1 ವರ್ಷದಲ್ಲಿ 21 ಲಕ್ಷಕ್ಕೂ ಹೆಚ್ಚು ಮಾರಾಟ; ಅಮೋಘ ವೈಶಿಷ್ಟ್ಯವುಳ್ಳ ಸೂಪರ್-ಡೂಪರ್ ಸ್ಕೂಟಿ! ಬೆಲೆ ಕೂಡ ಭಾರೀ ಅಗ್ಗ

Best Selling Scooters in India: ಇತ್ತೀಚಿನ ದಿನಗಳಲ್ಲಿ ಮಾರುಕಟ್ಟೆಗೆ ಬರುತ್ತಿರುವ ಸ್ಕೂಟರ್‌’ಗಳಲ್ಲಿ, ಗೇರ್ ಬದಲಾಯಿಸುವ ಚಿಂತೆಯೂ ಇಲ್ಲ, ಆದರೆ ಇದೀಗ ಮಾರುಕಟ್ಟೆಯಲ್ಲಿ ಒಂದು ಸ್ಕೂಟರ್ ಇದೆ. ಇದರ ಮುಂದೆ ಬೈಕ್‌’ಗಳ ಬೆಲೆಯೂ ಮರೆಯಾಗುತ್ತಿದೆ. ಈ ಸ್ಕೂಟರ್‌’ನ ಮುಂದೆ ಬಜಾಜ್ ಪಲ್ಸರ್‌’ನಿಂದ ಹೀರೋ ಎಚ್‌ಎಫ್ ಡಿಲಕ್ಸ್‌’ನಂತಹ ಜನಪ್ರಿಯ ಬೈಕ್‌’ಗಳೂ ಕಾಣಿಸದಂತಾಗಿದೆ.

Written by - Bhavishya Shetty | Last Updated : Apr 23, 2023, 03:29 PM IST
    • ಮಾರುಕಟ್ಟೆಗೆ ಬರುತ್ತಿರುವ ಸ್ಕೂಟರ್‌’ಗಳಲ್ಲಿ, ಗೇರ್ ಬದಲಾಯಿಸುವ ಚಿಂತೆಯೂ ಇಲ್ಲ,
    • FY-2023ರಲ್ಲಿ ಅಗ್ರ ಐದು ಹೆಚ್ಚು ಮಾರಾಟವಾದ ಸ್ಕೂಟರ್‌’ಗಳ ಬಗ್ಗೆ ಮಾಹಿತಿ ನೀಡಲಿದ್ದೇವೆ
    • ಹೋಂಡಾ ಆಕ್ಟಿವಾ ಕಳೆದ ಹಣಕಾಸು ವರ್ಷದಲ್ಲಿ ದೇಶದಲ್ಲಿ ಹೆಚ್ಚು ಮಾರಾಟವಾದ ಸ್ಕೂಟರ್ ಆಗಿದೆ
1 ವರ್ಷದಲ್ಲಿ 21 ಲಕ್ಷಕ್ಕೂ ಹೆಚ್ಚು ಮಾರಾಟ; ಅಮೋಘ ವೈಶಿಷ್ಟ್ಯವುಳ್ಳ ಸೂಪರ್-ಡೂಪರ್ ಸ್ಕೂಟಿ! ಬೆಲೆ ಕೂಡ ಭಾರೀ ಅಗ್ಗ title=
Best Selling Scooter

Best Selling Scooter: ದ್ವಿಚಕ್ರ ವಾಹನಗಳ ವಿಷಯಕ್ಕೆ ಬಂದರೆ ಬೈಕ್‌’ಗಳ ಜೊತೆಗೆ ಸ್ಕೂಟರ್‌’ಗಳನ್ನು ಸಹ ಸಾಕಷ್ಟು ಖರೀದಿಸಲಾಗುತ್ತದೆ. ಸ್ಕೂಟರ್‌’ನ ಪ್ರಯೋಜನವೆಂದರೆ ಅದು ನಿಮಗೆ ಆರಾಮದಾಯಕವಾದ ಪ್ರಯಾಣವನ್ನು ನೀಡುತ್ತದೆ ಮತ್ತು ಬೈಕ್‌’ಗಿಂತಲೂ ಉತ್ತಮವಾದ ಶೇಖರಣಾ ಸೌಲಭ್ಯಗಳನ್ನು ಸಹ ಪಡೆಯಬಹುದು.

