Aadhaar Card ಅನ್ನು ಸುರಕ್ಷಿತವಾಗಿರಿಸಲು ಈ ರೀತಿ ಲಾಕ್ ಮಾಡಿ

ನಿಮ್ಮ ಆಧಾರ್ ಕಾರ್ಡ್ ದುರುಪಯೋಗವಾಗಬಾರದು ಮತ್ತು ನೀವು ಮೋಸವನ್ನು ತಪ್ಪಿಸಬಹುದು ಎಂದು ನೀವು ಬಯಸಿದರೆ, ಇದಕ್ಕಾಗಿ ಆಧಾರ್ ಕಾರ್ಡ್ ಅನ್ನು ಲಾಕ್ ಮಾಡುವುದು ಬಹಳ ಮುಖ್ಯ.

Written by - Yashaswini V | Last Updated : Jul 28, 2021, 01:11 PM IST
  • ಬ್ಯಾಂಕಿನಲ್ಲಿ ಖಾತೆ ತೆರೆಯುವುದರಿಂದ ಹಿಡಿದು ಆದಾಯ ತೆರಿಗೆ ರಿಟರ್ನ್ ಸಲ್ಲಿಸುವವರೆಗೆ, ಪ್ರತಿ ಕಾರ್ಯಕ್ಕೂ ಆಧಾರ್ ಕಾರ್ಡ್ ಅಗತ್ಯ
  • ಅಷ್ಟೇ ಅಲ್ಲ ಇದು ಒಂದು ಪ್ರಮುಖ ಐಡಿ ಪುರಾವೆಯಾಗಿದೆ
  • ಆಧಾರ್ ಕಾರ್ಡ್‌ನಿಂದ ವಂಚನೆ ತಪ್ಪಿಸಲು, ಯುಐಡಿಎಐ ಜನರಿಗೆ ಆಧಾರ್ ಕಾರ್ಡ್ ಲಾಕ್ ಮಾಡಲು ಸೂಚನೆ ನೀಡಿದೆ
Aadhaar Card ಅನ್ನು ಸುರಕ್ಷಿತವಾಗಿರಿಸಲು ಈ ರೀತಿ ಲಾಕ್ ಮಾಡಿ title=
How To Lock Aadhaar Card

