BSNL: ಶೀಘ್ರದಲ್ಲೇ ಆರಂಭವಾಗಲಿದೆ BSNLನ 4G ಸೇವೆ; ಜಿಯೋ-ಏರ್‌ಟೆಲ್‌ಗೆ ಹೆಚ್ಚಿದ ಟೆನ್ಷನ್!

BSNL: BSNL ಭಾರತದಲ್ಲಿ ತನ್ನ 4G ಸೇವೆಯನ್ನು ಪ್ರಾರಂಭಿಸಲು ತಯಾರಿ ನಡೆಸುತ್ತಿದೆ. ಇದು 2022 ರ ಸ್ವಾತಂತ್ರ್ಯ ದಿನದಂದು 4G ಸೇವೆಗಳನ್ನು ಘೋಷಿಸಬಹುದು ಎಂದು ಹೇಳಲಾಗುತ್ತಿದೆ. BSNL ಭಾರತದಾದ್ಯಂತ 1 ಲಕ್ಷ ಟೆಲಿಕಾಂ ಟವರ್‌ಗಳನ್ನು ಸ್ಥಾಪಿಸಲಿದೆ ಮತ್ತು ಬಿಹಾರದಲ್ಲಿಯೇ 40,000 ಟವರ್‌ಗಳನ್ನು ಸ್ಥಾಪಿಸಲಿದೆ...

Written by - Yashaswini V | Last Updated : Feb 22, 2022, 12:49 PM IST
  • BSNL ಭಾರತದಲ್ಲಿ ತನ್ನ 4G ಸೇವೆಯನ್ನು ಪ್ರಾರಂಭಿಸಲು ತಯಾರಿ ನಡೆಸುತ್ತಿದೆ
  • BSNL 2022 ರ ಸ್ವಾತಂತ್ರ್ಯ ದಿನದಂದು 4G ಸೇವೆಗಳನ್ನು ಘೋಷಿಸಬಹುದು
  • BSNL ಭಾರತದಾದ್ಯಂತ 1 ಲಕ್ಷ ಟೆಲಿಕಾಂ ಟವರ್‌ಗಳನ್ನು ಸ್ಥಾಪಿಸಲಿದೆ
BSNL: ಶೀಘ್ರದಲ್ಲೇ ಆರಂಭವಾಗಲಿದೆ BSNLನ 4G ಸೇವೆ; ಜಿಯೋ-ಏರ್‌ಟೆಲ್‌ಗೆ ಹೆಚ್ಚಿದ ಟೆನ್ಷನ್!   title=
BSNL 4G Launch Date

BSNL: ಒಂದೆಡೆ ಟೆಲಿಕಾಂ ಕಂಪನಿಗಳಾದ ರಿಲಯನ್ಸ್ ಜಿಯೋ, ಏರ್‌ಟೆಲ್ ಮತ್ತು ವೊಡಾಫೋನ್ ಐಡಿಯಾ ಪ್ರಿಪೇಯ್ಡ್ ಪ್ಲಾನ್‌ಗಳನ್ನು ದುಬಾರಿಯಾಗಿಸಿದರೆ, ಇನ್ನೊಂದೆಡೆ ಬಿಎಸ್‌ಎನ್‌ಎಲ್ ಅದರ ಲಾಭ ಪಡೆಯುತ್ತಿದೆ. ಕಡಿಮೆ ಬೆಲೆಗೆ ಹೆಚ್ಚಿನ ಲಾಭ ನೀಡಿ ಗ್ರಾಹಕರನ್ನು ತನ್ನತ್ತ ಸೆಳೆಯುತ್ತಿದೆ. ಕಳೆದ ವರ್ಷ ಡಿಸೆಂಬರ್‌ನಲ್ಲಿ ಬಿಎಸ್‌ಎನ್‌ಎಲ್‌ಗೆ 11 ಲಕ್ಷ ಹೊಸ ಗ್ರಾಹಕರು ಸೇರ್ಪಡೆಗೊಂಡಿದ್ದರು. ಅದೇ ಸಮಯದಲ್ಲಿ, ಜಿಯೋ ಸಾಕಷ್ಟು ನಷ್ಟವನ್ನು ಅನುಭವಿಸಿತು. ಈಗ BSNL TCS (ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್) ಜೊತೆಗೆ ಪಾಲುದಾರಿಕೆ ಹೊಂದಿದೆ ಮತ್ತು ಅಂತಿಮವಾಗಿ ಭಾರತದಲ್ಲಿ ತನ್ನ ನಾಲ್ಕನೇ ತಲೆಮಾರಿನ ಸೇವೆಗಳನ್ನು ಪ್ರಾರಂಭಿಸಲು ಸಿದ್ಧವಾಗಿದೆ.  ಆದಾಗ್ಯೂ, ಭಾರತದಲ್ಲಿ 4G ಬಿಡುಗಡೆಯ ನಿಖರವಾದ ದಿನಾಂಕವನ್ನು ಕಂಪನಿಯು ಇನ್ನೂ ಪ್ರಕಟಿಸಿಲ್ಲ.