ಇದನ್ನೂ ಓದಿ: Electricity bill: ಮನೆಯಲ್ಲಿ ಜಸ್ಟ್ 299 ರೂ.ನ ಈ ಸಾಧನ ಅಳವಡಿಸಿದ್ರೆ ಜೀವಮಾನಪೂರ್ತಿ ಕರೆಂಟ್ ಉಚಿತ! ಬಿಲ್ ಬರೋದೇ ಇಲ್ಲ

ಇತ್ತೀಚಿನ ದಿನಗಳಲ್ಲಿ ಮಾರುಕಟ್ಟೆಗೆ ಬರುತ್ತಿರುವ ಸ್ಕೂಟರ್‌’ಗಳಲ್ಲಿ, ಗೇರ್ ಬದಲಾಯಿಸುವ ಚಿಂತೆಯೂ ಇಲ್ಲ, ಆದರೆ ಇದೀಗ ಮಾರುಕಟ್ಟೆಯಲ್ಲಿ ಒಂದು ಸ್ಕೂಟರ್ ಇದೆ. ಇದರ ಮುಂದೆ ಬೈಕ್‌’ಗಳ ಬೆಲೆಯೂ ಮರೆಯಾಗುತ್ತಿದೆ. ಈ ಸ್ಕೂಟರ್‌’ನ ಮುಂದೆ ಬಜಾಜ್ ಪಲ್ಸರ್‌’ನಿಂದ ಹೀರೋ ಎಚ್‌ಎಫ್ ಡಿಲಕ್ಸ್‌’ನಂತಹ ಜನಪ್ರಿಯ ಬೈಕ್‌’ಗಳೂ ಕಾಣಿಸದಂತಾಗಿದೆ. ಈ ಸ್ಕೂಟರ್‌ನ 21 ಲಕ್ಷಕ್ಕೂ ಹೆಚ್ಚು ಯುನಿಟ್‌’ಗಳನ್ನು 1 ವರ್ಷದಲ್ಲಿ ಖರೀದಿಸಲಾಗಿದೆ.

ನಾವಿಂದು ಇಲ್ಲಿ FY-2023ರಲ್ಲಿ ಅಗ್ರ ಐದು ಹೆಚ್ಚು ಮಾರಾಟವಾದ ಸ್ಕೂಟರ್‌’ಗಳ ಬಗ್ಗೆ ಮಾಹಿತಿ ನೀಡಲಿದ್ದೇವೆ.

ಹೋಂಡಾ ಆಕ್ಟಿವಾ ಕಳೆದ ಹಣಕಾಸು ವರ್ಷದಲ್ಲಿ ದೇಶದಲ್ಲಿ ಹೆಚ್ಚು ಮಾರಾಟವಾದ ಸ್ಕೂಟರ್ ಆಗಿದೆ. ವರ್ಷದಲ್ಲಿ 21.49 ಲಕ್ಷ ಯುನಿಟ್‌’ಗಳನ್ನು ಮಾರಾಟವಾಗಿದ್ದರೆ, ಕೇವಲ ಒಂದು ವರ್ಷದ ಹಿಂದೆ 18.08 ಲಕ್ಷ ಯುನಿಟ್‌ಗಳನ್ನು ಮಾರಾಟ ಮಾಡಿತ್ತು. ಅಂದರೆ, ಹೋಂಡಾ ಆಕ್ಟಿವಾ ಮಾರಾಟದಲ್ಲಿ ಶೇ.25ಕ್ಕೂ ಹೆಚ್ಚು ವಾರ್ಷಿಕ ಬೆಳವಣಿಗೆ ದಾಖಲಾಗಿದೆ. ಹೋಂಡಾ ಆಕ್ಟಿವಾ ಬೆಲೆ ರೂ.75 ಸಾವಿರದಿಂದ ಆರಂಭವಾಗಿದೆ.

