Drugs For Cancer: ಕೊನೆಗೂ ಮಾರಕ ಕ್ಯಾನ್ಸರ್ ರೋಗಕ್ಕೆ ಔಷಧಿ ಕಂಡುಹಿಡಿದ ವಿಜ್ಞಾನಿಗಳು!

Drugs Against Cancer, ಅಮೆರಿಕದ ವಿಜ್ಞಾನಿಗಳು 20 ವರ್ಷಗಳ ಕಠಿಣ ಪರಿಶ್ರಮದ ಬಳಿಕ ಈ ಸಾಧನೆಯನ್ನು ಮಾಡಿದ್ದಾರೆ. AOH1996 ಹೆಸರಿನ ಕ್ಯಾನ್ಸರ್ ಔಷಧಿಯ ಮಾನವ ಪ್ರಯೋಗ ಆರಂಭಗೊಂಡಿದೆ ಮತ್ತು ಅದರ ಯಶಸ್ಸಿನ ಎಲ್ಲಾ ಮುನ್ಸೂಚನೆಗಳು ಲಭಿಸಲಾರಂಭಿಸಿವೆ. ಈ ಔಷಧಿಗೆ ಒಂಬತ್ತು ವರ್ಷದ ಬಾಲಕಿಯ ಹೆಸರನ್ನು ಇಡಲಾಗುವುದು ಎನ್ನಲಾಗಿದೆ. ಈ ಔಷಧವು ದೇಹದ ಆರೋಗ್ಯಕರ ಜೀವಕೋಶಗಳಿಗೆ ಹಾನಿಯಾಗದಂತೆ ಮೂಲದಿಂದ ಕ್ಯಾನ್ಸರ್ ಗೆಡ್ಡೆಗಳನ್ನು ನಿವಾರಿಸುತ್ತದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.  

Written by - Nitin Tabib | Last Updated : Aug 3, 2023, 07:23 PM IST
  • ಅಮೇರಿಕಾದ ಲಾಸ್ ಏಂಜಲೀಸ್‌ನಲ್ಲಿರುವ ಸಿಟಿ ಆಫ್ ಹೋಪ್ ಆಸ್ಪತ್ರೆಯು 20 ವರ್ಷಗಳ ಸುದೀರ್ಘ ಸಂಶೋಧನೆಯ ನಂತರ ಈ ಔಷಧಿಯನ್ನು ಅಭಿವೃದ್ಧಿಪಡಿಸಿದೆ.
  • ಈ ಕೇಂದ್ರವು ಅಮೆರಿಕದ ಅತಿದೊಡ್ಡ ಕ್ಯಾನ್ಸರ್ ಕೇಂದ್ರಗಳಲ್ಲಿ ಒಂದಾಗಿದೆ. ಅಮೇರಿಕನ್ ಮಾಧ್ಯಮ ವರದಿಗಳ ಪ್ರಕಾರ,
  • ಕೇಂದ್ರದ ವಿಜ್ಞಾನಿಗಳು ಈ ಕ್ರಾಂತಿಕಾರಿ ಔಷಧದ ಹೆಸರನ್ನು 1996 ರಲ್ಲಿ ಜನಿಸಿದ ಅನಾ ಒಲಿವಿಯಾ ಹೀಲಿ ಪ್ರೇರಣೆ ಎಂದು ಹೇಳಿದ್ದಾರೆ.
Drugs For Cancer: ಕೊನೆಗೂ ಮಾರಕ ಕ್ಯಾನ್ಸರ್ ರೋಗಕ್ಕೆ ಔಷಧಿ ಕಂಡುಹಿಡಿದ ವಿಜ್ಞಾನಿಗಳು! title=

