ಬ್ರೆಝಾ, ಪಂಚ್, ಕ್ರೆಟಾ ಇದಾವುದೂ ಅಲ್ಲ, ಅತಿ ಹೆಚ್ಚು ಮಾರಾಟವಾಗುವ ಎಸ್‌ಯುವಿ ಯಾವುದು ಗೊತ್ತಾ!

Top 5 Best Selling SUV Cars in India: ದೇಶಾದ್ಯಂತ ಎಸ್‌ಯುವಿ ಕಾರುಗಳ ಜನಪ್ರಿಯತೆ ನಿರಂತರವಾಗಿ ಹೆಚ್ಚಾಗುತ್ತಿದೆ. ನೀವು ಹೊಸ ಕಾರ್ ಕೊಳ್ಳುವ ಬಗ್ಗೆ ಯೋಜಿಸುತ್ತಿದ್ದರೆ ಸೆಪ್ಟೆಂಬರ್ ತಿಂಗಳಿನಲ್ಲಿ ಅತಿಹೆಚ್ಚು ಮಾರಾಟವಾದ ಎಸ್‌ಯುವಿ ಕಾರುಗಳ ಬಗ್ಗೆ ಇಲ್ಲಿದೆ ಮಹತ್ವದ ಮಾಹಿತಿ. 

Written by - Yashaswini V | Last Updated : Nov 1, 2023, 12:53 PM IST
  • ಭಾರತದಲ್ಲಿ ದಿನೇ ದಿನೇ ಎಸ್‌ಯುವಿ ಕಾರುಗಳ ಜನಪ್ರಿಯತೆ ಹೆಚ್ಚಾಗುತ್ತಿದೆ.
  • ಭಾರತೀಯ ಮಾರುಕಟ್ಟೆಯಲ್ಲಿ ಎಸ್‌ಯುವಿಗಳು ಹೆಚ್ಚು ಮಾರಾಟವಾಗುತ್ತಿವೆ.
  • ಸೆಪ್ಟೆಂಬರ್ 2023ರಲ್ಲಿ ಬ್ರೆಝಾ, ಪಂಚ್ ಮತ್ತು ಕ್ರೆಟಾದಂತಹ ಎಲ್ಲಾ ಕಾರುಗಳನ್ನು ಹಿಂಡಿಕ್ಕಿ ಟಾಟಾದ ಎಸ್‌ಯುವಿ ಅತಿ ಹೆಚ್ಚು ಮಾರಾಟವಾಗಿದೆ.
ಬ್ರೆಝಾ, ಪಂಚ್, ಕ್ರೆಟಾ ಇದಾವುದೂ ಅಲ್ಲ, ಅತಿ ಹೆಚ್ಚು ಮಾರಾಟವಾಗುವ ಎಸ್‌ಯುವಿ ಯಾವುದು ಗೊತ್ತಾ! title=

Top 5 Best Selling SUV Cars in India: ಇತ್ತೀಚಿನ ದಿನಗಳಲ್ಲಿ ಭಾರತದಲ್ಲಿ ಎಸ್‌ಯುವಿ ಕಾರುಗಳ ಜನಪ್ರಿಯತೆ ಹೆಚ್ಚಾಗುತ್ತಿದೆ. ಭಾರತೀಯ ಮಾರುಕಟ್ಟೆಯಲ್ಲಿ ಜನಪ್ರಿಯ ಕಂಪನಿಗಳ ಎಸ್‌ಯುವಿಗೆ ಅತಿ ಹೆಚ್ಚು ಬೇಡಿಕೆ ಕೂಡ ಇದೆ. ಸೆಪ್ಟೆಂಬರ್ ತಿಂಗಳಿನಲ್ಲಿ ಬ್ರೆಝಾ, ಪಂಚ್, ಕ್ರೆಟಾದಂತಹ ಕಂಪನಿಗಳನ್ನು ಹಿಂದಿಕ್ಕಿ ಟಾಟಾ ನೆಕ್ಸಾನ್ ಎಸ್‌ಯುವಿ ಅತಿ ಹೆಚ್ಚು ಮಾರಾಟವಾಗಿದೆ.

ಲಭ್ಯವಿರುವ ಅಂಕಿ ಅಂಶಗಳ ಪ್ರಕಾರ,  2023ರ ಸೆಪ್ಟೆಂಬರ್‌ನಲ್ಲಿ ಒಟ್ಟು 15,325 ಯುನಿಟ್‌ ಟಾಟಾ ನೆಕ್ಸಾನ್ ಎಸ್‌ಯುವಿಗಳು ಮಾರಾಟವಾಗಿದ್ದು ಇದು ದೇಶದಲ್ಲೇ ಅತಿ ಹೆಚ್ಚು ಮಾರಾಟವಾದ ಎಸ್‌ಯುವಿ ಆಗಿದೆ. ಗಮನಾರ್ಹವಾಗಿ,  ಸೆಪ್ಟೆಂಬರ್ 2022 ರಲ್ಲಿ ನೆಕ್ಸಾನ್‌ನ 14,518 ಯುನಿಟ್‌ಗಳು ಮಾರಾಟವಾಗಿದ್ದವು. ಎಂದರೆ ಕಳೆದ ವರ್ಷ ಸೆಪ್ಟೆಂಬರ್ ತಿಂಗಳಿಗೆ ಹೋಲಿಸಿದರೆ ಈ ವರ್ಷ ನೆಕ್ಸಾನ್ ಮಾರಾಟದಲ್ಲಿ 6% ಹೆಚ್ಚಳವಾಗಿದೆ. 

