ಅರ್ಧದಷ್ಟು ಕಡಿಮೆ ಬೆಲೆಗೆ ಖರೀದಿಸಿ, 55 ಇಂಚಿನ ಸ್ಮಾರ್ಟ್ ಆಂಡ್ರಾಯ್ಡ್ ಟಿವಿ, ಸಣ್ಣ ಟಿವಿಗಳ ಮೇಲೆಯೂ ಭಾರೀ ರಿಯಾಯಿತಿ

ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರ ಮನೆಯಲ್ಲೂ ಟಿವಿ ಇದ್ದೇ ಇರುತ್ತದೆ. ಇತ್ತೀಚಿನ ಒಂದೆರಡು ವರ್ಷಗಳಲ್ಲಿ ಟಿವಿ ಖರೀದಿಸುವವರು, ಸ್ಮಾರ್ಟ್ ಟಿವಿಯನ್ನೇ ಖರೀದಿಸುತ್ತಿದ್ದಾರೆ. 

Written by - Ranjitha R K | Last Updated : Sep 13, 2021, 05:20 PM IST
  • ಫ್ಲಿಪ್‌ಕಾರ್ಟ್‌ ಸೇಲ್ ನಲ್ಲಿ ಸ್ಮಾರ್ಟ್ ಟಿವಿಗಳನ್ನು ಖರೀದಿಸಿ
  • ನಡೆಯುತ್ತಿದೆ Flipkart Home Entertainment Sale
  • ಎಕ್ಸ್ಚೇಂಜ್ ಆಫರ್ ಕೂಡಾ ಲಭ್ಯವಿದೆ
ಅರ್ಧದಷ್ಟು ಕಡಿಮೆ ಬೆಲೆಗೆ ಖರೀದಿಸಿ, 55 ಇಂಚಿನ ಸ್ಮಾರ್ಟ್ ಆಂಡ್ರಾಯ್ಡ್ ಟಿವಿ,  ಸಣ್ಣ ಟಿವಿಗಳ ಮೇಲೆಯೂ ಭಾರೀ ರಿಯಾಯಿತಿ   title=
ಫ್ಲಿಪ್‌ಕಾರ್ಟ್‌ ಸೇಲ್ ನಲ್ಲಿ ಸ್ಮಾರ್ಟ್ ಟಿವಿಗಳನ್ನು ಖರೀದಿಸಿ (photo zee news)

ನವದೆಹಲಿ : ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರ ಮನೆಯಲ್ಲೂ ಟಿವಿ ಇದ್ದೇ ಇರುತ್ತದೆ. ಇತ್ತೀಚಿನ ಒಂದೆರಡು ವರ್ಷಗಳಲ್ಲಿ ಟಿವಿ ಖರೀದಿಸುವವರು, ಸ್ಮಾರ್ಟ್ ಟಿವಿಯನ್ನೇ ಖರೀದಿಸುತ್ತಿದ್ದಾರೆ. ಉತ್ತಮ ಸ್ಮಾರ್ಟ್ ಟಿವಿಯನ್ನು ಖರೀದಿಸಬೇಕಾದರೆ, ಫ್ಲಿಪ್‌ಕಾರ್ಟ್‌ನಲ್ಲಿ ಫ್ಲಿಪ್‌ಕಾರ್ಟ್ ಹೋಮ್ ಎಂಟರ್‌ಟೈನ್‌ಮೆಂಟ್ ಸೇಲ್ (Flipkart Home Entertainment Sale) ನಡೆಯತ್ತಿದೆ. ಈ ಸೇಲ್ ನಲ್ಲಿ ಸ್ಮಾರ್ಟ್ ಟಿವಿಗಳ ಮೇಲೆ ಭಾರಿ ರಿಯಾಯಿತಿಗಳನ್ನು ಪಡೆದುಕೊಳ್ಳಬಹುದು. 

