ಒಂದು ವರ್ಷದ ಕೂಲ್ ಪ್ಲಾನ್ ಪರಿಚಯಿಸಿದ ಏರ್‌ಟೆಲ್! 5 ರೂ.ಗಿಂತ ಕಡಿಮೆ ಬೆಲೆಯಲ್ಲಿ ಹಲವು ಲಾಭ

Airtel: ಏರ್‌ಟೆಲ್ ಕಂಪನಿಯು ತನ್ನ ಗ್ರಾಹಕರಿಗಾಗಿ ಒಂದು ವರ್ಷದ ವ್ಯಾಲಿಡಿಟಿಯೊಂದಿಗೆ ಕೂಲ್ ಪ್ಲಾನ್ ಅನ್ನು ಪರಿಚಯಿಸಿದೆ. ಈ ಯೋಜನೆಯಲ್ಲಿ ವರ್ಷದ ಮಾನ್ಯತೆಯ ಜೊತೆಗೆ ಹಲವು ಇತರ ಪ್ರಯೋಜನಗಳು ಅತ್ಯಂತ ಕಡಿಮೆ ಬೆಲೆಯಲ್ಲಿ ಲಭ್ಯವಿದೆ. 

Written by - Yashaswini V | Last Updated : Sep 1, 2022, 09:50 AM IST
  • ಏರ್‌ಟೆಲ್ ಈ ಯೋಜನೆಯೊಂದಿಗೆ ಹೆಚ್ಚುವರಿ ಪ್ರಯೋಜನಗಳನ್ನು ಸಹ ನೀಡುತ್ತದೆ.
  • ಬಳಕೆದಾರರು ಅಪೋಲೋ 24/7 ಸರ್ಕಲ್, ಫಾಸ್ಟ್ಯಾಗ್‌ನಲ್ಲಿ 100ರೂ. ಕ್ಯಾಶ್‌ಬ್ಯಾಕ್, ಉಚಿತ ಹಲೋಟ್ಯೂನ್ಸ್ ಮತ್ತು ವಿಂಕ್ ಮ್ಯೂಸಿಕ್ ಪಡೆಯಬಹುದು.
  • ನೀವು ಪರ್ ಡೇ ಪ್ರಕಾರ ನೋಡಿದರೆ, ಒಂದು ದಿನದ ಬೆಲೆ 4.9 ರೂ.
ಒಂದು ವರ್ಷದ ಕೂಲ್ ಪ್ಲಾನ್ ಪರಿಚಯಿಸಿದ ಏರ್‌ಟೆಲ್!  5 ರೂ.ಗಿಂತ ಕಡಿಮೆ ಬೆಲೆಯಲ್ಲಿ ಹಲವು ಲಾಭ  title=
Airtel Prepaid Plan

ಅಗ್ಗದ ದರದಲ್ಲಿ ಏರ್‌ಟೆಲ್ ವರ್ಷದ ಯೋಜನೆ: ಭಾರತದಲ್ಲಿ ಎರಡನೇ ಅತಿ ದೊಡ್ಡ ಟೆಲಿಕಾಂ ಆಪರೇಟರ್ ಆದ ಏರ್‌ಟೆಲ್  ತನ್ನ ಗ್ರಾಹಕರಿಗಾಗಿ ಒಂದು ವರ್ಷದ ವ್ಯಾಲಿಡಿಟಿಯೊಂದಿಗೆ ಕೂಲ್ ಪ್ಲಾನ್ ಅನ್ನು ಪರಿಚಯಿಸಿದೆ. ನೀವು ಏರ್‌ಟೆಲ್ ಬಳಕೆದಾರರಾಗಿದ್ದರೆ,  ಒಂದು ವರ್ಷದವರೆಗೆ ವ್ಯಾಲಿಡಿಟಿ ಮತ್ತು ಹಲವು ಇತರ ಪ್ರಯೋಜನಗಳನ್ನು ಅತ್ಯಂತ ಕಡಿಮೆ ಬೆಲೆಯಲ್ಲಿ ಆನಂದಿಸಬಹುದು. 

