಂತ ದೂರದ ಗ್ರಹ
ಮಂಗಳವಾರ ಸೂರ್ಯಾಸ್ತದ (Sun Set) ಆಸುಪಾಸಿನಲ್ಲಿ ಪೂರ್ವ ಭಾಗದಲ್ಲಿ ಉದಯಿಸಲಿದೆ. ರಾತ್ರಿ 12 ಗಂಟೆಗೆ ಆಗಸದ ಸರ್ವೋಚ್ಛ ಬಿಂದುವಾಗಿರಲಿದೆ. ಬಳಿಕ ಬೆಳಗಿನ ಜಾವದಲ್ಲಿ ಸೂರ್ಯೋದಯಕ್ಕು ಮೊದಲು ಪಶ್ಚಿಮ ಭಾಗದಲ್ಲಿ ಮುಳುಗುತ್ತದೆ. ವಿಜ್ಞಾನಿಗಳ ಪ್ರಕಾರ, ನೆಪ್ಚ್ಯೂನ್ ದಿನ 16 ಗಂಟೆಗಳದ್ದಾಗಿದೆ. ಆದ್ರೆ ಇದರ ಒಂದು ವರ್ಷ ಭೂಮಿಯ 165 ವರ್ಷಗಳಿಗೆ ಸಮನಾಗಿರಲಿದೆ. ಸೂರ್ಯನಿಗೆ ಒಂದು ಸುತ್ತು ಸುತ್ತಲು ನೆಪ್ಚ್ಯೂನ್ ಗೆ 165 ಅರ್ಥ್ ಅವರ್ (Earth Hour) ಬೇಕಾಗುತ್ತದೆ.

ಇದನ್ನೂ ಓದಿ-Sound Of Universe:ಬ್ರಹ್ಮಾಂಡದ ಹಮ್ಮಿಂಗ್ ಸೌಂಡ್ ವಿಡಿಯೋ ನೀವೂ ಈ ಮೊದಲು ನೋಡಿದ್ದೀರಾ?

ಇದು ಸೌರಮಂಡಲದ ಅತ್ಯಂತ ದೂರದ ಗ್ರಹ (Longest Planet) ಎಂದು ಭಾವಿಸಲಾಗುತ್ತದೆ. ಇದರ ಬೆಳಕು ಭೂಮಿಗೆ ತಲುಪಲು 4 ಗಂಟೆಗಳ ಕಾಲಾವಕಾಶ ಬೇಕಾಗುತ್ತದೆ. ಸೂರ್ಯನ (Sun) ಬೆಳಕು ಭೂಮಿಗೆ ತಲುಪಲು ಕೇವಲ ಎಂಟು ನಿಮಿಷ ಬೇಕಾಗುತ್ತದೆ.

ಇದನ್ನೂ ಓದಿ-NASA Mars Mission: ಬೇರೊಂದು ಗ್ರಹದ ಮೇಲೆ ಮೊದಲ ಬಾರಿಗೆ ಹೆಲಿಕ್ಯಾಪ್ಟರ್ ಹಾರಾಟ ನಡೆಸಿ ಇತಿಹಾಸ ಬರೆದ NASA

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News