Women's Day 2024: ಮಹಿಳೆಯರಿಗೆ ಬೆಸ್ಟ್ ಈ ಐದು Electric Scooter : ದರ ಕೂಡಾ ಕಡಿಮೆ

Women's Day 2024: ಮಹಿಳೆಯರಿಗೆ ಬೆಸ್ಟ್ ಎನಿಸುವ ಐದು ಎಲೆಕ್ಟ್ರಿಕ್ ಸ್ಕೂಟರ್ ಗಳ ಮಾಹಿತಿ ಇಲ್ಲಿದೆ. ಈ ಸ್ಕೂಟರ್ ಗಳ ಬೆಲೆ ಕೂಡಾ ಕಡಿಮೆ. 

Written by - Ranjitha R K | Last Updated : Mar 8, 2024, 01:36 PM IST
  • ಇಂದು ಅಂತಾರಾಷ್ಟ್ರೀಯ ಮಹಿಳಾ ದಿನ
  • ಮಹಿಳೆಯರಿಗೆ ಬೆಸ್ಟ್ ಎನಿಸುವ ಐದು ಎಲೆಕ್ಟ್ರಿಕ್ ಸ್ಕೂಟರ್
  • ಇದರ ಬೆಲೆ, ವೈಶಿಷ್ಟ್ಯ ಏನು ಗೊತ್ತಾ ?
Women's Day 2024: ಮಹಿಳೆಯರಿಗೆ ಬೆಸ್ಟ್ ಈ ಐದು Electric Scooter : ದರ ಕೂಡಾ ಕಡಿಮೆ  title=

Women's Day 2024 : ಇಂದು ಪ್ರಪಂಚದಾದ್ಯಂತ ಅಂತಾರಾಷ್ಟ್ರೀಯ ಮಹಿಳಾ ದಿನವನ್ನು ಆಚರಿಸಲಾಗುತ್ತಿದೆ. ಈ ಸಂದರ್ಭದಲ್ಲಿ ಮಹಿಳೆಯರಿಗೆ ಬೆಸ್ಟ್ ಎನಿಸುವ ಐದು ಎಲೆಕ್ಟ್ರಿಕ್ ಸ್ಕೂಟರ್ ಗಳ ಮಾಹಿತಿ ಇಲ್ಲಿದೆ. ಈ ಎಲೆಕ್ಟ್ರಿಕ್ ಸ್ಕೂಟರ್‌ಗಳ ಬೆಲೆ 76,000 ರೂ.ಗಳಿಂದ ಆರಂಭವಾಗಿ 1.29 ಲಕ್ಷ ರೂ.ವರೆಗೆ ಇದೆ. ಈ ಸ್ಕೂಟರ್ ಗಳ ಮಾಹಿತಿ ಇಲ್ಲಿದೆ.  

ಒಡಿಸ್ಸೆ ರೇಸರ್ ಲೈಟ್ V2  (Odysse Racer Lite V2):
ಎಲೆಕ್ಟ್ರಿಕ್ ಸ್ಕೂಟರ್ ಬೆಲೆ  76250 ರೂ. ಇದು ಕಂಪನಿಯ ಆಫರ್ ಪ್ರೈಸ್ ಆಗಿದೆ. ಇದು  ಪವರ್ ಫುಲ್ ಮತ್ತು ವಾಟರ್ ಪ್ರೂಫ್ ಮೋಟಾರ್‌ನೊಂದಿಗೆ ಬರುತ್ತದೆ.ಈ ಸ್ಕೂಟರ್‌ನ ಲಿಥಿಯಂ ಐಯಾನ್ ಬ್ಯಾಟರಿಯು 3 ಗಂಟೆಗಳಲ್ಲಿ ಸಂಪೂರ್ಣವಾಗಿ ಚಾರ್ಜ್ ಆಗುತ್ತದೆ.   ಈ ಎಲೆಕ್ಟ್ರಿಕ್ ಸ್ಕೂಟರ್ ಒಂದೇ ಚಾರ್ಜ್‌ನಲ್ಲಿ 75 ಕಿಮೀ ವ್ಯಾಪ್ತಿಯನ್ನು ನೀಡುತ್ತದೆ. ಸ್ಕೂಟರ್ ಎಲ್ಇಡಿ ಲೈಟ್ ಮತ್ತು ದೊಡ್ಡ ಬೂಟ್ ಸ್ಪೇಸ್ ಹೊಂದಿದೆ. ಇದಲ್ಲದೆ, ಸ್ಕೂಟರ್‌ನಲ್ಲಿ ಆಂಟಿ ಥೆಫ್ಟ್ ಲಾಕ್ ಲಭ್ಯವಿದೆ. ಈ ಸ್ಕೂಟರ್ radiant red, pastel peach, sapphire blue, mint green, pearl white  ಮತ್ತು carbon black ಹೀಗೆ  5 ಬಣ್ಣದ ಆಯ್ಕೆಗಳೊಂದಿಗೆ ಬರುತ್ತದೆ. 

