ಬಿಎಸ್‌ಎನ್ಎಲ್ ಗ್ರಾಹಕರಿಗೆ ಬಂಪರ್ ಕೊಡುಗೆ: 160 ದಿನಕ್ಕೆ 320GB ಡೇಟಾ ಜೊತೆ ಸಿಗುತ್ತೆ ಇಷ್ಟೆಲ್ಲಾ ಲಾಭ!

BSNL Recharge Plan: ಮುಖೇಶ್ ಅಂಬಾನಿಯವರ ರಿಲಯನ್ಸ್ ಜಿಯೋಗೆ ಟಕ್ಕರ್ ನೀಡಿರುವ ಬಿ‌ಎಸ್‌ಎನ್‌ಎಲ್ ತನ್ನ ಗ್ರಾಹಕರಿಗಾಗಿ 160ದಿನಗಳ ವ್ಯಾಲಿಡಿಟಿಯೊಂದಿಗೆವಿಶೇಷ ಯೋಜನೆಯನ್ನು ಘೋಷಿಸಿದೆ. 320 ಜಿಬಿ ಡೇಟಾ, ಅನ್‌ಲಿಮಿಟೆಡ್ ಕರೆ ಸೌಲಭ್ಯದೊಂದಿಗೆ ಇದರಲ್ಲಿ ಇನ್ನೂ ಹಲವು ಪ್ರಯೋಜನಗಳು ಲಭ್ಯವಿವೆ. 

Written by - Yashaswini V | Last Updated : Aug 20, 2024, 08:28 AM IST
  • ಜಿಯೋ ಸೇರಿದಂತೆ ಇತರ ಟೆಲಿಕಾಂ ಪೈಪೋಟಿ ನಡುವೆ ಬಿಎಸ್‌ಎನ್ಎಲ್ ಭರ್ಜರಿ ಆಫರ್
  • ತನ್ನ ಗ್ರಾಹಕರಿಗೆ ಭರ್ಜರಿ ಆಫರ್ ಘೋಷಿಸಿರುವ ಸರ್ಕಾರಿ ಸ್ವಾಮ್ಯದ ಕಂಪನಿ ಬಿ‌ಎಸ್‌ಎನ್‌ಎಲ್
  • 160 ದಿನ ವ್ಯಾಲಿಡಿಟಿಯೊಂದಿಗೆ 320 ಜಿಬಿ ಉಚಿತ ಡೇಟಾ, ಅನಿಯಮಿತಿ ಕರೆ ಸೇರಿದಂತೆ ಹಲವು ಸೌಲಭ್ಯ ನೀಡಿರುವ ಬಿ‌ಎಸ್‌ಎನ್‌ಎಲ್
ಬಿಎಸ್‌ಎನ್ಎಲ್ ಗ್ರಾಹಕರಿಗೆ ಬಂಪರ್ ಕೊಡುಗೆ: 160 ದಿನಕ್ಕೆ 320GB ಡೇಟಾ ಜೊತೆ ಸಿಗುತ್ತೆ ಇಷ್ಟೆಲ್ಲಾ ಲಾಭ!  title=

BSNL Bumper Offer: ದುಬಾರಿ ರಿಚಾರ್ಜ್ ಪ್ಲಾನ್‌ಗಳಿಂದ ಬೇಸತ್ತಿರುವ ಮೊಬೈಲ್ ಗ್ರಾಹಕರಿಗೆ ಪರಿಹಾರ ನೀಡಿರುವ ಭಾರತದ ಸರ್ಕಾರಿ ಟೆಲಿಕಾಂ ಸಂಸ್ಥೆ ಬಿ‌ಎಸ್‌ಎನ್‌ಎಲ್ ಇದೀಗ 4ಜಿ ಸೇವೆಯೊಂದಿಗೆ ಭರ್ಜರಿ ವಿಶೇಷ ಆಫರ್  (BSNL 4G Special Offer) ಕೂಡ ಘೋಷಿಸಿದೆ. ತನ್ನ  ಬಳಕೆದಾರರಿಗೆ ಹಲವಾರು ಹೊಸ ಪ್ರಿಪೇಯ್ಡ್ ರೀಚಾರ್ಜ್ ಯೋಜನೆಗಳನ್ನು ಪರಿಚಯಿಸಿರುವ ಬಿ‌ಎನ್‌ಎಸ್‌ಎಲ್ ಮುಖೇಶ್ ಅಂಬಾನಿಯವರ (Mukesh Ambani) ರಿಲಯನ್ಸ್ ಜಿಯೋಗೆ ಕಠಿಣ ಸ್ಪರ್ಧೆ ಒಡ್ಡುತ್ತಿದೆ. 

