ರೂ.500ಕ್ಕೂ ಕಡಿಮೆ ಬೆಲೆಯ ಅದ್ಭುತ ರಿಚಾರ್ಜ್ ಯೋಜನೆ, ಏಕಕಾಲಕ್ಕೆ 15 ಓಟಿಟಿ ವೇದಿಕೆಗಳಿಗೆ ಉಚಿತ ಪ್ರವೇಶ!

Cheap And Best Recharge Plan: ಏರ್‌ಟೆಲ್ ಕಂಪನಿಯು ಪವರ್ಫುಲ್ ಪ್ರಿಪೇಯ್ಡ್ ರೀಚಾರ್ಜ್ ಯೋಜನೆಗಳನ್ನು ರೂ 500 ಕ್ಕಿಂತ ಕಡಿಮೆಗೆ ಜಾರಿಗೆ ತಂದಿದೆ. ಈ ಯೋಜನೆಯಲ್ಲಿ, ಬಳಕೆದಾರರು ದೈನಂದಿನ 3GB ಡೇಟಾ, ಅನಿಯಮಿತ ಕರೆ ಮತ್ತು SMS ಪ್ರಯೋಜನಗಳೊಂದಿಗೆ 15 ಕ್ಕೂ ಹೆಚ್ಚು OTT ವೇದಿಕೆಗಳ ಉಚಿತ ಚಂದಾದಾರಿಕೆಯನ್ನು ಪಡೆಯುತ್ತಾರೆ. (Technology News In Kannada)  

Written by - Nitin Tabib | Last Updated : Oct 28, 2023, 08:32 PM IST
  • ಏರ್‌ಟೆಲ್‌ನ ಈ ಯೋಜನೆ ಮನರಂಜನೆಗಾಗಿಯೂ ಬಳಕೆದಾರರಿಗೆ ತುಂಬಾ ಪ್ರಯೋಜನಕಾರಿಯಾಗಲಿದೆ.
  • ಏರ್‌ಟೆಲ್‌ನ ಈ ರೂ 499 ಪ್ಲಾನ್ ಏರ್‌ಟೆಲ್ ಎಕ್ಸ್‌ಸ್ಟ್ರೀಮ್ ಪ್ಲೇ ಪ್ರಯೋಜನವನ್ನು ಒದಗಿಸುತ್ತದೆ. ಈ ಪ್ರಯೋಜನದೊಂದಿಗೆ,
  • ಬಳಕೆದಾರರು 15 ಕ್ಕಿಂತ ಹೆಚ್ಚು OTT ಪ್ರಯೋಜನಗಳ ಏಕಕಾಲಿಕ ಚಂದಾದಾರಿಕೆಯನ್ನು ಸಂಪೂರ್ಣವಾಗಿ ಉಚಿತವಾಗಿ ಪಡೆಯುತ್ತಾರೆ.
ರೂ.500ಕ್ಕೂ ಕಡಿಮೆ ಬೆಲೆಯ ಅದ್ಭುತ ರಿಚಾರ್ಜ್ ಯೋಜನೆ, ಏಕಕಾಲಕ್ಕೆ 15 ಓಟಿಟಿ ವೇದಿಕೆಗಳಿಗೆ ಉಚಿತ ಪ್ರವೇಶ! title=

