ಇಯರ್‌ ಫೋನ್‌ ಬಳಸಿ ಹಾಡು ಕೇಳುತ್ತಾ ಮಲಗುವ ಅಭ್ಯಾಸ ನಿಮಗಿದ್ಯಾ? ಇದರಿಂದ ಆರೋಗ್ಯಕ್ಕಿದೆ ಲೆಕ್ಕವಿಲ್ಲದಷ್ಟು ದುಷ್ಪರಿಣಾಮ

side effects of using earphones while sleeping: ಮಲಗುವಾಗ ಇಯರ್ ಫೋನ್ ಹಾಕಿಕೊಳ್ಳುವುದು ಎಷ್ಟು ಅಪಾಯಕಾರಿ ಗೊತ್ತಾ? ರಾತ್ರಿಯಲ್ಲಿ ಇಯರ್‌ ಫೋನ್‌ ಬಳಸಿಕೊಂಡು ಸ್ವಲ್ಪ ಸಮಯದವರೆಗೆ ಹಾಡುಗಳನ್ನು ಕೇಳಬಹುದು, ಆದರೆ ಚಲನಚಿತ್ರವನ್ನು ನೋಡುವುದು ಅಥವಾ ಮಲಗುವ ಸಮಯದಲ್ಲಿ ಇಯರ್‌ ಫೋನ್‌ʼನಲ್ಲಿ ಹಾಡುಗಳನ್ನು ಕೇಳುವುದು ನಿಮ್ಮ ನಿದ್ರೆಗೆ ಭಂಗ ತರುವುದು ಮಾತ್ರವಲ್ಲದೆ ಗಂಭೀರವಾದ ನಿದ್ರಾಹೀನತೆಯ ರೋಗಿಯನ್ನಾಗಿ ಮಾಡಬಹುದು.  

Written by - Bhavishya Shetty | Last Updated : Aug 25, 2024, 08:10 PM IST
    • ರಾತ್ರಿ ಮಲಗುವಾಗ ಮೊಬೈಲ್ ನೋಡುವುದು ಅಭ್ಯಾಸವಾಗಿಬಿಟ್ಟಿದೆ
    • ಮೊಬೈಲ್ ಫೋನ್‌ ಜೊತೆಗಿಲ್ಲವೆಂದರೆ ನಿದ್ದೆಯೇ ಬಾರದವರಂತೆ ಒದ್ದಾಡುತ್ತಾರೆ.
    • ಇಯರ್ ಫೋನ್ ಹಾಕಿಕೊಂಡು ಹಾಡು ಕೇಳುತ್ತಾರೆ ಅಥವಾ ಸಿನಿಮಾ ನೋಡುತ್ತಾರೆ.
ಇಯರ್‌ ಫೋನ್‌ ಬಳಸಿ ಹಾಡು ಕೇಳುತ್ತಾ ಮಲಗುವ ಅಭ್ಯಾಸ ನಿಮಗಿದ್ಯಾ? ಇದರಿಂದ ಆರೋಗ್ಯಕ್ಕಿದೆ ಲೆಕ್ಕವಿಲ್ಲದಷ್ಟು ದುಷ್ಪರಿಣಾಮ title=
File Photo

side effects of using earphones while sleeping: ಇತ್ತೀಚಿನ ದಿನಗಳಲ್ಲಿ ರಾತ್ರಿ ಮಲಗುವಾಗ ಮೊಬೈಲ್ ನೋಡುವುದು ಅಭ್ಯಾಸವಾಗಿಬಿಟ್ಟಿದೆ. ದೊಡ್ಡವರಾಗಲಿ ಚಿಕ್ಕವರಾಗಲಿ ಪ್ರತಿಯೊಬ್ಬ ವ್ಯಕ್ತಿಯು ಮೊಬೈಲ್ ಫೋನ್‌ ಜೊತೆಗಿಲ್ಲವೆಂದರೆ ನಿದ್ದೆಯೇ ಬಾರದವರಂತೆ ಒದ್ದಾಡುತ್ತಾರೆ. ಕೆಲವರು ಮೊಬೈಲ್ ನೋಡುತ್ತಾ ಇಯರ್ ಫೋನ್ ಹಾಕಿಕೊಂಡು ಹಾಡು ಕೇಳುತ್ತಾರೆ ಅಥವಾ ಸಿನಿಮಾ ನೋಡುತ್ತಾರೆ.

ಇದನ್ನೂ ಓದಿ: ಫುಲ್‌ ಟೈಟ್‌ ಆಗಿ ಬಂದ ಪ್ರಿನ್ಸಿಪಾಲ್: ನಶೆ ಏರಿದ ಶಿಕ್ಷಕನನ್ನು ಕಂಡು ಮಕ್ಕಳು ಮಾಡಿದ್ದೇನು?

