ಈ ಬೈಕ್ ಗೆ ತಿಂಗಳಿಗೆ 600 ರೂ. ಪೆಟ್ರೋಲ್ ಹಾಕಿ, ತಿಂಗಳ ಪೂರ್ತಿ ಓಡಾಟಕ್ಕೆ ಸಾಕು

ಪೆಟ್ರೋಲ್ ಬೆಲೆ ಏರುವುದು ಅಥವಾ ಇಳಿಯುವುದು ಎರಡೂ ಜನ ಸಾಮಾನ್ಯರ ಕೈಯಲ್ಲಿಲ್ಲ. ಆದರೆ, ಉತ್ತಮ ಮೈಲೇಜ್ ನೀಡುವ ಬೈಕ್ ಖರೀದಿ ನಮ್ಮದೇ ನಿರ್ಧಾರ. 

Written by - Ranjitha R K | Last Updated : Aug 2, 2023, 12:20 PM IST
  • ಭಾರತದಲ್ಲಿ ನಿತ್ಯದ ಓಡಾಟಕ್ಕೆ ಮೋಟಾರ್ ಸೈಕಲ್‌ ಬಳಸುಲಾಗುತ್ತಿದೆ.
  • ಪೆಟ್ರೋಲ್ ಬೆಲೆ ಏರಿಕೆಯಿಂದ ದ್ವಿಚಕ್ರ ವಾಹನ ಸವಾರರು ಪರದಾಡುವಂತಾಗಿದೆ
  • ಬೈಕಿನ ಚಲನೆಯ ವೆಚ್ಚವನ್ನು ಕೇವಲ ಎರಡು ರೀತಿಯಲ್ಲಿ ಕಡಿಮೆ ಮಾಡಬಹುದು.
ಈ ಬೈಕ್ ಗೆ ತಿಂಗಳಿಗೆ 600 ರೂ. ಪೆಟ್ರೋಲ್ ಹಾಕಿ, ತಿಂಗಳ ಪೂರ್ತಿ  ಓಡಾಟಕ್ಕೆ ಸಾಕು  title=

ಬೆಂಗಳೂರು : ಭಾರತದಲ್ಲಿ ನಿತ್ಯದ ಓಡಾಟಕ್ಕೆ ಮೋಟಾರ್ ಸೈಕಲ್‌ ಬಳಸುಲಾಗುತ್ತಿದೆ. ದೈನಂದಿನ ಓಡಾಟದಲ್ಲಿ ಮೋಟಾರ್‌ಸೈಕಲ್‌ಗಳು ಮತ್ತು ಸ್ಕೂಟರ್‌ಗಳು ಪ್ರಮುಖ ಪಾತ್ರ ವಹಿಸುತ್ತಿವೆ. ಆದರೆ, ಪೆಟ್ರೋಲ್ ಬೆಲೆ ಏರಿಕೆಯಿಂದ ದ್ವಿಚಕ್ರ ವಾಹನ ಸವಾರರು ಪರದಾಡುವಂತಾಗಿದೆ. ಸದ್ಯ ಪೆಟ್ರೋಲ್  100 ರೂ. ಆಸುಪಾಸಿನಲ್ಲಿದೆ. ಕೆಲವು ನಗರಗಳಲ್ಲಿ ಇದು 100 ರ ಗಡಿ ದಾಟಿದ್ದೂ ಆಗಿದೆ. ಈ  ಹಿನ್ನೆಲೆಯಲ್ಲಿ ಬೈಕಿನ ಚಲನೆಯ ವೆಚ್ಚವನ್ನು ಕೇವಲ ಎರಡು ರೀತಿಯಲ್ಲಿ ಕಡಿಮೆ ಮಾಡಬಹುದು. ಮೊದಲ ಮಾರ್ಗವೆಂದರೆ ಪೆಟ್ರೋಲ್ ಬೆಲೆಯನ್ನು ಕಡಿಮೆ ಮಾಡುವುದು ಮತ್ತು ಎರಡನೆಯ ಮಾರ್ಗವೆಂದರೆ  ಬೈಕ್ ನ ಮೈಲೇಜ್. ಪೆಟ್ರೋಲ್ ಬೆಲೆ ಏರುವುದು ಅಥವಾ ಇಳಿಯುವುದು ಎರಡೂ ಜನ ಸಾಮಾನ್ಯರ ಕೈಯಲ್ಲಿಲ್ಲ. ಆದರೆ, ಉತ್ತಮ ಮೈಲೇಜ್ ನೀಡುವ ಬೈಕ್ ಖರೀದಿ ನಮ್ಮದೇ ನಿರ್ಧಾರ. 

