ನ್ಯೂಯಾರ್ಕ್: Corona Delta Variant - ಕೊರೊನಾ ವೈರಸ್ ನ ಡೆಲ್ಟಾ ವೇರಿಯಂಟ್ ಕೊವಿಡ್-19 (Covid-19) ನ ಎಲ್ಲಾ ರೂಪಾಂತರಿಗಳ ಹೋಲಿಕೆಯಲ್ಲಿ ಅತಿ ಗಂಭೀರ ಸೋಂಕು ಸೃಷ್ಟಿಸುವ ಸಾಮರ್ಥ್ಯ ಹೊಂದಿದೆ. ಈ ಕುರಿತು ಹೇಳಿಕೆ ನೀಡಿರುವ ಅಮೆರಿಕಾದ ಆರೋಗ್ಯ ಸಂಸ್ಥೆಯ ಅಧ್ಯಯನಕಾರರು, ಈ ರೂಪಾಂತರಿ ಎಷ್ಟೊಂದು ಅಪಾಯಕಾರಿಯಾಗಿದೆ ಎಂದರೆ ಇದು ಸಿಡುಬಿನ ರೀತಿ ಸುಲಭವಾಗಿ ಹರಡುತ್ತದೆ ಎಂದು ಹೇಳಿದ್ದಾರೆ.
ವ್ಯಾಕ್ಸಿನೆಶನ್ ಬಳಿಕವೂ ಕೂಡ ಸೊಂಕು ತಗುಲುವ ಅಪಾಯ
ಮಾಧ್ಯಮ ವರದಿಗಳ ಪ್ರಕಾರ, ಅಮೆರಿಕಾದ (US) ಸೆಂಟರ್ ಫಾರ್ ಡಿಸೀಜ್ ಕಂಟ್ರೋಲ್ ಅಂಡ್ ಪ್ರಿವೆನ್ಶೇನ್ (CDC)ನ ವರದಿಯೊಂದರಲ್ಲಿ ಉಲ್ಲೇಖಿಸಲಾಗಿರುವ ಪ್ರಕಟಣೆಗೊಳ್ಳದ ಅಂಕಿ-ಅಂಶಗಳ ಪ್ರಕಾರ, ವ್ಯಾಕ್ಸಿನ್ ನ ಎಲ್ಲಾ ಪ್ರಮಾಣಗಳನ್ನು ಜನರೂ ಕೂಡ ವ್ಯಾಕ್ಸಿನ್ ನ ಯಾವುದೇ ಪ್ರಮಾಣಗಳನ್ನು ತೆಗೆದುಕೊಳ್ಳದ ರೀತಿಯಲ್ಲೇ ಡೆಲ್ಟಾ ವೇರಿಯಂಟ್ ಅನ್ನು ಹರಡಬಲ್ಲರು ಎಂಬುದಾಗಿ ತೋರಿಸಲಾಗಿದೆ.
ಎಲ್ಲಕ್ಕಿಂತ ಮೊದಲು ಭಾರತದಲ್ಲಿ ಡೆಲ್ಟಾ ವೇರಿಯಂಟ್ ಪತ್ತೆಯಾಗಿದೆ ಎಂಬುದು ಇಲ್ಲಿ ಉಲ್ಲೇಖನೀಯ.
ವರದಿಯಲ್ಲಿ ಗಂಭೀರ ಲಕ್ಷಣಗಳತ್ತ ಸಂಕೇತ
ಎಲ್ಲಕ್ಕಿಂತ ಮೊದಲು 'ದಿ ವಾಶಿಂಗ್ಟನ್ ಪೋಸ್ಟ್' ಈ ಡಾಕ್ಚುಮೆಂಟ್ ಆಧಾರದ ಮೇಲೆ ವರದಿ ಪ್ರಕಟಿಸಿದೆ. ಈ ಕುರಿತು ಮಂಗಳವಾರ ಹೇಳಿಕೆನೀಡಿರುವ ಸಿಡಿಸಿ ನಿರ್ದೇಶಕ ಡಾ. ರೋಷೆಲ್ ಪಿ ವಾಲೆಂಕ್ಸಿ, ಲಸಿಕೆ ಪಡೆದ ಜನರ ಮೂಗು ಹಾಗೂ ಗಂಟಲಿನಲ್ಲಿನ ವೈರಸ್ ಇರುವಿಕೆ, ಲಸಿಕೆ ಪಡೆಯದೇ ಇರುವವರಲ್ಲಿನ ವೈರಸ್ (Coronavirus) ನಂತಿರುತ್ತದೆ ಎಂದು ಹೇಳಿದ್ದಾರೆ.
