ಸರ್ಕಾರದ ಆದೇಶದ ಮೇರೆಗೆ 2 appಗಳನ್ನು ಬ್ಯಾನ್ ಮಾಡಿದ Apple ಮತ್ತು Google

2 app banned : ಭಾರತದಲ್ಲಿ ಈ ಎರಡು ಅಪ್ಲಿಕೇಶನ್‌ಗಳ ವೆಬ್‌ಸೈಟ್‌ಗಳನ್ನು ನಿರ್ಬಂಧಿಸಲು ಸರ್ಕಾರವು ಭಾರತೀಯ ಇಂಟರ್ನೆಟ್ ಸೇವಾ ಪೂರೈಕೆದಾರರು (ISP) ಮತ್ತು ಟೆಲಿಕಾಂ ಕಂಪನಿಗಳನ್ನು ಕೇಳಿದೆ.  

Written by - Ranjitha R K | Last Updated : Jan 8, 2024, 10:23 AM IST
  • ಭಾರತದಲ್ಲಿನ ತಮ್ಮ ಆಪ್ ಸ್ಟೋರ್‌ಗಳಿಂದ ಎರಡು ಅಪ್ಲಿಕೇಶನ್‌ಗಳ ನಿಷೇಧ
  • ಈ ಅಪ್ಲಿಕೇಶನ್‌ಗಳನ್ನು ಪ್ಲೇ ಸ್ಟೋರ್ ಮತ್ತು ಆಪ್ ಸ್ಟೋರ್‌ನಿಂದ ತೆಗೆದುಹಾಕಲಾಗಿದೆ.
  • ಭಾರತ ಸರ್ಕರಾದ ಆದೇಶದ ಮೇರೆಗೆ ನಿಷೇಧ
ಸರ್ಕಾರದ ಆದೇಶದ ಮೇರೆಗೆ 2 appಗಳನ್ನು ಬ್ಯಾನ್ ಮಾಡಿದ Apple ಮತ್ತು Google title=

2 app banned : ವಿದೇಶಿ ಸಿಮ್ ಕಾರ್ಡ್ (ಇ-ಸಿಮ್) ಸೇವೆಯನ್ನು ಒದಗಿಸುತ್ತಿದ್ದ ಎರಡು ಅಪ್ಲಿಕೇಶನ್‌ಗಳನ್ನು ಗೂಗಲ್ ಮತ್ತು ಆಪಲ್ ಭಾರತದಲ್ಲಿನ ತಮ್ಮ ಆಪ್ ಸ್ಟೋರ್‌ಗಳಿಂದ  ತೆಗೆದುಹಾಕಿವೆ.ಹೌದು, ಈ ಅಪ್ಲಿಕೇಶನ್‌ಗಳನ್ನು ಪ್ಲೇ ಸ್ಟೋರ್ ಮತ್ತು ಆಪ್ ಸ್ಟೋರ್‌ನಿಂದ ತೆಗೆದುಹಾಕಲಾಗಿದೆ.ಭಾರತ ಸರ್ಕಾರದ ದೂರಸಂಪರ್ಕ ಇಲಾಖೆ (DoT) ಈ ಅಪ್ಲಿಕೇಶನ್‌ಗಳನ್ನು ತೆಗೆದುಹಾಕಲು ಆದೇಶಿಸಿತ್ತು.ಈ ಆ್ಯಪ್‌ಗಳನ್ನು ಸೈಬರ್ ವಂಚನೆಗೆ ಬಳಸಲಾಗುತ್ತಿದೆ ಎಂದು ಸರ್ಕಾರ ಹೇಳಿದೆ. ಇನ್ನೂ ಸರಳವಾಗಿ ಹೇಳುವುದಾದರೆ, ವಿದೇಶಿ ಸಿಮ್ ಕಾರ್ಡ್‌ಗಳನ್ನು ಪಡೆಯುವ ಎರಡು ಅಪ್ಲಿಕೇಶನ್‌ಗಳನ್ನು ಇನ್ನು ಮುಂದೆ ಭಾರತದಲ್ಲಿ ಡೌನ್‌ಲೋಡ್ ಮಾಡಲು ಸಾಧ್ಯವಿಲ್ಲ.ಭಾರತದಲ್ಲಿ ಈ ಎರಡು ಅಪ್ಲಿಕೇಶನ್‌ಗಳ ವೆಬ್‌ಸೈಟ್‌ಗಳನ್ನು ನಿರ್ಬಂಧಿಸಲು ಸರ್ಕಾರವು ಭಾರತೀಯ ಇಂಟರ್ನೆಟ್ ಸೇವಾ ಪೂರೈಕೆದಾರರು (ISP) ಮತ್ತು ಟೆಲಿಕಾಂ ಕಂಪನಿಗಳನ್ನು ಕೇಳಿದೆ.