ಇದನ್ನೂ ಓದಿ- Komaki ಫೆಸ್ಟೀವ್ ಧಮಾಕ! ಈ ಎಲೆಕ್ಟ್ರಿಕ್ ಸ್ಕೂಟರ್‌ನಲ್ಲಿ ಸಿಗಲಿದೆ ವಿಶೇಷ ಕೊಡುಗೆ

ಎರಡನೇ ಸ್ಥಾನದಲ್ಲಿದೆ ಮಾರುತಿಯ ಈ ಕಾರ್: 
ಟಾಟಾ ನೆಕ್ಸಾನ್ ಹೊರತುಪಡಿಸಿ ಸೆಪ್ಟೆಂಬರ್‌ನಲ್ಲಿ ಹೆಚ್ಚು ಮಾರಾಟವಾದ ಮತ್ತೊಂದು ಕಾರ್ ಎಂದರೆ ಮಾರುತಿ ಸುಜುಕಿ ಬ್ರೆಝಾ. ಸೆಪ್ಟೆಂಬರ್ 2023 ರಲ್ಲಿ ಒಟ್ಟು 15,001 ಯುನಿಟ್‌ಗಳನ್ನು ಮಾರಾಟ ಮಾಡಿರುವ ಮಾರುತಿ ಸುಜುಕಿಯ ಬ್ರೆಝಾ ಕಾರ್ ಟಾಪ್ 5 ಎಸ್‌ಯುವಿ ಕಾರುಗಳ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. 

ಇದಲ್ಲದೆ, ಸೆಪ್ಟೆಂಬರ್‌ನಲ್ಲಿ ಒಟ್ಟು 13,036 ಯೂನಿಟ್ ಮಾರಾಟ ಮಾಡಿರುವ ಟಾಟಾ ಪಂಚ್ ಮೂರನೇ ಸ್ಥಾನದಲ್ಲಿದ್ದರೆ, ಹ್ಯುಂಡೈ ಕ್ರೆಟಾ ನಾಲ್ಕನೇ ಅತಿ ಹೆಚ್ಚು ಮಾರಾಟವಾದ ಎಸ್‌ಯುವಿ ಆಗಿದೆ. ಹ್ಯುಂಡೈ ಕ್ರೆಟಾ ಸೆಪ್ಟೆಂಬರ್ ತಿಂಗಳಿನಲ್ಲಿ ಒಟ್ಟು 12,717 ಯುನಿಟ್‌ಗಳನ್ನು ಮಾರಾಟ ಮಾಡಿದೆ. ಗಮನಾರ್ಹವಾಗಿ ಕಳೆದ ವರ್ಷಕ್ಕೆ  ಹೋಲಿಸಿದರೆ (12,866 ಯುನಿಟ್‌ಗಳು) ಈ ವರ್ಷ ಹ್ಯುಂಡೈ ಕ್ರೆಟಾ ಬೇಡಿಕೆಯಲ್ಲಿ ಕೊಂಚ ಇಳಿಕೆಯಾಗಿದೆ. 

ಇದನ್ನೂ ಓದಿ- ಅಗ್ಗದ ಬೆಲೆಯ ಐದು Automatic ಕಾರುಗಳು ! ಯಾವುದನ್ನು ಖರೀದಿಸಿದರೂ ಲಾಭವೇ !

ಭಾರತದಲ್ಲಿ ಅತಿ ಹೆಚ್ಚು ಮಾರಾಟವಾಗುವ ಟಾಪ್ 5 ಎಸ್‌ಯುವಿ ಕಾರುಗಳ ಪಟ್ಟಿಯಲ್ಲಿ ಹ್ಯುಂಡೈ ವೆನ್ಯೂ ಐದನೇ ಸ್ಥಾನದಲ್ಲಿದ್ದು, 2023ರ ಸೆಪ್ಟೆಂಬರ್ ತಿಂಗಳಿನಲ್ಲಿ ಒಟ್ಟು 12,204 ಯುನಿಟ್‌ಗಳನ್ನು ಮಾರಾಟ ಮಾಡಿದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಹ್ಯುಂಡೈ ವೆನ್ಯೂ  ಕಾರುಗಳ ಮಾರಾಟದಲ್ಲಿ 11% ಬೆಳವಣಿಗೆ ಕಂಡು ಬಂದಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News