ಈ ದಿನದಿಂದ ಆರಂಭವಾಗಲಿದೆ Amazon Great Indian Festival, ಆಗಲಿದೆ ಆಫರ್ ಗಳ ಸುರಿ ಮಳೆ

ಅಮೆಜಾನ್ ಈ ವಾರ್ಷಿಕ ಸೇಲ್, ಅಮೆಜಾನ್ ವೆಬ್‌ಸೈಟ್ ಮತ್ತು ಆಪ್‌ನಲ್ಲಿ ಅಕ್ಟೋಬರ್ 4 ರಿಂದ ನೇರ ಪ್ರಸಾರವಾಗಲಿದೆ. ಈ ಸೇಲ್ ಇಡೀ ತಿಂಗಳವರೆಗೆ ನಡೆಯಲಿದೆ.  ಉತ್ತಮ ಡೀಲ್‌ಗಳು, ಕೊಡುಗೆಗಳು ಮತ್ತು ರಿಯಾಯಿತಿಗಳ ಜೊತೆಗೆ, ಅನೇಕ ಹೊಸ ಉತ್ಪನ್ನಗಳನ್ನು ಸಹ ಈ ಸೇಲ್‌ನಲ್ಲಿ ಬಿಡುಗಡೆ ಮಾಡಲಾಗುತ್ತದೆ. 

Written by - Ranjitha R K | Last Updated : Sep 24, 2021, 07:36 PM IST
  • ಆರಂಭವಾಗುತ್ತಿದೆ ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್
  • ಅಕ್ಟೋಬರ್ 4 ರಿಂದ ಆರಂಭವಾಗಲಿದೆ ಸೇಲ್
  • ಪ್ರೈಂ ಸದಸ್ಯರಿಗೆ ಸಿಗಲಿದೆ ಹೆಚ್ಚಿನ ಪ್ರಯೋಜನಗಳು
ಈ ದಿನದಿಂದ ಆರಂಭವಾಗಲಿದೆ Amazon Great Indian Festival, ಆಗಲಿದೆ ಆಫರ್ ಗಳ ಸುರಿ ಮಳೆ  title=
ಆರಂಭವಾಗುತ್ತಿದೆ ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ (file photo)

ನವದೆಹಲಿ : ಅಮೆಜಾನ್ (Amazon) ವಿಶ್ವದ ಅತ್ಯಂತ ಜನಪ್ರಿಯ ಆನ್‌ಲೈನ್ ಶಾಪಿಂಗ್ ಪ್ಲಾಟ್‌ಫಾರ್ಮ್‌ಗಳಲ್ಲಿ (Online shopping  Platform) ಒಂದಾಗಿದೆ. ತನ್ನ ಗ್ರಾಹಕರನ್ನು ಆಕರ್ಷಿಸಲು ಅಮೆಜಾನ್ ಕಾಲಕಾಲಕ್ಕೆ ಅನೇಕ ಆಫರ್ ಗಳನ್ನು ನೀಡುತ್ತಲೇ ಬರುತ್ತಿದೆ. ವಿವಿಧ ಸೇಲ್ ಗಳನ್ನು ಹಮ್ಮಿಕೊಳ್ಳುವ ಮೂಲಕ ವಿಶೇಷ ಕೊಡುಗೆಗಳನ್ನು ಕೂಡಾ ನೀಡುತ್ತಿದೆ. ಈ ಎಲ್ಲಾ ಸೇಲ್ ಗಳಲ್ಲಿ ಹೆಚ್ಚು ಗ್ರಾಹಕರು ಅತ್ಯಂತ ಇಷ್ಟಪಡುವ ಸೇಲ್ ಗಳೆಂದರೆ ಅಮೆಜಾನ್ ನ ವಾರ್ಷಿಕ ಸೇಲ್ ಆಗಿರುವ  ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್( Amazon Great Indian Festival). ಅಮೆಜಾನ್ ಪ್ರತಿ ವರ್ಷ ಈ ಸೇಲ್ ಅನ್ನು ತರುತ್ತದೆ. ಗ್ರಾಹಕರು ಕೂಡಾ ಈ ಸೇಲ್ ಗಾಗಿ ಬಹಳ ಉತ್ಸಾಹದಿಂದಲೇ ಕಾಯುತ್ತಾರೆ. ಈ ವರ್ಷ ಈ ಸೇಲ್ ಯಾವಾಗ ಆರಂಭವಾಗಲಿದೆ ಎನ್ನುವುದನ್ನು ಅಮೆಜಾನ್ ಇದೀಗ ಫೋಷಿಸಿದೆ. 

ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ (Amazon great Indian festival sale):
ಅಮೆಜಾನ್ (Amazon) ಈ ವಾರ್ಷಿಕ ಸೇಲ್, ಅಮೆಜಾನ್ ವೆಬ್‌ಸೈಟ್ ಮತ್ತು ಆಪ್‌ನಲ್ಲಿ ಅಕ್ಟೋಬರ್ 4 ರಿಂದ ನೇರ ಪ್ರಸಾರವಾಗಲಿದೆ. ಈ ಸೇಲ್ ಇಡೀ ತಿಂಗಳವರೆಗೆ ನಡೆಯಲಿದೆ.  ಉತ್ತಮ ಡೀಲ್‌ಗಳು, ಕೊಡುಗೆಗಳು ಮತ್ತು ರಿಯಾಯಿತಿಗಳ ಜೊತೆಗೆ, ಅನೇಕ ಹೊಸ ಉತ್ಪನ್ನಗಳನ್ನು ಸಹ ಈ ಸೇಲ್‌ನಲ್ಲಿ ಬಿಡುಗಡೆ ಮಾಡಲಾಗುತ್ತದೆ. 

