Alert! ನಿಮ್ಮ ಸ್ಮಾರ್ಟ್‌ಫೋನ್‌ನಲ್ಲೂ ಈ Apps ಇದ್ದರೆ ತಕ್ಷಣವೇ ಡಿಲೀಟ್ ಮಾಡಿ

ಚೆಕ್ ಪಾಯಿಂಟ್ ರಿಸರ್ಚ್ (The Check Point Research) ತಂಡವು ಇತ್ತೀಚೆಗೆ ಮೋಸದ ಮೊಬೈಲ್ ಅಪ್ಲಿಕೇಶನ್‌ಗಳ ಪಟ್ಟಿಯನ್ನು ಸಿದ್ಧಪಡಿಸಿದೆ. ತಂಡದ ಪ್ರಕಾರ, ಹ್ಯಾಕರ್‌ಗಳು ಈ ಅಪ್ಲಿಕೇಶನ್‌ಗಳನ್ನು ಬಳಸಿಕೊಂಡು ಮೊಬೈಲ್ ಅನ್ನು ಹ್ಯಾಕ್ ಮಾಡಬಹುದು ಮತ್ತು ಗೌಪ್ಯ ಮಾಹಿತಿಯನ್ನು ಕದಿಯಬಹುದು.

Written by - Yashaswini V | Last Updated : May 26, 2021, 08:45 AM IST
  • ಬಳಕೆದಾರರು ತಮ್ಮ ಫೋನಿನಿಂದ ಈ ಅಪ್ಲಿಕೇಶನ್‌ಗಳನ್ನು ಡಿಲೀಟ್ ಮಾಡದಿದ್ದರೆ, ಅವರ ಡೇಟಾ ಸೋರಿಕೆಯಾಗುವ ಸಾಧ್ಯತೆಯಿದೆ ಎನ್ನಲಾಗಿದೆ
  • ಚೆಕ್ ಪಾಯಿಂಟ್ ರಿಸರ್ಚ್ ತಂಡವು ಇತ್ತೀಚೆಗೆ ಮೋಸದ ಮೊಬೈಲ್ ಅಪ್ಲಿಕೇಶನ್‌ಗಳ ಪಟ್ಟಿಯನ್ನು ಸಿದ್ಧಪಡಿಸಿದೆ
  • ಹ್ಯಾಕರ್‌ಗಳು ಈ ಅಪ್ಲಿಕೇಶನ್‌ಗಳನ್ನು ಬಳಸಿಕೊಂಡು ಮೊಬೈಲ್ ಅನ್ನು ಹ್ಯಾಕ್ ಮಾಡಬಹುದು ಮತ್ತು ಗೌಪ್ಯ ಮಾಹಿತಿಯನ್ನು ಕದಿಯಬಹುದು ಎಂದು ಇದು ಎಚ್ಚರಿಸಿದೆ
Alert! ನಿಮ್ಮ ಸ್ಮಾರ್ಟ್‌ಫೋನ್‌ನಲ್ಲೂ ಈ Apps ಇದ್ದರೆ ತಕ್ಷಣವೇ ಡಿಲೀಟ್ ಮಾಡಿ  title=
Online Fraud Alert

