ಡೌನ್ ಲೋಡ್ ಮಾಡಿಕೊಳ್ಳುವ ಮೊದಲು ತಿಳಿದುಕೊಳ್ಳಿ ಏನಿದು GB WhatsApp? ಇಲ್ಲವಾದರೆ ಭಾರೀ ನಷ್ಟವಾದೀತು

ಬಳಕೆದಾರರು ಚಾಟ್ ಮಾಡುವುದು, ಕರೆ ಮಾಡುವುದು ಇತ್ಯಾದಿಗಳನ್ನು ವಾಟ್ಸಾಪ್‌ನಲ್ಲಿ ಮಾಡುವ ರೀತಿಯಲ್ಲಿಯೇ ಮಾಡಬಹುದು. ಜಿಬಿ ವಾಟ್ಸಾಪ್ ಬಳಕೆದಾರರಿಗೆ ಯೂಸರ್ ಕಸ್ಟಮೈಸೆಶನ್ ಸೌಲಭ್ಯವನ್ನು ಕೂಡಾ ಒದಗಿಸುತ್ತದೆ. 

Written by - Ranjitha R K | Last Updated : Jun 29, 2021, 12:57 PM IST
  • GB WhatsApp ಅಂದರೆ ಏನು ?
  • ಇದು ಬಹಳ ಅಪಾಯಕಾರಿಯಂತೆ
  • ಇದು ಹೇಗೆ ಹಾನಿಯುಂಟು ಮಾಡುತ್ತದೆ ತಿಳಿದಿದೆಯಾ
ಡೌನ್ ಲೋಡ್ ಮಾಡಿಕೊಳ್ಳುವ ಮೊದಲು ತಿಳಿದುಕೊಳ್ಳಿ ಏನಿದು GB WhatsApp? ಇಲ್ಲವಾದರೆ ಭಾರೀ ನಷ್ಟವಾದೀತು title=
GB WhatsApp ಅಂದರೆ ಏನು ? (photo zee news)

ನವದೆಹಲಿ : ಈ ದಿನಗಳಲ್ಲಿ ಜಿಬಿ ವಾಟ್ಸಾಪ್ (GB WhatsApp) ಬಗ್ಗೆ ಸಾಕಷ್ಟು ಮಾತುಗಳು ಕೇಳಿ ಬರುತ್ತಿದೆ. ಇಷ್ಟಕ್ಕೂ ಈ GB WhatsApp ಅಂದರೆ ಏನು ?  ಇದು ಬಹಳ ಅಪಾಯಕಾರಿ ಎಂಬ ಮಾತುಗಳು ಕೂಡಾ ಕೇಳಿ ಬರುತ್ತಿವೆ. ಹಾಗಿದ್ದರೆ ಜಿಬಿ ವಾಟ್ಸಾಪ್ ಎಂದರೇನು ಮತ್ತು ಅದು ಹೇಗೆ ಹಾನಿ ಉಂಟು ಮಾಡುತ್ತದೆ ಎಂದು ನೊಡೋಣ. 

ಏನಿದು ಜಿಬಿ ವಾಟ್ಸಾಪ್ ? 
ಇಲ್ಲಿ ಬಳಕೆದಾರರು ಚಾಟ್ ಮಾಡುವುದು, ಕರೆ ಮಾಡುವುದು ಇತ್ಯಾದಿಗಳನ್ನು ವಾಟ್ಸಾಪ್‌ನಲ್ಲಿ (Whatsapp) ಮಾಡುವ ರೀತಿಯಲ್ಲಿಯೇ ಮಾಡಬಹುದು. ಜಿಬಿ ವಾಟ್ಸಾಪ್ ಬಳಕೆದಾರರಿಗೆ ಯೂಸರ್ ಕಸ್ಟಮೈಸೆಶನ್ ಸೌಲಭ್ಯವನ್ನು ಕೂಡಾ ಒದಗಿಸುತ್ತದೆ. ಇದರಲ್ಲಿ  ಕೆಲವು ಹೆಚ್ಚುವರಿ ವೈಶಿಷ್ಟ್ಯಗಳನ್ನು ಸಹ ನೀಡಲಾಗಿದೆ. ಈ ವೈಶಿಷ್ಟ್ಯಗಳಿಂದಾಗಿ ಇದರ ಬಳಕೆ ಇನ್ನಷ್ಟು ಸುಲಭ ಎನ್ನಲಾಗಿದೆ. ಈ ಅಪ್ಲಿಕೇಶನ್ ಬಳಕೆದಾರರ ವೈಯಕ್ತಿಕ ವಿವರಗಳ ವಿಷಯದಲ್ಲಿ ಬಹಳ ಅಪಾಯಕಲಾರಿ ಎನ್ನಲಾಗಿದೆ.