ಕಡಿಮೆ ಬೆಲೆಯಲ್ಲಿ ಹೆಚ್ಚಿನ ಪ್ರಯೋಜನಗಳಿಗೆ ಹೆಸರುವಾಸಿಯಾಗಿರುವ ರಿಲಯನ್ಸ್ ಜಿಯೋಗೆ ಏರ್‌ಟೆಲ್ ನೇರ ಸ್ಪರ್ಧೆಯನ್ನು ನೀಡುತ್ತಿದೆ. ಅತ್ಯಂತ ಕಡಿಮೆ ಬೆಲೆಯಲ್ಲಿ ಒಂದು ವರ್ಷದವರೆಗೆ ವ್ಯಾಲಿಡಿಟಿಯನ್ನು ನೀಡುವ ಏರ್‌ಟೆಲ್ ಇಂತಹ ಪ್ಲಾನ್ ಬಗ್ಗೆ ಈ ಲೇಖನದಲ್ಲಿ ಮಾಹಿತಿ ನೀಡಲಿದ್ದೇವೆ. ಇದರಲ್ಲಿ ಕಡಿಮೆ ಬೆಲೆಯಲ್ಲಿ ಹಲವಾರು ಪ್ರಯೋಜನಗಳು ಲಭ್ಯವಿದೆ.

ಇದನ್ನೂ ಓದಿ- ಭಾರತದಲ್ಲಿ Nokia 2660 Flip 4G ಫೀಚರ್ ಫೋನ್ ಬಿಡುಗಡೆ-ಬೆಲೆ, ವೈಶಿಷ್ಟ್ಯ ತಿಳಿಯಿರಿ

ಏರ್‌ಟೆಲ್ ಬಳಕೆದಾರರಿಗೆ 1799 ರೂ.ಗಳ ಪ್ರಿಪೇಯ್ಡ್ ಯೋಜನೆಯನ್ನು ನೀಡುತ್ತಿದೆ. ಈ ಯೋಜನೆಯು 365 ದಿನಗಳ ಸೇವಾ ಮಾನ್ಯತೆಯೊಂದಿಗೆ ಬರುತ್ತದೆ. ಇದು ಗ್ರಾಹಕರಿಗೆ ಅನಿಯಮಿತ ಧ್ವನಿ ಕರೆ ಮತ್ತು 24ಜಿಬಿ ಡೇಟಾದೊಂದಿಗೆ ಒಟ್ಟು 3600 ಎಸ್ಎಂಎಸ್ ಅನ್ನು ನೀಡುತ್ತದೆ. ನೀಡಲಾದ ಡೇಟಾವು ಲುಂಪ್ಸಮ್ ಸ್ವರೂಪದ್ದಾಗಿದೆ, ಅಂದರೆ ದಿನಕ್ಕೆ 2ಜಿಬಿ ಅಥವಾ 3ಜಿಬಿ ಡೇಟಾಗೆ ಸೀಮಿತವಾಗಿರುವುದರ ಬಗ್ಗೆ ನೀವು ಚಿಂತಿಸಬೇಕಾಗಿಲ್ಲ. 

ಏರ್‌ಟೆಲ್ 1799 ರೂ. ಪ್ರಿಪೇಯ್ಡ್ ಪ್ಲಾನ್ ಪ್ರಯೋಜನಗಳು: 
ಈ ಯೋಜನೆಯು ಯಾವುದೇ ಹೆಚ್ಚಿನ ಡೇಟಾವನ್ನು ಒದಗಿಸುವುದಿಲ್ಲ, ಅಂದರೆ ಒಮ್ಮೆ ನೀವು 24ಜಿಬಿ ಡೇಟಾವನ್ನು ಉಪಯೋಗಿಸಿದ ನಂತರ ಮೊಬೈಲ್ ಡೇಟಾ ಸೇವೆಯನ್ನು ಪಡೆಯುವುದನ್ನು ಮುಂದುವರಿಸಲು ನೀವು ಏರ್‌ಟೆಲ್‌ನ 4ಜಿ ಡೇಟಾ ವೋಚರ್‌ನೊಂದಿಗೆ ರೀಚಾರ್ಜ್ ಮಾಡಬೇಕಾಗುತ್ತದೆ. ಹೆಚ್ಚಿನ ಡೇಟಾ ಅಗತ್ಯವಿಲ್ಲದ ಬಳಕೆದಾರರಿಗೆ ಈ ಯೋಜನೆಯು ಸಾಕಷ್ಟು ಸೂಕ್ತವಾಗಿದೆ. ನೀವು ಹೆಚ್ಚಾಗಿ ಬ್ರಾಡ್‌ಬ್ಯಾಂಡ್ ವೈ-ಫೈ ಸೌಲಭ್ಯವನ್ನು ಪಡೆಯುವ ಮನೆ ಅಥವಾ ಕಚೇರಿಯಿಂದ ಕೆಲಸ ಮಾಡುತ್ತಿದ್ದರೆ, ನೀವು ಹೆಚ್ಚಿನ ಮೊಬೈಲ್ ಡೇಟಾವನ್ನು ಬಳಸುವುದಿಲ್ಲ ಎಂದಾದರೆ  ಈ ಯೋಜನೆಗೆ ಚಂದಾದಾರರಾಗಬಹುದು.

