Cricket Recharge Plan ಪರಿಚಯಿಸಿದ Jio !ಸಿಗಲಿದೆ ಇಷ್ಟೆಲ್ಲಾ ಪ್ರಯೋಜನ !

Jio Cricket Recharge Plan :ಜಿಯೋ JioBharat 4G ಫೋನ್‌ಗಳ ರೀಚಾರ್ಜ್ ಮೇಲೆ ಕೆಲವು ಹೊಸ ರಿಯಾಯಿತಿಗಳನ್ನು ಘೋಷಿಸಿದೆ.

Written by - Ranjitha R K | Last Updated : Apr 11, 2024, 01:45 PM IST
  • ಕ್ರಿಕೆಟ್ ಅಭಿಮಾನಿಗಳಿಗೆ ಹೊಸ ರೀಚಾರ್ಜ್ ಯೋಜನೆ
  • 2 ತಿಂಗಳವರೆಗೆ ಪ್ರತಿದಿನ 0.5GB ಡೇಟಾ
  • ಇದರಲ್ಲಿ ಹೆಚ್ಚಿನ ಪ್ರಯೋಜನಗಳು ಲಭ್ಯವಿದೆ.
Cricket Recharge Plan ಪರಿಚಯಿಸಿದ Jio !ಸಿಗಲಿದೆ ಇಷ್ಟೆಲ್ಲಾ ಪ್ರಯೋಜನ ! title=

Jio Cricket Recharge Plan : ಜಿಯೋ JioBharat 4G ಫೋನ್‌ಗಳ ರೀಚಾರ್ಜ್ ಮೇಲೆ ಕೆಲವು ಹೊಸ ರಿಯಾಯಿತಿಗಳನ್ನು ಘೋಷಿಸಿದೆ.ಈ ಫೋನ್‌ನ ಬೆಲೆ 999 ರೂಪಾಯಿ ಆಗಿದೆ.ಫೋನ್‌ ಬೆಲೆಯಲ್ಲಿ ಯಾವುದೇ ರೀತಿಯ ರಿಯಾಯಿತಿ ಇಲ್ಲದಿದ್ದರೂ,ಕ್ರಿಕೆಟ್ ಅಭಿಮಾನಿಗಳಿಗೆ ಹೊಸ ರೀಚಾರ್ಜ್ ಯೋಜನೆಯನ್ನು ಪರಿಚಯಿಸಲಾಗಿದೆ.ಇದರಲ್ಲಿ ಹೆಚ್ಚಿನ ಪ್ರಯೋಜನಗಳು ಲಭ್ಯವಿದೆ. ಹೊಸ/ಹಳೆಯ ಜಿಯೋಗೆ ಮ್‌ನಲ್ಲಿ  234 ರೂ. 2 ತಿಂಗಳ ಯೋಜನೆಯನ್ನು ರೀಚಾರ್ಜ್ ಮಾಡಿದರೆ, 2 ತಿಂಗಳ ಉಚಿತ ಪ್ಲಾನ್ ಪಡೆಯಬಹುದು.ಆದರೆ, ಈ ರಿಯಾಯಿತಿಯು ಏಪ್ರಿಲ್ 1, 2024 ರಂದು ಅಥವಾ ನಂತರ ಖರೀದಿಸಿದ JioBharat ಫೋನ್‌ಗಳಿಗೆ ಮಾತ್ರ ಅನ್ವಯಿಸುತ್ತದೆ.

