ಏರ್‌ಟೆಲ್ ಬಳಕೆದಾರರಿಗೆ ಗುಡ್ ನ್ಯೂಸ್! ಈ ಅಗ್ಗದ ಪ್ಲಾನ್‌ನಲ್ಲಿ ಪ್ರತಿದಿನ 2GB ಡೇಟಾ ಲಭ್ಯ

Airtel Rs 299 Plan Upgrade : ಏರ್‌ಟೆಲ್ ತನ್ನ   299 ರೂ. ಪ್ಲಾನ್ ಅನ್ನು ಅಪ್ಗ್ರೇಡ್ ಮಾಡಿದೆ. ಅಧಿಕೃತ ವೆಬ್‌ಸೈಟ್ ಪ್ರಕಾರ, ಈ ಯೋಜನೆಗೆ ಹೆಚ್ಚುವರಿ ಪ್ರಯೋಜನಗಳನ್ನು ಸೇರಿಸಲಾಗಿದೆ. 

Written by - Ranjitha R K | Last Updated : Sep 11, 2023, 02:57 PM IST
  • ಏರ್‌ಟೆಲ್ ತನ್ನ 299 ರೂ. ಪ್ಲಾನ್ ಅನ್ನು ಅಪ್ಗ್ರೇಡ್
  • ಏರ್‌ಟೆಲ್ ರೂ 299 ಪ್ಲಾನ್ ಪ್ರಯೋಜನಗಳು
  • ಸಿಗಲಿದೆ ಈ ಎಲ್ಲಾ ಪ್ರಯೋಜನ
ಏರ್‌ಟೆಲ್ ಬಳಕೆದಾರರಿಗೆ ಗುಡ್ ನ್ಯೂಸ್! ಈ ಅಗ್ಗದ ಪ್ಲಾನ್‌ನಲ್ಲಿ ಪ್ರತಿದಿನ 2GB ಡೇಟಾ ಲಭ್ಯ  title=

Airtel Rs 299 Plan Upgrade : ನೀವು ಏರ್‌ಟೆಲ್ ಪ್ರಿಪೇಯ್ಡ್ ಬಳಕೆದಾರರಾಗಿದ್ದರೆ ಈ ಸುದ್ದಿ ನಿಮಗೆ ಉಪಯುಕ್ತವಾಗಿರಲಿದೆ. ಏರ್‌ಟೆಲ್ ತನ್ನ  299 ರೂ. ಪ್ಲಾನ್ ಅನ್ನು ಅಪ್ಗ್ರೇಡ್ ಮಾಡಿದೆ  ಈ ಯೋಜನೆಯಲ್ಲಿ ಹೆಚ್ಚಿನ ಡೇಟಾ ಲಭ್ಯವಿದೆ. ಮೊದಲು ಈ ಯೋಜನೆಯಲ್ಲಿ ಪ್ರತಿದಿನ 1.5GB ಡೇಟಾ ಮಾತ್ರ ಸಿಗುತ್ತಿತ್ತು. ಆದರೆ, ಅಧಿಕೃತ ವೆಬ್‌ಸೈಟ್ ಪ್ರಕಾರ, ಈ ಯೋಜನೆಗೆ ಹೆಚ್ಚುವರಿ ಪ್ರಯೋಜನಗಳನ್ನು ಸೇರಿಸಲಾಗಿದೆ. 

ಏರ್‌ಟೆಲ್ ರೂ 299 ಪ್ಲಾನ್ ಪ್ರಯೋಜನಗಳು : 
ಏರ್‌ಟೆಲ್ ತನ್ನ 299 ರೂ. ಪ್ರಿಪೇಯ್ಡ್ ರೀಚಾರ್ಜ್ ಯೋಜನೆಯಲ್ಲಿ ಪ್ರಮುಖ ಬದಲಾವಣೆಯನ್ನು ಮಾಡಿದೆ. ಇದು ತಮ್ಮ ಮೊಬೈಲ್ ಡೇಟಾವನ್ನು ಅವಲಂಬಿಸಿರುವ ಬಳಕೆದಾರರಿಗೆ ಉತ್ತಮ  ಲಾಭ ನೀಡಲಿದೆ. ಹೊಸ ಪ್ಲಾನ್ ಅಡಿಯಲ್ಲಿ ದಿನಕ್ಕೆ 2GB ಡೇಟಾ ಸಿಗಲಿದೆ. 