ಇದನ್ನೂ ಓದಿ :  AI ಮಿಷನ್ ಗಾಗಿ ಮುಂದಿನ 5ವರ್ಷಗಳಲ್ಲಿ 10,372 ಕೋಟಿ ಒದಗಿಸಲು ಅನುಮೋದನೆ : ಕೇಂದ್ರ ಸಚಿವ ಸಂಪುಟ

ಆಂಪಿಯರ್ ಮ್ಯಾಗ್ನಸ್ (Ampere Magnus) : 
ಈ ಎಲೆಕ್ಟ್ರಿಕ್ ಸ್ಕೂಟರ್‌ನ ಬೆಲೆ  93900 ರೂ. ಈ ಸ್ಕೂಟರ್ ಯುಎಸ್‌ಬಿ ಪೋರ್ಟ್‌ನೊಂದಿಗೆ ಬರುತ್ತದೆ. ಇದಲ್ಲದೇ ಎಲ್‌ಸಿಡಿ ಸ್ಕ್ರೀನ್, ಕೀ ಲೆಸ್ ಎಂಟ್ರಿ, ಆ್ಯಂಟಿ ಥೆಫ್ಟ್ ಅಲಾರ್ಮ್ ಸೇರಿದಂತೆ ಹಲವು ಫೀಚರ್‌ಗಳು ಸ್ಕೂಟರ್‌ನಲ್ಲಿ ಲಭ್ಯವಿದೆ. ಸ್ಕೂಟರ್ 1.2 kw ಮೋಟಾರ್ ಹೊಂದಿದೆ. ಇದರ ಗರಿಷ್ಠ ವೇಗ ಗಂಟೆಗೆ 55 ಕಿಮೀ ಆಗಿದ್ದು, ಬ್ಯಾಟರಿ ಸಾಮರ್ಥ್ಯವು 30 Ah ಆಗಿದೆ. ಇದು 6-7 ಗಂಟೆಗಳಲ್ಲಿ 0-100 ಪ್ರತಿಶತದಷ್ಟು ಚಾರ್ಜ್ ಆಗುತ್ತದೆ. ಈ ಸ್ಕೂಟರ್ ಒಂದೇ ಚಾರ್ಜ್‌ನಲ್ಲಿ 121 ಕಿಲೋಮೀಟರ್‌ಗಳ ವ್ಯಾಪ್ತಿಯನ್ನು ನೀಡುತ್ತದೆ. 

ಹೀರೋ ಎಲೆಕ್ಟ್ರಿಕ್ ಆಪ್ಟಿಮಾ CX (Hero Electric Optima CX) : 
ಈ ಎಲೆಕ್ಟ್ರಿಕ್ ಸ್ಕೂಟರ್ ಬೆಲೆ 1.06 ಲಕ್ಷ ರೂ. ಸ್ಕೂಟರ್ 550 ವ್ಯಾಟ್ ಮೋಟಾರ್ ಹೊಂದಿದೆ. ಇದು ಗರಿಷ್ಠ 1.2 bhp ಪವರ್ ಜನರೇಟ್ ಮಾಡುತ್ತದೆ. ಈ ಸ್ಕೂಟರ್ 4-5 ಗಂಟೆಗಳಲ್ಲಿ ಸಂಪೂರ್ಣವಾಗಿ ಚಾರ್ಜ್ ಆಗುತ್ತದೆ. ಈ ಸ್ಕೂಟರ್ ಅನ್ನು ಸಿಂಗಲ್ ಮತ್ತು ಡ್ಯುಯಲ್ ಬ್ಯಾಟರಿ ರೂಪಾಂತರಗಳಲ್ಲಿ ಲಭ್ಯವಿದೆ. ಸ್ಕೂಟರ್‌ನ ಡಬಲ್ ಬ್ಯಾಟರಿ ಆವೃತ್ತಿಯು 140 ಕಿಮೀ ವ್ಯಾಪ್ತಿಯನ್ನು ನೀಡುತ್ತದೆ ಮತ್ತು ಅದರ ಗರಿಷ್ಠ ವೇಗ ಗಂಟೆಗೆ 45 ಕಿಮೀ ಆಗಿದೆ. 

