ಕೇವಲ 7 ರೂಪಾಯಿಗಳ ದೈನಂದಿನ ವೆಚ್ಚದಲ್ಲಿ ದೀರ್ಘ ವ್ಯಾಲಿಡಿಟಿ ಯೋಜನೆ ನೀಡಿದ ಬಿ‌ಎಸ್‌ಎಲ್‌ಎನ್

ದೇಶದ ಸರ್ಕಾರಿ ಟೆಲಿಕಾಂ ಸಂಸ್ಥೆ ಮತ್ತೊಮ್ಮೆ ಕಡಿಮೆ ಬೆಲೆಯಲ್ಲಿ ದೀರ್ಘಾವಧಿ ಪ್ಲಾನ್ ಬಿಡುಗಡೆ ಮಾಡುವ ಮೂಲಕ ಖಾಸಗಿ ಟೆಲಿಕಾಂ ಕಂಪನಿಗಳ ನಿದ್ದೆಗೆಡಿಸಿದೆ. 

Written by - Yashaswini V | Last Updated : Oct 1, 2024, 11:49 AM IST
  • ಕಡಿಮೆ ಬೆಲೆಯಲ್ಲಿ ಜಬರ್ದಸ್ತ್ ಪ್ಲಾನ್ ಪರಿಚಯಿಸಿದ ಬಿ‌ಎಸ್‌ಎನ್‌ಎಲ್
  • ಬಿ‌ಎಸ್‌ಎನ್‌ಎಲ್ ಅಗ್ಗದ ಪ್ರಿಪೇಯ್ಡ್ ಯೋಜನೆ
  • ನಿತ್ಯ 3ಜಿ‌ಬಿ ಡೇಟಾ ಜೊತೆಗೆ ಸಿಗುತ್ತೆ ಇಷ್ಟೆಲ್ಲಾ ಪ್ರಯೋಜನ
ಕೇವಲ 7 ರೂಪಾಯಿಗಳ ದೈನಂದಿನ ವೆಚ್ಚದಲ್ಲಿ ದೀರ್ಘ ವ್ಯಾಲಿಡಿಟಿ ಯೋಜನೆ ನೀಡಿದ ಬಿ‌ಎಸ್‌ಎಲ್‌ಎನ್  title=

BSNL Cheapest Recharge Plan: ಏರ್‌ಟೆಲ್, ಜಿಯೋ, ವಿಐಗೆ ಟಕ್ಕರ್ ನೀಡಿರುವ ಬಿ‌ಎಸ್‌ಎನ್‌ಎಲ್ ಅಗ್ಗ ರಿಚಾರ್ಜ್ ಯೋಜನೆಯನ್ನು ಪರಿಚಯಿಸಿದ್ದು ದೈನಂದಿನ ಕೇವಲ 7 ರೂಪಾಯಿ ವೆಚ್ಚದಲ್ಲಿ ಬರೋಬ್ಬರಿ 252GB ಡೇಟಾ ಸೌಲಭ್ಯವನ್ನು ಒದಗಿಸುತಿದೆ. 

ಕಳೆದೆರಡು ತಿಂಗಳುಗಳಿಂದ ಬಿ‌ಎಸ್‌ಎನ್‌ಎಲ್ ಗ್ರಾಹಕರ ಸಂಖ್ಯೆ ಗಮನಾರ್ಹವಾಗಿ ಹೆಚ್ಚಳವಾಗಿದೆ.  TRAI ನ ಇತ್ತೀಚಿನ ವರದಿಯ ಪ್ರಕಾರ, ಬಿ‌ಎಸ್‌ಎನ್‌ಎಲ್ ಗೆ ಆಗಸ್ಟ್‌ನಲ್ಲಿ 3.5 ಲಕ್ಷ ಹೊಸ ಬಳಕೆದಾರರು ಸೇರ್ಪಡೆಗೊಂಡಿದ್ದಾರೆ. ಇನ್ನಷ್ಟು ಬಳಕೆದಾರರನ್ನು ತನ್ನತ್ತ ಆಕರ್ಷಿಸಲು ಯೋಜನೆ ರೂಪಿಸಿರುವ ಬಿ‌ಎಸ್‌ಎನ್‌ಎಲ್ ಕಡಿಮೆ ವೆಚ್ಚದಲ್ಲಿ ದೀರ್ಘ ವ್ಯಾಲಿಡಿಟಿ ಯೋಜನೆ ಪರಿಚಯಿಸಿದೆ. 