ಲಾಸ್ ಏಂಜಲೀಸ್‌: ಕ್ಯಾನ್ಸರ್ ವಿಶ್ವದ ಅತ್ಯಂತ ಅಪಾಯಕಾರಿ ಮತ್ತು ಮಾರಣಾಂತಿಕ ಕಾಯಿಲೆಗಳಲ್ಲಿ ಒಂದಾಗಿದೆ. ಇದರ ಶಾಶ್ವತ ಚಿಕಿತ್ಸೆಗಾಗಿ ವಿಜ್ಞಾನಿಗಳು ದೀರ್ಘಕಾಲದಿಂದ ಸಂಶೋಧನೆ ನಡೆಸುತ್ತಿದ್ದಾರೆ. ಏತನ್ಮಧ್ಯೆ, ಕ್ಯಾನ್ಸರ್ ಚಿಕಿತ್ಸೆಯಲ್ಲಿ ಕ್ರಾಂತಿಕಾರಿ ಅಪ್ಡೇಟ್ ವೊಂದು ಪ್ರಕಟವಾಗಿದೆ. ಹೌದು, ಕ್ಯಾನ್ಸರ್ ಚಿಕಿತ್ಸೆಯಲ್ಲಿ ಪ್ರಮುಖ ಪಾತ್ರ ವಹಿಸುವ ಔಷಧದ ಯಶಸ್ವಿ ಮಾನವ ಪ್ರಯೋಗವನ್ನು ವಿಜ್ಞಾನಿಗಳು ಪ್ರಾರಂಭಿಸಿದ್ದಾರೆ, ಇದು ಕ್ಯಾನ್ಸರ್ ಗೆಡ್ಡೆಗಳನ್ನು ಮೂಲದಿಂದ ತೆಗೆದುಹಾಕುತ್ತದೆ ಎಂದು ಹೇಳಲಾಗುತ್ತಿದೆ. ಈ ಹೊಸ ಕ್ಯಾನ್ಸರ್ಗೆ ಮಾರಕವಾಗಿರುವ ಔಷಧ AOH1996 ಗೆ ಒಂಬತ್ತು ವರ್ಷದ ಬಾಲಕಿಯ ಹೆಸರನ್ನು ಆಧರಿಸಿ ಹೆಸರಿಸಲಾಗುವುದು ಎನ್ನಲಾಗಿದೆ . ಅನಾ ಒಲಿವಿಯಾ ಹೀಲಿ ಎಂಬ ಈ ಹುಡುಗಿ ಒಂಬತ್ತನೇ ವಯಸ್ಸಿನಲ್ಲಿ ನಿಧಾನಳಾಗಿದ್ದಳು. ಆದರೆ ಈ ಔಷಧದಲ್ಲಿ ಆಕೆಯ ಕೊಡುಗೆ ದೊಡ್ಡದು.

20 ವರ್ಷಗಳ ಸುದೀರ್ಘ ಸಂಶೋಧನೆಯ ನಂತರ
ಅಮೇರಿಕಾದ ಲಾಸ್ ಏಂಜಲೀಸ್‌ನಲ್ಲಿರುವ ಸಿಟಿ ಆಫ್ ಹೋಪ್ ಆಸ್ಪತ್ರೆಯು 20 ವರ್ಷಗಳ ಸುದೀರ್ಘ ಸಂಶೋಧನೆಯ ನಂತರ ಈ ಔಷಧಿಯನ್ನು ಅಭಿವೃದ್ಧಿಪಡಿಸಿದೆ. ಈ ಕೇಂದ್ರವು ಅಮೆರಿಕದ ಅತಿದೊಡ್ಡ ಕ್ಯಾನ್ಸರ್ ಕೇಂದ್ರಗಳಲ್ಲಿ ಒಂದಾಗಿದೆ. ಅಮೇರಿಕನ್ ಮಾಧ್ಯಮ ವರದಿಗಳ ಪ್ರಕಾರ, ಕೇಂದ್ರದ ವಿಜ್ಞಾನಿಗಳು ಈ ಕ್ರಾಂತಿಕಾರಿ ಔಷಧದ ಹೆಸರನ್ನು 1996 ರಲ್ಲಿ ಜನಿಸಿದ ಅನಾ ಒಲಿವಿಯಾ ಹೀಲಿ ಪ್ರೇರಣೆ ಎಂದು ಹೇಳಿದ್ದಾರೆ. ಆ ಹುಡುಗಿಗೆ ನ್ಯೂರೋಬ್ಲಾಸ್ಟೋಮಾ ಎಂಬ ಕ್ಯಾನ್ಸರ್ ಇತ್ತು. ಈ ಕ್ಯಾನ್ಸರ್‌ನಿಂದಾಗಿ, ಅನಾ 9 ವರ್ಷದವಳಿದ್ದಾಗ 2005 ರಲ್ಲಿ ನಿಧನಲಾಗಿದ್ದಳು. ನ್ಯೂರೋಬ್ಲಾಸ್ಟೊಮಾ ಎಂಬುದು ಮಕ್ಕಳಲ್ಲಿ ಕಂಡುಬರುವ ಕ್ಯಾನ್ಸರ್ ಆಗಿದೆ. ಈ ಹುಡುಗಿಯ ಕೆಲವು ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿವೆ.

ಇದನ್ನೂ ಓದಿ-Internet Speed Boosting ಗಾಗಿ ಇದಕ್ಕಿಂತ ಅಗ್ಗದ ಪರ್ಯಾಯ ನೀವು ಈ ಹಿಂದೆ ಎಂದೂ ನೋಡಿರಲಿಕ್ಕಿಲ್ಲ!