ಕಡಿಮೆ ಬೆಲೆ ಮತ್ತು ಉತ್ತಮ ಮೈಲೇಜ್ ನೀಡುವ ಬೈಕ್ ಬಗ್ಗೆ ನಾವಿಲ್ಲಿ ಹೇಳುತ್ತಿದ್ದೇವೆ. ಈ ಬೈಕ್ ಬಜಾಜ್ ಪ್ಲಾಟಿನಾ 100 ಆಗಿದೆ. ಇದು ಅತ್ಯುತ್ತಮ ಮೈಲೇಜ್‌ಗೆ ಹೆಸರುವಾಸಿಯಾಗಿದೆ. ಇದು ಇಂಧನ ದಕ್ಷತೆಯ 100 ಸಿಸಿ ಬೈಕ್‌ಗಳಲ್ಲಿ ಒಂದಾಗಿದೆ. ಇದು 75-90 kmpl ಮೈಲೇಜ್ ನೀಡುತ್ತದೆ. ಈ ಬೈಕ್ 1 ಕಿಲೋಮೀಟರ್ ಓಡಿಸಲು ತಗಲುವ ಇಂಧನ ವೆಚ್ಚ ಸುಮಾರು 1 ರಿಂದ 1.33 ರೂ. 

ಇದನ್ನೂ ಓದಿ : Wi-Fiಗೆ ಸಂಬಂಧಿಸಿದ ಈ ಸುರಕ್ಷತಾ ತಪ್ಪುಗಳು ನಿಮ್ಮನ್ನು, ನಿಮ್ಮ ಕುಟುಂಬವನ್ನು ಅಪಾಯಕ್ಕೆ ಸಿಲುಕಿಸಬಹುದು ಎಚ್ಚರ!

ಈಗ ನಿಮ್ಮ ಕಚೇರಿಯು ಮನೆಯಿಂದ 10 ಕಿಮೀ ದೂರದಲ್ಲಿದೆ ಎಂದು ಅಂದುಕೊಂಡರೆ ನೀವು ತಿಂಗಳಲ್ಲಿ 25 ದಿನಗಳ ಬೈಕ್‌ನಲ್ಲಿ ಕಚೇರಿಗೆ ಹೋಗಬೇಕಾಗುತ್ತದೆ. ಇಡೀ ತಿಂಗಳು ಪ್ರಯಾಣದಲ್ಲಿ ಸುಮಾರು 500KM ಬೈಕ್ ಅನ್ನು ಓಡಿಸುತ್ತೀರಿ. ಇದಕ್ಕಾಗಿ ಖರ್ಚು ಮಾಡಬೇಕಾದ ಪೆಟ್ರೋಲ್ ಬೆಲೆ ಸುಮಾರು 600 ರೂ. ಅಂದರೆ, ಇದು ಅತ್ಯಂತ ಮಿತವ್ಯಯದ ಬೈಕು ಎಂದಾಯಿತು. 

ಪ್ಲಾಟಿನಾ 100 102cc ಇಂಧನ ದಕ್ಷತೆಯ DTS-i ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತದೆ. ಇದು 7.9 Bhp ಮತ್ತು 8.3 Nm ಅನ್ನು ಜನರೇಟ್ ಮಾಡುತ್ತದೆ. ಇದು 4-ಸ್ಪೀಡ್ ಗೇರ್ ಬಾಕ್ಸ್ ಅನ್ನು ಪಡೆಯುತ್ತದೆ. ಬೈಕ್ 11 ಲೀಟರ್ ಇಂಧನ ಟ್ಯಾಂಕ್ ಹೊಂದಿದೆ. ಇದರ ಬೆಲೆ  67,808 ರೂಪಾಯಿಯಿಂದ ರಿಂದ ಪ್ರಾರಂಭವಾಗುತ್ತದೆ. ಆದರೆ, ಇದರ 110 ಸಿಸಿ ಡ್ರಮ್ ಬ್ರೇಕ್ ರೂಪಾಂತರದ ಬೆಲೆ 70,400 ರೂ. ಇದು ಕೂಡಾ ಉತ್ತಮ ಮೈಲೇಜ್  ನೀಡುತ್ತದೆ.

ಇದನ್ನೂ ಓದಿ : ಮಳೆಗಾಲದಲ್ಲಿ ಇಷ್ಟೇ ಇರಬೇಕು ಫ್ರಿಜ್ ನ ಟೆಂಪರೇಚರ್! 90% ದಷ್ಟು ಜನರಿಗಿಲ್ಲ ಈ ಮಾಹಿತಿ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News