ನವದೆಹಲಿ: ಸಾಮಾನ್ಯವಾಗಿ ಏರ್ಟೆಲ್ ಕಂಪನಿಯು ತನ್ನ ದುಬಾರಿ ರೀಚಾರ್ಜ್ ಯೋಜನೆಗಳಿಗೆ ಹೆಸರುವಾಸಿಯಾಗಿದೆ. ಆದಾಗ್ಯೂ, ಏರ್‌ಟೆಲ್ ಕಂಪನಿಯು ತನ್ನ ಪ್ರತಿಸ್ಪರ್ಧಿ ಕಂಪನಿಗಳೊಂದಿಗೆ ಸ್ಪರ್ಧಿಸಲು ತನ್ನ ಯೋಜನೆಗಳಲ್ಲಿ ಹೆಚ್ಚಿನ ಪ್ರಯೋಜನಗಳನ್ನು ಒದಗಿಸುತ್ತದೆ. ಇಂದು ನಾವು ಈ ಲೇಖನದಲ್ಲಿ ಅಂತಹ ಒಂದು ಪ್ರಿಪೇಯ್ಡ್ ರೀಚಾರ್ಜ್ ಯೋಜನೆಯ ಬಗ್ಗೆ ನಿಮಗೆ ಮಾಹಿತಿಯನ್ನು ನೀಡಲಿದ್ದೇವೆ. ಏರ್‌ಟೆಲ್‌ನ ಈ ಬಜೆಟ್-ಫ್ರೆಂಡ್ಲಿ ಪ್ರಿಪೇಯ್ಡ್ ರೀಚಾರ್ಜ್ ಯೋಜನೆಯು ಬಳಕೆದಾರರಿಗೆ ದೈನಂದಿನ ಡೇಟಾ, ಅನಿಯಮಿತ ಕರೆ ಮತ್ತು ದೈನಂದಿನ SMS ಜೊತೆಗೆ ಉಚಿತ OTT ಅಪ್ಲಿಕೇಶನ್‌ಗಳ ಪ್ರಯೋಜನಗಳನ್ನು ಒದಗಿಸುತ್ತದೆ. ವಿಶೇಷವೆಂದರೆ ಈ ಯೋಜನೆಯಲ್ಲಿ, 1 ಅಥವಾ 2 ಅಲ್ಲ ಆದರೆ 15 OTT ಪ್ಲಾಟ್‌ಫಾರ್ಮ್‌ಗಳ ಚಂದಾದಾರಿಕೆಯು ಏಕಕಾಲದಲ್ಲಿ ಸಂಪೂರ್ಣವಾಗಿ ಉಚಿತವಾಗಿ ಲಭ್ಯವಿದೆ. ಸರಳವಾಗಿ ಹೇಳುವುದಾದರೆ, ನೀವು ಪ್ರತಿ OTT ಅಪ್ಲಿಕೇಶನ್‌ನ ಪ್ರತ್ಯೇಕ ಚಂದಾದಾರಿಕೆಯನ್ನು ತೆಗೆದುಕೊಳ್ಳುವ ಅಗತ್ಯವಿಲ್ಲ. ಏರ್‌ಟೆಲ್‌ನ ಒಂದು ರೀಚಾರ್ಜ್‌ನಲ್ಲಿ ನೀವು 15 OTT ಅಪ್ಲಿಕೇಶನ್‌ಗಳಿಗೆ ಪ್ರವೇಶವನ್ನು ಪಡೆಯಬಹುದು. ಈ ಯೋಜನೆಯ ಬೆಲೆ ಮತ್ತು ಪ್ರಯೋಜನಗಳ ಬಗ್ಗೆ ತಿಳಿದುಕೊಳ್ಳೋಣ ಬನ್ನಿ, (Technology News In Kannada)

ಏರ್‌ಟೆಲ್‌ನ ಈ ಪ್ರಿಪೇಯ್ಡ್ ರೀಚಾರ್ಜ್ ಯೋಜನೆಯ ಬೆಲೆ 499 ರೂ. ಈ ಯೋಜನೆಯು 28 ದಿನಗಳ ಮಾನ್ಯತೆಯೊಂದಿಗೆ ಬರುತ್ತದೆ. ಪ್ರಯೋಜನಗಳ ಬಗ್ಗೆ ಹೇಳುವುದಾದರೆ, ಏರ್‌ಟೆಲ್‌ನ 500 ರೂ.ಗಿಂತ ಕಡಿಮೆಯಿರುವ ಈ ಯೋಜನೆಯಲ್ಲಿ ಬಳಕೆದಾರರು ಪ್ರತಿದಿನ 3GB ಡೇಟಾಗೆ ಪ್ರವೇಶವನ್ನು ಪಡೆಯುತ್ತಾರೆ. 28 ದಿನಗಳ ಮಾನ್ಯತೆಯ ಪ್ರಕಾರ, ಈ ಯೋಜನೆಯು ನಿಮಗೆ ಒಟ್ಟು 84GB ಡೇಟಾ ಪ್ರಯೋಜನ ಸಿಗುತ್ತದೆ. ಇದಲ್ಲದೆ, ಯೋಜನೆಯು ಅನಿಯಮಿತ ಧ್ವನಿ ಕರೆ ಸೌಲಭ್ಯವನ್ನು ಒಳಗೊಂಡಿದೆ. ಇದರೊಂದಿಗೆ ಪ್ರತಿದಿನ 100 ಉಚಿತ SMS ಸೌಲಭ್ಯವನ್ನು ಯೋಜನೆಯಲ್ಲಿ ಸೇರಿಸಲಾಗಿದೆ.

