ಕರೆಂಟ್ ಇಲ್ಲದಿದ್ದರೂ 4 ಗಂಟೆಗಳ ಕಾಲ ಉರಿಯುತ್ತದೆ ಈ ಇನ್ವರ್ಟರ್ ಬಲ್ಬ್ ..!

 ಇನ್ನು ಈ ಬಲ್ಬ್ ನ ವಿಶೇಷತೆ ಬಗ್ಗೆ ಹೇಳುವುದಾದರೆ, ಈ ಇನ್ವರ್ಟರ್ ಬಲ್ಬ್ ಸಾಮಾನ್ಯ ಎಲ್ಇಡಿ ಬಲ್ಬ್ ಗಿಂತ ಭಿನ್ನವಾಗಿದೆ.  ವಿದ್ಯುತ್ ಕಡಿತಗೊಂಡಾಗ, ಸಾಮಾನ್ಯ ಎಲ್ಇಡಿ ಬಲ್ಬ್ ಕೆಲಸ ಮಾಡುವುದನ್ನು ನಿಲ್ಲಿಸುತ್ತದೆ ಮತ್ತು ಆಫ್ ಆಗುತ್ತದೆ.

Written by - Ranjitha R K | Last Updated : Jul 29, 2022, 12:53 PM IST
  • ಸಾಮಾನ್ಯ ಎಲ್‌ಇಡಿ ಬಲ್ಬ್ ಬಗ್ಗೆ ಎಲ್ಲರಿಗೂ ಗೊತ್ತಿದೆ.
  • ಈಗ ಇನ್ವರ್ಟರ್ ಎಲ್ಇಡಿ ಬಲ್ಬ್ ಮಾರುಕಟ್ಟೆಗೆ ಬಂದಿದೆ.
  • ಕಡಿಮೆ ಬೆಲೆಗೆ ಈ ಬಲ್ಬ್ ಲಭ್ಯವಿದ್ದು, ತುಂಬಾ ಶಕ್ತಿಶಾಲಿಯಾಗಿದೆ.
 ಕರೆಂಟ್ ಇಲ್ಲದಿದ್ದರೂ 4 ಗಂಟೆಗಳ ಕಾಲ ಉರಿಯುತ್ತದೆ ಈ ಇನ್ವರ್ಟರ್ ಬಲ್ಬ್ ..! title=
Inverter LED Bulb (file photo)

Inverter LED Bulb : ಸಾಮಾನ್ಯ ಎಲ್‌ಇಡಿ ಬಲ್ಬ್ ಬಗ್ಗೆ ಎಲ್ಲರಿಗೂ ಗೊತ್ತಿದೆ. ಆದರೆ ಈಗ ಇನ್ವರ್ಟರ್ ಎಲ್ಇಡಿ ಬಲ್ಬ್ ಮಾರುಕಟ್ಟೆಗೆ ಬಂದಿದೆ. ಇದು ಮಾರುಕಟ್ಟೆಯಲ್ಲಿ ಬಹಳ ಟ್ರೆಂಡಿಂಗ್ ಆಗಿದ್ದು, ಬಹಳಷ್ಟು ಜನ ಇದನ್ನು  ಖರೀದಿಸುತ್ತಿದ್ದಾರೆ. ಕಡಿಮೆ ಬೆಲೆಗೆ ಈ ಬಲ್ಬ್ ಲಭ್ಯವಿದ್ದು, ತುಂಬಾ ಶಕ್ತಿಶಾಲಿಯಾಗಿದೆ.  ಅದರ ಅದ್ಭುತ ವೈಶಿಷ್ಯದ ಕಾರಣದಿಂದಾಗಿಯೇ ಗ್ರಾಹಕರು ಈ ಬಲ್ಬ್ ಅನ್ನು ಹೆಚ್ಚು ಇಷ್ಟಪಡುತ್ತಿದ್ದಾರೆ.