ಯಾವ ಎರಡು ಅಪ್ಲಿಕೇಶನ್‌ಗಳನ್ನು ನಿಷೇಧಿಸಲಾಗಿದೆ : 
ನಿರ್ಬಂಧಿಸಲಾದ ಎರಡು ಅಪ್ಲಿಕೇಶನ್‌ಗಳು Airalo ಮತ್ತು Holafly. ಈ ಅಪ್ಲಿಕೇಶನ್‌ಗಳನ್ನು ಇನ್ನು ಮುಂದೆ ಭಾರತದಲ್ಲಿನ ಗೂಗಲ್ ಪ್ಲೇ ಸ್ಟೋರ್‌ ನಿಂದ  ಡೌನ್‌ಲೋಡ್ ಮಾಡಲು ಸಾಧ್ಯವಾಗುವುದಿಲ್ಲ. ಈ ಎರಡೂ ಅಪ್ಲಿಕೇಶನ್‌ಗಳು ಪ್ರಪಂಚದ ವಿವಿಧ ದೇಶಗಳಲ್ಲಿ ಸಿಮ್ ಕಾರ್ಡ್‌ನಂತಹ ಸೇವೆಗಳನ್ನು ಒದಗಿಸುತ್ತವೆ.ಈ ಬಗ್ಗೆ ಆ್ಯಪಲ್ ಮತ್ತು ಗೂಗಲ್ ಇನ್ನೂ ಯಾವುದೇ ಅಧಿಕೃತ ಹೇಳಿಕೆಯನ್ನು ನೀಡಿಲ್ಲವಾದರೂ, ಗುರುವಾರ (ಜನವರಿ 4) ಸರ್ಕಾರದ ಆದೇಶದ ನಂತರ ಅವರು ಈ ಅಪ್ಲಿಕೇಶನ್‌ಗಳನ್ನು ತೆಗೆದುಹಾಕಿಲಾಗಿದೆ. 

ಇದನ್ನೂ ಓದಿ : iPhone 15ನ 128GB ಸ್ಮಾರ್ಟ್ಫೋನ್ ಖರೀದಿಸುವ ಮುನ್ನ ಈ ಸುದ್ದಿ ಓದಿ..!

ಆಪ್ ಗಳ ನಿಷೇಧಕ್ಕೆ ಕಾರಣ : 
ಭಾರತದಲ್ಲಿ ಸೈಬರ್ ಅಪರಾಧಗಳನ್ನು ಮಾಡಲು ಮತ್ತು ಅಮಾಯಕ ನಾಗರಿಕರನ್ನು ವಂಚಿಸಲು ಸೈಬರ್ ಅಪರಾಧಿಗಳು ಅನಧಿಕೃತ ಇ-ಸಿಮ್‌ಗಳನ್ನು ಬಳಸಿದ್ದಾರೆ ಎಂದು ಸರ್ಕಾರಿ ಅಧಿಕಾರಿಗಳು ತಿಳಿಸಿದ್ದಾರೆ.ಈ ಇ-ಸಿಮ್‌ಗಳು ಅಂತರಾಷ್ಟ್ರೀಯ ಫೋನ್ ಸಂಖ್ಯೆಗಳನ್ನು ಹೊಂದಿದ್ದು, ಸೈಬರ್ ಅಪರಾಧಿಗಳನ್ನು ಸುಲಭವಾಗಿ ಗುರುತಿಸಲು ಕಷ್ಟವಾಗುತ್ತದೆ.

ನೀವು ಈ ಅಪ್ಲಿಕೇಶನ್‌ಗಳನ್ನು ಬಳಸಬಹುದು : 
ವಾಸ್ತವವಾಗಿ, ಭೌತಿಕ ಸಿಮ್ ಕಾರ್ಡ್‌ನ ಅಗತ್ಯವಿಲ್ಲದೇ ಧ್ವನಿ ಕರೆ ಮತ್ತು ಇಂಟರ್ನೆಟ್ ಡೇಟಾ ಪ್ಯಾಕ್‌ಗಳಿಗಾಗಿ ಡಿಜಿಟಲ್ ಸಿಮ್ ಕಾರ್ಡ್‌ಗಳನ್ನು ಒದಗಿಸುವ ಇ-ಸಿಮ್ ಪೂರೈಕೆದಾರರಿಗೆ ದೂರಸಂಪರ್ಕ ಇಲಾಖೆ (ಡಿಒಟಿ) ಯಿಂದ ನಿರಾಕ್ಷೇಪಣಾ ಪ್ರಮಾಣಪತ್ರ (ಎನ್‌ಒಸಿ) ಅಗತ್ಯವಿರುತ್ತದೆ. ಆದರೆ, Nomad eSIM, aloSIM ನಂತಹ ಇತರ ಇ-ಸಿಮ್ ಪೂರೈಕೆದಾರರು ಈ ಅಪ್ಲಿಕೇಶನ್ ಸ್ಟೋರ್‌ಗಳಲ್ಲಿ ಡೌನ್‌ಲೋಡ್ ಮಾಡಲು ಮತ್ತು ಬಳಸಲು ಭಾರತೀಯ ಬಳಕೆದಾರರಿಗೆ ಇನ್ನೂ ಲಭ್ಯವಿದೆ.

ಇದನ್ನೂ ಓದಿ : Tatkal Ticket Booking Tricks: ತತ್ಕಾಲ್ ನಲ್ಲಿ ಕನ್ಫರ್ಮ್ ಟಿಕೆಟ್ ಪಡೆದುಕೊಳ್ಳಬೇಕೆ? ಇಲ್ಲಿವೆ ಕೆಲ ಟಿಪ್ಸ್!

 

Trending News