ಸ್ವಾತಂತ್ರ್ಯ ದಿನಾಚರಣೆಯಂದು BSNL ನ 4G ಸೇವೆ ಲಾಂಚ್ ಆಗುವ ಸಾಧ್ಯತೆ:
ಹೊಸ ವರದಿಗಳ ಪ್ರಕಾರ, BSNL 2022 ರ ಸ್ವಾತಂತ್ರ್ಯ ದಿನದಂದು 4G ಸಂಪರ್ಕವನ್ನು (BSNL 4G Service Launch) ಘೋಷಿಸಬಹುದು. ಆದಾಗ್ಯೂ, ಏರ್‌ಟೆಲ್, Vi ಮತ್ತು Jio ನಂತಹ ಖಾಸಗಿ ಟೆಲಿಕಾಂಗಳು ಹಲವು ವರ್ಷಗಳಿಂದ 4G ಸೇವೆಗಳನ್ನು ಒದಗಿಸುತ್ತಿವೆ, 2023 ರಲ್ಲಿ 5G ಸೇವೆ ಕೂಡ ಆರಂಭವಾಗಲಿದೆ.  

ಪ್ರಸ್ತುತ, BSNL 3G ಸಂಪರ್ಕ ಮತ್ತು ಬ್ರಾಡ್‌ಬ್ಯಾಂಡ್ ಸೇವೆಗಳನ್ನು ಒದಗಿಸುತ್ತದೆ. ಇದೀಗ 4G ಸೇವೆ ಒದಗಿಸುವ ನಿಟ್ಟಿನಲ್ಲಿ BSNL ಭಾರತದಾದ್ಯಂತ 1 ಲಕ್ಷ ಟೆಲಿಕಾಂ ಟವರ್‌ಗಳನ್ನು ಸ್ಥಾಪಿಸಲು ಉದ್ದೇಶಿಸಿದೆ ಮತ್ತು ಬಿಹಾರದಲ್ಲಿಯೇ 40,000 ಟೆಲಿಕಾಂ ಟವರ್‌ಗಳನ್ನು ಸ್ಥಾಪಿಸಲು ಉದ್ದೇಶಿಸಿದೆ. 

ಇದನ್ನೂ ಓದಿ- Google Chrome: ನೀವೂ ಬ್ರೌಸರ್ ನಲ್ಲಿ ನಿಮ್ಮ ಪಾಸ್ವರ್ಡ್ ಸೇವ್ ಮಾಡ್ತಿರಾ? ತಕ್ಷಣ ಈ ಕೆಲಸ ಮಾಡಿ ಇಲ್ದಿದ್ರೆ..!

ಬಿಹಾರದಲ್ಲಿ 40 ಸಾವಿರ ಟವರ್‌ಗಳನ್ನು ಸ್ಥಾಪಿಸಲಾಗುವುದು:
ಬಿಎಸ್‌ಎನ್‌ಎಲ್ (BSNL) ಕನ್ಸ್ಯೂಮರ್ ಮೊಬಿಲಿಟಿ ಡೈರೆಕ್ಟರ್ ಸುಶೀಲ್ ಕುಮಾರ್ ಮಿಶ್ರಾ, "BSNL ತನ್ನ ತಂತ್ರಜ್ಞಾನ ಪಾಲುದಾರನಾಗಿ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (TCS) ನೊಂದಿಗೆ 4G ಸೇವೆಗಳನ್ನು ನೀಡುತ್ತದೆ. ಇದು ಮೊದಲ ಬಾರಿಗೆ 4G ಸೇವೆಗಳಿಗೆ ಭಾರತೀಯ ತಂತ್ರಜ್ಞಾನವನ್ನು ಬಳಸಲಾಗುವುದು ಎಂದು ಹೇಳಿದ್ದಾರೆ. "ಬಿಹಾರದಲ್ಲಿ ಕನಿಷ್ಠ 40,000 ಸೇರಿದಂತೆ ದೇಶಾದ್ಯಂತ 1 ಲಕ್ಷ ಟವರ್‌ಗಳನ್ನು ಸ್ಥಾಪಿಸಲು BSNL ಯೋಜಿಸಿದೆ. ಇದು ದೆಹಲಿ ಮತ್ತು ಮುಂಬೈನಲ್ಲಿ ತನ್ನ 4G ಸೇವೆಗಳನ್ನು ಒದಗಿಸುತ್ತದೆ ಎಂದವರು ತಿಳಿಸಿದ್ದಾರೆ.

ಇದನ್ನೂ ಓದಿ- Airtel: ಕಡಿಮೆ ವೆಚ್ಚದಲ್ಲಿ ಅತ್ಯುತ್ತಮ ಡೇಟಾ ಪ್ಲಾನ್, Disney+ Hotstar, Amazon Prime ಕೂಡ ಫ್ರೀ

ಕಂಪನಿಯು ತನ್ನ 4G ಸಂಪರ್ಕವನ್ನು ಘೋಷಿಸಲು ತಯಾರಿ ನಡೆಸುತ್ತಿರುವಾಗ, ಇತರ ಟೆಲಿಕಾಂಗಳಾದ Vodafone Idea, Airtel ಮತ್ತು Reliance Jio ದೇಶದಲ್ಲಿ 5G ಸಂಪರ್ಕ ಪ್ರಯೋಗಗಳನ್ನು ಪ್ರಾರಂಭಿಸಿವೆ. BSNL ನ 4G ಸಂಪರ್ಕವು ಸ್ವಲ್ಪ ಹಳೆಯದಾಗಿರುತ್ತದೆ ಏಕೆಂದರೆ ಇತರ ಕಂಪನಿಗಳ 4G ಸರಣಿಯು ವರ್ಷಗಳಿಂದಲೂ ಇದೆ. ಆದಾಗ್ಯೂ, ಇದು ಗ್ರಾಮೀಣ ಮತ್ತು ದೂರದ ಪ್ರದೇಶಗಳಲ್ಲಿ ಗಮನಾರ್ಹ ಪರಿಣಾಮ ಬೀರುತ್ತದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News