Amazon Prime: ಕೇವಲ 499 ರೂ.ಗಳಿಗೆ ಲಭ್ಯವಾಗಲಿದೆ ಅಮೆಜಾನ್ ಪ್ರೈಮ್ ಸದಸ್ಯತ್ವ

ನೀವು ಅಮೆಜಾನ್ ಪ್ರೈಮ್ ಸದಸ್ಯತ್ವವನ್ನು ತೆಗೆದುಕೊಳ್ಳಲು ಬಯಸಿದರೆ, ಅದಕ್ಕಾಗಿ ನೀವು ಕೇವಲ 499 ರೂ.ಗಳನ್ನು ಮಾತ್ರ ಪಾವತಿಸಬೇಕಾಗುತ್ತದೆ ಮತ್ತು ಅದರ ಸಿಂಧುತ್ವವು ಒಂದು ವರ್ಷವಾಗಿರುತ್ತದೆ.

Written by - Yashaswini V | Last Updated : Jun 1, 2021, 02:35 PM IST
  • ಅಮೆಜಾನ್ ಪ್ರೈಮ್ ನ ವಾರ್ಷಿಕ ಸದಸ್ಯತ್ವದ ಮೂಲ ಬೆಲೆ 999 ರೂ.
  • ಆದರೆ ಈಗ ಕಂಪನಿಯು ಅರ್ಧದಷ್ಟು ಬೆಲೆಗೆ ಈ ಅವಕಾಶವನ್ನು ನೀಡುತ್ತಿದೆ
  • ಅಮೆಜಾನ್ ಪ್ರೈಮ್ ಸದಸ್ಯತ್ವಕ್ಕಾಗಿ ಪರಿಚಯಿಸಲಾದ ಪ್ರಸ್ತಾಪದಲ್ಲಿ, ಚಂದಾದಾರರಿಗೆ 500 ರೂ.ವರೆಗೆ ಕ್ಯಾಶ್‌ಬ್ಯಾಕ್ ಕೂಡ ನೀಡುತ್ತಿದೆ
Amazon Prime: ಕೇವಲ 499 ರೂ.ಗಳಿಗೆ ಲಭ್ಯವಾಗಲಿದೆ ಅಮೆಜಾನ್ ಪ್ರೈಮ್ ಸದಸ್ಯತ್ವ title=
Amazon Prime Membership

ನವದೆಹಲಿ: ಅಮೆಜಾನ್ ಪ್ರೈಮ್ ಸದಸ್ಯತ್ವವನ್ನು ತೆಗೆದುಕೊಳ್ಳಲು ಇದು ಉತ್ತಮ ಸಮಯವಾಗಿದೆ. ಏಕೆಂದರೆ ಕಂಪನಿಯು ಬಳಕೆದಾರರನ್ನು ಆಕರ್ಷಿಸಲು ಆಕರ್ಷಕ ಕೊಡುಗೆಯನ್ನು ಪರಿಚಯಿಸಿದೆ. ಈ ಕೊಡುಗೆಯಡಿಯಲ್ಲಿ, ನೀವು ಅಮೆಜಾನ್ ಪ್ರೈಮ್ ಸದಸ್ಯತ್ವವನ್ನು ಅರ್ಧದಷ್ಟು ಬೆಲೆಗೆ ತೆಗೆದುಕೊಳ್ಳಬಹುದು. ಅಂದರೆ ಕೇವಲ 499 ರೂಗೆ.  ನೀವು ಅಮೆಜಾನ್ ಪ್ರೈಮ್ ಸದಸ್ಯತ್ವವನ್ನು ತೆಗೆದುಕೊಳ್ಳಬಹುದು. 

ವಾಸ್ತವವಾಗಿ ಅಮೆಜಾನ್ ಪ್ರೈಮ್ (Amazon Prime)ನ ವಾರ್ಷಿಕ ಸದಸ್ಯತ್ವದ ಮೂಲ ಬೆಲೆ 999 ರೂ. ಆದರೆ ಈಗ ಕಂಪನಿಯು ಅರ್ಧದಷ್ಟು ಬೆಲೆಗೆ ಈ ಅವಕಾಶವನ್ನು ನೀಡುತ್ತಿದೆ. ಆದರೆ ಕಂಪನಿಯು 18 ರಿಂದ 24 ವರ್ಷ ವಯಸ್ಸಿನವರಿಗೆ ಮಾತ್ರ ಈ ಕೊಡುಗೆಯ ಲಾಭವನ್ನು ನೀಡುತ್ತಿರುವುದಾಗಿ ಸ್ಪಷ್ಟಪಡಿಸಿದೆ. ಈ ಪ್ರಸ್ತಾಪದ ಬಗ್ಗೆ ವಿವರವಾಗಿ ತಿಳಿದುಕೊಳ್ಳೋಣ…

ಇದನ್ನೂ ಓದಿ - Amazon Prime Day ಸೇಲ್ : ಜೂನ್​ 21-22 ರಿಂದ ಆರಂಭ​?

