Aadhaar Card:e-Aadhaarಗೆ ಮಾನ್ಯತೆ ಎಷ್ಟು? ಇದಕ್ಕಾಗಿ ಯಾವ ಸಂಗತಿಗಳು ಬೇಕು... ಇಲ್ಲಿದೆ ವಿವರ

Aadhaar Card:ಎಲ್ಲಾ ಉದ್ದೇಶಗಳಿಗಾಗಿ ಆಧಾರ್‌ನ ಹಾರ್ಡ್ ಕಾಪಿಯಂತೆ ಇ-ಆಧಾರ್ ಮಾನ್ಯತೆಯನ್ನು ಹೊಂದಿದೆ.

Written by - Nitin Tabib | Last Updated : Oct 9, 2021, 11:56 AM IST
  • ಆಧಾರ್ ಕಾರ್ಡ್ ಇಂದು ದೇಶದಲ್ಲಿ ವ್ಯಕ್ತಿಯೊಬ್ಬನ ಪ್ರಮುಖ ದಾಖಲೆಯಾಗಿದೆ.
  • ವ್ಯಕ್ತಿಯ ಗುರುತಿನಿಂದ ಹಿಡಿದು ಇತರ ಹಲವು ಕೆಲಸಗಳಿಗೆ ಇದು ಅಗತ್ಯವಿದೆ.
  • ಅನೇಕ ಜನರ ಬಳಿ ಅದರ ಹಾರ್ಡ್ ಕಾಪಿ (Aadhaar Card) ಇಲ್ಲ.
Aadhaar Card:e-Aadhaarಗೆ ಮಾನ್ಯತೆ ಎಷ್ಟು? ಇದಕ್ಕಾಗಿ ಯಾವ ಸಂಗತಿಗಳು ಬೇಕು... ಇಲ್ಲಿದೆ ವಿವರ title=
How To Check Validity Of e-Aadhaar Card (File Photo)

Aadhaar Card: ಆಧಾರ್ ಕಾರ್ಡ್ ಇಂದು ದೇಶದಲ್ಲಿ ವ್ಯಕ್ತಿಯೊಬ್ಬನ ಪ್ರಮುಖ ದಾಖಲೆಯಾಗಿದೆ. ವ್ಯಕ್ತಿಯ ಗುರುತಿನಿಂದ  ಹಿಡಿದು ಇತರ ಹಲವು ಕೆಲಸಗಳಿಗೆ ಇದು ಅಗತ್ಯವಿದೆ. ಅನೇಕ ಜನರ ಬಳಿ ಅದರ ಹಾರ್ಡ್ ಕಾಪಿ (Aadhaar Card) ಇಲ್ಲ. ಇಂದು ಅವರು ಇ-ಆಧಾರ್ (e-Aadhaar Card) ಅನ್ನು ಬಳಸುತ್ತಾರೆ. ಇ-ಆಧಾರ್ ಎಷ್ಟು ಮಾನ್ಯವಾಗಿದೆ ಮತ್ತು ಅದನ್ನು ಎಲ್ಲಿ ಬಳಸಬಹುದು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

UIDAI ವೆಬ್‌ಸೈಟ್ ನಲ್ಲಿ ನೀಡಿರುವ ಮಾಹಿತಿ ಪ್ರಕಾರ, ಆಧಾರ್ ಕಾರ್ಡ್‌ನ ಹಾರ್ಡ್ ಕಾಪಿಯಂತೆಯೇ ಇ-ಆಧಾರ್ ಕಾರ್ಡ್ ಮಾನ್ಯತೆಯನ್ನು ಹೊಂದಿದೆ. ಇದನ್ನು ಇಂಟರ್ನೆಟ್ ಮೂಲಕ ಡಿಜಿಟಲ್ ಆಗಿ ಬಳಸುವುದರಿಂದ, ಇದನ್ನು ಇ-ಆಧಾರ್ ಎಂದು ಕರೆಯಲಾಗುತ್ತದೆ. ಇದನ್ನು ಪಾಸ್ವರ್ಡ್ ರಕ್ಷಿತ ಎಲೆಕ್ಟ್ರಾನಿಕ್ ನಕಲು ಎಂದೂ ಕರೆಯಬಹುದು. ನೀವೂ ಕೂಡ ಇದನ್ನು ಡೌನ್ಲೋಡ್ ಮಾಡಲು ಬಯಸುತ್ತಿದ್ದರೆ, https://uidai.gov.in ವೆಬ್ ತಾಣಕ್ಕೆ ಭೇಟಿ ನೀಡುವ ಮೂಲಕ ಡೌನ್ಲೋಡ್ ಮಾಡಬಹುದು.

