Mohanlal birthday: 20 ಕೋಟಿ ಮೌಲ್ಯದ ಐಷಾರಾಮಿ ಕಾರು.. ಹಡಗಿನಂತಹ ಬಂಗಲೆ.. ಮೋಹನ್ ಲಾಲ್ ಆಸ್ತಿ ಎಷ್ಟು ಗೊತ್ತಾ!

Mohanlal movies: ಮಲಯಾಳಂನ ನಾಯಕ ನಟ ಮೋಹನ್ ಲಾಲ್ ಇಂದು ತಮ್ಮ 64 ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. 

Written by - Chetana Devarmani | Last Updated : May 21, 2024, 01:57 PM IST
  • ಮಲಯಾಳಂನ ನಾಯಕ ನಟ ಮೋಹನ್ ಲಾಲ್
  • ಇಂದು ಮೋಹನ್ ಲಾಲ್ ಹುಟ್ಟುಹಬ್ಬ
  • ಮೋಹನ್ ಲಾಲ್ ಆಸ್ತಿ ಎಷ್ಟು ಗೊತ್ತಾ?
Mohanlal birthday: 20 ಕೋಟಿ ಮೌಲ್ಯದ ಐಷಾರಾಮಿ ಕಾರು.. ಹಡಗಿನಂತಹ ಬಂಗಲೆ.. ಮೋಹನ್ ಲಾಲ್ ಆಸ್ತಿ ಎಷ್ಟು ಗೊತ್ತಾ!  title=
Mohanlal

Mohanlal Net Worth : ಮಲಯಾಳಂನ ನಾಯಕ ನಟ ಮೋಹನ್ ಲಾಲ್ ಇಂದು ತಮ್ಮ 64 ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಮಮ್ಮುಟ್ಟಿ ಮತ್ತು ಮೋಹನ್ ಲಾಲ್ ಇಬ್ಬರೂ 40 ವರ್ಷಗಳಿಂದ ಮಲಯಾಳಂ ಚಿತ್ರರಂಗವನ್ನು ಆಳುತ್ತಿದ್ದಾರೆ. ಮೋಹನ್‌ಲಾಲ್ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ, ಅವರ ಮುಂಬರುವ ಚಿತ್ರ ಎಂಪುರಾನ್‌ನ ಫಸ್ಟ್ ಲುಕ್ ಪೋಸ್ಟರ್ ಅನ್ನು ಬಿಡುಗಡೆ ಮಾಡಲಾಗಿದೆ. 

ಮಲಯಾಳಂ ಚಿತ್ರರಂಗದ ಪ್ರಮುಖ ನಟ ಮೋಹನ್ ಲಾಲ್ ಕಾಲಿವುಡ್ ನಲ್ಲೂ ಹಲವು ಯಶಸ್ವಿ ಚಿತ್ರಗಳಲ್ಲಿ ನಟಿಸಿದ್ದಾರೆ. ಮಣಿರತ್ನಂ ನಿರ್ದೇಶನದ ಇರುವರ್ ಚಿತ್ರದಲ್ಲಿ ನಟಿಸಿದ್ದಾರೆ. ಮೋಹನ್ ಲಾಲ್ ನೆಲ್ಸನ್ ನಿರ್ದೇಶನದ ರಜನಿಕಾಂತ್ ಅವರ ಜೈಲರ್ ನಲ್ಲಿ ಮಾಸ್ ಲುಕ್‌ನಲ್ಲಿ ಜನರ ಮನಗೆದ್ದರು.

ಮೋಹನ್ ಲಾಲ್ ಸಂಭಾವನೆ: 

ತಮಿಳು ಚಿತ್ರರಂಗದಲ್ಲಿ ರಜನಿಕಾಂತ್, ವಿಜಯ್, ಅಜಿತ್ ಸಂಭಾವನೆ 100 ಕೋಟಿ ದಾಟಿದ್ದರೂ ಮಲಯಾಳಂ ನಟರು ಇನ್ನೂ ಸಂಭಾವನೆ ಏರಿಸಿಲ್ಲ. ಹೊಸ ಚಿತ್ರಗಳಿಗೆ ಮೋಹನ್ ಲಾಲ್ ಗರಿಷ್ಠ 20 ಕೋಟಿ ಸಂಭಾವನೆ ಪಡೆಯುತ್ತಿದ್ದು, ಅಲ್ಲಿ 100 ಕೋಟಿ ಬಜೆಟ್ ನಲ್ಲಿ ದೊಡ್ಡ ಚಿತ್ರಗಳೇ ತಯಾರಾಗುತ್ತಿವೆ ಎನ್ನಲಾಗುತ್ತದೆ.

ಇದನ್ನೂ ಓದಿ: ಸೋಷಿಯಲ್ ಮೀಡಿಯಾದಲ್ಲಿ NTR ಫಾಲೋ ಮಾಡುವ ಏಕೈಕ ವ್ಯಕ್ತಿ ಯಾರು ಗೊತ್ತಾ?

