Elon Musk In China: ಎಲಾನ್ ಮಸ್ಕ್ ಸ್ಟಾರ್ ಲಿಂಕ್ ಗೆ ಬೆಚ್ಚಿ ಬಿದ್ದ ಚೀನಾ ವತಿಯಿಂದ 13000 ಉಪಗ್ರಹಗಳ ಉಡಾವಣೆ!

Elon Musk In China: ಎಲಾನ್ ಮಸ್ಕ್ ಅವರ ಸ್ಟಾರ್ ಲಿಂಕ್ ಅಂತರ್ಜಾಲ ಯೋಜನೆಯಿಂದ ಚೀನಾ ಗಾಬರಿಗೊಂಡಿದ್ದು, 13,000 ಉಪಗ್ರಹಗಳನ್ನು ಉಡಾವಣೆ ಮಾಡಲು ಸಿದ್ಧತೆ ನಡೆಸಿದೆ. ಎಲೋನ್ ಮಸ್ಕ್ ಇದುವರೆಗೆ 3000 ಉಪಗ್ರಹಗಳನ್ನು ಭೂಮಿಯ ಕೆಳಗಿನ ಕಕ್ಷೆಯಲ್ಲಿ ಉಡಾವಣೆ ಮಾಡಿದ್ದಾರೆ. ಉಕ್ರೇನ್ ಯುದ್ಧದಲ್ಲಿ ಮಸ್ಕ್‌ನ ಸ್ಟಾರ್‌ಲಿಂಕ್ ಬಹಳ ಮುಖ್ಯವಾದ ಪಾತ್ರವನ್ನು ವಹಿಸಿದೆ ಎನ್ನಲಾಗಿದೆ.  

Written by - Nitin Tabib | Last Updated : Apr 9, 2023, 05:12 PM IST
  • ಅಮೆರಿಕ ಮತ್ತು ಚೀನಾ ನಡುವೆ ಕುರುಡು ಬಾಹ್ಯಾಕಾಶ ಪೈಪೋಟಿ ಆರಂಭವಾಗಿರುವ ಸಂದರ್ಭದಲ್ಲಿ ಚೀನಾ ಭದ್ರತೆಯ ಬಗ್ಗೆ ಈ ಕಳವಳ ವ್ಯಕ್ತಪಡಿಸಿದೆ.
  • ಎರಡೂ ದೇಶಗಳು ಬಾಹ್ಯಾಕಾಶದಲ್ಲಿ ರಕ್ಷಣಾತ್ಮಕ ತಂತ್ರಜ್ಞಾನ ಮತ್ತು ಪರಿಶೋಧನಾ ಕಾರ್ಯಾಚರಣೆಗಳಿಗೆ ಸಾಕಷ್ಟು ಹಣವನ್ನು ಖರ್ಚು ಮಾಡುತ್ತಿವೆ.
Elon Musk In China: ಎಲಾನ್ ಮಸ್ಕ್ ಸ್ಟಾರ್ ಲಿಂಕ್ ಗೆ ಬೆಚ್ಚಿ ಬಿದ್ದ ಚೀನಾ ವತಿಯಿಂದ 13000 ಉಪಗ್ರಹಗಳ ಉಡಾವಣೆ! title=
ಮಾಸ್ಕ್ ಸ್ಟಾರ್ ಲಿಂಕ್ ಯೋಜನೆಗೆ ಹೆದರಿದ ಡ್ರ್ಯಾಗನ್ !