ಇದನ್ನೂ ಓದಿ- ಈ ಆಫರ್ ಮತ್ತೆ ಸಿಗಲ್ಲ: ತಿಂಗಳಿಗೆ ಕೇವಲ 400 ರೂ. ಪಾವತಿಸಿ 5ಜಿ ಫೋನ್ ಖರೀದಿಸಿ 

ಬಿ‌ಎಸ್‌ಎನ್‌ಎಲ್ 84 ದಿನಗಳ ಅಗ್ಗದ ರಿಚಾರ್ಜ್ ಪ್ಲಾನ್ (BSNL 84 Days Cheap Recharge Plan): 
ಬಿ‌ಎಸ್‌ಎನ್‌ಎಲ್ ನ 84 ದಿನಗಳ ಅಗ್ಗದ ರಿಚಾರ್ಜ್ ಪ್ಲಾನ್ ನಲ್ಲಿ ದೈನಂದಿನ್ ಕೇವಲ 7 ರೂಪಾಯಿ ಖರ್ಚು ಮಾಡಿದ್ರೆ ಒಟ್ಟು 252 GB ಡೇಟಾ ಸೌಲಭ್ಯ ಸಿಗಲಿದೆ. ಅಷ್ಟೇ ಅಲ್ಲ, ಇದರಲ್ಲಿ ಇನ್ನೂ ಕೆಲವು ಪ್ರಯೋಜನಗಳು ಕೂಡ ಲಭ್ಯವಾಗಲಿವೆ.   

ಇದನ್ನೂ ಓದಿ- ಅನಿಯಮಿತ ಕರೆ, ಡೇಟಾ, ಜಿಯೋ ಸಿನಿಮಾ ಸೇರಿದಂತೆ ಇನ್ನೂ ಹೆಚ್ಚಿನ ಲಾಭ ಬೆಲೆ 200 ರೂ.ಗಿಂತಲೂ ಕಡಿಮೆ!

ಬಿ‌ಎಸ್‌ಎನ್‌ಎಲ್ 84 ದಿನಗಳ ರಿಚಾರ್ಜ್ ಪ್ಲಾನ್ ಬೆಲೆ (BSNL 84 Days Recharge Plan Price): 
ಈ ಬಿ‌ಎಸ್‌ಎನ್‌ಎಲ್ 84 ದಿನಗಳ ರಿಚಾರ್ಜ್ ಪ್ಲಾನ್ ಬೆಲೆ 599 ರೂ.ಗಳು ಮಾತ್ರ. ಎಂದರೆ ದಿನಕ್ಕೆ ಕೇವಲ 7 ರೂಪಾಯಿಗಳಷ್ಟೇ. ಈ ಯೋಜನೆಯಲ್ಲಿ ಬಳಕೆದಾರರಿಗೆ ಅನಿಯಮಿತ ಕರೆ, ಉಚಿತ ಡೇಟಾ ಮತ್ತು ಎಸ್‌ಎಮ್‌ಎಸ್ ನಂತಹ ಪ್ರಯೋಜನಗಳು ಲಭ್ಯವಿವೆ. ಈ ಯೋಜನೆಯಲ್ಲಿ, ಬಳಕೆದಾರರು ಪ್ರತಿದಿನ 3GB ಅಂದರೆ ಒಟ್ಟು 252GB ಹೈ ಸ್ಪೀಡ್   ಡೇಟಾ ಆನಂದಿಸಬಹುದು. ದೈನಂದಿನ ಡೇಟಾ ಮಿತಿ ಖಾಲಿಯಾದ ಬಳಿಕ 40Kbps ವೇಗದಲ್ಲಿ ಅನಿಯಮಿತ ಇಂಟರ್ನೆಟ್ ಸೇವೆಯೂ ಲಭ್ಯವಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News