WhatsAppನ 'Hi Mum' ಸಂದೇಶ ಇದುವರೆಗೆ ಜನರಿಂದ 57 ಕೋಟಿ ರೂ.ಗಳನ್ನು ದೋಚಿದೆಯಂತೆ, ಈ ತಪ್ಪು ಮಾಡ್ಬೇಡಿ

WhatsApp Scam: ಪ್ರಸ್ತುತ ವಾಟ್ಸ್ ಆಪ್ ಮೇಲೆ 'Hi Mum' ಹೆಸರಿನ ಸ್ಕ್ಯಾಮ್ ಭಾರಿ ಚರ್ಚೆಯಲ್ಲಿದೆ. ಈ ಸ್ಕ್ಯಾಮ್ ನಿಂದ ಆಸ್ಟ್ರೇಲಿಯಾದಲ್ಲಿ 2022ರಲ್ಲಿ ಬಳಕೆದಾರರು ಸುಮಾರು $7 ಮಿಲಿಯನ್ ಅಂದರೆ ಸುಮಾರು 57 ಕೋಟಿ ರೂ.ಗಳ ನಷ್ಟ ಅನುಭವಿಸಿದ್ದಾರೆ.   

Written by - Nitin Tabib | Last Updated : Dec 18, 2022, 08:54 PM IST
  • ವಂಚಕರು ಇದೀಗ ವಾಟ್ಸ್ ಆಪ್ ಮೇಲೆ ವಿವಿಧ ರೀತಿಯಲ್ಲಿ ಜನರನ್ನು ಗುರಿಯಾಗಿಸುತ್ತಿದ್ದಾರೆ.
  • ಈ ಸ್ಕ್ಯಾಮ್ ನಲ್ಲಿ ವಂಚಕರು ಕುಟುಂಬ ಸದಸ್ಯರ ಹೆಸರನ್ನು ಹೇಳಿಕೊಂಡು ಜನರನ್ನು ತಮ್ಮ ಬಲೆಗೆ ಬೀಳಿಸುತ್ತಿದ್ದಾರೆ.
  • 'ದಿ ಇಂಡಿಪೆಂಡೆಂಟ್' ನಲ್ಲಿ ಪ್ರಕಟಗೊಂಡ ಒಂದು ವರದಿಯ ಪ್ರಕಾರ, ಪ್ರಸ್ತುತ 'Hi Mum' ಹೆಸರಿನ ಸ್ಕ್ಯಾಮ್ ಭಾರಿ ಚರ್ಚೆಯಲ್ಲಿದೆ.
 WhatsAppನ 'Hi Mum' ಸಂದೇಶ ಇದುವರೆಗೆ ಜನರಿಂದ 57 ಕೋಟಿ ರೂ.ಗಳನ್ನು ದೋಚಿದೆಯಂತೆ, ಈ ತಪ್ಪು ಮಾಡ್ಬೇಡಿ title=
WhatsApp Scam

WhatsApp Scam: ವಂಚಕರು ಇದೀಗ ವಾಟ್ಸ್ ಆಪ್ ಮೇಲೆ ವಿವಿಧ ರೀತಿಯಲ್ಲಿ ಜನರನ್ನು ಗುರಿಯಾಗಿಸುತ್ತಿದ್ದಾರೆ.  ಈ ಸ್ಕ್ಯಾಮ್ ನಲ್ಲಿ ವಂಚಕರು ಕುಟುಂಬ ಸದಸ್ಯರ ಹೆಸರನ್ನು ಹೇಳಿಕೊಂಡು ಜನರನ್ನು ತಮ್ಮ ಬಲೆಗೆ ಬೀಳಿಸುತ್ತಿದ್ದಾರೆ.'ದಿ ಇಂಡಿಪೆಂಡೆಂಟ್' ನಲ್ಲಿ ಪ್ರಕಟಗೊಂಡ ಒಂದು ವರದಿಯ ಪ್ರಕಾರ, ಪ್ರಸ್ತುತ 'Hi Mum' ಹೆಸರಿನ ಸ್ಕ್ಯಾಮ್ ಭಾರಿ ಚರ್ಚೆಯಲ್ಲಿದೆ. ಈ ಸ್ಕ್ಯಾಂ ಕಾರಣ ಆಸ್ಟ್ರೇಲಿಯಾದ ಸಾವಿರಾರು ಜನರು 2022ರಲ್ಲಿ $7 ಮಿಲಿಯನ್ ಅಂದರೆ, 57 ಕೋಟಿ ರೂ.ಗಳಿಗೂ ಅಧಿಕ ನಷ್ಟವನ್ನು ಅನುಭವಿಸಿದ್ದಾರೆ ಎನ್ನಲಾಗಿದೆ. ಆಸ್ಟ್ರೇಲಿಯಾದ ಗ್ರಾಹಕ ಮತ್ತು ಪ್ರತಿಸ್ಪರ್ಧೆ ಆಯೋಗದ ಪ್ರಕಾರ, ಕಳೆದ 3 ತಿಂಗಳಿನಲ್ಲಿ ಈ ಸ್ಕ್ಯಾಮ್ ನಿಂದ ಪೀಡಿತರಾದವರ ಸಂಖ್ಯೆಯಲ್ಲಿ 10 ಪಟ್ಟು ಹೆಚ್ಚಳವಾಗಿದೆ ಎನ್ನಲಾಗಿದೆ.

ಇದನ್ನೂ ಓದಿ-Google Search Trends: ವರ್ಷ 2022ರಲ್ಲಿ ಗೂಗಲ್ನಲ್ಲಿ 'ಲೈಂಗಿಕತೆ'ಯ ಕುರಿತು ಅತಿ ಹೆಚ್ಚು ಹುಡುಕಾಟ ನಡೆಸಿದ ದೇಶ ಯಾವುದು ಗೊತ್ತಾ?

