Apple Days Sale: 15 ಸಾವಿರ ಡಿಸೌಂಟ್ ದರದಲ್ಲಿ ಸಿಗುತ್ತಿದೆ iPhone 12

ಐಫೋನ್ 12 ರ ಮೇಲೆ ಭಾರಿ ರಿಯಾಯಿತಿ ಸಿಗುತ್ತಿದೆ. Apple Days Saleನಲ್ಲಿ ಕಡಿಮೆ ಬೆಲೆಗೆ ಈ ಫೋನ್ ಖರೀದಿಸಬಹುದು. 

Written by - Ranjitha R K | Last Updated : Jul 13, 2021, 07:02 PM IST
  • ಆಪಲ್ ಡೇಸ್ ಮಾರಾಟ ಅಮೆಜಾನ್‌ನಲ್ಲಿ ಪ್ರಾರಂಭವಾಗಿದೆ
  • ಐಫೋನ್ 12 ಅನ್ನು ಅಗ್ಗದ ದರದಲ್ಲಿ ಖರೀದಿಸಬಹುದು
  • ಐಫೋನ್ 12 ರ ವೈಶಿಷ್ಟ್ಯಗಳನ್ನು ತಿಳಿಯಿರಿ
Apple Days Sale: 15 ಸಾವಿರ ಡಿಸೌಂಟ್ ದರದಲ್ಲಿ  ಸಿಗುತ್ತಿದೆ  iPhone 12  title=
ಆಪಲ್ ಡೇಸ್ ಮಾರಾಟ ಅಮೆಜಾನ್‌ನಲ್ಲಿ ಪ್ರಾರಂಭವಾಗಿದೆ (photo zee news)

ನವದೆಹಲಿ : ಅಮೆಜಾನ್‌ನಲ್ಲಿ ಆಪಲ್ ಡೇಸ್ ಸೇಲ್ (Apple Days Sale) ಪ್ರಾರಂಭವಾಗಿದೆ. ಇಂದಿನಿಂದ ಪ್ರಾರಂಭವಾದ ಈ ಮಾರಾಟ ಜುಲೈ 17 ರವರೆಗೆ ನಡೆಯಲಿದೆ. ಈ ಸೇಲ್ ನಲ್ಲಿ ಭಾರೀ ರಿಯಾಯಿತಿ ಬೆಲೆಗೆ ಐಫೋನ್‌ ಖರೀದಿಸಬಹುದು. ಐಫೋನ್ 12ರ ಮೇಲೆ ಉತ್ತಮ ಆಫರ್ ಸಿಗುತ್ತಿದೆ.  

ಐಫೋನ್ 12 ರ ಆಫರ್ : 
ಈ ಫೋನ್ ಮೇಲೆ  9,000 ರೂ.ಗಳ ರಿಯಾಯಿತಿ ನೀಡಲಾಗುತ್ತಿದೆ. ರಿಯಾಯಿತಿ (Discount sale) ನಂತರ ಬಳಕೆದಾರರು ಇದನ್ನು 70,900 ರೂಗಳಿಗೆ ಖರೀದಿಸಬಹುದು. ಇದಲ್ಲದೆ ಎಚ್‌ಡಿಎಫ್‌ಸಿ ಬ್ಯಾಂಕ್ (HDFC bank) ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌ಗಳಲ್ಲಿ (Credit card) 6,000 ರೂ.ಗಳ ಹೆಚ್ಚುವರಿ ರಿಯಾಯಿತಿ ನೀಡಲಾಗುತ್ತಿದೆ. ಈ ರೀತಿಯಾಗಿ, ಖರೀದಿ ಮೇಲೆ ಒಟ್ಟು 15,000 ರೂ ರಿಯಾಯಿತಿ ಸಿಗಲಿದೆ. ಇದಲ್ಲದೆ, ಐಫೋನ್ 12 ಅನ್ನು ನೋ ಕಾಸ್ಟ್ ಇಎಂಐನೊಂದಿಗೆ ಖರೀದಿಸಬಹುದು. ಈ ಕೊಡುಗೆ ಐಫೋನ್ 12 ಮತ್ತು ಐಫೋನ್ 11 ಸರಣಿಗಳಲ್ಲಿ ಲಭ್ಯವಿರಲಿದೆ. 

ಇದನ್ನೂ ಓದಿ BSNL ಹೊಸ ರಿಚಾರ್ಜ್ ಪ್ಲಾನ್ : 45 ರೂ.ಗೆ ಅನ್ ಲಿಮಿಟೆಡ್ ಕಾಲ್, 10 ಜಿಬಿ ಡೇಟಾ!

ಐಫೋನ್ 12 ನ ಸ್ಪೆಸಿಫಿಕೆಶನ್ : 
iPhone12,  A14 Bionic chip ಹೊಂದಿದೆ. ಇದು 6.1-ಇಂಚಿನ ಸೂಪರ್ ರೆಟಿನಾ ಎಕ್ಸ್‌ಡಿಆರ್ ಡಿಸ್ಪ್ಲೇಯನ್ನು ಒಳಗೊಂಡಿದೆ. ಈ ಫೋನ್ IP68 ಸರ್ಟಿಫೈಡ್ ಆಗಿದು, ವಾಟರ್ ಪ್ರೂಫ್ (Water proof) ಮತ್ತು ದಸ್ಟ್ ಪ್ರೂಫ್ ಆಗಿದೆ. 

ಕ್ಯಾಮೆರಾ :
ಫೋನ್‌ನಲ್ಲಿ ಫೋಟೋಗ್ರಾಫಿಗಾಗಿ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಇರಲಿದೆ. ಇದರ ಪ್ರಿಮೆರಿ ಸೆನ್ಸಾರ್ 12 ಎಂಪಿ ಆಗಿದ್ದರೆ,  12 ಎಂಪಿ ಅಲ್ಟ್ರಾ ವೈಡ್ ಆಂಗಲ್ ಲೆನ್ಸ್ ನೀಡಲಾಗಿದೆ. ಇದರಲ್ಲಿ ನಿಮಗೆ ನೈಟ್ ಮೋಡ್ (Night mode), ಡೀಪ್ ಫ್ಯೂಷನ್, ಸ್ಮಾರ್ಟ್ ಎಚ್‌ಡಿಆರ್ 3 ಮತ್ತು 4K Dolby Vision ಎಚ್‌ಡಿಆರ್ ರೆಕಾರ್ಡಿಂಗ್‌ನಂತಹ ವೈಶಿಷ್ಟ್ಯಗಳನ್ನು ನೀಡಲಾಗಿದೆ. ಸೆಲ್ಫಿ ಮತ್ತು ವಿಡಿಯೋ ಕರೆ ಮಾಡುವ ಅನುಕೂಲಕ್ಕಾಗಿ, ಇದು 12MP TrueDepth ಫ್ರಂಟ್ ಕ್ಯಾಮೆರಾವನ್ನು ಹೊಂದಿದೆ. ಇದು ನೈಟ್ ಮೋಡ್ ಮತ್ತು 4K Dolby Vision HDR recording ವೈಶಿಷ್ಟ್ಯಗಳೊಂದಿಗೆ ಬರುತ್ತದೆ.

ಇದನ್ನೂ ಓದಿ : NASA Study: 9 ವರ್ಷಗಳ ಬಳಿಕ ಚಂದ್ರನ ಸ್ಥಿತಿಯಲ್ಲಿ ಬದಲಾವಣೆ, ಇಡೀ ವಿಶ್ವಕ್ಕೆ ಎದುರಾಗಲಿದೆ ಭಾರಿ ಅಪಾಯ!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News