ನವದೆಹಲಿ: Facebook- ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ಜನರು ಹೆಚ್ಚು ಸಕ್ರಿಯರಾಗಿದ್ದಾರೆ. ಲಕ್ಷಾಂತರ ಜನರು ಫೇಸ್ಬುಕ್ ಬಳಸುತ್ತಾರೆ, ಆದರೆ ಫೇಸ್ಬುಕ್ ನಿಮ್ಮ ಮೇಲೆ ಕಣ್ಣಿಟ್ಟಿದೆ ಎಂದು ನಿಮಗೆ ತಿಳಿದಿದೆಯೇ? ನೀವು ಯಾವ ಸಮಯದಲ್ಲಿ ಎಲ್ಲಿದ್ದೀರಿ? ಎಲ್ಲಿಗೆ ಹೋಗುತ್ತಿದ್ದೀರಿ ಎಂದು ಎಲ್ಲವನ್ನೂ ದಾಖಲಿಸುತ್ತದೆ. ಫೇಸ್ಬುಕ್ ನಿಮ್ಮ ಫೋನ್ನ ಜಿಪಿಎಸ್ ನಿರ್ದೇಶಾಂಕಗಳ ಲಾಗ್ ಅನ್ನು ಇಟ್ಟುಕೊಳ್ಳುತ್ತದೆ ಮತ್ತು ಅದನ್ನು ನಿಮ್ಮ "ಸ್ಥಳ ಇತಿಹಾಸ" ಕ್ಕೆ ಅಪ್ಲೋಡ್ ಮಾಡುತ್ತದೆ. ಈ ರೀತಿಯಾಗಿ ಫೇಸ್ಬುಕ್ ಬಳಕೆದಾರರ ಮಾಹಿತಿಯನ್ನು ಪ್ರತಿ ಕ್ಷಣವೂ ಇಡುತ್ತದೆ ಎಂಬುದು ಕೆಲವೇ ಜನರಿಗೆ ಮಾತ್ರ ತಿಳಿದಿದೆ.
ಫೇಸ್ಬುಕ್ ಇತಿಹಾಸ ಎಂದರೇನು?
ಸ್ಥಳ ಇತಿಹಾಸವು ಐಒಎಸ್ ಮತ್ತು ಆಂಡ್ರಾಯ್ಡ್ಗಾಗಿ ಫೇಸ್ಬುಕ್ನ (Facebook) ಅಪ್ಲಿಕೇಶನ್ಗಳ ಮೂಲಕ ನೀವು ಎಲ್ಲಿ ಲಾಗ್ ಇನ್ ಆಗಿದ್ದೀರಿ ಎಂಬುದನ್ನು ತಿಳಿಸುವ ದೈನಂದಿನ ಲಾಗ್ ಆಗಿದೆ. ಡೇಟಾವನ್ನು ಡಿಜಿಟಲ್ ನಕ್ಷೆಯಲ್ಲಿ ಸಂಗ್ರಹಿಸಲಾಗಿದೆ. ನಿಮ್ಮ ಫೇಸ್ಬುಕ್ ಸೆಟ್ಟಿಂಗ್ಗಳ ಮೂಲಕ ಇದನ್ನು ನೋಡಬಹುದು. ನೀವು ಯಾವ ಸಮಯದಲ್ಲಿ ಎಲ್ಲಿದ್ದೀರಿ? ಎಲ್ಲಿಗೆ ಹೋಗುತ್ತಿದ್ದೀರಿ ಎಂಬುದನ್ನು ಇದು ತೋರಿಸುತ್ತದೆ.
ನೀವು ಯಾವ ದಿನಾಂಕದಂದು ಎಲ್ಲಿಗೆ ಪ್ರಯಾಣಿಸಿದ್ದೀರಿ ಎಂದು ಇಲ್ಲಿ ಹುಡುಕಬಹುದು. ಫೇಸ್ಬುಕ್ನ ವೆಬ್ಸೈಟ್ ಮತ್ತು ಆಪ್ಗಳ ಮೂಲಕ ಸೆಟ್ಟಿಂಗ್ ಅನ್ನು ಆಫ್ ಮಾಡಬಹುದು, ಮತ್ತು ನೀವು ಬಯಸಿದಲ್ಲಿ ನಿಮ್ಮ ಲೊಕೇಶನ್ ಇತಿಹಾಸವನ್ನು ಅಳಿಸಲು ನಿಮಗೆ ಅವಕಾಶವಿದೆ. ಇತರ ವಿಷಯಗಳ ಜೊತೆಗೆ, ನೀವು ತೋರಿಸುವ ಜಾಹೀರಾತುಗಳನ್ನು ಉತ್ತಮಗೊಳಿಸಲು ಫೇಸ್ಬುಕ್ ನಿಮ್ಮ ಜಿಪಿಎಸ್ ನಿರ್ದೇಶಾಂಕಗಳನ್ನು ಬಳಸುತ್ತದೆ.