ಅಮೆಜಾನ್ ಪ್ರೈಮ್ ಸದಸ್ಯತ್ವಕ್ಕಾಗಿ (Amazon Prime Membership) ಪರಿಚಯಿಸಲಾದ ಪ್ರಸ್ತಾಪದಲ್ಲಿ, ಚಂದಾದಾರರಿಗೆ 500 ರೂ.ವರೆಗೆ ಕ್ಯಾಶ್‌ಬ್ಯಾಕ್ ನೀಡುತ್ತಿದೆ. ಇದಲ್ಲದೆ, ಸದಸ್ಯತ್ವದಲ್ಲಿ ನೀವು ಉಚಿತ ಡೆಲಿವರಿ, ಅಮೆಜಾನ್ ಪ್ರೈಮ್ ವಿಡಿಯೋ ಮತ್ತು ಅಮೆಜಾನ್ ಮ್ಯೂಸಿಕ್ನಂತಹ ಸೇವೆಗಳಿಗೆ ಪ್ರವೇಶವನ್ನು ಪಡೆಯುತ್ತೀರಿ. ಈ ಕೊಡುಗೆ 18 ರಿಂದ 24 ವರ್ಷ ವಯಸ್ಸಿನ ಬಳಕೆದಾರರಿಗೆ ಮಾತ್ರ ಲಭ್ಯವಿರುತ್ತದೆ. 

ಅಲ್ಲದೆ, ಪ್ರಸ್ತುತ, ಕಂಪನಿಯು ಈ ಪ್ರಸ್ತಾಪವನ್ನು ಆಂಡ್ರಾಯ್ಡ್ ಫೋನ್ ಬಳಕೆದಾರರಿಗೆ ಮಾತ್ರ ಪರಿಚಯಿಸಿದೆ. ಐಒಎಸ್ ಬಳಕೆದಾರರು ಈ ಕೊಡುಗೆಯ ಲಾಭವನ್ನು ಪಡೆಯಲು ಸಾಧ್ಯವಿಲ್ಲ. ಈ ಕೊಡುಗೆ ಡೆಸ್ಕ್‌ಟಾಪ್ ಆವೃತ್ತಿಯಲ್ಲಿ ಲಭ್ಯವಿರುವುದಿಲ್ಲ.

ಇದನ್ನೂ ಓದಿ - ಭಾರತದಲ್ಲಿ ಲಾಂಚ್ ಆಯಿತು Amazon miniTV , ಈ ಎಲ್ಲಾ ವಿಡಿಯೋಗಳನ್ನು ಉಚಿತವಾಗಿ ವೀಕ್ಷಿಸಬಹುದು

ಈ ರೀತಿಯ ಕೊಡುಗೆಯನ್ನು ಪಡೆದುಕೊಳ್ಳಿ:
ಅಮೆಜಾನ್ ಪ್ರೈಮ್ ಸದಸ್ಯತ್ವಕ್ಕಾಗಿ ನೀವು ಪಡೆಯುತ್ತಿರುವ ಪ್ರಸ್ತಾಪದ ಲಾಭವನ್ನು ಸಹ ನೀವು ಪಡೆಯಲು ಬಯಸಿದರೆ, ಇದಕ್ಕಾಗಿ ನೀವು ಮೊದಲು ಪೂರ್ಣ ಪಾವತಿ ಮಾಡಬೇಕು. ಮೂರು ತಿಂಗಳ ಸದಸ್ಯತ್ವಕ್ಕಾಗಿ, 329 ರೂ.ಗಳನ್ನು ಪಾವತಿಸಬೇಕಾಗುತ್ತದೆ ಮತ್ತು ಒಂದು ವರ್ಷದ ಸದಸ್ಯತ್ವಕ್ಕಾಗಿ 999 ರೂ.ಗಳನ್ನು ಪಾವತಿಸಬೇಕಾಗುತ್ತದೆ. ಇದರ ನಂತರ ನೀವು ನಿಮ್ಮ ಗುರುತಿನ ಚೀಟಿಯನ್ನು ಅಪ್‌ಲೋಡ್ ಮಾಡಬೇಕು. ಐಡಿ ಪರಿಶೀಲಿಸಿದ ನಂತರ, ಮೂರು ತಿಂಗಳ ಯೋಜನೆಯಲ್ಲಿ ನಿಮ್ಮ ಅಮೆಜಾನ್ ಪೇ ಖಾತೆಗೆ 165 ರೂ. ಕ್ಯಾಶ್‌ಬ್ಯಾಕ್ ಮತ್ತು 12 ತಿಂಗಳ ಯೋಜನೆಯಲ್ಲಿ 500 ರೂ. ಕ್ಯಾಶ್‌ಬ್ಯಾಕ್ ಅನ್ನು ಜಮಾ ಮಾಡಲಾಗುತ್ತದೆ. ಇವುಗಳನ್ನು ಶಾಪಿಂಗ್ ಅಥವಾ ರೀಚಾರ್ಜ್ ಮಾಡಲು ಬಳಸಬಹುದು. ಆರ್‌ಬಿಐನ ಹೊಸ ನಿಯಮಗಳಿಂದಾಗಿ ಈ ಹಿಂದೆ ಅಮೆಜಾನ್ ತನ್ನ ಮಾಸಿಕ ಸದಸ್ಯತ್ವವನ್ನು ರದ್ದುಗೊಳಿಸಿದೆ. ಈಗ ಸದಸ್ಯತ್ವ ಕೇವಲ ಮೂರು ತಿಂಗಳು ಮತ್ತು ಒಂದು ವರ್ಷಕ್ಕೆ ಲಭ್ಯವಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News