Amazon Sale: 349 ರೂ.ಗೆ ಖರೀದಿಸಿ ಎರಡು ದಿನಗಳವರೆಗೆ ಚಾರ್ಜಿಂಗ್ ಉಳಿಯುವ ಈ ಅದ್ಬುತ ಫೋನ್

ಇದೀಗ ಅನೇಕ ಸ್ಮಾರ್ಟ್‌ಫೋನ್‌ಗಳ ಮೇಲೆ ಉತ್ತಮ ರಿಯಾಯಿತಿ ಸಿಗುತ್ತಿವೆ. ಉತ್ತಮ ಬ್ಯಾಟರಿ ಮತ್ತು ಕಡಿಮೆ ಬಜೆಟ್ ಹೊಂದಿರುವ ಸ್ಮಾರ್ಟ್‌ಫೋನ್‌ಗಾಗಿ ಹುಡುಕುತ್ತಿದ್ದರೆ ಇದು ಒಳ್ಳೆಯ ಅವಕಾಶವಾಗಿದೆ. 

Written by - Ranjitha R K | Last Updated : Dec 1, 2021, 03:02 PM IST
  • Tecno Spark 7T ಫೋನ್ ಮೇಲೆ ಅಮೆಜಾನ್‌ನಲ್ಲಿ ಭಾರೀ ರಿಯಾಯಿತಿ
  • ಆಫರ್‌ ಮೂಲಕ ಕೇವಲ 349 ರೂಪಾಯಿಗೆ ಫೋನ್ ಖರೀದಿಸಬಹುದು
  • 6000mAH ಲಿ ಬ್ಯಾಟರಿ ಟೆಕ್ನೋ ಸ್ಪಾರ್ಕ್ 7T ನಲ್ಲಿ ಲಭ್ಯ .
Amazon Sale: 349 ರೂ.ಗೆ ಖರೀದಿಸಿ ಎರಡು ದಿನಗಳವರೆಗೆ ಚಾರ್ಜಿಂಗ್ ಉಳಿಯುವ ಈ ಅದ್ಬುತ ಫೋನ್   title=
Tecno Spark 7T (file photo)

ನವದೆಹಲಿ : ಅಮೆಜಾನ್ (Amazon) ಕಾಲಕಾಲಕ್ಕೆ ಸೇಲ್ ಅನ್ನು ಹಮ್ಮಿಕೊಳ್ಳುತ್ತಿದ್ದು, ಅಲ್ಲಿ ಸ್ಮಾರ್ಟ್‌ಫೋನ್‌ಗಳನ್ನು (Smartphone) ಅತ್ಯಂತ ಅಗ್ಗವಾಗಿ ಖರೀದಿಸಬಹುದು. ಇನ್ನು ಯಾವುದೇ ಸೇಲ್ ಇಲ್ಲದಿದ್ದರೂ ಸಹ, ಅನೇಕ ಸ್ಮಾರ್ಟ್‌ಫೋನ್‌ಗಳಲ್ಲಿ ಉತ್ತಮ ಡೀಲ್‌ಗಳು ಲಭ್ಯವಿರುತ್ತವೆ. ಇದೀಗ ಅನೇಕ ಸ್ಮಾರ್ಟ್‌ಫೋನ್‌ಗಳ ಮೇಲೆ ಉತ್ತಮ ರಿಯಾಯಿತಿ (Discount)  ಸಿಗುತ್ತಿವೆ. ಉತ್ತಮ ಬ್ಯಾಟರಿ ಮತ್ತು ಕಡಿಮೆ ಬಜೆಟ್ ಹೊಂದಿರುವ ಸ್ಮಾರ್ಟ್‌ಫೋನ್‌ಗಾಗಿ ಹುಡುಕುತ್ತಿದ್ದರೆ ಇದು ಒಳ್ಳೆಯ ಅವಕಾಶವಾಗಿದೆ. Tecno Spark 7T ಮೇಲೆ ಭಾರೀ ರಿಯಾಯಿತಿ ಸಿಗುತ್ತಿದೆ. ಆಫರ್‌ಗಳ ಮೂಲಕ ಕೇವಲ 349 ರೂಪಾಯಿಗೆ ಈ ಫೋನ್ ಅನ್ನು ಖರೀದಿಸಬಹುದು. 