ಇದನ್ನು ಓದಿ- Ulefone: ಫುಲ್ ಚಾರ್ಜ್ನಲ್ಲಿ 4 ದಿನ ಬಳಸಬಹುದಾದ, ನೀರಿನಲ್ಲೂ ಹಾಳಾಗದ ಜಬರ್ದಸ್ತ್ ಸ್ಮಾರ್ಟ್ಫೋನ್
ಕಂಪನಿಯು ತನ್ನ ವೆಬ್ಸೈಟ್ನಲ್ಲಿ, "ನಿಮ್ಮ ಹತ್ತಿರ ಏನಿದೆ ಎಂಬುದನ್ನು ಕಂಡುಹಿಡಿಯಲು ನಿಮಗೆ ಸಹಾಯ ಮಾಡಲು, ಸ್ಥಳ ಇತಿಹಾಸವು (Place History) ನಿಮ್ಮ ಮೊಬೈಲ್ ಸಾಧನದಲ್ಲಿ ಸ್ಥಳ ಸೇವೆಗಳ ಮೂಲಕ ಕಂಡುಬರುವ ನಿಖರವಾದ ಸ್ಥಳಗಳ ಇತಿಹಾಸವನ್ನು ರಚಿಸಲು ಫೇಸ್ಬುಕ್ಗೆ ಅವಕಾಶ ನೀಡುತ್ತದೆ. ನೀವು ಮಾತ್ರ ಈ ಮಾಹಿತಿಯನ್ನು ನೋಡಬಹುದು ಮತ್ತು ನೀವು ಮಾತ್ರ ನಿಮ್ಮ ಮೊಬೈಲ್ ಸಾಧನ ಅಥವಾ ನಿಮ್ಮ ಕಂಪ್ಯೂಟರ್ನಲ್ಲಿ ನಿಮ್ಮ ಸ್ಥಳ ಇತಿಹಾಸವನ್ನು ನೋಡುವ ಮೂಲಕ ಅದನ್ನು ಅಳಿಸಬಹುದು ಎಂದು ತಿಳಿಸಿದೆ.
ನಿಮ್ಮ ಸ್ಥಳ ಇತಿಹಾಸವನ್ನು ವೀಕ್ಷಿಸುವುದು ಮತ್ತು ಅದನ್ನು ಆನ್ ಅಥವಾ ಆಫ್ ಮಾಡುವುದು ಹೇಗೆ?
ನಿಮ್ಮ ಸೆಟ್ಟಿಂಗ್ಗಳಲ್ಲಿ ಸ್ಥಳ ಇತಿಹಾಸವನ್ನು ಮರೆಮಾಡಲಾಗಿದೆ. ನೀವು ಅದನ್ನು ಫೇಸ್ಬುಕ್ನ ಆಂಡ್ರಾಯ್ಡ್ ಅಥವಾ ಐಒಎಸ್ ಆಪ್ ಮೂಲಕ ಅಥವಾ ನಿಮ್ಮ ಡೆಸ್ಕ್ಟಾಪ್ ಬ್ರೌಸರ್ ಮೂಲಕ ಪ್ರವೇಶಿಸಬಹುದು. ಐಒಎಸ್ನಲ್ಲಿ, ಫೇಸ್ಬುಕ್ನ ಕೆಳಗಿನ ಬಲಭಾಗದಲ್ಲಿರುವ ಮೂರು ಅಡ್ಡ ರೇಖೆಗಳನ್ನು ಸ್ಪರ್ಶಿಸಿ. ಸೆಟ್ಟಿಂಗ್ಗಳು ಮತ್ತು ಗೌಪ್ಯತೆ> ಗೌಪ್ಯತೆ ಶಾರ್ಟ್ಕಟ್ಗಳು> ಸ್ಥಳ ಸೆಟ್ಟಿಂಗ್ಗಳನ್ನು ನಿರ್ವಹಿಸಿ ಮೇಲೆ ಟ್ಯಾಪ್ ಮಾಡಿ. ನೀಲಿ ಸ್ಲೈಡರ್ ಅನ್ನು ಟ್ಯಾಪ್ ಮಾಡುವ ಮೂಲಕ ನಿಮ್ಮ ಸ್ಥಳ ಇತಿಹಾಸವನ್ನು ನೀವು ಆನ್ ಅಥವಾ ಆಫ್ ಮಾಡಬಹುದು. ನಿಮ್ಮ ಸ್ಥಳ ಇತಿಹಾಸವನ್ನು ನೋಡಲು ಮತ್ತು ಅನ್ವೇಷಿಸಲು, 'ನಿಮ್ಮ ಸ್ಥಳ ಇತಿಹಾಸವನ್ನು ವೀಕ್ಷಿಸಿ' ಟ್ಯಾಪ್ ಮಾಡಿ.