2 ತಿಂಗಳವರೆಗೆ ಪ್ರತಿದಿನ 0.5GB ಡೇಟಾ: 
ಈ ಫೋನ್ ಅನ್ನು ಖರೀದಿಸುವುದಾದರೆ ಮೊದಲು JioBharat 4G ಫೋನ್ ಅನ್ನು ಖರೀದಿಸಬೇಕಾಗುತ್ತದೆ.ನಂತರ ಅದೇ ಫೋನ್‌ನಲ್ಲಿ ಜಿಯೋ ಸಿಮ್ ಅನ್ನು ಸೇರಿಸಬೇಕಾಗುತ್ತದೆ. ಒಳ್ಳೆಯ ವಿಷಯವೆಂದರೆ ಈ ಕೊಡುಗೆಯು ತಮ್ಮ ಸಂಖ್ಯೆಯನ್ನು ಬೇರೆ ಕಂಪನಿಯಿಂದ Jio (MNP) ಗೆ ಪೋರ್ಟ್ ಮಾಡುವವರೆಗೂ ಲಭ್ಯವಿದೆ. ನಂತರ 234 ರೂಪಾಯಿ ಹೊಸ ರೀಚಾರ್ಜ್ ಮಾಡಬೇಕಾಗುತ್ತದೆ.ಈ ರೀಚಾರ್ಜ್‌ನಲ್ಲಿ, 2 ತಿಂಗಳವರೆಗೆ ಪ್ರತಿದಿನ 0.5GB ಡೇಟಾ ಮತ್ತು ಅನಿಯಮಿತ ಕರೆಗಳ ಸೌಲಭ್ಯ  ಸಿಗುತ್ತದೆ. 

ಇದನ್ನೂ ಓದಿ : Portable AC: ಬೇಸಿಗೆಯಲ್ಲಿ ಪೋರ್ಟಬಲ್ ಎಸಿ ಖರೀದಿಸುವ ಮೊದಲು ಈ ವಿಷಯಗಳ ಬಗ್ಗೆ ಇರಲಿ ವಿಶೇಷ ಗಮನ

JioBharat ಫೋನ್ ಬಳಕೆದಾರರಿಗೆ ಮಾತ್ರ ಈ ಆಫರ್ : 
15 ದಿನಗಳ ರೀಚಾರ್ಜ್ ನಂತರ, ಈ ಕಂಪನಿಯು ನಿಮಗೆ 2 ಹೆಚ್ಚುವರಿ ತಿಂಗಳ ಉಚಿತ ಸೇವೆಯನ್ನು ನೀಡುತ್ತದೆ. ಆದರೆ, ನೀವು ಇದಕ್ಕೆ ನಿಜವಾಗಿಯೂ ಅರ್ಹರೇ ಅಥವಾ ಇಲ್ಲವೇ ಎಂಬುದನ್ನು ಮೊದಲು ತಿಳಿದುಕೊಳ್ಳಬೇಕಾಗುತ್ತದೆ. ಹಿಂದಿನ 2 ತಿಂಗಳ ಯೋಜನೆ ಮುಗಿದ ನಂತರವೇ ಈ ಹೆಚ್ಚುವರಿ 2 ತಿಂಗಳ ಸೇವೆ ಪ್ರಾರಂಭವಾಗುತ್ತದೆ.ಈ ಆಫರ್ JioBharat ಫೋನ್‌ಗಳಲ್ಲಿ ಮಾತ್ರ ಲಭ್ಯವಿರುತ್ತದೆ. 

BharatGPT ಗಾಗಿ ತಯಾರಿ : 
ಮೂಲಗಳ ಪ್ರಕಾರ, ರಿಲಯನ್ಸ್ ಜಿಯೋ ಅಧ್ಯಕ್ಷ ಆಕಾಶ್ ಅಂಬಾನಿ ಇತ್ತೀಚೆಗೆ ತಮ್ಮ ಕಂಪನಿಯು ಐಐಟಿ ಬಾಂಬೆ ಸಹಯೋಗದೊಂದಿಗೆ "ಭಾರತ್ ಜಿಪಿಟಿ" ಕಾರ್ಯಕ್ರಮದಲ್ಲಿ ಕೆಲಸ ಮಾಡುತ್ತಿದೆ ಎಂದು ಹೇಳಿದ್ದಾರೆ. ಸಂಸ್ಥೆಯ ವಾರ್ಷಿಕ ಟೆಕ್‌ಫೆಸ್ಟ್‌ನಲ್ಲಿ ಅವರು ಈ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

ಇದನ್ನೂ ಓದಿ : Paytm : ಪೇಟಿಎಂ ಪಿಬಿ ಎಂಡಿ ಸಿಇಒ ಸುರಿಂದರ್ ಚಾವ್ಲಾ ರಾಜೀನಾಮೆ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 

 

Trending News