ಇದನ್ನೂ ಓದಿ-Aadhaar Card: ರಿಜಿಸ್ಟರ್ ಮೊಬೈಲ್ ಸಂಖ್ಯೆ ಇಲ್ಲದೆಯೂ ಆಧಾರ್ ಕಾರ್ಡ್ ಡೌನ್‌ಲೋಡ್ ಮಾಡಬಹುದು, ಹೇಗೆ ಗೊತ್ತಾ?

ಈ ಲಿಂಕ್ ಬಳಸಿ ಅದರ ವ್ಯಾಲಿಡಿಟಿಯನ್ನು ಪರಿಶೀಲಿಸಬಹುದು (How To Check Validity Of e-Aadhaar Card)
ಆಧಾರ್ ಕಾಯ್ದೆಯ ಪ್ರಕಾರ, ಆಧಾರ್‌ನ ಭೌತಿಕ ಪ್ರತಿಯಂತೆಯೇ  ಇ-ಆಧಾರ್ ಕೂಡ ಎಲ್ಲಾ ಉದ್ದೇಶಗಳಿಗೂ ಸಮಾನ ಮಾನ್ಯತೆಯನ್ನು ಹೊಂದಿದೆ. ಡಿಜಿಟಲ್ ಕೆಲಸ ಮಾಡಿದ ಎಲ್ಲೆಡೆ ಇದನ್ನು ಸ್ವೀಕರಿಸಬಹುದು. ನೀವು ಆಧಾರ್ ನ ಹಾರ್ಡ್ ಕಾಪಿ ಹಾಗೂ ಇ-ಆಧಾರ್ ನ ಪ್ರತಿಯನ್ನು ಇಟ್ಟುಕೊಳ್ಳಬಹುದು. ಇ-ಆಧಾರ್‌ನ ಸಿಂಧುತ್ವದ ಬಗ್ಗೆ ನೀವು ಇನ್ನಷ್ಟು ಮಾಹಿತಿ ಪಡೆಯಬೇಕು ಎಂದರೆ https://uidai.gov.in/images/uidai_om_on_e_aadhaar_validity.pdf   ಲಿಂಕ್ ಮೇಲೆ ಕ್ಲಿಕ್ಕಿಸಿ ನೀವು ಮಾಹಿತಿಯನ್ನು ಪಡೆಯಬಹುದು.

ಇದನ್ನೂ ಓದಿ-Aadhaar Card Update: ಈಗ ನಿಮ್ಮ ಆಧಾರ್ ಕಾರ್ಡ್ ಕಳೆದುಹೋದರೂ ಚಿಂತಿಸಬೇಕಿಲ್ಲ

ಈ ಸಂಗತಿಗಳು ಅವಶ್ಯಕ (e-Aadhaar Card Requirements)
ಒಂದು ವೇಳೆ ನಿಮತೆ ಇ ಆಧಾರ್ ಕಾರ್ಡ್ ಅವಶ್ಯಕತೆ ಇದೆ ಮತ್ತು ಅದನ್ನು ನೀವು ಪಡೆಯಲು ಬಯಸುತ್ತಿದ್ದರೆ. ಇದಕ್ಕಾಗಿ ನಿಮ್ಮ ಬಳಿ ನಿಮ್ಮ ಆಧಾರ್ ನೋಂದಣಿ ಸಂಖ್ಯೆ ಅಥವಾ ಆಧಾರ್ ಸಂಖ್ಯೆ ಇರಬೇಕು. ಇದಲ್ಲದೆ ನಿಮ್ಮ ಬಳಿ ರಿಜಿಸ್ಟರ್ಡ್ ಮೊಬೈಲ್ ಸಂಖ್ಯೆ ಇರಬೇಕು. ನೀವು ನಿಮ್ಮ ನಿವಾಸ ಸ್ಥಾನದ ಸಂಪೂರ್ಣ ಮಾಹಿತಿ ಒದಗಿಸಬೇಕು.

ಇದನ್ನೂ ಓದಿ-Aadhaar ಡೇಟಾ ಸೋರಿಕೆ ಭಯ ಬಿಡಿ; ಇಲ್ಲಿದೆ ಲಾಕ್ ಮಾಡುವ ಮಾರ್ಗ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
 

Trending News