BSNL ಅದ್ಭುತ ಪ್ಲಾನ್: ನಿತ್ಯ 5 ಜಿಬಿ ಇಂಟರ್ನೆಟ್ ಜೊತೆಗೆ ಸಿಗಲಿದೆ ಈ ಸೌಲಭ್ಯ

ಬಿಎಸ್‌ಎನ್‌ಎಲ್‌ ತನ್ನ ಗ್ರಾಹಕರಿಗಾಗಿ ಅತ್ಯುತ್ತಮ ಯೋಜನೆಯನ್ನು ಪರಿಚಯಿಸಿದೆ.  599 ರೂ.ಗಳ ಈ ಯೋಜನೆಯಲ್ಲಿ, 5 ಜಿಬಿ ಡೇಟಾ ಪ್ರತಿದಿನ ಲಭ್ಯವಿರುತ್ತದೆ. ಇದರ ಹೊರತಾಗಿ, ಅನೇಕ ಪ್ರಯೋಜನಗಳು ಲಭ್ಯವಿದೆ. 

Written by - Yashaswini V | Last Updated : Oct 4, 2021, 02:55 PM IST
  • BSNL ನ ಅದ್ಭುತ 599 ರೂ.ಗಳ ಪ್ಲಾನ್
  • ಈ ಯೋಜನೆಯಲ್ಲಿ, ಬಳಕೆದಾರರು ಪ್ರತಿದಿನ 5 GB ಡೇಟಾವನ್ನು 84 ದಿನಗಳವರೆಗೆ ಪಡೆಯುತ್ತಾರೆ
  • ಮಧ್ಯ ರಾತ್ರಿ 12 ರಿಂದ ಬೆಳಿಗ್ಗೆ 5 ರವರೆಗೆ ಅನಿಯಮಿತ ಉಚಿತ ಡೇಟಾವನ್ನು ಸಹ ನೀಡಲಾಗುತ್ತದೆ
BSNL ಅದ್ಭುತ ಪ್ಲಾನ್: ನಿತ್ಯ 5 ಜಿಬಿ ಇಂಟರ್ನೆಟ್ ಜೊತೆಗೆ ಸಿಗಲಿದೆ ಈ ಸೌಲಭ್ಯ title=
BSNL Rs 599 Prepaid Plan

BSNL: ರಿಲಯನ್ಸ್ ಜಿಯೋ ಕಡಿಮೆ ದರದಲ್ಲಿ ಹೆಚ್ಚಿನ ಡೇಟಾಕ್ಕೆ ಹೆಸರುವಾಸಿಯಾಗಿದೆ. ವೊಡಾಫೋನ್ ಐಡಿಯಾ ಮತ್ತು ಏರ್‌ಟೆಲ್ ಕೂಡ ಪ್ರತಿದಿನ ಹೆಚ್ಚಿನ ಡೇಟಾವನ್ನು ಪಡೆಯುವ ಯೋಜನೆಯನ್ನು ಪರಿಚಯಿಸಿವೆ. Vi ದಿನಕ್ಕೆ 4 GB ಡೇಟಾವನ್ನು ಪಡೆಯುವ ಯೋಜನೆಯನ್ನು ಹೊಂದಿದೆ. ಇದೀಗ ಈ ಎಲ್ಲಾ ಕಂಪನಿಗಳಿಗೆ ಟಕ್ಕರ್ ನೀಡಿರುವ ಬಿಎಸ್‌ಎನ್‌ಎಲ್‌ ತನ್ನ ಗ್ರಾಹಕರಿಗಾಗಿ ಅತ್ಯುತ್ತಮ ಯೋಜನೆಯನ್ನು ಪರಿಚಯಿಸಿದೆ.  ಈ ಯೋಜನೆಯಲ್ಲಿ ದಿನಕ್ಕೆ 5GB ಡೇಟಾ ಪ್ರಯೋಜನ ಲಭ್ಯವಿದೆ. ಬಿಎಸ್‌ಎನ್‌ಎಲ್‌ನ 599 ರೂ.ಗಳ ಈ ಯೋಜನೆಯಲ್ಲಿ ಅದ್ಭುತ ಪ್ರಯೋಜನಗಳು ಲಭ್ಯವಿದೆ. ಅದರ ಬಗ್ಗೆ ತಿಳಿದುಕೊಳ್ಳೋಣ ...

