ಕೇವಲ 2,500 ರೂಪಾಯಿಗೆ ಸಿಗಲಿದೆ 15 ಸಾವಿರ ರೂಪಾಯಿ ಮೌಲ್ಯದ ಸ್ಮಾರ್ಟ್ ಫೋನ್ ..!

Tecno POVA 3  ಲಾಂಚಿಂಗ್ ಬೆಲೆ  14,999 ರೂಪಾಯಿ. ಆದರೆ Amazon ನಲ್ಲಿ  ಈ ಫೋನ್  11,999 ರೂಪಾಯಿಗೆ ಲಭ್ಯವಿದೆ. ಅಂದರೆ 17 ಶೇದಷ್ಟು  ರಿಯಾಯಿತಿಯನ್ನು ಈ ಫೋನ್ ಮೇಲೆ ನೀಡಲಾಗುತ್ತಿದೆ. 

Written by - Ranjitha R K | Last Updated : Jul 19, 2022, 01:09 PM IST
  • Amazonನಲ್ಲಿ ಸ್ಮಾರ್ಟ್‌ಫೋನ್‌ಗಳ ಮೇಲೆ ಆಫರ್‌
  • ಅಗ್ಗದ ಬೆಲೆಯಲ್ಲಿ ದುಬಾರಿ ಫೋನ್
  • Tecno POVA 3 ಫೋನ್ ಮೇಲೆ ರಿಯಾಯಿತಿ
 ಕೇವಲ  2,500 ರೂಪಾಯಿಗೆ ಸಿಗಲಿದೆ 15 ಸಾವಿರ ರೂಪಾಯಿ ಮೌಲ್ಯದ ಸ್ಮಾರ್ಟ್ ಫೋನ್ ..! title=
Amazon Sale

ಬೆಂಗಳೂರು : Amazonನಲ್ಲಿ ಪ್ರತಿದಿನ ಕೆಲವು ಸ್ಮಾರ್ಟ್‌ಫೋನ್‌ಗಳ  ಮೇಲೆ  ಆಫರ್‌ಗಳನ್ನು ನೀಡಲಾಗುತ್ತದೆ. ಇಂದು ಕೂಡಾ ಕೆಲವು ಸ್ಮಾರ್ಟ್‌ಫೋನ್‌ಗಳ ಮೇಲೆ ಭಾರೀ ರಿಯಾಯಿತಿಗಳನ್ನು ಘೋಷಿಸಲಾಗಿದೆ. ಈ ಸೇಲ್ ನಲ್ಲಿ ಅತ್ಯಂತ ದುಬಾರಿ ಸ್ಮಾರ್ಟ್‌ಫೋನ್‌ಗಳು ಕೂಡಾ ಅಗ್ಗದ ಬೆಲೆಗೆ ಸಿಗುತ್ತಿವೆ.  3 ದಿನಗಳವರೆಗೆ  ಬ್ಯಾಟರಿ ಇರುವ Tecno POVA 3 ಮೇಲೆ ಭಾರೀ ರಿಯಾಯಿತಿ ನೀಡಲಾಗುತ್ತಿದೆ.  ಈ  ಫೋನ್ ಅನ್ನು ಕೇವಲ 3 ಸಾವಿರ ರೂಪಾಯಿಗಿಂತಲೂ ಕಡಿಮೆ ಬೆಲೆಗೆ ಖರೀದಿಸುವುದು ಸಾಧ್ಯವಾಗುತ್ತದೆ. 

Amazon ಸೇಲ್ : Tecno POVA 3 ಕೊಡುಗೆಗಳು ಮತ್ತು ರಿಯಾಯಿತಿಗಳು :
Tecno POVA 3  ಲಾಂಚಿಂಗ್ ಬೆಲೆ  14,999 ರೂಪಾಯಿ. ಆದರೆ Amazon ನಲ್ಲಿ ಈ ಫೋನ್  11,999 ರೂಪಾಯಿಗೆ ಲಭ್ಯವಿದೆ. ಅಂದರೆ 17 ಶೇದಷ್ಟು ರಿಯಾಯಿತಿಯನ್ನು ಈ ಫೋನ್ ಮೇಲೆ ನೀಡಲಾಗುತ್ತಿದೆ. ಇದಲ್ಲದೇ ಫೋನ್ ನಲ್ಲಿ ಎಕ್ಸ್ ಚೇಂಜ್ ಆಫರ್ ಕೂಡ ಇದ್ದು, ಫೋನ್ ಬೆಲೆ ಗಣನೀಯವಾಗಿ ಕಡಿಮೆಯಾಗಲಿದೆ. 

ಇದನ್ನೂ ಓದಿ : ಅಬ್ಬಬ್ಬಾ... ಈ ಎಲೆಕ್ಟ್ರಿಕ್ ಸ್ಕೂಟರ್ ಬೆಲೆ 18 ಲಕ್ಷ: ಏನಿದರ ವಿಶೇಷತೆ!