ಸಿಡಿಸಿಯ ಈ ಆಂತರಿಕ ವರದಿಯಲ್ಲಿ ವೈರಸ್ ನ ಡೆಲ್ಟಾ ವೇರಿಯಂಟ್ ನ ಕೆಲ ಹಾಗೂ ಗಂಭೀರ ಲಕ್ಷಣಗಳತ್ತ ಗಮನ ಸೆಳೆಯಲಾಗಿದೆ.
ಸಿಡುಬಿನ ರೀತಿಯ ಹರಡುವ ಸಾಮರ್ಥ್ಯ ಹೊಂದಿದೆ ಡೆಲ್ಟಾ ವೇರಿಯಂಟ್
ವರದಿಯ ಪ್ರಕಾರ, ಡೆಲ್ಟಾ ವೈರಸ್ (Covid-19) ಇಂತಹುದೇ ಇತರ ವೈರಸ್ ಹೋಲಿಕೆಯಲ್ಲಿ ಅಧಿಕ ಹರಡುತ್ತದೆ. ಅಂದರೆ ಮಾರ್ಸ್, ಸಾರ್ಸ್, ಇಬೋಲಾ, ಸಾಮಾನ್ಯ ಸೀತ, ಹವಾಮಾನ ಬದಲಾವಣೆಯಿಂದ ಉಂಟಾಗುವ ಫ್ಲೂ ಹಾಗು ಸಿಡುಬಿನ ರೀತಿ ಸುಲಭವಾಗಿ ಹರಡುತ್ತದೆ. ಇದು ಸಿಡುಬಿನಂತೆಯೇ ಸಾಂಕ್ರಾಮಿಕವಾಗಿದೆ. ಈ ವರದಿಯ ಒಂದು ಪ್ರತಿ 'ನ್ಯೂಯಾರ್ಕ್ ಟೈಮ್ಸ್' ಬಳಿಯೂ ಇದೆ.
ಈ ಡಾಕ್ಯೂಮೆಂಟ್ ಪ್ರಕಾರ ಬಿ.1.617.2 ಅಂದರೆ ಡೆಲ್ಟಾ ರೂಪಾಂತರಿ ಗಂಭೀರ ಸೋಂಕು ಹುಟ್ಟುಹಾಕುವ ಸಾಮರ್ಥ್ಯ ಹೊಂದಿದೆ. ಅಧಿಕಾರಿಯೋರ್ವರ ಹೆಸರನ್ನು ಉಲ್ಲೇಖಿಸಿ ವರದಿ ಮಾಡಿರುವ ನ್ಯೂಯಾರ್ಕ್ ಟೈಮ್ಸ್, ಈ ಡಾಕ್ಯೂಮೆಂಟ್ ನ ತಥ್ಯಗಳು ಡೆಲ್ಟಾ ವೇರಿಯಂಟ್ ಗೆ ಸಂಬಂಧಿಸಿದಂತೆ ವಿಜ್ಞಾನಿಗಳ ಚಿಂತೆಯನ್ನು ಮತ್ತಷ್ಟು ಹೆಚ್ಚಿಸಿದೆ ಎಂದು ಹೇಳಿದೆ.
ಇದನ್ನೂ ಓದಿ- Coronavirus Origin Investigation: ಕೊರೋನಾದ ಉತ್ಪತ್ತಿಯ ಕುರಿತಾದ ತನಿಖೆಯಲ್ಲಿ WHOಗೆ ಸಹಕರಿಸುವಂತೆ ಚೀನಾಗೆ ಸೂಚಿಸಿದ UN
ಅಮೇರಿಕಾದಲ್ಲಿ 16.2 ಕೋಟಿ ಜನರಿಗೆ ವ್ಯಾಕ್ಸಿನೆಶನ್
ಜುಲೈ 24 ರವರೆಗೆ ಸಿಡಿಸಿ ಸಂಗ್ರಹಿಸಿದ ದತ್ತಾಂಶದ ಪ್ರಕಾರ, ಯುಎಸ್ನಲ್ಲಿ 16.2 ಕೋಟಿ ಜನರಿಗೆ ಲಸಿಕೆ ನೀಡಲಾಗಿದೆ ಮತ್ತು ಪ್ರತಿ ವಾರ ಸುಮಾರು 35,000 ರೋಗ ಲಕ್ಷಣದ ಪ್ರಕರಣಗಳು ಬರುತ್ತಿವೆ. ಆದರೆ ಏಜೆನ್ಸಿ ಸೌಮ್ಯ ಅಥವಾ ಯಾವುದೇ ರೋಗ ಲಕ್ಷಣಗಳಿಲ್ಲದ ಪ್ರಕರಣಗಳನ್ನು ಮೇಲ್ವಿಚಾರಣೆ ಮಾಡುವುದಿಲ್ಲ, ಆದ್ದರಿಂದ ನಿಜವಾದ ಪ್ರಕರಣಗಳು ಹೆಚ್ಚು ಆಗಿರುವ ಸಾಧ್ಯತೆ ಇದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