Tecno Spark 7T ಕೊಡುಗೆಗಳು ಮತ್ತು ರಿಯಾಯಿತಿಗಳು :
Tecno Spark 7T ನ 4GB RAM + 64GB ಸ್ಟೋರೇಜ್ ರೂಪಾಂತರದ ಬೆಲೆ 10,990 ರೂ. ಆಗಿದೆ. ಆದರೆ Amazon ನಲ್ಲಿ ಇದರ ಮೇಲೆ 20% ರಿಯಾಯಿತಿ ಸಿಗಲಿದೆ. ಅಂದರೆ, ಈ ಫೋನ್ 8,799 ರೂ.ಗೆ ಲಭ್ಯವಿರಲಿದೆ. ಆದರೆ ಈ ಫೋನ್ ಅನ್ನು ಇನ್ನೂ ಕಡಿಮೆ ಬೆಲೆಗೆ ಖರೀದಿಸಬಹುದು. ಬ್ಯಾಂಕ್ ಆಫರ್‌ಗಳು ಮ (bank offer) ತ್ತು ಎಕ್ಸ್‌ಚೇಂಜ್ ಆಫರ್‌ಗಳ ಲಾಭವನ್ನು ಪಡೆದುಕೊಂಡರೆ, ಫೋನ್‌ನ ಬೆಲೆ ಇನ್ನೂ ಇಳಿಯಲಿದೆ.  

ಇದನ್ನೂ  ಓದಿ : Miಯ 32 ಇಂಚಿನ Smart TVಯನ್ನು ಕೇವಲ 4 ಸಾವಿರ ರೂಪಾಯಿಗಳಿಗೆ ಖರೀದಿಸಿ, ಇಲ್ಲಿದೆ Offers

Tecno Spark 7T ನಲ್ಲಿ ಬ್ಯಾಂಕ್ ಕೊಡುಗೆಗಳು :
ಇನ್ನು  ಸಿಟಿ ಯೂನಿಯನ್ ಬ್ಯಾಂಕ್ ಡೆಬಿಟ್ ಕಾರ್ಡ್ ಮೂಲಕ ಪಾವತಿಸಿದರೆ, 150 ರೂ . ತ್ವರಿತ ರಿಯಾಯಿತಿಯನ್ನು ಪಡೆಯಬಹುದು. ಇದಲ್ಲದೆ, ಎಕ್ಸ್ಚೇಂಜ್ ಆಫರ್ (Exchange offer) ಕೂಡ ಇದೆ.  

Tecno Spark 7T ನಲ್ಲಿ ಎಕ್ಸ್ಚೇಂಜ್ ಆಫರ್  :
Tecno Spark 7T ನಲ್ಲಿ 8,300 ರೂಪಾಯಿಗಳ ಎಕ್ಸ್ಚೇಂಜ್ ಆಫರ್  ಇದೆ. ನಿಮ್ಮ ಹಳೆಯ ಸ್ಮಾರ್ಟ್‌ಫೋನ್ ಅನ್ನು ಎಕ್ಸ್ಚೇಂಜ್  ಮಾಡಿಕೊಂಡರೆ,  ಇನ್ನಷ್ಟು ರಿಯಾಯಿತಿ ಪಡೆಯಬಹುದು. ನಿಮ್ಮ ಹಳೆಯ ಫೋನ್‌ನ ಸ್ಥಿತಿ ಉತ್ತಮವಾಗಿದ್ದರೆ ಮತ್ತು ಮಾಡೆಲ್ ಇತ್ತೀಚಿನದ್ದಾಗಿದ್ದರೆ 8,300 ರೂ. ವರೆಗೆ ರಿಯಾಯಿತಿ ಸಿಗಲಿದೆ. ಹೀಗೆ ಎಲ್ಲಾ  ಆಫರ್ ಗಳು ಸೇರಿದರೆ Tecno Spark 7T ಅನ್ನು  349 ರೂ.ಗೆ ಖರೀದಿಸಬಹುದು. 

ಇದನ್ನೂ  ಓದಿ : Budget Smartphone: 13 ಸಾವಿರಕ್ಕಿಂತ ಕಡಿಮೆ ಬೆಲೆಯ ಅತ್ಯುತ್ತಮ ಸ್ಮಾರ್ಟ್‌ಫೋನ್ ಬಿಡುಗಡೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News