ಇದನ್ನೂ ಓದಿ :  Maruti Jimny ಮೇಲೆ 1.5 ಲಕ್ಷ ರೂಪಾಯಿಗಳ ರಿಯಾಯಿತಿ ! ಖರೀದಿಸಲು ಇದೆ ಸುವರ್ಣಾವಕಾಶ

ಓಕಿನಾವಾ ರಿಡ್ಜ್ 100 (Okinawa Ridge 100) : 
ಈ ಎಲೆಕ್ಟ್ರಿಕ್ ಸ್ಕೂಟರ್ ಬೆಲೆ 1,15,311 ರೂ. ಈ ಸ್ಕೂಟರ್ ಮೂರು ಬಣ್ಣ ರೂಪಾಂತರಗಳಲ್ಲಿ ಲಭ್ಯವಿದೆ. ಸ್ಕೂಟರ್ 800 ವ್ಯಾಟ್‌ಗಳ ಶಕ್ತಿಯುತ ಮೋಟಾರ್ ಮತ್ತು ಎಲೆಕ್ಟ್ರಿಕ್ ಅಸಿಸ್ಟ್ ಬ್ರೇಕಿಂಗ್ ವ್ಯವಸ್ಥೆಯನ್ನು ಹೊಂದಿದೆ. ಸ್ಕೂಟರ್‌ನ ಮುಂಭಾಗ ಮತ್ತು ಹಿಂಭಾಗದಲ್ಲಿ ಡ್ರಮ್ ಬ್ರೇಕ್ ಲಭ್ಯವಿದೆ. ಈ ಸ್ಕೂಟರ್ ಒಂದು ಬಾರಿ ಚಾರ್ಜ್ ಮಾಡಿದರೆ 149 ಕಿ.ಮೀ. ವ್ಯಾಪ್ತಿಯನ್ನು ನೀಡುತ್ತದೆ. ಸೆಂಟ್ರಲ್ ಲಾಕಿಂಗ್, ಆಂಟಿ-ಥೆಫ್ಟ್ ಸಿಸ್ಟಮ್, ಜಿಯೋ ಫೆನ್ಸಿಂಗ್, ಪಾರ್ಕಿಂಗ್  ಅಸಿಸ್ಟೆನ್ಸ್ , ಟ್ರ್ಯಾಕಿಂಗ್ ಮತ್ತು ಮಾನಿಟರಿಂಗ್‌ನಂತಹ ಅನೇಕ ಸುಧಾರಿತ ವೈಶಿಷ್ಟ್ಯಗಳು ಸ್ಕೂಟರ್‌ನಲ್ಲಿ ಲಭ್ಯವಿದೆ.ಈ ಸ್ಕೂಟರ್ 5-6 ಗಂಟೆಗಳಲ್ಲಿ ಸಂಪೂರ್ಣವಾಗಿ ಚಾರ್ಜ್ ಆಗುತ್ತದೆ. ಇದನ್ನೂ ಪೂರ್ಣ ಚಾರ್ಜ್ ಮಾಡಿದರೆ 50 kmph ವೇಗವನ್ನು ನೀಡುತ್ತದೆ. 

ಓಲಾ S1 (Ola S1) : 
 ಲಿಸ್ಟ್ ನಲ್ಲಿರುವ ಕೊನೆಯ ಸ್ಕೂಟರ್‌ OLA S1. ಇದರ ಎಕ್ಸ್ ಶೋ ರೂಂ ಬೆಲೆ 1,29,999 ರೂ. ಈ ಸ್ಕೂಟರ್ ಅನೇಕ ಸುಧಾರಿತ ವೈಶಿಷ್ಟ್ಯಗಳನ್ನು ಹೊಂದಿದೆ. ಸ್ಕೂಟರ್ 8.5 kwh ಬ್ಯಾಟರಿ ಹೊಂದಿದೆ. ಸ್ಕೂಟರ್ ರಿಮೋಟ್ ಲಾಕ್ ಅಥವಾ ಅನ್ಲಾಕ್, ಜಿಪಿಎಸ್, ಆಂಟಿ-ಥೆಫ್ಟ್ ಅಲರ್ಟ್ ನಂಥಹ ವೈಶಿಷ್ಟ್ಯಗಳನ್ನು ಹೊಂದಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News