ವಾಸ್ತವವಾಗಿ, ಜುಲೈನಲ್ಲಿ ರಿಲಯನ್ಸ್ ಜಿಯೋ (Reliance Jio), ಏರ್ಟೆಲ್ (Airtel), ವೋಡಾಫೋನ್-ಐಡಿಯಾ (Vodafone-Idea) ಕಂಪನಿಗಳು ತಮ್ಮ ಪ್ರಿಪೇಯ್ಡ್ ಯೋಜನೆಗಳ ಬೆಲೆಗಳಲ್ಲಿ ಏರಿಕೆಯನ್ನು ಘೋಷಿಸಿದ್ದವು. ಇದಾದ ಬಳಿಕ ಹಲವು ಬಳಕೆದಾರರು ಈ ಖಾಸಗಿ ಟೆಲಿಕಾಂಗಳಿಂದ ಸರ್ಕಾರಿ ಸ್ವಾಮ್ಯದ ಬಿ‌ಎಸ್‌ಎನ್‌ಎಲ್ ಗೆ ತಮ್ಮ ಸಂಖ್ಯೆಯನ್ನು ಪೋರ್ಟ್ ಮಾಡಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ. ಈ ಸಂದರ್ಭದಲ್ಲಿ ಗ್ರಾಹಕರಿಗೆ ಭರ್ಜರಿ ಆಫರ್ ನೀಡಿರುವ ಬಿ‌ಎಸ್‌ಎನ್‌ಎಲ್ ಮತ್ತಷ್ಟು ಗ್ರಾಹಕರನ್ನು ತನ್ನತ್ತ ಆಕರ್ಷಿಸುವ ಗುರಿ ಹೊಂದಿದೆ ಎಂದು ತಿಳಿದುಬಂದಿದೆ. 

160 ದಿನ 320 ಜಿಬಿ ಡೇಟಾ, ಅನ್‌ಲಿಮಿಟೆಡ್ ಕಾಲ್:  ಗ್ರಾಹಕರಿಗೆ ಬಿ‌ಎಸ್‌ಎನ್‌ಎಲ್ ಭರ್ಜರಿ ಆಫರ್!
ಗ್ರಾಹಕರನ್ನು ತನ್ನತ್ತ ಆಕರ್ಷಿಸಲು ಬಿ‌ಎಸ್‌ಎನ್‌ಎಲ್ ವಿಶೇಷ ರಿಚಾರ್ಜ್ ಪ್ಲಾನ್ (BSNL Special Recharge Plan) ಘೋಷಿಸಿದೆ.  ರೂ. 997 ಬೆಲೆಯ ಈ ಪ್ಲಾನ್160 ದಿನಗಳ ಮಾನ್ಯತೆಯೊಂದಿಗೆ ಲಭ್ಯವಾಗಲಿದ್ದು, ಇದರಲ್ಲಿ ಪ್ರತಿದಿನ ದಿನಕ್ಕೆ 2GB ಹೈ-ಸ್ಪೀಡ್ ಡೇಟಾ ಎಂದರೆ ಒಟ್ಟು 320 ಜಿ‌ಬಿ 4ಜಿ ಡೇಟಾವನ್ನು ಗ್ರಾಹಕರು ಆನಂದಿಸಬಹುದು. ಇದಲ್ಲದೆ, ಪ್ರತಿದಿನ 100 ಫ್ರೀ ಎಸ್‌ಎಮ್‌ಎಸ್ ಜೊತೆಗೆ  ಇನ್ನೂ ಕೆಲವು ಸೌಲಭ್ಯಗಳು  ಕೂಡ ಲಭ್ಯವಾಗಲಿವೆ. 

