ಮತ್ತೆ ಬಂತು ಮೆಗಾ ಡಿಸ್ಕೌಂಟ್ ಸೇಲ್ ! ಸಿಗುವುದು 80 ಶೇ. ಡಿಸ್ಕೌಂಟ್ ! iPhone,laptop, ಫೋನ್ ಎಲ್ಲವೂ ಇಲ್ಲಿ ಅಗ್ಗ!

Flipkart Big Billion Days 2023: ವಾಲ್‌ಮಾರ್ಟ್ ಮಾಲೀಕತ್ವದ ಆನ್‌ಲೈನ್ ಶಾಪಿಂಗ್ ವೆಬ್‌ಸೈಟ್, ಈ  ಸೇಲ್ ನಲ್ಲಿ ನೀಡುವ ವಿಶೇಷ ರಿಯಾಯಿತಿಗಳ ಒಂದು ಝಲಕ್ ನೀಡಿದೆ. 

Written by - Ranjitha R K | Last Updated : Sep 25, 2023, 12:16 PM IST
  • ಬಿಲಿಯನ್ ಡೇಸ್ ಸೇಲ್ 2023 ಕ್ಕೆ ತಯಾರಿ
  • ಸೇಲ್ ನಲ್ಲಿ ಆಫರ್ ಗಳ ಸುರಿಮಳೆ
  • ಇಲ್ಲಿರಲಿದೆ ಗ್ಯಾರಂಟಿ ಸೇವಿಂಗ್ ಆಫರ್
ಮತ್ತೆ ಬಂತು ಮೆಗಾ ಡಿಸ್ಕೌಂಟ್ ಸೇಲ್ ! ಸಿಗುವುದು 80 ಶೇ. ಡಿಸ್ಕೌಂಟ್ !  iPhone,laptop, ಫೋನ್ ಎಲ್ಲವೂ ಇಲ್ಲಿ ಅಗ್ಗ!  title=

Flipkart Big Billion Days 2023 : ಹಬ್ಬದ ಋತುವಿನ ಮುಂಚೆಯೇ, ಫ್ಲಿಪ್‌ಕಾರ್ಟ್ ತನ್ನ ಬಿಗ್ ಬಿಲಿಯನ್ ಡೇಸ್ ಸೇಲ್ 2023 ಕ್ಕೆ   ತಯಾರಿ ನಡೆಸುತ್ತಿದೆ. ಈ ಸೇಲ್‌ನಲ್ಲಿ, ಎಲ್ಲಾ ಬ್ರಾಂಡ್‌ಗಳ ಉತ್ಪನ್ನಗಳ ಮೇಲೆ ಭಾರೀ ರಿಯಾಯಿತಿಗಳನ್ನು ನೀಡಲಾಗುವುದು. ವಾಲ್‌ಮಾರ್ಟ್ ಮಾಲೀಕತ್ವದ ಆನ್‌ಲೈನ್ ಶಾಪಿಂಗ್ ವೆಬ್‌ಸೈಟ್, ಈ  ಸೇಲ್ ನಲ್ಲಿ ನೀಡುವ ವಿಶೇಷ ರಿಯಾಯಿತಿಗಳ ಒಂದು ಝಲಕ್ ನೀಡಿದೆ. ಕೆಲವು ಬ್ಯಾಂಕ್ ಕಾರ್ಡ್‌ಗಳನ್ನು ಬಳಸಿದರೆ ಅಥವಾ EMIನಲ್ಲಿ ಪಾವತಿಸುವುದಾದರೆ ದೊಡ್ಡ ಮಟ್ಟದ ರಿಯಾಯಿತಿಗಳನ್ನು ಪಡೆಯಬಹುದು. 

ಸೇಲ್ ನಲ್ಲಿ ಆಫರ್ ಗಳ ಸುರಿಮಳೆ : 
ಮುಂಬರುವ ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇಸ್ ಸೇಲ್ ನ  ಝಲಕ್ ನೀಡಲು ಫ್ಲಿಪ್‌ಕಾರ್ಟ್ ವಿಶೇಷ ಲ್ಯಾಂಡಿಂಗ್ ವೆಬ್‌ ಪೇಜ್ ಅನ್ನು ರಚಿಸಿದೆ. ಈ ವೆಬ್‌ಪುಟದಲ್ಲಿ ನೀಡಲಾದ ಮಾಹಿತಿಯ ಪ್ರಕಾರ, ಗ್ರಾಹಕರು, ICICI ಬ್ಯಾಂಕ್, ಆಕ್ಸಿಸ್ ಬ್ಯಾಂಕ್ ಮತ್ತು ಕೋಟಕ್ ಬ್ಯಾಂಕ್ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್‌ಗಳನ್ನು ಬಳಸಿಕೊಂಡು ಉತ್ಪನ್ನಗಳನ್ನು ಖರೀದಿಸಬಹುದಾಗಿದೆ. ಈ ಕಾರ್ಡ್ ಗಳ ಮೂಲಕ ಖರೀದಿಸಿದರೆ ಖರೀದಿ ಮೇಲೆ  10 ಪ್ರತಿಶತದವರೆಗೆ ತ್ವರಿತ ರಿಯಾಯಿತಿ ಕೂಡಾ ನೀಡಲಾಗುವುದು. 