ಟಿವಿಎಸ್ ಜೂಪಿಟರ್ ಹೋಂಡಾ ಆಕ್ಟಿವಾ ಎರಡನೇ ಅತಿ ಹೆಚ್ಚು ಮಾರಾಟವಾದ ಸ್ಕೂಟರ್ ಆಗಿದೆ, ಜೂಪಿಟರ್ ಮತ್ತು ಆಕ್ಟಿವಾ ಮಾರಾಟ ಸಂಖ್ಯೆಗಳ ನಡುವೆ ವ್ಯತ್ಯಾಸವಿದೆ. ಟಿವಿಎಸ್ ಜುಪಿಟರ್ ಕಳೆದ ಹಣಕಾಸು ವರ್ಷದಲ್ಲಿ 7.29 ಲಕ್ಷ ಯುನಿಟ್‌’ಗಳನ್ನು ಮಾರಾಟ ಮಾಡಿದೆ. ಅದರ ಮಾರಾಟದಲ್ಲಿ ಸುಮಾರು 44 ಪ್ರತಿಶತದಷ್ಟು ಹೆಚ್ಚಳವನ್ನು ಕಂಡಿದೆ. ಮೂರನೇ ಸ್ಥಾನದಲ್ಲಿ ಸುಜುಕಿ ಆಕ್ಸೆಸ್ ಸ್ಕೂಟರ್ ಇದ್ದು, FY-2023 ರಲ್ಲಿ 4.98 ಲಕ್ಷ ಯುನಿಟ್‌’ಗಳನ್ನು ಮಾರಾಟ ಮಾಡಿದೆ. ಸುಜುಕಿ ಆಕ್ಸೆಸ್ ವಾರ್ಷಿಕ 8.30 ಪ್ರತಿಶತ ಬೆಳವಣಿಗೆಯನ್ನು ದಾಖಲಿಸಿದೆ.

ಇದನ್ನೂ ಓದಿ: Photos: ಕ್ರಿಕೆಟಿಗ ರವೀಂದ್ರ ಜಡೇಜಾ ಮನೆ ನೋಡಿದ್ದೀರಾ? ದೇಶದ ಶ್ರೀಮಂತರ ಮನೆಯೂ ಇಲ್ಲ ಇಷ್ಟೊಂದು ಸುಂದರ

TVS Ntorq ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ ಮತ್ತು ಹೋಂಡಾ ಡಿಯೋ ಸ್ಕೂಟರ್ ಐದನೇ ಸ್ಥಾನದಲ್ಲಿದೆ. ಮಾರಾಟದ ಬಗ್ಗೆ ಮಾತನಾಡುವುದಾದರೆ, ಟಿವಿಎಸ್ ಎನ್‌’ಟಾರ್ಕ್ ಕಳೆದ ಹಣಕಾಸು ವರ್ಷದಲ್ಲಿ 2.90 ಲಕ್ಷ ಯುನಿಟ್‌’ಗಳನ್ನು ಮಾರಾಟ ಮಾಡಿದೆ. ಒಟ್ಟಾರೆ ಶೇಕಡಾ 16 ಕ್ಕಿಂತ ಹೆಚ್ಚು ಬೆಳವಣಿಗೆಯನ್ನು ಕಂಡಿದೆ, ಇನ್ನೊಂದೆಡೆ ಹೋಂಡಾ ಡಿಯೋ ಸ್ಕೂಟರ್ ಕಳೆದ ಹಣಕಾಸು ವರ್ಷದಲ್ಲಿ 2.53 ಲಕ್ಷ ಯುನಿಟ್‌ಗಳನ್ನು ಮಾರಾಟ ಮಾಡಿತ್ತು. ಈ ಮೂಲಕ 13 ಪ್ರತಿಶತಕ್ಕಿಂತ ಹೆಚ್ಚಿನ ವಾರ್ಷಿಕ ಬೆಳವಣಿಗೆಯನ್ನು ದಾಖಲಿಸಿದೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News