ಇದನ್ನೂ ಓದಿ : ಡಿಎಫ್ಎಸ್ಎಆರ್: ಚಂದ್ರ ಮತ್ತು ಗ್ರಹಗಳ ರಹಸ್ಯಗಳನ್ನು ಹೊರಗೆಳೆಯುವ ಕೀಲಿಕೈ!

 ಈ ಪ್ಲಾನ್ ನಲ್ಲಿ ಒಟ್ಟು 14GB ಹೆಚ್ಚುವರಿ ಡೇಟಾ ಕೂಡಾ ಸಿಗುತ್ತದೆ. ಅಲ್ಲದೆ, ಅನಿಯಮಿತ ಧ್ವನಿ ಕರೆಗಳು ಮತ್ತು ದಿನಕ್ಕೆ 100 SMS ಜೊತೆಗೆ  28 ದಿನಗಳ ಮಾನ್ಯತೆಯನ್ನು ಒಳಗೊಂಡಿದೆ.

ಸಿಗಲಿದೆ ಈ ಎಲ್ಲಾ ಪ್ರಯೋಜನ : 
ಏರ್‌ಟೆಲ್ ತನ್ನ  299 ರೂ ಟ್ರೂಲಿ ಅನ್‌ಲಿಮಿಟೆಡ್ ಯೋಜನೆಗೆ ಅನೇಕ ಆಕರ್ಷಕ  ಪ್ರಯೋಜನಗಳನ್ನು ಸೇರಿಸಿದೆ. ಹೊಸ ಪ್ರಯೋಜನಗಳಲ್ಲಿ ಅನಿಯಮಿತ 5G ಡೇಟಾ, 3 ತಿಂಗಳವರೆಗೆ Apollo 24X7 ಸರ್ಕಲ್ ಸದಸ್ಯತ್ವ, ಉಚಿತ Wynk ಮ್ಯೂಸಿಕ್,  ಉಚಿತ HelloTunes ಸೇರಿವೆ.

ಇದನ್ನೂ ಓದಿ : Jio ಬೆವರಿಳಿಸಲು ಅದ್ಭುತ ಪ್ಲಾನ್ ಪರಿಚಯಿಸಿದೆ ಈ ಟೆಲಿಕಾಂ ಕಂಪನಿ, ಹೆಚ್ಚುವರಿ ಶುಲ್ಕ ಇಲ್ಲದೆ ನಿತ್ಯ 2 ಜಿಬಿ ಡೇಟಾ ಉಚಿತ!

5G ಡೇಟಾವು 5G ನೆಟ್‌ವರ್ಕ್ ಪ್ರದೇಶಗಳಲ್ಲಿ ಮಾತ್ರ ಲಭ್ಯವಿರುತ್ತದೆ ಮತ್ತು ಈ ಯೋಜನೆಯಲ್ಲಿ ಹೆಚ್ಚುವರಿ ಡೇಟಾ  ಸಿಗುತ್ತದೆ.  Apollo 24X7 ಸರ್ಕಲ್ ಸದಸ್ಯತ್ವದ ಮೂಲಕ 24/7 ವೈದ್ಯಕೀಯ ಸಹಾಯ, ಉಚಿತ ವೈದ್ಯಕೀಯ ಪರೀಕ್ಷೆಗಳು ಮತ್ತು ಇತರ ಪ್ರಯೋಜನಗಳನ್ನು  ಪಡೆಯಬಹುದು. Wynk Music ಮೂಲಕ 50 ಲಕ್ಷಕ್ಕೂ ಹೆಚ್ಚು ಹಾಡುಗಳು ಮತ್ತು ವೀಡಿಯೊಗಳನ್ನು ಉಚಿತವಾಗಿ ಕ ಆನಂದಿಸಬಹುದು. HelloTunes ನಿಮ್ಮ ಮೆಚ್ಚಿನ ಹಾಡುಗಳು ಮತ್ತು ಟೋನ್ ಗಳನ್ನು  ಕಾಲರ್ ಟ್ಯೂನ್ ಆಗಿ ಬಳಸಲು ಅನುಮತಿಸುತ್ತದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News