BSNL ನೀಡುತ್ತಿದೆ free 4G ಸಿಮ್ ಕಾರ್ಡ್ , ನೀವು ಮಾಡಬೇಕಾಗಿರುವುದು ಇಷ್ಟೇ

ನೀವು ಬಿಎಸ್ಎನ್ಎಲ್ (BSNL) ಬಳಕೆದಾರರಾಗಿದ್ದರೆ, ಕಂಪನಿಯು ನಿಮಗೆ 4 ಜಿ ಸಿಮ್ ಕಾರ್ಡ್ ಅನ್ನು ಉಚಿತವಾಗಿ ನೀಡುತ್ತದೆ. 

Written by - Ranjitha R K | Last Updated : Jul 2, 2021, 04:04 PM IST
  • ಉಚಿತವಾಗಿ ಸಿಗಲಿದೆ ಬಿಎಸ್ಎನ್ಎಲ್ 4 ಜಿ ಸಿಮ್
  • ಗ್ರಾಹಕರನ್ನು ಆಕರ್ಷಿಸುವ ಉದ್ದೇಶದಿಂದ ಈ ಆಫರ್
  • ಉಚಿತ ಸಿಮ್‌ಗಾಗಿ ಏನು ಮಾಡಬೇಕು ತಿಳಿಯಿರಿ
BSNL ನೀಡುತ್ತಿದೆ free 4G ಸಿಮ್ ಕಾರ್ಡ್ , ನೀವು ಮಾಡಬೇಕಾಗಿರುವುದು ಇಷ್ಟೇ  title=
ಉಚಿತವಾಗಿ ಸಿಗಲಿದೆ ಬಿಎಸ್ಎನ್ಎಲ್ 4 ಜಿ ಸಿಮ್ (photo zee news)

ನವದೆಹಲಿ : ನೀವು ಬಿಎಸ್ಎನ್ಎಲ್ (BSNL) ಬಳಕೆದಾರರಾಗಿದ್ದರೆ, ಕಂಪನಿಯು ನಿಮಗೆ 4 ಜಿ ಸಿಮ್ ಕಾರ್ಡ್ ಅನ್ನು ಉಚಿತವಾಗಿ ನೀಡುತ್ತದೆ. ಹೌದು, ಕಂಪನಿಯು ತನ್ನ ಗ್ರಾಹಕರಿಗೆ ಉಚಿತ 4 ಜಿ ಸಿಮ್ ಕಾರ್ಡ್ ನೀಡುವುದಾಗಿ ಘೋಷಿಸಿದೆ. ಈ ಆಫರ್  ಸೆಪ್ಟೆಂಬರ್  30ರವರೆಗೆ ಮಾತ್ರ ಇರಲಿದೆ.  

ಉಚಿತ ಸಿಮ್‌ಗಾಗಿ ಏನು ಮಾಡಬೇಕು : 
ಮೊಬೈಲ್ ಆಪರೇಟರ್ ಪೋರ್ಟಬಿಲಿಟಿ ಮೂಲಕ ಇತರ ಆಪರೇಟರ್‌ಗಳಿಂದ ಬಿಎಸ್‌ಎನ್‌ಎಲ್‌ಗೆ (BSNL) ಸ್ವಿಚ್ ಆಗುವ ಬಳಕೆದಾರರಿಗೆ ಮಾತ್ರ ಈ ಆಫರ್ ಲಾಭ ಸಿಗಲಿದೆ. ಈ ಆಫರ್ ಮೂಲಕ ಹೆಚ್ಚು ಹೆಚ್ಚು ಗ್ರಾಹಕರನ್ನು ಆಕರ್ಷಿಸುವ ಉದ್ದೇಶವನ್ನು  bsnl ಹೊಂದಿದೆ. ಸಿಮ್ ತೆಗೆದುಕೊಳ್ಳುವ ಎಲ್ಲಾ ಹೊಸ ಮತ್ತು ಎಂಎನ್‌ಪಿ (MNP) ಬಳಕೆದಾರರು ಮೊದಲು ೧೦೦ ರೂ ಗಳ ರಿಚಾರ್ಜ್ ಮಾಡಿಸಬೇಕಾಗುತ್ತದೆ. 

ಇದನ್ನೂ ಓದಿ : WhatsApp ಕರೆಗಳನ್ನು ರೆಕಾರ್ಡ್ ಮಾಡಲು ಇದು ಸುಲಭ ವಿಧಾನ, ಇಲ್ಲಿದೆ ಸಂಪೂರ್ಣ ಪ್ರಕ್ರಿಯೆ

ಮೊದಲ ಸಿಮ್‌ಗೆ ಹಣ ಪಾವತಿಸಬೇಕಾಗಿತ್ತು :
ಈ ಹಿಂದೆ ಕಂಪನಿಯು 4 ಜಿ ಸಿಮ್ ಕಾರ್ಡ್‌ಗೆ (Sim card) 20 ರೂ ಪಾವತಿಸಬೇಕಿತ್ತು. ಆದರೆ ಈಗ ಹೊಸ ಬಳಕೆದಾರರನ್ನು ಆಕರ್ಷಿಸಲು ಕಂಪನಿ ಈ ಹೆಜ್ಜೆ ಇಟ್ಟಿದೆ.  

ಈ ರೀತಿ 4 ಜಿ ಸಿಮ್ ಉಚಿತವಾಗಿ ಪಡೆಯಬಹುದು :
ಇದಕ್ಕಾಗಿ ಗ್ರಾಹಕರು ಬಿಎಸ್‌ಎನ್‌ಎಲ್ ಗ್ರಾಹಕ ಸೇವಾ ಕೇಂದ್ರಕ್ಕೆ ಭೇಟಿ ನೀಡಬೇಕಾಗುತ್ತದೆ. ಇಲ್ಲಿ ನೀವು ಐಡೆಂಟಿಟಿ ಪ್ರೂಫ್ ಮತ್ತು ಅಡ್ರೆಸ್ಸ್ ಪ್ರೂಫ್ ಗಳನ್ನೂ (address proof) ಸಲ್ಲಿಸಬೇಕು. ಇದಲ್ಲದೆ, ನಿಮ್ಮ ಹತ್ತಿರದ ಬಿಎಸ್‌ಎನ್‌ಎಲ್ ರೀಟೇಲ್ ಅಂಗಡಿಗೂ ಭೇಟಿ ನೀಡಬಹುದು. ಎಲ್ಲಕ್ಕಿಂತ ಮುಖ್ಯವಾಗಿ, ಈ ಆಫರ್ ಕೇರಳ ವಲಯದಲ್ಲಿ ಮಾತ್ರ ಲಭ್ಯವಿದೆ. 

ಇದನ್ನೂ ಓದಿ : YouTube Ad Blocker: ಎರಡೇ ನಿಮಿಷಗಳಲ್ಲಿ Block ಆಗುತ್ತದೆ ಎಲ್ಲಾ ಜಾಹೀರಾತು, ನಿರಂತರವಾಗಿರುತ್ತದೆ ವಿಡಿಯೋ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News