'Hi Mum' ಹೇಗೆ ಕಾರ್ಯನಿರ್ವಹಿಸುತ್ತದೆ
ಕುಟುಂಬದ ಓರ್ವ ಸದಸ್ಯ ಅಥವಾ ಸ್ನೇಹಿತರ ಹೆಸರಿನಲ್ಲಿ ಬರುವ ಒಂದು ಸಂದೇಶದ ಮೂಲಕ ಈ ಸ್ಕ್ಯಾಮ್ ಆರಂಭವಾಗುತ್ತದೆ. ಇದರಲ್ಲಿ ಅವರು ಮೊಬೈಲ್ ಕಳೆದುಕೊಂಡಿದ್ದಾರೆ ಅಥವಾ ಹಾಳಾಗಿದೆ ಎಂಬ ಸಂದೇಶವಿರುತ್ತದೆ. ಸಂದೇಶ ಪಡೆದವರ ವಿಶ್ವಾಸವನ್ನು ಒಂದೊಮ್ಮೆ ಗಳಿಸಲು ವಂಚಕರು ಯಶಸ್ವಿಯಾದ ಬಳಿಕ ತಮಗೆ ಸಹಾಯದ ಅವಶ್ಯಕತೆ ಇದೆ ಎಂದು ಪೀಡಿತರಿಗೆ ಮನವರಿಕೆ ಮಾಡುತ್ತಾರೆ. ಬಹುತೇಕ ಪ್ರಕರಣಗಳಲ್ಲಿ ಈ ಸಹಾಯ ಹಣಕಾಸಿಗೆ ಸಂಬಂಧಿಸಿರುತ್ತದೆ. ತಮ್ಮ ಯಾವುದೋ ಓರ್ವ ಸಂಬಂಧಿಕ, ಕುಟುಂಬದ ಸದಸ್ಯ ಅಥವಾ ಗೆಳೆಯನಿಗೆ ಹಣಕಾಸಿನ ಅವಶ್ಯಕತೆ ಕಾರಣ ತಾವು ಧನ ಸಹಾಯ ಮಾಡುತ್ತಿದ್ದೇವೆ ಎಂದು ತಿಳಿದು ಬಳಕೆದಾರರು ಸಂಬಂಧಿಗಳ ರೂಪದಲ್ಲಿರುವ ವಂಚಕರಿಗೆ ಹಣ ಕಳುಹಿಸುತ್ತಾರೆ. ಆದರೆ ವಾಸ್ತವದಲ್ಲಿ ಅವರು ವಂಚನೆಗೆ ಗುರಿಯಾಗಿರುತ್ತಾರೆ.

ಇದನ್ನೂ ಓದಿ-Google ಗೆ ಎದುರಾದ ದೊಡ್ಡ ಅಪಾಯ! ChatGPT ಯನ್ನು ಶಕ್ತಿಶಾಲಿ ಸಾಫ್ಟ್ ವೇರ್ ಎನ್ನುತ್ತಿದ್ದಾರೆ ಜನ, ಏನಿದು?

ಆದರೆ, ಭಾರತದಲ್ಲಿ ಇದುವರೆಗೆ ಇಂತಹ ಯಾವುದೇ ಪ್ರಕರಣ ಬೆಳಕಿಗೆ ಬಂದಿಲ್ಲ. ಈ ಪ್ರಕರಣ ಆಸ್ಟ್ರೇಲಿಯಾದಲ್ಲಿ ಬೆಳಕಿಗೆ ಬಂದಿದ್ದರೂ ಕೂಡ ಭಾರತೀಯರೂ ಕೂಡ ಇದನ್ನು ಒಂದು ಎಚ್ಚರಿಕೆಯ ಕರೆಗಂಟೆ ಎಂದೇ ಪರಿಗಣಿಸುವುದು ಯಾವುದಕ್ಕೂ ಉತ್ತಮ. ಏಕೆಂದರೆ, ಭಾರತದಲ್ಲಿಯೂ ಕೂಡ ಕಳೆದ ಕೆಲ ವರ್ಷಗಳಲ್ಲಿ ಸೈಬರ್ ವಂಚನೆಯ ಪ್ರಕರಣಗಳಲ್ಲಿ ಹೆಚ್ಚಳವಾಗಿದೆ. ಇತ್ತೀಚೆಗಷ್ಟೇ ದೆಹಲಿಯಲ್ಲಿ ವ್ಯಾಪಾರಿಯೋಬ್ಬರನ್ನು ಬಲೆಗೆ ಬೀಳಿಸಿ ವಂಚಕರು 50 ಲಕ್ಷ ರೂ.ಗಳನ್ನು ದೋಚಿದ್ದು ಇಲ್ಲಿ ಉಲ್ಲೇಖನೀಯ. ಸಿಮ್ ಸ್ವ್ಯಾಪಿಂಗ್, ಕ್ಯೂಆರ್ ಕೋಡ್ ಸ್ಕ್ಯಾಮ್ ಹಾಗೂ ಪಿಶಿಂಗ್ ಲಿಂಕ್ ನ ಹಲವು ಪ್ರಕರಣಗಳು ವೈರಲ್ ಆಗುತ್ತಿವೆ. ಇಂತಹ ಸೈಬರ್ ವಂಚನೆಯ ಪ್ರಕರಣಗಳಿಂದ ನಮ್ಮನ್ನು ನಾವು ಸುರಕ್ಷಿತವಾಗಿರಿಸುವ ಒಂದೇ ಒಂದು ವಿಧಾನ ಎಂದರೆ ಅದು ಮುಂಜಾಗ್ರತೆವಹಿಸುವುದಾಗಿದೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News