BSNL 599 ರೂ.ಗಳ ಯೋಜನೆ:
ಬಿಎಸ್‌ಎನ್‌ಎಲ್‌ನ (BSNL) 599 ರೂ.ಗಳ ಪ್ಲಾನ್ 84 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ. ಈ ಯೋಜನೆಯಲ್ಲಿ, ಬಳಕೆದಾರರು ಪ್ರತಿದಿನ 5 GB ಡೇಟಾವನ್ನು 84 ದಿನಗಳವರೆಗೆ ಪಡೆಯುತ್ತಾರೆ. ಇದಲ್ಲದೇ, ಯಾವುದೇ ನೆಟ್‌ವರ್ಕ್‌ನಲ್ಲಿ ಅನಿಯಮಿತ ಕರೆ ಮತ್ತು ಪ್ರತಿ ದಿನ 100 SMS ಗಳು ಲಭ್ಯವಿರುತ್ತವೆ. ಇದರೊಂದಿಗೆ, ಮಧ್ಯ ರಾತ್ರಿ 12 ರಿಂದ ಬೆಳಿಗ್ಗೆ 5 ರವರೆಗೆ ಅನಿಯಮಿತ ಉಚಿತ ಡೇಟಾವನ್ನು ಸಹ ನೀಡಲಾಗುತ್ತದೆ. ಉಚಿತ ಕಾಲರ್ಟೂನ್ ಮತ್ತು ಜಿಂಗ್ ಆಪ್ ಚಂದಾದಾರಿಕೆ ಕೂಡ ಈ ಯೋಜನೆಯಲ್ಲಿ ಲಭ್ಯವಿದೆ.

ಇದನ್ನೂ ಓದಿ- Amazon Great Indian Festival: ಸೆಲ್ ನಲ್ಲಿ 20 ಸಾವಿರಕ್ಕೂ ಕಮ್ಮಿ ಬೆಲೆಗೆ ಸಿಗುತ್ತಿವೆ ಈ 5 ಟಾಪ್ ಸ್ಮಾರ್ಟ್ ಫೋನ್ ಗಳು

ವೊಡಾಫೋನ್-ಐಡಿಯಾ 599 ರೂ.ಗಳ ಯೋಜನೆ:
ವೊಡಾಫೋನ್-ಐಡಿಯಾ (Vodafone-Idea) ಕೂಡ 599 ರೂ.ಗಳ ಪ್ಲಾನ್ ಅನ್ನು ಪರಿಚಯಿಸಿದೆ. ಇದರ ವ್ಯಾಲಿಡಿಟಿ 84 ದಿನಗಳು. ಯೋಜನೆಯಲ್ಲಿ ದಿನಕ್ಕೆ 1.5 ಜಿಬಿ ಡೇಟಾ, ಅನಿಯಮಿತ ಕರೆ ಮತ್ತು 100 ಎಸ್‌ಎಂಎಸ್ ಸೌಲಭ್ಯವನ್ನು ನೀಡಲಾಗಿದೆ. ಇದಲ್ಲದೇ, ವಾರಾಂತ್ಯದ ಡೇಟಾ ರೋಲ್ಓವರ್, ಉಚಿತ ರಾತ್ರಿ ಡೇಟಾ ಮತ್ತು ವಿಐ ಮೂವೀಸ್ ಮತ್ತು ಟಿವಿಗೆ ಉಚಿತ ಪ್ರವೇಶ ಲಭ್ಯವಿದೆ. 

ಇದನ್ನೂ ಓದಿ- Amazon Great Indian Festival: ಸ್ಯಾಮ್‌ಸಂಗ್‌ನ 5G ಸ್ಮಾರ್ಟ್‌ಫೋನ್‌ಗೆ ಸಿಗುತ್ತಿದೆ 38,000 ರೂ. ರಿಯಾಯಿತಿ

ಜಿಯೋದ 599 ರೂ.ಗಳ ಯೋಜನೆ:
ಜಿಯೋದ (Jio) 599 ರೂ.ಗಳ ಪ್ಲಾನ್ 84 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ. ಈ ಪ್ಯಾಕ್‌ನಲ್ಲಿ, 2 GB ಡೇಟಾ, ಅನಿಯಮಿತ ಕರೆ ಮತ್ತು 100 SMS ಗಳನ್ನು ಪ್ರತಿದಿನ ನೀಡಲಾಗುತ್ತದೆ. ಇದರಲ್ಲಿ, ಜಿಯೋ ಆಪ್‌ಗಳ ಚಂದಾದಾರಿಕೆ ಲಭ್ಯವಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News