ಈ ಒಂದು ಸೆಟ್ಟಿಂಗ್ ಬದಲಾಯಿಸುವ ಮೂಲಕ ಹಣ ಗಳಿಸುವ ಅವಕಾಶ ನೀಡುತ್ತದೆ ಅಮೆಜಾನ್

 ಈ  ಒಂದು ಸಣ್ಣ ಕೆಲಸ ಮಾಡುವ ಮೂಲಕ ಪ್ರತಿ ತಿಂಗಳು 2 ಡಾಲರ್ ನಷ್ಟು ಹಣ ಗಳಿಸಬಹುದು.ಆದರೆ ಯುಸರ್ ಕಂಪನಿಯು ತನ್ನ ಡೇಟಾವನ್ನು ಮೇಲ್ವಿಚಾರಣೆ ಮಾಡಲು ಅನುಮತಿಸಿದಾಗ ಮಾತ್ರ ಎರಡು ಡಾಲರ್‌ ಗಳಿಸುವುದು ಸಾಧ್ಯವಾಗುತ್ತದೆ. 

Written by - Ranjitha R K | Last Updated : Dec 9, 2022, 02:29 PM IST
  • ಜಾಹಿರಾತು ವೀಕ್ಷಿಸುವ ಮೂಲಕ ಹಣ ಗಳಿಕೆ
  • ಪ್ರತಿ ತಿಂಗಳು ಗಳಿಸಿ ಎರಡು ಡಾಲರ್
  • ಅಮೆಜಾನ್ ಶಾಪರ್ ಪ್ಯಾನೆಲ್ ಎಂದರೇನು ?
ಈ ಒಂದು ಸೆಟ್ಟಿಂಗ್ ಬದಲಾಯಿಸುವ ಮೂಲಕ ಹಣ ಗಳಿಸುವ ಅವಕಾಶ ನೀಡುತ್ತದೆ ಅಮೆಜಾನ್  title=

ಬೆಂಗಳೂರು : ಕಾಲ ಬದಲಾಗುತ್ತಿದ್ದಂತೆಯೇ ಹಣ ಗಳಿಸುವ ರೀತಿ ನೀತಿಗಳು ಕೂಡಾ ಬದಲಾಗುತ್ತಿವೆ. ಹಣ ಗಳಿಸುವ ಅವಕಾಶಗಳು ಕೂಡಾ ಹೆಚ್ಚಾಗುತ್ತಿವೆ.  ಈಗ ನೀವು ಮನೆಯಲ್ಲಿ ಕುಳಿತು ಕೂಡ ಸಂಪಾದಿಸಬಹುದು. ಅಮೆಜಾನ್ ಕೂಡಾ ಈಗ ಹಣ ಗಳಿಸುವ ಮಾರ್ಗವೊಂದನ್ನು ನೀಡಿದೆ.  ಈ  ಒಂದು ಸಣ್ಣ ಕೆಲಸ ಮಾಡುವ ಮೂಲಕ ಪ್ರತಿ ತಿಂಗಳು 2 ಡಾಲರ್ ನಷ್ಟು ಹಣ ಗಳಿಸಬಹುದು.ಆದರೆ ಯುಸರ್  ತನ್ನ ಡೇಟಾವನ್ನು ಮೇಲ್ವಿಚಾರಣೆ ಮಾಡಲು ಕಂಪನಿಗೆ ಅನುಮತಿಸಿದಾಗ ಮಾತ್ರ ಎರಡು ಡಾಲರ್‌ ಗಳಿಸುವುದು ಸಾಧ್ಯವಾಗುತ್ತದೆ. 

ಪ್ರತಿ ತಿಂಗಳು ಗಳಿಸಿ ಎರಡು ಡಾಲರ್ : 
ಯಾವ ಜಾಹೀರಾತನ್ನು ವೀಕ್ಷಿಸಲಾಗಿದೆ ಎನ್ನುವುದನ್ನು ಪರಿಶೀಲಿಸಲು ತಮ್ಮ  ಡಿವೈಸ್ ಗಳನ್ನು ಟ್ರ್ಯಾಕ್ ಮಾಡಲು ಅನುಮತಿಸುವವರಿಗೆ ಕಂಪನಿಯು  ಎರಡು ಡಾಲರ್ ನೀಡುತ್ತದೆ.  ಈ ಜಾಹೀರಾತನ್ನು   Amazon Shipper Panelನಲ್ಲಿ ಶೋ ಮಾಡಲಾಗುತ್ತಿದೆ. ಸದ್ಯದ ಮಾಹಿತಿ ಪ್ರಕಾರ  10  ರಿಸಿಟ್ ಸಲ್ಲಿಸಲು ಶಾಪರ್ ಪ್ಯಾನೆಲ್ ತನ್ನ ಬಳಕೆದಾರರಿಗೆ10 ಡಾಲರ್ ನೀಡುತ್ತದೆ. ಸಮೀಕ್ಷೆಯನ್ನು ಪೂರ್ಣಗೊಳಿಸಿದರೆ ಬ್ರ್ಯಾಂಡ್ ರಿವಾರ್ಡ್ ಕೂಡಾ ನೀಡಲಾಗುತ್ತದೆ. 