ಇದನ್ನೂ ಓದಿ : IPL 2021: : ಲೈವ್ ಪಂದ್ಯಗಳನ್ನು ವೀಕ್ಷಿಸಿ Paytmನಲ್ಲಿ 100% ಕ್ಯಾಶ್‌ಬ್ಯಾಕ್ ಪಡೆಯಿರಿ, ಆಫರ್ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ

ಪ್ರೈಂ ಮೆಂಬರ್ ಗೆ ಸಿಗಲಿದೆ ಈ ಅವಕಾಶ :
ಪ್ರೈಂ ಸದಸ್ಯರು ಒಂದು ದಿನ ಮೊದಲೇ ಅಂದರೆ ಅಕ್ಟೋಬರ್ 3 ರಿಂದಲ ಈ ಸೇಲ್ ನ (Sale) ಲಾಭವನ್ನು ಪಡೆಯಬಹುದು.  ಅಲ್ಲದೆ, ಸಾಮಾನ್ಯ ಬಳಕೆದಾರರಿಗೆ ಹೋಲಿಸಿದರೆ ಹೆಚ್ಚುವರಿ ಕ್ಯಾಶ್‌ಬ್ಯಾಕ್ (Cashback) ಮತ್ತು ವಿಸ್ತೃತ ನೋ-ಕಾಸ್ಟ್ ಇಎಂಐ (Extended Nocost EMI) ಪ್ರಯೋಜನಗಳನ್ನು ಸಹ ಪ್ರೈಮ್ ಸದಸ್ಯರಿಗೆ ನೀಡಲಾಗುವುದು. 

ಬಿಸ್ನೆಸ್ ಗ್ರಾಹಕರಿಗೆ ಸಿಗಲಿದೆ ಬೃಹತ್ ರಿಯಾಯಿತಿ : 
ನಿಮ್ಮ ಉದ್ಯೋಗಿಗಳಿಗೆ ಉಡುಗೊರೆಗಳನ್ನು ಖರೀದಿಸಬೇಕಾದರೆ, ಅಥವಾ ಕಾರ್ಪೊರೇಟ್ ಶಾಪಿಂಗ್‌ನಲ್ಲಿ ಆಸಕ್ತಿ ಹೊಂದಿದ್ದರೆ, ಈ ಮಾರಾಟದಲ್ಲಿ ಅದ್ಭುತ ಕೊಡುಗೆಗಳು ಮತ್ತು ಬೃಹತ್ ರಿಯಾಯಿತಿಗಳನ್ನು ಪಡೆಯಬಹುದು.  HP, Lenovo, Canon ಮತ್ತು Godrej ನಂತಹ ಉನ್ನತ ಬ್ರಾಂಡ್‌ಗಳಲ್ಲಿ ಅದ್ಭುತ ಕೊಡುಗೆಗಳು, ರಿವಾರ್ಡ್ ಗಳು ಮತ್ತು ರಿಯಾಯಿತಿಗಳನ್ನು ಪಡೆಯಬಹುದು. ಹಾಗೆಯೇ, ಜಿಎಸ್‌ಟಿ ಇನ್‌ವಾಯ್ಸ್‌ನೊಂದಿಗೆ ತಮ್ಮ ಉತ್ಪನ್ನಗಳ ಮೇಲೆ 28% ಉಳಿಸಲು ಅವಕಾಶವಿದೆ. 

ಇದನ್ನೂ ಓದಿ : Realme ಲಾಂಚ್ ಮಾಡಿದೆ 12 ಸಾವಿರ ರೂ.ಗಿಂತ ಕಡಿಮೆ ಬೆಲೆ ಅದ್ಬುತ Smartphone

ಈ ಅಮೆಜಾನ್ ಮಾರಾಟದಲ್ಲಿ(Amazon sale), ಸಾವಿರಕ್ಕೂ ಹೆಚ್ಚು ಬ್ರಾಂಡ್‌ಗಳು ತಮ್ಮ ಉತ್ಪನ್ನಗಳನ್ನು ಬಿಡುಗಡೆ ಮಾಡುತ್ತಿವೆ. ಬಟ್ಟೆ ಮತ್ತು ಬೂಟುಗಳಿಂದ ಹಿಡಿದು ಎಲೆಕ್ಟ್ರಾನಿಕ್ ವಸ್ತುಗಳು ಮೊಬೈಲ್ ಫೋನ್‌ಗಳವರೆಗೆ (Mobiel phone) ಪ್ರತಿ ವಸ್ತುವಿನ ಮೇಲೆ ಭಾರೀ ರಿಯಾಯಿತಿ ಸಿಗಲಿದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News