ನವದೆಹಲಿ: ಆಂಡ್ರಾಯ್ಡ್ ಮೊಬೈಲ್ ಬಳಕೆದಾರರೇ ಗಮನಿಸಿ, ನಿಮ್ಮ ಫೋನ್ ಹ್ಯಾಕ್ ಆಗುವ ಮೊದಲೇ ಎಚ್ಚೆತ್ತುಕೊಳ್ಳಿ. ಮಾಹಿತಿಯ ಪ್ರಕಾರ ಹಲವು ಬಳಕೆದಾದರು ತಮ್ಮ ಮೊಬೈಲ್‌ಗಳಲ್ಲಿ ಇಂತಹ ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್ ಮಾಡಿಕೊಂಡಿದ್ದು ಅದರಿಂದ ಅವರ ಗೌಪ್ಯತೆಗೆ ಧಕ್ಕೆ ಉಂಟಾಗುತ್ತದೆ. ಪ್ರಪಂಚದಾದ್ಯಂತ ಇಂತಹ 100 ಮಿಲಿಯನ್ ಫೋನ್‌ಗಳು ಅಪಾಯದಲ್ಲಿದೆ ಎಂದು ಹೇಳಲಾಗಿದೆ. ಇಂತಹ ಎಲ್ಲಾ ಬಳಕೆದಾರರಿಗೆ ಎಚ್ಚರಿಕೆಯನ್ನು ನೀಡುತ್ತಾ, ತಕ್ಷಣವೇ ಜಾರಿಗೆ ಬರುವಂತೆ ಈ ಅಪ್ಲಿಕೇಶನ್‌ಗಳನ್ನು ಡಿಲೀಟ್ ಮಾಡುವಂತೆ ಆದೇಶ ನೀಡಲಾಗಿದೆ. ಬಳಕೆದಾರರು ತಮ್ಮ ಫೋನಿನಿಂದ ಈ ಅಪ್ಲಿಕೇಶನ್‌ಗಳನ್ನು ಡಿಲೀಟ್ ಮಾಡದಿದ್ದರೆ, ಅವರ ಡೇಟಾ ಸೋರಿಕೆಯಾಗುವ ಸಾಧ್ಯತೆಯಿದೆ ಎನ್ನಲಾಗಿದೆ. ಚೆಕ್ ಪಾಯಿಂಟ್ ರಿಸರ್ಚ್ (The Check Point Research) ತಂಡವು ಇತ್ತೀಚೆಗೆ ಮೋಸದ ಮೊಬೈಲ್ ಅಪ್ಲಿಕೇಶನ್‌ಗಳ ಪಟ್ಟಿಯನ್ನು ಸಿದ್ಧಪಡಿಸಿದೆ. ತಂಡದ ಪ್ರಕಾರ, ಹ್ಯಾಕರ್‌ಗಳು ಈ ಅಪ್ಲಿಕೇಶನ್‌ಗಳನ್ನು ಬಳಸಿಕೊಂಡು ಮೊಬೈಲ್ ಅನ್ನು ಹ್ಯಾಕ್ ಮಾಡಬಹುದು ಮತ್ತು ಗೌಪ್ಯ ಮಾಹಿತಿಯನ್ನು ಕದಿಯಬಹುದು ಎಂದು ಇದು ಎಚ್ಚರಿಸಿದೆ.

ಈ ಮೂರು ಅಪ್ಲಿಕೇಶನ್‌ಗಳ ಬಗ್ಗೆ ಜಾಗರೂಕರಾಗಿರಿ:
ಚೆಕ್ ಪಾಯಿಂಟ್ ವರದಿಯ ಪ್ರಕಾರ, ಪಟ್ಟಿಗೆ ಸೇರಿಸಲಾದ ಅಪ್ಲಿಕೇಶನ್‌ಗಳು (Apps) ಜ್ಯೋತಿಷ್ಯ, ಫ್ಯಾಕ್ಸ್, ಟ್ಯಾಕ್ಸಿ ಸೇವೆ ಮತ್ತು ಸ್ಕ್ರೀನ್ ರೆಕಾರ್ಡಿಂಗ್‌ನಂತಹ ಅಪ್ಲಿಕೇಶನ್‌ಗಳಾಗಿರಬಹುದು. ಅವುಗಳಲ್ಲಿ ಈ ಮೂರು ಅಪ್ಲಿಕೇಶನ್‌ಗಳ ಬಗ್ಗೆ ಹೆಚ್ಚು ಜಾಗರೂಕರಾಗಿರಲು ಸೂಚಿಸಲಾಗಿದೆ.

ಇದನ್ನೂ ಓದಿ - ಬಹಳ ಹುಷಾರಾಗಿರಿ..!ಈ ನಂಬರಿನಿಂದ ನಿಮಗೆ ಕಾಲ್ ಬರಬಹುದು..!

ಈ ಅಪ್ಲಿಕೇಶನ್‌ಗಳನ್ನು ಕೂಡಲೇ ನಿಮ್ಮ ಫೋನಿನಲ್ಲಿ ಡಿಲೀಟ್ ಮಾಡಿ:
- Astro Guru:
ಆಸ್ಟ್ರೋ ಗುರು ಜನಪ್ರಿಯ ಜ್ಯೋತಿಷ್ಯ, ಜಾತಕ ಮತ್ತು ಹಸ್ತಸಾಮುದ್ರಿಕ ಅಪ್ಲಿಕೇಶನ್ ಆಗಿದೆ

- T’Leva:
ಟ್ಯಾಕ್ಸಿ ಸೇವಾ ಅಪ್ಲಿಕೇಶನ್‌ನ ಟಿ'ಲೀವಾವನ್ನು 50,000 ಕ್ಕೂ ಹೆಚ್ಚು ಜನರು ಡೌನ್‌ಲೋಡ್ ಮಾಡಿದ್ದಾರೆ.

- Logo Maker:
ಲೋಗೋ ಮೇಕರ್: ಲೋಗೋ ವಿನ್ಯಾಸಕ್ಕಾಗಿ ಈ ಅಪ್ಲಿಕೇಶನ್ ಅನ್ನು ಬಳಸಲಾಗುತ್ತದೆ.