Elon Musk In China: ಬಾಹ್ಯಾಕಾಶದಲ್ಲಿ ಅಮೆರಿಕದ ಬಿಲಿಯನೇರ್ ಮತ್ತು ಟ್ವಿಟರ್ ಮಾಲೀಕ ಎಲೋನ್ ಮಸ್ಕ್ ಅವರ ಪ್ರಾಬಲ್ಯದಿಂದ ಭಯಭೀತರಾಗಿರುವ ಚೀನಾ ಈಗ 13,000 ಉಪಗ್ರಹಗಳನ್ನು ಬಾಹ್ಯಾಕಾಶಕ್ಕೆ ಉಡಾವಣೆ ಮಾಡಲು ಹೊರಟಿದೆ. ಎಲೋನ್ ಮಸ್ಕ್ ತನ್ನ ಕಂಪನಿ SpaceX ಮೂಲಕ ಭೂಮಿಯ ಕೆಳಗಿನ ಕಕ್ಷೆಯಲ್ಲಿ ಪ್ರಾಬಲ್ಯ ಸಾಧಿಸುತ್ತಿದ್ದಾರೆ ಮತ್ತು 42,000 ಸ್ಟಾರ್‌ಲಿಂಕ್ ಉಪಗ್ರಹಗಳನ್ನು ಉಡಾವಣೆ ಮಾಡಲು ಯೋಜಿಸಿದ್ದಾರೆ. ಸ್ಪೇಸ್ ಎಕ್ಸ್  ಇದುವರೆಗೆ 3 ಸಾವಿರ ಉಪಗ್ರಹಗಳನ್ನು ಉಡಾವಣೆ ಮಾಡಿದೆ. ಈ ಮೂಲಕ ಎಲೋನ್ ಮಸ್ಕ್ ವಿಶ್ವಾದ್ಯಂತ ಇಂಟರ್ನೆಟ್ ಸೇವೆಯನ್ನು ಒದಗಿಸುತ್ತಿದ್ದಾರೆ. SpaceX ಮಾಲೀಕ ಮಸ್ಕ್ ಅವರ ಈ ಮಹಾ ಯೋಜನೆಯಿಂದಾಗಿ ಚೀನಾ ಟೆನ್ಷನ್‌ಗೆ ಒಳಗಾಗಿದೆ.

ಸ್ಪೇಸ್‌ಎಕ್ಸ್‌ನ ಸ್ಟಾರ್‌ಲಿಂಕ್ ಕಾರ್ಯಕ್ರಮದೊಂದಿಗೆ ಸ್ಪರ್ಧಿಸಲು ಚೀನಾದ ಮಿಲಿಟರಿ ಸಂಶೋಧಕರು ದೇಶಾದ್ಯಂತ ಉಪಗ್ರಹ ಜಾಲವನ್ನು ನಿರ್ಮಿಸಲು ಒತ್ತಾಯಿಸಿದ್ದಾರೆ. ಮಸ್ಕ್‌ನ ಸ್ಪೇಸ್‌ಎಕ್ಸ್‌ಗಿಂತ ಚೀನಾ ಇನ್ನೂ ಹಲವಾರು ವರ್ಷಗಳ ಹಿಂದೆ ಇದೆ. ಮಸ್ಕ್  ಈ ಉಪಗ್ರಹಗಳು ತನ್ನ ರಾಷ್ಟ್ರೀಯ ಭದ್ರತೆಗೆ ಅಪಾಯವಾಗಬಹುದು ಎಂದು ಡ್ರ್ಯಾಗನ್ ಭಯಪಡುಟ್ಟಿದೆ. ಮಸ್ಕ್‌ ಉಪಗ್ರಹ ಉಪಗ್ರಹ ಆಧಾರಿತ ಇಂಟರ್ನೆಟ್ ಅನ್ನು ಯಶಸ್ವಿಯಾಗಿ ಬಳಸುವ ಮೂಲಕ ಉಕ್ರೇನ್ ರಷ್ಯಾದ ವಿರುದ್ಧ ಗಮನಾರ್ಹ ಮುನ್ನಡೆ ಸಾಧಿಸಿದೆ. ಏತನ್ಮಧ್ಯೆ, ಚೀನಾದ ವಿಜ್ಞಾನಿಗಳು ಈಗ ಮಸ್ಕ್‌ನ ಉಪಗ್ರಹಗಳನ್ನು ನಿರ್ಬಂಧಿಸುವ ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದಾರೆ.

ಇದನ್ನೂ ಓದಿ-Yamaha AEROX 155 Launch: ಭಾರತೀಯ ಮಾರುಕಟ್ಟೆಗೆ 2023 AEROX 155 ಬಿಡುಗಡೆಗೊಳಿಸಿದ ಯಮಹಾ, ಬೆಲೆ ಎಷ್ಟು ಗೊತ್ತಾ?