ಇದನ್ನೂ ಓದಿ-Hero ತನ್ನ ಈ ಇಲೆಕ್ಟ್ರಿಕ್ ಸ್ಕೂಟರ್ ಮೇಲೆ 21000 ರೂ.ಗಳ ಬಂಪರ್ ಕೊಡುಗೆ ನೀಡುತ್ತಿದೆ!

OTT ಪ್ರಯೋಜನಗಳು
ಏರ್‌ಟೆಲ್‌ನ ಈ ಯೋಜನೆ ಮನರಂಜನೆಗಾಗಿಯೂ ಬಳಕೆದಾರರಿಗೆ ತುಂಬಾ ಪ್ರಯೋಜನಕಾರಿಯಾಗಲಿದೆ. ಏರ್‌ಟೆಲ್‌ನ ಈ ರೂ 499 ಪ್ಲಾನ್ ಏರ್‌ಟೆಲ್ ಎಕ್ಸ್‌ಸ್ಟ್ರೀಮ್ ಪ್ಲೇ ಪ್ರಯೋಜನವನ್ನು ಒದಗಿಸುತ್ತದೆ. ಈ ಪ್ರಯೋಜನದೊಂದಿಗೆ, ಬಳಕೆದಾರರು 15 ಕ್ಕಿಂತ ಹೆಚ್ಚು OTT ಪ್ರಯೋಜನಗಳ ಏಕಕಾಲಿಕ ಚಂದಾದಾರಿಕೆಯನ್ನು ಸಂಪೂರ್ಣವಾಗಿ ಉಚಿತವಾಗಿ ಪಡೆಯುತ್ತಾರೆ. ಇದು SonyLIV, Erosnow ನಂತಹ ಪ್ಲಾಟ್‌ಫಾರ್ಮ್‌ಗಳಿಗೆ ಚಂದಾದಾರಿಕೆಯನ್ನು ಒಳಗೊಂಡಿದೆ. ಅಷ್ಟೇ ಅಲ್ಲ, ಈ ಯೋಜನೆಯೊಂದಿಗೆ, 3 ತಿಂಗಳವರೆಗೆ ಡಿಸ್ನಿ+ ಹಾಟ್‌ಸ್ಟಾರ್ ಮೊಬೈಲ್ ಚಂದಾದಾರಿಕೆಯು ಉಚಿತವಾಗಿ ಲಭ್ಯವಿದೆ.

ಇದನ್ನೂ ಓದಿ-ಭಾರತದಲ್ಲಿ ಈ ಪವರ್ಫುಲ್ ಬೈಕ್ ಖರೀದಿಯ ಮೇಲೆ ಸಿಗುತ್ತಿದೆ 5.25 ಲಕ್ಷ ರೂ.ಗಳ ಭರ್ಜರಿ ಡಿಸ್ಕೌಂಟ್!

ಹೆಚ್ಚುವರಿ ಪ್ರಯೋಜನಗಳು
ಇತರ ಪ್ರಯೋಜನಗಳ ಕುರಿತು ಹೇಳುವುದಾದರೆ, ಇದು ಅನ್ಲಿಮಿಟೆಡ್ 5G ಡೇಟಾ, ಅಪೊಲೊ 24|7 ಸರ್ಕಲ್, ಉಚಿತ ಹೆಲೋಟ್ಯೂನ್ಸ್, ವಿಂಕ್ ಮ್ಯೂಸಿಕ್ ಫ್ರೀ ಇತ್ಯಾದಿಗಳನ್ನು ಒಳಗೊಂಡಿದೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News