ನಾವಿಲ್ಲಿ ಹೇಳುತ್ತಿರುವುದು Halonix Prime 12W B22 Inverter rechargebale Emergency led Bulb ಬಗ್ಗೆ. ಇದು Amazonನಲ್ಲಿ ಮಾರಾಟಕ್ಕೆ ಲಭ್ಯವಿದೆ.  ಇನ್ನು ಈ ಬಲ್ಬ್ ನ ವಿಶೇಷತೆ ಬಗ್ಗೆ ಹೇಳುವುದಾದರೆ, ಈ ಇನ್ವರ್ಟರ್ ಬಲ್ಬ್ ಸಾಮಾನ್ಯ ಎಲ್ಇಡಿ ಬಲ್ಬ್ ಗಿಂತ ಭಿನ್ನವಾಗಿದೆ.  ವಿದ್ಯುತ್ ಕಡಿತಗೊಂಡಾಗ, ಸಾಮಾನ್ಯ ಎಲ್ಇಡಿ ಬಲ್ಬ್ ಕೆಲಸ ಮಾಡುವುದನ್ನು ನಿಲ್ಲಿಸುತ್ತದೆ ಮತ್ತು ಆಫ್ ಆಗುತ್ತದೆ. ಆದರೆ ಇನ್ವರ್ಟರ್ ಎಲ್ಇಡಿ  ಬಲ್ಬ್ ಹಾಗಲ್ಲ.  ಇನ್ವರ್ಟರ್ ಎಲ್ಇಡಿ ಬಲ್ಬ್ ವಿದ್ಯುತ್ ಹೋದ ತಕ್ಷಣ ಆಫ್ ಆಗುವುದಿಲ್ಲ. ಸುಮಾರು 4 ಗಂಟೆಗಳ ಕಾಲ ನಿರಂತರವಾಗಿ ಬೆಳಕು ನೀಡುತ್ತಲೇ ಇರುತ್ತದೆ. ಪದೇ ಪದೇ ವಿದ್ಯುತ್ ಕಡಿತದ ಸಮಸ್ಯೆ ಇರುವಂತಹ ಪ್ರದೇಶಗಳಲ್ಲಿ ಬಹಳ ಉಪಯೋಗಕ್ಕೆ ಬರಲಿದೆ. 

ಇದನ್ನೂ ಓದಿ : ಫಿಪ್‌ಕಾರ್ಟ್‌ನಲ್ಲಿ 25 ಸಾವಿರಕ್ಕಿಂತ ಕಡಿಮೆ ಬೆಲೆಗೆ ಮಾರಾಟವಾಗುತ್ತಿದೆ ಈ ಐಫೋನ್

ಈ ಬಲ್ಬ್ ಯಾವ ತಂತ್ರಜ್ಞಾನವನ್ನು ಬಳಸುತ್ತದೆ ? : 
ಈ Halonix 12Watt ಬಲ್ಬ್  ರೀಚಾರ್ಜೇಬಲ್ ಆಗಿದೆ. ಇದರ ಒಳಗೆ ಲಿಥಿಯಂ-ಐಯಾನ್ ಬ್ಯಾಟರಿ ಇರುತ್ತದೆ. ಅದು ಹೋಲ್ಡರ್‌ನಲ್ಲಿರುವಾಗ ಮಾತ್ರ ಚಾರ್ಜ್ ಆಗುತ್ತದೆ. ವಿದ್ಯುತ್ ಹೋದಾಗ, ಇದರಲ್ಲಿರುವ ಬ್ಯಾಟರಿಯ ಸಹಾಯದಿಂದ ಈ ಬಲ್ಬ್ 4 ಗಂಟೆಗಳವರೆಗೆ  ಬೆಳಕು ಸೂಸಲು ಸಾಧ್ಯವಾಗುತ್ತದೆ.  ಬಲ್ಬ್‌ನ ಬ್ಯಾಟರಿಯನ್ನು ಚಾರ್ಜ್ ಮಾಡಲು 8 ರಿಂದ 10 ಗಂಟೆಗಳು ಬೇಕಾಗುತ್ತದೆ. ಇನ್ನು ಈ ಬಲ್ಬ್ ಅನ್ನು ಚಾರ್ಜ್ ಮಾಡಲು ಪ್ರತ್ಯೇಕವಾಗಿ ಏನನ್ನೂ ಮಾಡಬೇಕಾಡ ಅವಶ್ಯಕತೆ ಇಲ್ಲ. ಇದು ಆನ್ ಆಗಿರುವಾಗ ಸ್ವಯಂಚಾಲಿತವಾಗಿ ಚಾರ್ಜ್ ಆಗುತ್ತದೆ. ಇದನ್ನು ಮನೆ, ಅಂಗಡಿ, ಆಸ್ಪತ್ರೆ ಅಥವಾ ಇತರ ಪ್ರಮುಖ ಸ್ಥಳಗಳಲ್ಲಿ ಬಳಸಬಹುದು ಮತ್ತು ತುರ್ತು ಸಮಯದಲ್ಲಿ ಇದು ತುಂಬಾ ಉಪಯಿಗಕ್ಕೆ ಬರಲಿದೆ.  

ಇದನ್ನೂ ಓದಿ : ಈ ಸಣ್ಣ ಸಾಧನವನ್ನು ಅಳವಡಿಸಿದರೆ ವಿದ್ಯುತ್ ಬಿಲ್ ಅರ್ಧಕ್ಕಿಂತ ಕಡಿಮೆ ಬರುತ್ತೆ

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News