ಇದನ್ನೂ ಓದಿ : ಹೊಸ ವರ್ಷದಲ್ಲಿ ರೋಡಿಗಿಳಿಯಲಿದೆ MG 4 ಎಲೆಕ್ಟ್ರಿಕ್ ಕಾರು.!

ಅಮೆಜಾನ್ ಶಾಪರ್ ಪ್ಯಾನೆಲ್ ಎಂದರೇನು ?
Amazon Shopper Panel ಒಂದು  ಆಪ್ಟ್ ಇನ್ ಇನ್ವಿಟೇಶನ್  ಪ್ರೋಗ್ರಾಮ್ ಆಗಿದೆ. ಇಲ್ಲಿ Amazon.com ಸಮೀಕ್ಷೆಗಳನ್ನು ಪೂರ್ಣಗೊಳಿಸಲು, ರಸೀದಿಗಳನ್ನು ಹಂಚಿಕೊಳ್ಳಲು, ಜಾಹೀರಾತು ಪರಿಶೀಲನೆಯನ್ನು ಸಕ್ರಿಯಗೊಳಿಸಲು ಬಹುಮಾನಗಳನ್ನು ನೀಡಲಾಗುತ್ತದೆ.  ಜಾಹೀರಾತು ಪರಿಶೀಲನೆಯನ್ನು ಸಕ್ರಿಯಗೊಳಿಸಿದ ನಂತರ, Amazon ತನ್ನ  ಅಥವಾ  ಥರ್ಡ್ ಪಾರ್ಟಿ ಜಾಹೀರಾತುಗಳನ್ನು ನೀಡುತ್ತದೆ. 

ಈ ರೀತಿ ಪ್ರತಿ ತಿಂಗಳು ಗಳಿಸಬಹುದು ಎರಡು ಡಾಲರ್  : 
ರಿವಾರ್ಡ್ ವಿಭಾಗದಲ್ಲಿ ಬಳಕೆದಾರರು ಜಾಹೀರಾತು ಪರಿಶೀಲನೆಯನ್ನು ಸಕ್ರಿಯಗೊಳಿಸಬಹುದು ಎಂದು ಕಂಪನಿ ಹೇಳುತ್ತದೆ. ಇದರಿಂದ  Amazon ಅಥವಾ ಥರ್ಡ್ ಪಾರ್ಟಿ ಪ್ಲಾಟ್ ಫಾರಂ ಮೂಲಕ ಜಾಹೀರಾತುಗಳನ್ನು ವೆರಿಫೈ ಮಾಡಬಹುದು.  ಅಧಿಕೃತ ಮಾಹಿತಿಗಳ  ಪ್ರಕಾರ, ಜಾಹೀರಾತು ಪರಿಶೀಲನೆಯನ್ನು ಸಕ್ರಿಯಗೊಳಿಸಿದವರು, ತಮ್ಮ ಡಿವೈಸ್ ನಲ್ಲಿ  ಯಾವ Amazon ಜಾಹೀರಾತುಗಳನ್ನು ವೀಕ್ಷಿಸಲಾಗಿದೆ ಎಂದು ಖಚಿತಪಡಿಸಲು Amazon ಗೆ ಅವಕಾಶ ಮಾಡಿಕೊಡಬೇಕಾಗುತ್ತದೆ. 

ಇದನ್ನೂ ಓದಿ : Goodbye 2022: ಭಾರತದಲ್ಲಿ ಗೂಗಲ್‌ನಲ್ಲಿ ಈ ವರ್ಷ ಹೆಚ್ಚು ಸರ್ಚ್‌ ಮಾಡಿದ್ದು ಇಂತಹ ವಿಚಾರವನ್ನ!!

ಆದರೆ ಈ ಯೋಜನೆ ಸದ್ಯಕ್ಕೆ ಭಾರತದಲ್ಲಿ ಆರಂಭವಾಗಿಲ್ಲ.  

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News