ಈ ವಿವರಗಳನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ:
ಕಂಪನಿಯ ವರದಿಯ ಪ್ರಕಾರ, ಇಮೇಲ್, ಪಾಸ್‌ವರ್ಡ್, ಹೆಸರು, ಹುಟ್ಟಿದ ದಿನಾಂಕ, ಲಿಂಗ, ಖಾಸಗಿ ಚಾಟ್, ಸಾಧನದ ಸ್ಥಳ, ಬಳಕೆದಾರರ ಐಡಿ ಸೇರಿದಂತೆ ಈ ಅಪ್ಲಿಕೇಶನ್‌ಗಳಿಂದ ಯಾವುದೇ ಬಳಕೆದಾರರ ಡೇಟಾ (Data) ಅಪಾಯಕ್ಕೆ ಸಿಲುಕಬಹುದು. ಬಳಕೆದಾರರ ಮಾಹಿತಿಯನ್ನು ತೆಗೆದುಕೊಳ್ಳುವ ಅಪ್ಲಿಕೇಶನ್‌ನಲ್ಲಿ ನೈಜ-ಸಮಯದ ಡೇಟಾಬೇಸ್ ಇದೆ, ಅದು ಬಳಕೆದಾರರ ಎಲ್ಲಾ ಡೇಟಾವನ್ನು ಸಂಗ್ರಹಿಸುತ್ತದೆ.

ಇದನ್ನೂ ಓದಿ - Banking Alert: SBI, PNB, ICICI ಬ್ಯಾಂಕ್ ಗ್ರಾಹಕರೇ ಗಮನಿಸಿ, ಅಪ್ಪಿ-ತಪ್ಪಿಯೂ ಕೂಡ ಈ ತಪ್ಪು ಮಾಡಬೇಡಿ

ಅಧಿಸೂಚನೆಗಳನ್ನು ಕಳುಹಿಸುವ ಮೂಲಕ ಹ್ಯಾಕ್ ಮಾಡುವ ಸಾಧ್ಯತೆ (Hack can be sent by sending notifications):
ಟಿ'ಲೀವಾ ಅಪ್ಲಿಕೇಶನ್‌ನಲ್ಲಿ ಟ್ಯಾಕ್ಸಿ ಚಾಲಕರು ಮತ್ತು ಪ್ರಯಾಣಿಕರ ನಡುವಿನ ಸಂಪೂರ್ಣ ಚಾಟ್ ಅನ್ನು ಸಂಶೋಧಕರ ತಂಡವು ಇತ್ತೀಚೆಗೆ ಪರಿಶೀಲಿಸಿದೆ. ಈ ಚಾಟ್‌ನಲ್ಲಿ, ಅಪ್ಲಿಕೇಶನ್‌ ಮೂಲಕ ಬಳಕೆದಾರರೊಂದಿಗೆ ಅವರ ಪೂರ್ಣ ಹೆಸರು, ಫೋನ್ ಸಂಖ್ಯೆ ಮತ್ತು ಸ್ಥಳದಂತಹ ಪ್ರಮುಖ ಮಾಹಿತಿಯನ್ನು ತೆಗೆದುಕೊಳ್ಳಲಾಗಿದೆ. ಅಂತಹ ಅಪ್ಲಿಕೇಶನ್‌ಗಳ ಬಗ್ಗೆ ಜಾಗರೂಕರಾಗಿರಬೇಕು, ಈ ಅಪ್ಲಿಕೇಶನ್‌ಗಳ ಪರವಾಗಿ ಅಧಿಸೂಚನೆಗಳನ್ನು ಕಳುಹಿಸುವ ಮೂಲಕ ಹ್ಯಾಕರ್‌ಗಳು ಬಳಕೆದಾರರನ್ನು ಮೋಸ ಹೋಗುವಂತೆ ಮಾಡಬಹುದು. ಇದಕ್ಕಾಗಿಯೇ ಬಳಕೆದಾರರು ತಮ್ಮ ಮೊಬೈಲ್‌ಗಳಿಂದ ಈ ಅಪ್ಲಿಕೇಶನ್‌ಗಳನ್ನು ತಕ್ಷಣ ಅಳಿಸುವಂತೆ ಚೆಕ್ ಪಾಯಿಂಟ್‌ನಿಂದ ಎಚ್ಚರಿಸಲಾಗಿದೆ. ಅದೇ ಸಮಯದಲ್ಲಿ, ಭವಿಷ್ಯದಲ್ಲಿ ಈ ಅಪ್ಲಿಕೇಶನ್‌ಗಳ ಸುರಕ್ಷತಾ ವ್ಯವಸ್ಥೆಯನ್ನು ನವೀಕರಿಸಿದರೆ, ನೀವು ಅವರ ಸೇವೆಗಳ ಲಾಭವನ್ನು ಮತ್ತೆ ಪಡೆಯಬಹುದು ಎನ್ನಲಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News