ಶಸ್ತ್ರಚಿಕಿತ್ಸೆಯಿಲ್ಲದೆ, ಅದು ಹೇಗೆ ಸಾಧ್ಯ..! ಕೊನೆಗೂ ಬದಲಾವಣೆಯ ರಹಸ್ಯ ರಿವೀಲ್‌ ಮಾಡಿದ ಕಾಜೋಲ್‌..

Actress Kajol transformation : ಕಪ್ಪು ಮೈಬಣ್ಣದಿಂದ ಟ್ರೋಲ್ ಆಗುತ್ತಿದ್ದ ನಟಿ ಕಾಜೋಲ್‌ ತಮ್ಮ ಬದಲಾವಣೆ ಕುರಿತು ಕೊನೆಗೂ ಸ್ಪಷ್ಟತೆ ನೀಡಿದ್ದಾರೆ. ಸರ್ಜರಿ ಇಲ್ಲದೆ ಹೇಗೆ ಈ ಬದಲಾವಣೆ ಎಂದು ಪ್ರಶ್ನೆ ಮಾಡಿದ್ದವರಿಗೆ ಟ್ರೋಲಿಗರಿಗೆ ತಮ್ಮ ಬ್ಯೂಟಿ ರಹಸ್ಯ ಬಿಚ್ಚಿಟ್ಟಿದ್ದಾಳೆ.. ಸದ್ಯ ಕಾಜೋಲ್ ನೀಡಿದ ಉತ್ತರ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ..
 

1 /8

ಕಾಜೋಲ್ ಬಾಲಿವುಡ್‌ನ ಸ್ಟಾರ್‌ ನಟಿಯರಲ್ಲಿ ಒಬ್ಬರು. ಒಂದಲ್ಲ ಒಂದು ಕಾರಣಕ್ಕೆ ಸದಾ ಸುದ್ದಿಯಲ್ಲಿರುವ ನಟಿ, ಇದೀಗ ತಮ್ಮ ಸೌಂದರ್ಯ ಬದಲಾವಣೆ ಕುರಿತು ಮಾತನಾಡಿದ್ದು, ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ..  

2 /8

ಕಾಜೋಲ್‌ 'ಬೇಕೂದಿ' ಎಂಬ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು. ‘ಬಾಜಿಗರ್’ ಸಿನಿಮಾ ಈ ಚೆಲುವೆಗೆ ಜನಪ್ರಿಯತೆಯನ್ನು ತಂದು ಕೊಟ್ಟಿತು. ಅದರ ನಂತರ ಕಾಜೋಲ್ ಹಿಂತಿರುಗಿ ನೋಡಲೇ ಇಲ್ಲ.  

3 /8

ಕಾಜೋಲ್ ತನ್ನ ನಟನೆಯಿಂದ ಅಭಿಮಾನಿಗಳ ಮನ ಗೆದ್ದರು. ಆದರೆ ನಟಿ ತನ್ನ ಕಪ್ಪು ಮೈಬಣ್ಣಕ್ಕಾಗಿ ಇನ್ನೂ ಟ್ರೋಲ್ ಆಗುತ್ತಿರುವುದು ವಿಪರ್ಯಾಸ. ಸಧ್ಯ ಈ ಬಗ್ಗೆ ನಟಿ ಟ್ರೋಲ್‌ಗಳಿಗೆ ಸ್ಪಷ್ಟ ಉತ್ತರ ನೀಡಿದ್ದಾರೆ.  

4 /8

ಕಾಜೋಲ್ ಆಗಾಗ ಫೊಟೋ ಶೂಟ್‌ ಮಾಡಿಸಿ ಅವುಗಳನ್ನ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡುತ್ತಿರುತ್ತಾರೆ. ಕೆಲವೊಮ್ಮೆ ಈ ಫೊಟೋಸ್‌ ಕೆಲ ನಟ್ಟಿಗರು ಕಪ್ಪಗಿದ್ದ ನಿಮ್ಮ ಮೈಬಣ್ಣ ಬೆಳ್ಳಗಾಗಿದ್ದು ಹೇಗೆ ಅಂತ ಕಾಮೆಂಟ್‌ ಮಾಡಿ ಪ್ರಶ್ನೆ ಕೇಳುತ್ತಿರುತ್ತಾರೆ..   

5 /8

ಸಂದರ್ಶನವೊಂದರಲ್ಲಿ ಕಾಜೋಲ್ ಟ್ರೋಲ್‌ಗಳಿಗೆ ಸ್ಪಷ್ಟ ಉತ್ತರ ನೀಡಿದ್ದಾರೆ. 'ಈಗ ಇವೆಲ್ಲಾ ಮಾಮೂಲು.. ನನಗೆ ಇದರ ಬಗ್ಗೆ ಚಿಂತೆಯಿಲ್ಲ...' ಅಂತ ಟ್ರೋಲಿಗರಿಗೆ ಮುಟ್ಟಿನೋಡಿಕೊಳ್ಳುವಂತೆ ಉತ್ತರಿಸಿದ್ದಾಳೆ..  

6 /8

ತ್ವಚೆ ಮತ್ತು ಮೈಬಣ್ಣದ ಬಗ್ಗೆ ಪ್ರಶ್ನೆ ಕೇಳುವವರಿಗೆ ಉತ್ತರಿಸಿದ ನಟಿ, ನಾನು ಯಾವುದೇ ಶಸ್ತ್ರಚಿಕಿತ್ಸೆಗೆ ಒಳಗಾಗಿಲ್ಲ. ಸೂರ್ಯನ ಬೆಳಕಿನಿಂದ ದೂರವಿದ್ದೇನೆ. ಆದ್ದರಿಂದ ಚರ್ಮವು ಟ್ಯಾನ್ ಆಗಿಲ್ಲ.. ಅಂತ ಸ್ಪಷ್ಟತೆ ನೀಡಿದ್ದಾರೆ ಕಾಜೋಲ್‌..  

7 /8

'ಚರ್ಮವನ್ನು ಬಿಳಿಮಾಡುವ ಶಸ್ತ್ರಚಿಕಿತ್ಸೆ ಇಲ್ಲ, ಹೋಮ್ ಸರ್ಜರಿಯಲ್ಲಿ ಮಾತ್ರ ಇರಿ...' ಅಷ್ಟೇ ಅಲ್ಲ, ಅಲ್ಲದೆ, ತಮ್ಮ ಫೋಟೋಗೆ ನಟಿ #sunblocked #spfunbeatable ಎಂಬ ಹ್ಯಾಶ್‌ಟ್ಯಾಗ್ ಬಳಸಿ ಟ್ರೋಲಿಗರಿಗೆ ತಕ್ಕ ಉತ್ತರ ನೀಡಿದ್ದಾರೆ..  

8 /8

ನಟಿ ಸೋಷಿಯಲ್ ಮೀಡಿಯಾದಲ್ಲಿ ತುಂಬಾ ಸಕ್ರಿಯರಾಗಿದ್ದಾರೆ. ಆಗಾಗ ತಮ್ಮ ಹಾಗೂ ಕುಟುಂಬದ ಚಿತ್ರಗಳು ಮತ್ತು ವೀಡಿಯೊಗಳನ್ನು ಪೋಸ್ಟ್ ಮಾಡುತ್ತಿರುತ್ತಾರೆ..