ಆಂಡ್ರಾಯ್ಡ್ನಲ್ಲಿ, ಫೇಸ್ಬುಕ್ನ ಮೇಲಿನ ಬಲಭಾಗದಲ್ಲಿರುವ ಮೆನುವನ್ನು ಟ್ಯಾಪ್ ಮಾಡಿ. ಮುಂದೆ, ಸೆಟ್ಟಿಂಗ್ಗಳು ಮತ್ತು ಗೌಪ್ಯತೆ> ಗೌಪ್ಯತೆ ಶಾರ್ಟ್ಕಟ್ಗಳು> ನಿಮ್ಮ ಸ್ಥಳ ಸೆಟ್ಟಿಂಗ್ಗಳನ್ನು ನಿರ್ವಹಿಸಿ> ಸ್ಥಳ ಇತಿಹಾಸವನ್ನು ಟ್ಯಾಪ್ ಮಾಡಿ. ನೀಲಿ ಸ್ಲೈಡರ್ ಅನ್ನು ಟ್ಯಾಪ್ ಮಾಡುವ ಮೂಲಕ ನಿಮ್ಮ ಸ್ಥಳ ಇತಿಹಾಸವನ್ನು ನೀವು ಆನ್ ಅಥವಾ ಆಫ್ ಮಾಡಬಹುದು. ನಿಮ್ಮ ಸ್ಥಳ ಇತಿಹಾಸವನ್ನು ನೋಡಲು ಮತ್ತು ಅನ್ವೇಷಿಸಲು, 'ನಿಮ್ಮ ಸ್ಥಳ ಇತಿಹಾಸವನ್ನು ವೀಕ್ಷಿಸಿ' ಟ್ಯಾಪ್ ಮಾಡಿ.
ಇದನ್ನು ಓದಿ- Nokia XR20 Launch: ಮಿಲಿಟರಿ ಗ್ರೇಡ್ ಕ್ವಾಲಿಟಿಯ ನೋಕಿಯಾ XR20 ಬಿಡುಗಡೆ, ನೀರಲ್ಲೂ ಹಾಳಾಗಲ್ಲ, ಬಿದ್ದರೂ ಒಡೆಯಲ್ವಂತೆ!
ಸ್ಥಳ ಇತಿಹಾಸವನ್ನು ಹೇಗೆ ಅಳಿಸುವುದು?
ಐಒಎಸ್ನಲ್ಲಿ, ಮೇಲಿನ ಬಲಭಾಗದಲ್ಲಿರುವ "ಇನ್ನಷ್ಟು" ಟ್ಯಾಪ್ ಮಾಡಿ, ತದನಂತರ ಈ ದಿನವನ್ನು ಅಳಿಸಿ ಅಥವಾ ಎಲ್ಲಾ ಇತಿಹಾಸವನ್ನು ಅಳಿಸಿ ಆಯ್ಕೆಯನ್ನು ಟ್ಯಾಪ್ ಮಾಡುವ ಮೂಲಕ ಸ್ಥಳ ಇತಿಹಸಾವನ್ನು ಡಿಲೀಟ್ ಮಾಡಬಹುದು. ಆಂಡ್ರಾಯ್ಡ್ನಲ್ಲಿ, ಮೇಲಿನ ಬಲಭಾಗದಲ್ಲಿರುವ "ಇನ್ನಷ್ಟು" ಟ್ಯಾಪ್ ಮಾಡಿ ಮತ್ತು ನಂತರ ಈ ದಿನವನ್ನು ಅಳಿಸಿ ಅಥವಾ ಎಲ್ಲಾ ಇತಿಹಾಸವನ್ನು ಅಳಿಸಿ ಆಯ್ಕೆಯನ್ನು ಆರಿಸುವ ಮೂಲಕ ಇದನ್ನು ಡಿಲೀಟ್ ಮಾಡಬಹುದು. ನಂತರ ಓಕೆ (OK) ಟ್ಯಾಪ್ ಮಾಡಿ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