ಅಂದಹಾಗೆ ಮಲಗುವಾಗ ಇಯರ್ ಫೋನ್ ಹಾಕಿಕೊಳ್ಳುವುದು ಎಷ್ಟು ಅಪಾಯಕಾರಿ ಗೊತ್ತಾ? ರಾತ್ರಿಯಲ್ಲಿ ಇಯರ್‌ ಫೋನ್‌ ಬಳಸಿಕೊಂಡು ಸ್ವಲ್ಪ ಸಮಯದವರೆಗೆ ಹಾಡುಗಳನ್ನು ಕೇಳಬಹುದು, ಆದರೆ ಚಲನಚಿತ್ರವನ್ನು ನೋಡುವುದು ಅಥವಾ ಮಲಗುವ ಸಮಯದಲ್ಲಿ ಇಯರ್‌ ಫೋನ್‌ʼನಲ್ಲಿ ಹಾಡುಗಳನ್ನು ಕೇಳುವುದು ನಿಮ್ಮ ನಿದ್ರೆಗೆ ಭಂಗ ತರುವುದು ಮಾತ್ರವಲ್ಲದೆ ಗಂಭೀರವಾದ ನಿದ್ರಾಹೀನತೆಯ ರೋಗಿಯನ್ನಾಗಿ ಮಾಡಬಹುದು.

ದೇಹವು ತನ್ನದೇ ಆದ ಸಮಯ ಸೂಚಕವನ್ನು ಹೊಂದಿದೆ, ಅದರ ಪ್ರಕಾರ ನಿದ್ರೆಯಿಂದ ಏಳುವವರೆಗೆ, ಹಸಿವಿನ ಭಾವನೆಯಿಂದ ಅನೇಕ ಪ್ರಮುಖ ಕಾರ್ಯಗಳನ್ನು ನಿರ್ವಹಿಸುತ್ತದೆ. ಪ್ರತಿದಿನ ಗಂಟೆಗಟ್ಟಲೆ ಇಯರ್‌ ಫೋನ್ ಧರಿಸುವುದರಿಂದ ದೇಹದ ಸಮಯ ಸೂಚಕ ಬ್ರೇಕ್‌ ಆಗಬಹುದು. ಇದನ್ನು ಸಿರ್ಕಾಡಿಯನ್ ರಿದಮ್ ಎಂದೂ ಕರೆಯುತ್ತಾರೆ.

ಇದನ್ನೂ ಓದಿ: ಮಧುಮೇಹಕ್ಕೆ ವರದಾನವಿದ್ದಂತೆ ಈ ನೀರು: ಬೆಳಗ್ಗೆದ್ದು ಖಾಲಿ ಹೊಟ್ಟೆಯಲ್ಲಿ ಕುಡಿದರೆ ದಿನವಿಡೀ ಕಂಟ್ರೋಲ್ʼನಲ್ಲಿರುತ್ತೆ ಬ್ಲಡ್ ಶುಗರ್!

ಅಷ್ಟೇ ಅಲ್ಲ, ಮಲಗುವಾಗ ಇಯರ್ ಫೋನ್ ಧರಿಸುವುದರಿಂದ ಕಿವಿಯ ಚರ್ಮದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಚರ್ಮಕ್ಕೆ ಸಂಬಂಧಿಸಿದ ಕಾಯಿಲೆಗಳು ಮತ್ತು ಸಮಸ್ಯೆಗಳು ಕಾಣಿಸಿಕೊಳ್ಳಲು ಪ್ರಾರಂಭಿಸುತ್ತವೆ. ದೀರ್ಘಕಾಲದವರೆಗೆ ಇಯರ್‌ ಫೋನ್‌ ಧರಿಸಿದರೆ, ವೈದ್ಯಕೀಯ ಪರಿಭಾಷೆಯಲ್ಲಿ ವ್ಯಾಕ್ಸ್ ಎಂದು ಕರೆಯಲ್ಪಡುವ ಇಯರ್‌ ವಾಕ್ಸ್ ಕಿವಿಯೊಳಗೆ ರೂಪುಗೊಳ್ಳಲು ಪ್ರಾರಂಭಿಸುತ್ತದೆ. ಅದು ಶ್ರವಣ ಸಾಮರ್ಥ್ಯದ ಮೇಲೆ ಪರಿಣಾಮ ಬೀರಲು ಪ್ರಾರಂಭಿಸುತ್ತದೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News