ಇದನ್ನೂ ಓದಿ : Google-Facebook ಅಧಿಕಾರಿಗಳಿಗೆ Shashi Tharoor ನೇತೃತ್ವದ ಸಂಸದೀಯ ಸಮಿತಿಯ ಬುಲಾವ್

GB WhatsAppನ ಆಘಾತಕಾರಿ ಅನಾನುಕೂಲಗಳು :
ಮುಖ್ಯವಾದ ವಿಷಯವೆಂದರೆ ನೀವು ಜಿಬಿ ವಾಟ್ಸಾಪ್ (GB Whatsapp) ಬಳಸಿದರೆ, ನಿಮ್ಮ ಮೂಲ ವಾಟ್ಸಾಪ್ ಖಾತೆಯನ್ನು ಬ್ಲಾಕ್  ಮಾಡಿಬಿಡಬಹುದು. ಈ ಕ್ಲೋನ್ ಅಪ್ಲಿಕೇಶನ್ ಬಳಕೆದಾರರ ಮಾಹಿತಿಯನ್ನು ಕದಿಯುತ್ತದೆ. ಈ ಅಪ್ಲಿಕೇಶನ್ ಗೂಗಲ್ ಪ್ಲೇ ಸ್ಟೋರ್‌ನಲ್ಲಿ (Google Play Store) ಲಭ್ಯವಿಲ್ಲ ಎಂಬುದು ಅತ್ಯಂತ ಮುಖ್ಯವಾದ ವಿಷಯ. ಅದನ್ನು ಡೌನ್‌ಲೋಡ್ ಮಾಡಲು, ಅದರ ಎಪಿಕೆ ಫೈಲ್ ಅನ್ನು ಡೌನ್‌ಲೋಡ್ ಮಾಡಬೇಕಾಗುತ್ತದೆ ಅದು ಸುರಕ್ಷಿತವಾದ ಆಯ್ಕೆಯಲ್ಲ. 

ಅಪ್ಲಿಕೇಶನ್ ಬಗ್ಗೆ ಜಾಗರೂಕರಾಗಿರಿ :
ವಾಟ್ಸಾಪ್ ಮಾತ್ರವಲ್ಲ,ನೀವು ಯಾವುದೇ ಆಪ್ ಡೌನ್ ಲೋಡ್ (Download) ಮಾಡುವುದಾದರೂ ಗೂಗಲ್ ಪ್ಲೇ ಸ್ಟೋರ್ ಅನ್ನೇ ಬಳಸಿ. ಎಪಿಕೆ ಫೈಲ್ ಅನ್ನು ಡೌನ್‌ಲೋಡ್ ಮಾಡಬೇಡಿ. ಇದು ಅಪಾಯಕಾರಿಯಾಗಿ ಸಾಬೀತಾಗಬಹುದು. ಅಲ್ಲದೆ, ನಿಮಗೆ ಬಹಳಷ್ಟು ಹಾನಿ ಉಂಟುಮಾಡಬಹುದು.

ಇದನ್ನೂ ಓದಿ : Mi 11 Lite: ಇಂದಿನಿಂದ ಮಾರಾಟಕ್ಕೆ ಲಭ್ಯವಾಗಲಿದೆ ಸ್ಲಿಮ್ಮೆಸ್ಟ್ ಸ್ಮಾರ್ಟ್‌ಫೋನ್ ಎಂಐ 11 ಲೈಟ್

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News