ಉಕ್ರೇನ್ ಯುದ್ಧದಲ್ಲಿ ಸ್ಟಾರ್ಲಿಂಕ್ ಬಹಳ ಪರಿಣಾಮಕಾರಿ
ಯುದ್ಧದ ವೇಳೆ ಮಸ್ಕ್‌ನ ಸ್ಟಾರ್‌ಲಿಂಕ್ ಉಪಗ್ರಹಕ್ಕೆ ಹಾನಿ ಮಾಡುವ ಪ್ರಯತ್ನವನ್ನು ಚೀನಾದ ವಿಜ್ಞಾನಿಗಳು ನಡೆಸುತ್ತಿದ್ದಾರೆ. ಚೀನಾದ ಸಂಶೋಧಕರು ತಮ್ಮ ಗುವಾಂಗ್ ಯೋಜನೆಯು ಮಸ್ಕ್‌ನ ಸ್ಟಾರ್‌ಲಿಂಕ್‌ಗಿಂತ ತುಂಬಾ ಹಿಂದುಳಿದಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ಅದೂ ಉಕ್ರೇನ್ ಯುದ್ಧದಲ್ಲಿ ಸ್ಟಾರ್‌ಲಿಂಕ್ ಅತ್ಯಂತ ಪರಿಣಾಮಕಾರಿ ಎಂದು ಸಾಬೀತಾದ ಬಳಿಕ ವಿಜ್ಞಾನಿಗಳಿಂದ ಈ ಹೇಳಿಕೆ ಬಂದಿದೆ. ಈಗ ಚೀನಾದ ಸ್ವಂತ ಉಪಗ್ರಹ ಜಾಲವನ್ನು ಸಿದ್ಧಪಡಿಸುವುದು ಅಗತ್ಯವಾಗಿದೆ ಎಂದು ಚೀನಾದ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಇದರೊಂದಿಗೆ ಸ್ಟಾರ್‌ಲಿಂಕ್‌ನಿಂದ ತಪ್ಪಿಸಿಕೊಳ್ಳುವ ತಂತ್ರವನ್ನು ಸಹ ಮಾಡಬೇಕು ಎಂಬುದು ಅವರ ಅಭಿಮತವಾಗಿದೆ.

ಇದನ್ನೂ ಓದಿ-Today's Viral Video: ಪ್ರೀತಿಯ ಕುರಿತು ಪ್ರಶ್ನಿಸಿದಾಗ ಸಪ್ಪೆ ಮುಖ ಮಾಡಿಕೊಂಡು ರೋಬೋಟ್ ಎಮೇಕಾ ಹೇಳಿದ್ದೇನು ಗೊತ್ತಾ? ವಿಡಿಯೋ ನೋಡಿ...

ಅಮೆರಿಕ ಮತ್ತು ಚೀನಾ ನಡುವೆ ಕುರುಡು ಬಾಹ್ಯಾಕಾಶ ಪೈಪೋಟಿ ಆರಂಭವಾಗಿರುವ ಸಂದರ್ಭದಲ್ಲಿ ಚೀನಾ ಭದ್ರತೆಯ ಬಗ್ಗೆ ಈ ಕಳವಳ ವ್ಯಕ್ತಪಡಿಸಿದೆ. ಎರಡೂ ದೇಶಗಳು ಬಾಹ್ಯಾಕಾಶದಲ್ಲಿ ರಕ್ಷಣಾತ್ಮಕ ತಂತ್ರಜ್ಞಾನ ಮತ್ತು ಪರಿಶೋಧನಾ ಕಾರ್ಯಾಚರಣೆಗಳಿಗೆ ಸಾಕಷ್ಟು ಹಣವನ್ನು ಖರ್ಚು ಮಾಡುತ್ತಿವೆ. ಮಂಗಳ ಗ್ರಹದಲ್ಲಿ ಮೊದಲ ಮಾನವನನ್ನು ಇಳಿಸಲು ಎರಡೂ ದೇಶಗಳು ಪ್ರಯತ್ನಿಸುತ್ತಿವೆ. ಸ್ಟಾರ್‌ಲಿಂಕ್ ಹೊರತುಪಡಿಸಿ, ಅಮೆಜಾನ್ ಮತ್ತು ಬೋಯಿಂಗ್ ಸಹ ಭೂಮಿಯ ಕೆಳಗಿನ ಕಕ್ಷೆಯಲ್ಲಿ ಉಪಗ್ರಹಗಳನ್ನು ಸ್ಥಾಪಿಸಲು ಪ್ರಯತ್ನಿಸುತ್ತಿವೆ. ಈ ಮೂಲಕ ಕಡಿಮೆ ಸಂಪರ್ಕದೊಂದಿಗೆ ಜಗತ್ತಿನ ಯಾವ ಪ್ರದೇಶಗಳಲ್ಲಿ ಬ್ರಾಡ್‌ಬ್ಯಾಂಡ್ ಇಂಟರ್‌ನೆಟ್ ಲಭ್ಯವಿರುತ್ತದೆಯೋ ಆ ಜಾಗಗಳಲ್ಲಿ ಬ್ರಾಡ್‌ಬ್ಯಾಂಡ್ ಇಂಟರ್‌ನೆಟ್ ಒದಗಿಸಲು ಸಿದ್ಧತೆ ನಡೆದಿದೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 
 

Trending News