ಇದನ್ನೂ ಓದಿ- ಇನ್ಮುಂದೆ ಫೇಕ್ ಕಾಲ್ ಮಾಡುವವರ ನಂಬರ್ ಸೇರುತ್ತೆ ಬ್ಲಾಕ್ ಲಿಸ್ಟ್: ಸೆಪ್ಟೆಂಬರ್ 01 ಜಾರಿಯಾಗಲಿದೆ ಹೊಸ ನಿಯಮ

ಬಿ‌ಎಸ್‌ಎನ್‌ಎಲ್ 160 ದಿನಗಳ ಯೋಜನೆಯಲ್ಲಿ ಗ್ರಾಹಕರು ಹೆಚ್ಚುವರಿಯಾಗಿ, ದೇಶದ ಯಾವುದೇ ನೆಟ್‌ವರ್ಕ್‌ಗೆ ಅನಿಯಮಿತ ಕರೆಗಳ ಜೊತೆಗೆ ಭಾರತದಾದ್ಯಂತ ಉಚಿತ ರೋಮಿಂಗ್, ಜಿಂಗ್ ಮ್ಯೂಸಿಕ್  ಮತ್ತು  ಬಿ‌ಎಸ್‌ಎನ್‌ಎಲ್ ಟ್ಯೂನ್‌ಗಳಂತಹ ಹಲವಾರು ಮೌಲ್ಯವರ್ಧಿತ ಸೇವೆಗಳನ್ನು ಕೂಡ ಆನಂದಿಸಬಹುದು. 

ಇದನ್ನೂ ಓದಿ-  ಎಸ್‌ಬಿ‌ಐ ಗ್ರಾಹಕರಿಗೆ ಗುಡ್ ನ್ಯೂಸ್: ನೆಟ್‌ಬ್ಯಾಂಕಿಂಗ್, ಆ್ಯಪ್‌ ಬಳಸದವರಿಗೂ ಸಿಗುತ್ತೆ ಈ ಸೌಲಭ್ಯ

ಶೀಘದಲ್ಲೇ ಬಿ‌ಎಸ್‌ಎನ್‌ಎಲ್ 5ಜಿ ಸೇವೆ: 
ಸರ್ಕಾರಿ ಟೆಲಿಕಾಂ ಕಂಪನಿ ಬಿ‌ಎಸ್‌ಎನ್‌ಎಲ್ ಈಗ ದೇಶದ ಎಲ್ಲಾ ಟೆಲಿಕಾಂ ವಲಯಗಳಲ್ಲಿ 4G ಸೇವೆಗಳನ್ನು ಪ್ರಾರಂಭಿಸಲು ಭರ್ಜರಿ ತಯಾರಿ ನಡೆಸುತ್ತಿದೆ. ಕೆಲವು ರಾಜ್ಯಗಳಲ್ಲಿ, ಈಗಾಗಲೇ ಬಿ‌ಎಸ್‌ಎನ್‌ಎಲ್ 4ಜಿ ಸೇವೆಯನ್ನು ಹೊರತರಲಾಗಿದೆ. ಲಭ್ಯವಿರುವ ಮಾಹಿತಿಯ ಪ್ರಕಾರ, ಶೀಘ್ರದಲ್ಲೇ ಬಿ‌ಎಸ್‌ಎನ್‌ಎಲ್ 5ಜಿ ಸೇವೆಗಳನ್ನು ಕೂಡ ಪರಿಚಯಿಸುವ ನಿರೀಕ್ಷೆಯಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News