ಈ ವರ್ಷ ಮಲಯಾಳಂನಲ್ಲಿ ಬಿಡುಗಡೆಯಾದ ಪ್ರೇಮಲು, ಮಂಜುಮೇಲ್ ಬಾಯ್ಸ್, ಆಡು ಜೀವಿತಂ, ಆವೇಸಂ ಮುಂತಾದ ಹಲವು ಸಿನಿಮಾಗಳು ಸೂಪರ್ ಡೂಪರ್ ಹಿಟ್ ಆಗಿವೆ. ಆದಾಗ್ಯೂ, ಜನವರಿ 26 ರಂದು ಬಿಡುಗಡೆಯಾದ ಮೋಹನ್ ಲಾಲ್ ಅಭಿನಯದ ಮಲೈಕೊಟ್ಟೈ ವಾಲಿಬನ್ ಫ್ಲಾಪ್ ಆಗಿತ್ತು

ಮೋಹನ್ ಲಾಲ್ ಐಷಾರಾಮಿ ಬಂಗಲೆ: 

ಮೋಹನ್‌ಲಾಲ್ ಅವರು 1988 ರಲ್ಲಿ ಸುಚಿತ್ರಾ ಅವರನ್ನು ವಿವಾಹವಾದರು ಮತ್ತು ಪ್ರಣವ್ ಮತ್ತು ವಿಸ್ಮಯ ಎಂಬ ಇಬ್ಬರು ಮಕ್ಕಳಿದ್ದಾರೆ. ಮೋಹನ್ ಲಾಲ್ ಇತ್ತೀಚೆಗೆ ತಮ್ಮ ಪುತ್ರ ಪ್ರಣವ್ ಅವರನ್ನು ಹೀರೋ ಮಾಡಿದ್ದಾರೆ. ಅವರು ನಟಿಸಿದ ಹೃದಯಂ ಚಿತ್ರ ಸೂಪರ್ ಹಿಟ್ ಆಗಿರುವುದು ಗಮನಾರ್ಹ. 

ಇದನ್ನೂ ಓದಿ: ಗಂಡು ಮಗುವಿಗೆ ಜನ್ಮ ನೀಡಿದ 'ಫೇರ್ ಅಂಡ್ ಲವ್ಲಿ ಬ್ಯೂಟಿ' ಯಾಮಿ ಗೌತಮ್‌

ಅಲ್ಲದೆ ಪ್ರಣವ್ ಹಲವು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಮೋಹನ್ ಲಾಲ್ ಕೊಚ್ಚಿಯಲ್ಲಿ ಐಷಾರಾಮಿ ಮನೆ ಹೊಂದಿದ್ದಾರೆ. ಅಲ್ಲದೆ, ತಿರುವನಂತಪುರದಲ್ಲಿ ದೊಡ್ಡ ಮನೆ ಇದೆ. ಇದಲ್ಲದೇ ಮೋಹನ್ ಲಾಲ್ ಕೊಚ್ಚಿಯಲ್ಲಿ ಸುಮಾರು 50 ಎಕರೆ ಜಮೀನು ಹೊಂದಿದ್ದಾರೆ.

ಮೋಹನ್ ಲಾಲ್ ದುಬಾರಿ ಕಾರುಗಳು: 

ಮೋಹನ್ ಲಾಲ್ ಸುಮಾರು 20 ಕೋಟಿ ಮೌಲ್ಯದ ಕಾರುಗಳನ್ನು ಹೊಂದಿದ್ದಾರೆ ಎನ್ನಲಾಗಿದೆ. ಅವುಗಳಲ್ಲಿ W221 Mercedes Benz S-Class, Mercedes Benz GL350 CDI, Toyota Innova, Toyota Vellfire ಮತ್ತು Ojes ಕೋಚ್ ಕಾರವಾನ್.

ಮೋಹನ್ ಲಾಲ್‌ ಒಟ್ಟು ಆಸ್ತಿ: 

ಸುಮಾರು 44 ವರ್ಷಗಳಿಂದ ಸಿನಿಮಾದಲ್ಲಿ ನಟಿಸುತ್ತಿರುವ ನಟ ಮೋಹನ್ ಲಾಲ್ ಕೇರಳದಲ್ಲಿ ಅತಿ ಹೆಚ್ಚು ಆಸ್ತಿ ಹೊಂದಿರುವ ನಟ ಎಂದು ಹೇಳಲಾಗುತ್ತದೆ. ವರದಿಗಳ ಪ್ರಕಾರ ಬಿಗ್ ಬಾಸ್ ಶೋ ಮತ್ತು ಜಾಹೀರಾತಿನಿಂದ ವರ್ಷಕ್ಕೆ 30 ರಿಂದ 40 ಕೋಟಿ ಗಳಿಸುವ ಮೋಹನ್ ಲಾಲ್ ಅವರ ಒಟ್ಟು ಆಸ್ತಿ 376 ಕೋಟಿ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News