Mi 4a PRO HD ರೆಡಿ ಎಲ್ಇಡಿ ಸ್ಮಾರ್ಟ್ ಆಂಡ್ರಾಯ್ಡ್ ಟಿವಿ (Mi 4a PRO HD Ready LED Smart Android TV):
ಈ 32 ಇಂಚಿನ ಸ್ಮಾರ್ಟ್ ಟಿವಿಯ ಮೇಲೆ  15% ರಿಯಾಯಿತಿ ಸಿಗಲಿದೆ. discount ನಂತರ ಈ ಟಿವಿಯನ್ನು 16,999 ರೂ.ಗಳಿಗೆ ಖರೀದಿಸಬಹುದು. 20W ಸ್ಪೀಕರ್ ಔಟ್‌ಪುಟ್, 60Hz ರಿಫ್ರೆಶ್ ರೇಟ್ ಮತ್ತು 2 USB ಪೋರ್ಟ್‌ಗಳೊಂದಿಗೆ ಈ ಸ್ಮಾರ್ಟ್ ಟಿವಿಯಲ್ಲಿ  10 ಸಾವಿರ ರೂಪಾಯಿಗಳ ಎಕ್ಸ್ಚೇಂಜ್ ಆಫರ್ ಕೂಡಾ ಸಿಗಲಿದೆ. HDFC ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ (Debit card)  ಬಳಸಿದರೆ, 1,000 ರು. ರಿಯಾಯಿತಿ ಮತ್ತು ಫ್ಲಿಪ್‌ಕಾರ್ಟ್ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ನೊಂದಿಗೆ (Credit card)  5% ಅನಿಯಮಿತ ಕ್ಯಾಶ್‌ಬ್ಯಾಕ್ ಲಾಭ ಕೂಡಾ ಸಿಗಲಿದೆ. 

ಇದನ್ನೂ ಓದಿ : ಹೊಸ ಬಣ್ಣದಲ್ಲಿ ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡುತ್ತಿದೆ ವಿವೋ : ಜನರಿಂದ ಭಾರೀ ಮೆಚ್ಚುಗೆ

ವು ಪ್ರೀಮಿಯಂ ಅಲ್ಟ್ರಾ ಎಚ್‌ಡಿ ಎಲ್‌ಇಡಿ ಸ್ಮಾರ್ಟ್ ಆಂಡ್ರಾಯ್ಡ್ ಟಿವಿ (Vu Premium Ultra HD LED Smart Android TV)
ಈ ಸ್ಮಾರ್ಟ್ ಟಿವಿಯ ಬೆಲೆ 39,999 ರೂ .  ಆದರೆ ಈ ಸೇಲ್ ನಲ್ಲಿ ಇದನ್ನು 32,999 ರೂ. ಗಳಿಗೆ ಖರೀದಿಸಬಹುದು.  43-ಇಂಚಿನ ಟಿವಿಯು 24W ಸ್ಪೀಕರ್ ಔಟ್‌ಪುಟ್ ಮತ್ತು 60Hz ರಿಫ್ರೆಶ್ ರೇಟ್ ಹೊಂದಿದೆ. ಇದರ ಮೇಲೆ  ರೂ .11 ಸಾವಿರದ ವರೆಗಿನ ಎಕ್ಸ್ಚೇಂಜ್ ಆಫರ್ (Exchange offer) ಕೂಡಾ ಸಿಗಲಿದೆ.  ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ನೊಂದಿಗೆ 5% ಅನಿಯಮಿತ ಕ್ಯಾಶ್‌ಬ್ಯಾಕ್ ಪಡೆಯಬಹುದು. ಐಸಿಐಸಿಐ ಬ್ಯಾಂಕ್, ಇಂಡಸ್‌ಲ್ಯಾಂಡ್ ಬ್ಯಾಂಕ್ ಮತ್ತು ಎಸ್‌ಬಿಐ (SBI), ಅಮೆರಿಕನ್ ಎಕ್ಸ್‌ಪ್ರೆಸ್ ಅಥವಾ ಮೊಬಿಕ್ವಿಕ್ ಬಳಸಿದರೆ 20% ರಿಯಾಯಿತಿಯ ಲಾಭ ಪಡೆಯಬಹುದು.  