Amazon ಸೇಲ್: Tecno POVA 3 ಎಕ್ಸ್ಚೇಂಜ್ ಆಫರ್ :
Tecno POVA 3ನಲ್ಲಿ 9,500 ರೂಪಾಯಿ ವಿನಿಮಯ ಕೊಡುಗೆ ಇದೆ. ಹಳೆಯ ಸ್ಮಾರ್ಟ್‌ಫೋನ್ ಅನ್ನು  ಇಲ್ಲಿ ವಿನಿಮಯ ಮಾಡಿಕೊಂಡರೆ ಭಾರೀ ರಿಯಾಯಿತಿ  ಸಿಗಲಿದೆ. ಹಳೆಯ ಫೋನ್ ಉತ್ತಮ ಸ್ಥಿತಿಯಲ್ಲಿದ್ದರೆ ಮತ್ತು ಮಾಡೆಲ್ ಇತ್ತೀಚಿನದಾಗಿದ್ದರೆ  9,500 ರೂ. ಆಫರ್ ಇರಲಿದೆ. ಪೂರ್ಣ ಆಫ್ ಪಡೆಯುವುದು  ಸಾಧ್ಯವಾದರೆ ಈ  ಫೋನ್‌ ಅನ್ನು  2,499 ರೂ.ಗೆ ಖರೀದಿಸುವುದು ಸಾಧ್ಯವಾಗುತ್ತದೆ. 

Tecno Pova 3 ವಿಶೇಷಣಗಳು  :
Tecno Pova 3 6.9-ಇಂಚಿನ IPS LCD ಪ್ಯಾನೆಲ್ ಅನ್ನು ಹೊಂದಿದೆ. ಅದು 1080 x 2460 ಪಿಕ್ಸೆಲ್‌ಗಳ ಫುಲ್ HD+ ರೆಸಲ್ಯೂಶನ್, 20.5:9 ಆಕಾ ಆಸ್ಪೆಕ್ಟ ರೇಶಿಯೋ ಮತ್ತು 90Hz ರಿಫ್ರೆಶ್ ರೇಟ್ ಅನ್ನು ನೀಡುತ್ತದೆ. ಸಾಧನವು 173.1 x 78.46 x 9.44mm ಅಳತೆಯ ಪಾಲಿಕಾರ್ಬೊನೇಟ್  ಬಾಡಿಯೊಂದಿಗೆ ಬರುತ್ತದೆ.

Tecno Pova 3 ಬ್ಯಾಟರಿ :
Tecno Pova 3 7,000mAh ಬ್ಯಾಟರಿ ಪ್ಯಾಕ್ ನೊಂದಿಗೆ ಬರುತ್ತದೆ. 33W ವೇಗದ ಚಾರ್ಜರ್ ಅನ್ನು ಒಳಗೊಂಡಿದೆ. ಈ ಫೋನ್ 25W ಚಾರ್ಜಿಂಗ್ ಅನ್ನು ಮಾತ್ರ ಸಪೋರ್ಟ್ ಮಾಡುತ್ತದೆ. ಪೂರ್ಣ ಚಾರ್ಜ್‌ನಲ್ಲಿ ಫೋನ್ 55 ದಿನಗಳ ಸ್ಟ್ಯಾಂಡ್‌ಬೈ ಟೈಮ್ , 30 ಗಂಟೆಗಳ ವೀಡಿಯೊ ಪ್ಲೇಬ್ಯಾಕ್ ಮತ್ತು 14 ಗಂಟೆಗಳ ಗೇಮಿಂಗ್ ಅನ್ನು ನೀಡುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.

ಇದನ್ನೂ ಓದಿ : ಕೇವಲ 49 ರೂಪಾಯಿಯ ರಿಚಾರ್ಜ್ ಪ್ಲಾನ್ ಪರಿಚಯಿಸಿದ ಬಿಎಸ್‌ಎನ್‌ಎಲ್‌

Tecno Pova 3 ಕ್ಯಾಮೆರಾ :
Tecno Pova 3 ಡ್ಯುಯಲ್-LED ಫ್ಲ್ಯಾಷ್ ಅಸಿಸ್ಟೆಡ್ 8-ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾವನ್ನು ಹೊಂದಿದೆ. ಇದರ ಬ್ಯಾಕ್ ಪ್ಯಾನೆಲ್ ಕ್ವಾಡ್-ಎಲ್ಇಡಿ ಫ್ಲ್ಯಾಷ್ನೊಂದಿಗೆ ಟ್ರಿಪಲ್ ಕ್ಯಾಮೆರಾ ಯೂನಿಟ್ ಅನ್ನು ಹೊಂದಿದೆ. ಇದು 50-ಮೆಗಾಪಿಕ್ಸೆಲ್ ಮುಖ್ಯ ಸ್ನ್ಯಾಪರ್ ಮತ್ತು ಎರಡು ಸಪೋರ್ಟಿವ್  ಕ್ಯಾಮೆರಾಗಳನ್ನು ಹೊಂದಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News