ಇದನ್ನೂ ಓದಿ : ಶುಕ್ರ ಗ್ರಹದ ರಹಸ್ಯಗಳನ್ನು ಅನಾವರಣಗೊಳಿಸಲಿದೆ ಇಸ್ರೋದ ಮಹತ್ವಾಕಾಂಕ್ಷಿ ಶುಕ್ರಯಾನ-1

ಗ್ಯಾರಂಟಿ  ಸೇವಿಂಗ್ ಆಫರ್ : 
ಇದಲ್ಲದೆ, Paytm ಸೇಲ್ ವೇಳೆ Paytm, UPI ಮತ್ತು Wallet ಅನ್ನು ಬಳಸಿಕೊಂಡು ಮಾಡಿದ ವಹಿವಾಟಿನ ಮೇಲೆ  ಗ್ಯಾರಂಟಿ ಉಳಿತಾಯದ ಪ್ರಯೋಜನ ಕೂಡಾ ನೀಡಲಾಗುತ್ತಿದೆ. ಈ ಸೇಲ್ ನಲ್ಲಿ ಖರೀದಿಸಲು ಆಸಕ್ತಿ ಇದ್ದು, ಹಣವನ್ನು ಆಮೇಲೆ ಪಾವತಿಸುವುದಾದರೆ ಅದಕ್ಕೂ ಅವಕಾಶವಿದೆ. ಇದಕ್ಕಾಗಿ ಫ್ಲಿಪ್‌ಕಾರ್ಟ್ ಪೇ ಲೇಟರ್ ಸೌಲಭ್ಯವನ್ನು ಬಳಸಬಹುದು. ಇದಲ್ಲದೆ, ಉಚಿತ ಮಾಸಿಕ ಕಂತುಗಳು ಮತ್ತು ಹಳೆಯ ವಸ್ತುಗಳ ವಿನಿಮಯ ಹೀಗೆ ನಾನಾ ರೀತಿಯ ರಿಯಾಯಿತಿಗಳಂತಹ ಆಯ್ಕೆಗಳನ್ನು ಕೂಡಾ ನೀಡಲಾಗಿದೆ.  

ಸೇಲ್ ಗೂ ಮುಂಚೆ ಕೆಲವು ದೊಡ್ಡ ರಿಯಾಯಿತಿ ಕೊಡುಗೆಗಳು ಬಹಿರಂಗವಾಗದಂತೆ ರಹಸ್ಯವಾಗಿಡಲು ಫ್ಲಿಪ್‌ಕಾರ್ಟ್ ಯೋಜಿಸಿದೆ. ಅಕ್ಟೋಬರ್ 1 ರಂದು ಐಫೋನ್‌ಗಳ ಡೀಲ್‌ಗಳನ್ನು, ಅಕ್ಟೋಬರ್ 3 ರಂದು Samsung ಸ್ಮಾರ್ಟ್‌ಫೋನ್ ಡೀಲ್‌ಗಳನ್ನು, ಅಕ್ಟೋಬರ್ 7 ರಂದು Xiaomi ಸ್ಮಾರ್ಟ್‌ಫೋನ್ ಡೀಲ್‌ಗಳನ್ನು ಮತ್ತು ಅಕ್ಟೋಬರ್ 5 ರಂದು Pixel ಹ್ಯಾಂಡ್‌ಸೆಟ್ ಡೀಲ್‌ಗಳನ್ನು ಫ್ಲಿಪ್‌ಕಾರ್ಟ್ ಬಹಿರಂಗಪಡಿಸಲಿದೆ. ಆದ್ದರಿಂದ, ಗ್ರಾಹಕರು ಅತ್ಯಾಕರ್ಷಕ ರಿಯಾಯಿತಿಗಳ ಬಗ್ಗೆ ತಿಳಿಯಲು ಈ ದಿನಾಂಕಗಳವರೆಗೆ ಕಾಯಬೇಕಾಗುತ್ತದೆ. 

ಇದನ್ನೂ ಓದಿ : ಜೀ ಮೇಲ್ ಬಳಕೆದಾರರಿಗೊಂದು ಗುಡ್ ನ್ಯೂಸ್!

ಮುಂಬರುವ ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇಸ್ ಮಾರಾಟದ ಸಮಯದಲ್ಲಿ, Apple, Samsung, Google, Realme, Oppo, Xiaomi, ನಥಿಂಗ್, ಮತ್ತು Vivo ನಂತಹ ಜನಪ್ರಿಯ ಬ್ರಾಂಡ್‌ಗಳ ವಿವಿಧ ಸ್ಮಾರ್ಟ್‌ಫೋನ್‌ಗಳ ಮೇಲೆ ಭಾರೀ  ರಿಯಾಯಿತಿ ಆಫರ್ ಗಳನ್ನು ನಿರೀಕ್ಷಿಸಬಹುದು. 80 ಪ್ರತಿಶತದಷ್ಟು ರಿಯಾಯಿತಿಯನ್ನು ಹೊಂದಿರುವ ಕೆಲವು ಸ್ಮಾರ್ಟ್‌ಫೋನ್‌ಗಳ ಬಗ್ಗೆ  ಫ್ಲಿಪ್‌ಕಾರ್ಟ್ ಈಗಾಗಲೇ  ಮಾಹಿತಿ ನೀಡಿದೆ. ಇವುಗಳಲ್ಲಿ Moto G54 5G, Samsung Galaxy F34 5G, Realme C51, Realme 115G, Realme 11x 5G, Infinix Zero 30 5G, Moto G84 5G, Vivo V29e ಮತ್ತು Poco M6 Pro 5G ಸೇರಿವೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News