 iFFALCON ಯ ಟಿಸಿಎಲ್ ಅಲ್ಟ್ರಾ ಎಚ್‌ಡಿ ಎಲ್‌ಇಡಿ ಸ್ಮಾರ್ಟ್ ಆಂಡ್ರಾಯ್ಡ್ ಟಿವಿ (iFFALCON by TCL Ultra HD LED Smart Android TV) :
ಈ 55 ಇಂಚಿನ ಸ್ಮಾರ್ಟ್ ಟಿವಿಯಲ್ಲಿ (Smart TV) 56% ರಿಯಾಯಿತಿ ಸಿಗುತ್ತದೆ. ಈ ಟಿವಿಯ ಬೆಲೆ 89,990 ರೂ. ಆದರೆ ಈ ಸೇಲ್ ನಲ್ಲಿ  ಈ ಟಿವಿಯನ್ನು  38,999 ರೂ.ಗೆ ಖರೀದಿಸಬಹುದು.  ಎಕ್ಸ್ಚೇಂಜ್ ಆಫರ್ ಬಳಸಿದರೆ,  11,000 ರೂ ವರೆಗೆ ಉಳಿಸಬಹುದು. ಈ ಟಿವಿಯು 20W ನ ಸ್ಪೀಕರ್ ಔಟ್‌ಪುಟ್, 60Hz ನ ರಿಫ್ರೆಶ್ ರೇಟ್ ಮತ್ತು A+ ಗ್ರೇಡ್ UHD 10-ಬಿಟ್ DLED ಪ್ಯಾನಲ್‌ನೊಂದಿಗೆ ಬರುತ್ತದೆ. ಇದರ ಮೇಲೆ ಬ್ಯಾಂಕ್ ಆಫರ್‌ಗಳ ಸೌಲಭ್ಯವೂ ಇದೆ. 

ಇದನ್ನೂ ಓದಿ : WhatsApp Tricks:ಟೈಪ್ ಮಾಡದೇ ಇನ್ನು ನೀವು ಸಂದೇಶಗಳನ್ನು ಕಳುಹಿಸುವುದು ಹೇಗೆ ಗೊತ್ತಾ?

ಒನ್‌ಪ್ಲಸ್ ವೈ ಸರಣಿ ಎಚ್‌ಡಿ ರೆಡಿ ಎಲ್‌ಇಡಿ ಸ್ಮಾರ್ಟ್ ಆಂಡ್ರಾಯ್ಡ್ ಟಿವಿ (OnePlus Y Series HD Ready LED Smart Android TV) : 
20W ಸ್ಪೀಕರ್ ಔಟ್‌ಪುಟ್, 60Hz ರಿಫ್ರೆಶ್ರೇಟ್ ಮತ್ತು 2 USB ಪೋರ್ಟ್‌ಗಳನ್ನು ಹೊಂದಿರುವ ಈ 32-ಇಂಚಿನ ಸ್ಮಾರ್ಟ್ ಟಿವಿ 19,999 ರೂ ಬದಲಾಗಿ 1 8,999 ರೂ ಲಭ್ಯವಿರಲಿದೆ. ಇದನ್ನು ತಿಂಗಳಿಗೆ ರೂ 2,111 ರ ನೋ-ಕಾಸ್ಟ್ ಇಎಂಐನಲ್ಲಿ ಖರೀದಿಸಬಹುದು. ಎಚ್‌ಡಿಎಫ್‌ಸಿ ಕ್ರೆಡಿಟ್ ಕಾರ್ಡ್ (HDFC Credit card) ಬಳಸಿದರೆ 1,000 ರೂ.ಗಳ ಹೆಚ್ಚುವರಿ ರಿಯಾಯಿತಿ ಸಿಗಲಿದೆ.  ಐಸಿಐಸಿಐ ಬ್ಯಾಂಕ್, ಇಂಡಸ್‌ಲ್ಯಾಂಡ್ ಬ್ಯಾಂಕ್ ಮತ್ತು ಎಸ್‌ಬಿಐ ಕಾರ್ಡ್‌ ಅಥವಾ ಅಮೆರಿಕನ್ ಎಕ್ಸ್‌ಪ್ರೆಸ್ ಅಥವಾ ಮೊಬಿಕ್ವಿಕ್‌ ಮೊದಲ ಬಾರಿಗೆ ಬಳಸುವುದಾದರೆ 20% ರಿಯಾಯಿತಿ ಸಿಗುತ್ತದೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News