70 ವಿಧದ ಕ್ಯಾನ್ಸರ್‌ಗಳ ಮೇಲೆ ಪ್ರಯೋಗ
ನಿರಂತರ ಮತ್ತು ತೀವ್ರವಾದ ಪ್ರಯೋಗಗಳಲ್ಲಿ ಈ ಔಷಧದ ಉತ್ತಮ ಫಲಿತಾಂಶಗಳ ಬಳಿಕ, ಈ ಔಷಧವು ಕ್ಯಾನ್ಸರ್ ರೋಗಿಗಳಿಗೆ ದೊಡ್ಡ ಭರವಸೆಯಾಗಿ ಹೊರಹೊಮ್ಮಿದೆ. ಸ್ತನ ಕ್ಯಾನ್ಸರ್, ಮಿದುಳಿನ ಕ್ಯಾನ್ಸರ್, ಗರ್ಭಾಶಯದ ಕ್ಯಾನ್ಸರ್, ಚರ್ಮದ ಕ್ಯಾನ್ಸರ್ ಮತ್ತು ಶ್ವಾಸಕೋಶದ ಕ್ಯಾನ್ಸರ್ ಸೇರಿದಂತೆ 70 ವಿಧದ ಕ್ಯಾನ್ಸರ್‌ಗಳ ಮೇಲೆ ಈ ಔಷಧವನ್ನು ಪ್ರಯೋಗಾಲಯದಲ್ಲಿ ಪರೀಕ್ಷಿಸಲಾಗಿದೆ ಎಂದು ಹೇಳಲಾಗುತ್ತದೆ. ಇದು ಸಕಾರಾತ್ಮಕ ಪರಿಣಾಮವನ್ನು ತೋರಿಸಿದೆ. 20 ವರ್ಷಗಳ ಸಂಶೋಧನೆಯ ಬಳಿಕ ಈ ಔಷಧವನ್ನು ತಯಾರಿಸಲಾಗಿದೆ ಮತ್ತು ಈ ಔಷಧವು ಕ್ಯಾನ್ಸರ್ ಕೋಶಗಳಲ್ಲಿ ಕಂಡುಬರುವ ಪ್ರೊಲಿಫೆರೇಟಿಂಗ್ ಸೆಲ್ ನ್ಯೂಕ್ಲಿಯರ್ ಆಂಟಿಜೆನ್ (PCNA) ಅನ್ನು ನೇರವಾಗಿ ಗುರಿಯಾಗಿಸುತ್ತದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

ಇದನ್ನೂ ಓದಿ-Reliance Jio ಬಳಕೆದಾರರಿಗೊಂದು ಭಾರಿ ಸಂತಸದ ಸುದ್ದಿ!

ಕ್ಯಾನ್ಸರ್ ಪ್ರೊಟೀನ್ ಅನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ
ಈ ಔಷಧ ತಯಾರಿಸುವ ಕೇಂದ್ರದ ತಂಡದ ಪ್ರಾಧ್ಯಾಪಕಿ ಲಿಂಡಾ ಮಲ್ಕಾಸ್, ಈ ಔಷಧವು ಕ್ಯಾನ್ಸರ್ ಪ್ರೋಟೀನ್ ಅನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ ಎಂದು ಹೇಳಿದ್ದಾರೆ. ಈ ಕಾರಣದಿಂದಾಗಿ, ಗೆಡ್ಡೆಯು ತ್ವರಿತವಾಗಿ ಬೆಳವಣಿಗೆಯಾಗುವುದಿಲ್ಲ, ಗೆಡ್ಡೆ ಬೆಳವಣಿಗೆಯಾದರೂ, ನಂತರ ಈ ಔಷಧವು ಅದನ್ನು ತೆಗೆದುಹಾಕುವಲ್ಲಿ ಪರಿಣಾಮಕಾರಿ ಎಂದು ಸಾಬೀತಾಗುತ್ತದೆ. AOH1996 ಔಷಧವು ಪ್ರಸ್ತುತ ಸಿಟಿ ಆಫ್ ಹೋಪ್‌ನಲ್ಲಿ ಮೊದಲ ಹಂತದ ಕ್ಲಿನಿಕಲ್ ಪ್ರಯೋಗದಲ್ಲಿದೆ ಎಂದು ಮಲ್ಕಾಸ್ ಹೇಳಿದ್ದಾರೆ. AOH1996 ಈ ಹಿಂದಿನ ಪರೀಕ್ಷೆಯಲ್ಲಿ ಯಶಸ್ಸನ್ನು ಸಾಧಿಸಿತ್ತು.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News