ಇದನ್ನೂ ಓದಿ- OPPO ಬಿಡುಗಡೆ ಮಾಡಿದೆ 15,000 ರೂ.ಗಿಂತ ಕಡಿಮೆ ಬೆಲೆಯ ಸ್ಮಾರ್ಟ್‌ಫೋನ್

ಏರ್‌ಟೆಲ್‌ನ ಈ ಯೋಜನೆಯಲ್ಲಿ ಹಲವು ಕೊಡುಗೆಗಳು ಲಭ್ಯವಿವೆ:
ಹೆಚ್ಚಿನ ಡೇಟಾವನ್ನು ಬಳಸದ ವಯಸ್ಸಾದವರಿಗೆ ಇದು ಉತ್ತಮವಾಗಿದೆ. ಅಂದರೆ, ವಾಟ್ಸಾಪ್ ಅನ್ನು ಮಾತ್ರ ಬಳಸುವವರಿಗೆ ಇದು ಸೂಕ್ತವಾದ ಯೋಜನೆಯಾಗಿದೆ. ಏರ್‌ಟೆಲ್ ಈ ಯೋಜನೆಯೊಂದಿಗೆ ಹೆಚ್ಚುವರಿ ಪ್ರಯೋಜನಗಳನ್ನು ಸಹ ನೀಡುತ್ತದೆ. ಬಳಕೆದಾರರು ಅಪೋಲೋ 24/7 ಸರ್ಕಲ್, ಫಾಸ್ಟ್ಯಾಗ್‌ನಲ್ಲಿ 100ರೂ. ಕ್ಯಾಶ್‌ಬ್ಯಾಕ್, ಉಚಿತ ಹಲೋಟ್ಯೂನ್ಸ್ ಮತ್ತು ವಿಂಕ್ ಮ್ಯೂಸಿಕ್ ಪಡೆಯಬಹುದು. ಯೋಜನೆಯೊಂದಿಗೆ ನೀಡಲಾಗುವ 3600 ಎಸ್ಎಂಎಸ್ ಒಂದೇ ಮೊತ್ತದಲ್ಲಿ ಬರುವುದಿಲ್ಲ. ಒಂದು ದಿನದಲ್ಲಿ, ಬಳಕೆದಾರರು 100 ಎಸ್ಎಂಎಸ್ ಅನ್ನು ಮಾತ್ರ ಬಳಸಲು ಸಾಧ್ಯವಾಗುತ್ತದೆ. ನೀವು ಪರ್ ಡೇ ಪ್ರಕಾರ ನೋಡಿದರೆ, ಒಂದು ದಿನದ ಬೆಲೆ 4.9 ರೂ. ಅಂದರೆ, ದಿನಕ್ಕೆ 5 ರೂಪಾಯಿಗಿಂತ ಕಡಿಮೆ ಖರ್ಚು ಮಾಡುವ ಮೂಲಕ, ನೀವು ಡೇಟಾ, 100 ಎಸ್ಎಂಎಸ್ ಮತ್ತು ಅನಿಯಮಿತ ಕರೆ ಸೌಲಭ್ಯವನ್ನು ಪಡೆಯಬಹುದು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News