Aadhaar Card: ಇತ್ತೀಚೆಗೆ ಆಧಾರ್ ಕಾರ್ಡ್ ಇಂದು ಪ್ರಮುಖ ದಾಖಲೆಯಾಗಿ ಮಾರ್ಪಟ್ಟಿದೆ. ಇದು ಪ್ರತಿ ಸಣ್ಣ ಮತ್ತು ದೊಡ್ಡ ಕೆಲಸಗಳಲ್ಲೂ ಅಗತ್ಯವಾಗಿರುತ್ತದೆ. ಬ್ಯಾಂಕಿನಲ್ಲಿ ಖಾತೆ ತೆರೆಯುವುದರಿಂದ ಹಿಡಿದು ಆದಾಯ ತೆರಿಗೆ ರಿಟರ್ನ್ ಸಲ್ಲಿಸುವವರೆಗೆ, ಪ್ರತಿ ಕಾರ್ಯಕ್ಕೂ ಆಧಾರ್ ಕಾರ್ಡ್ ಅಗತ್ಯವಿದೆ. ಅಷ್ಟೇ ಅಲ್ಲ ಇದು ಒಂದು ಪ್ರಮುಖ ಐಡಿ ಪುರಾವೆಯಾಗಿದೆ. ಒಂದೇ ಡಾಕ್ಯುಮೆಂಟ್‌ನಿಂದ ಹಲವು ಪ್ರಮುಖ ಕೆಲಸಗಳನ್ನು ಮಾಡುತ್ತಿರುವಾಗ, ಅದರ ಸುರಕ್ಷತೆಯೂ ಬಹಳ ಮುಖ್ಯ. ಆಧಾರ್ ಕಾರ್ಡ್ ಕಳೆದು ಹೋದರೆ ನೀವು ತೊಂದರೆಗೆ ಸಿಲುಕಬಹುದು. ಆಧಾರ್ ಕಾರ್ಡ್‌ಗೆ ಸಂಬಂಧಿಸಿದ ಕೆಲವು ವಂಚನೆ ಪ್ರಕರಣಗಳೂ ಸಹ ಇತ್ತೀಚಿಗೆ ಬೆಳಕಿಗೆ ಬರುತ್ತಿವೆ. ಇದರಲ್ಲಿ ಆಧಾರ್ ವಿವರಗಳನ್ನು ಕದಿಯುವ ಮೂಲಕ ಜನರ ಬ್ಯಾಂಕ್ ಖಾತೆಗಳಿಂದ ಹಣವನ್ನು ಲೂಟಿ ಮಾಡಲಾಗುತ್ತಿದೆ ಎಂದೂ ಕೂಡ ವರದಿಯಾಗಿದೆ. ಅಂತಹ ಪರಿಸ್ಥಿತಿಯಲ್ಲಿ, ಆಧಾರ್ ಕಾರ್ಡ್‌ನ ಸುರಕ್ಷತೆಯು ಅತ್ಯಂತ ಪ್ರಮುಖ ವಿಷಯವಾಗಿದೆ. ಇದನ್ನು ಗಮನದಲ್ಲಿಟ್ಟುಕೊಂಡು, ಇತ್ತೀಚೆಗೆ ಯುಐಡಿಎಐ ಸಹ ಜನರಿಗೆ ಕೆಲವು ಸೂಚನೆಗಳನ್ನು ನೀಡಿದೆ. ಇದರಿಂದ ಅವರು ಇಂತಹ ವಂಚನೆಗಳನ್ನು ತಪ್ಪಿಸಬಹುದು. ನಿಮ್ಮ ಆಧಾರ್ ಕಾರ್ಡ್ ಅನ್ನು ನೀವು ಲಾಕ್ ಮಾಡಬಹುದು. ಆಧಾರ್ ಕಾರ್ಡ್ ಅನ್ನು ಲಾಕ್ ಮಾಡುವುದರಿಂದ ಯಾರೂ ಕೂಡ ಅದನ್ನು ದುರುಪಯೋಗಪಡಿಸಿಕೊಳ್ಳಲು ಸಾಧ್ಯವಾಗುವುದಿಲ್ಲ  ಎಂದು ಯುಐಡಿಎಐ ಹೇಳಿದೆ.

ಆಧಾರ್ ಕಾರ್ಡ್‌ನಿಂದ ವಂಚನೆ ತಪ್ಪಿಸಲು, ಯುಐಡಿಎಐ ಜನರಿಗೆ ಆಧಾರ್ ಕಾರ್ಡ್ ಲಾಕ್ ಮಾಡಲು ಸೂಚನೆ ನೀಡಿದೆ. ಅದರ ನಂತರ ನಿಮ್ಮ ಒಪ್ಪಿಗೆಯಿಲ್ಲದೆ ನಿಮ್ಮ ವೈಯಕ್ತಿಕ ಮಾಹಿತಿಯನ್ನು ತೆಗೆಯಲು ಯಾರಿಗೂ ಸಾಧ್ಯವಾಗುವುದಿಲ್ಲ. ಇದರೊಂದಿಗೆ ಯುಐಡಿಎಐ ತನ್ನ ಟ್ವಿಟ್ಟರ್ ಖಾತೆಯ ಮೂಲಕ ಯುಐಡಿಎಐನ ಅಪ್ಲಿಕೇಶನ್ ಅಥವಾ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ಆಧಾರ್ ಕಾರ್ಡ್ (Aadhaar Card)  ಅನ್ನು ಲಾಕ್ ಮಾಡಬಹುದು ಎಂದು ತಿಳಿಸಿದೆ. ಆಧಾರ್ ಕಾರ್ಡ್ ಅನ್ನು ಹೇಗೆ ಲಾಕ್ ಮಾಡುವುದು ಮತ್ತು ಅನ್ಲಾಕ್ ಮಾಡುವುದು ಎಂದು ತಿಳಿಯೋಣ.

ಇದನ್ನೂ ಓದಿ- Aadhaar Update: ಆಧಾರ್ ಕಾರ್ಡ್‌ನಲ್ಲಿರುವ ಚಿತ್ರ ಇಷ್ಟವಾಗುತ್ತಿಲ್ಲವೇ? ಅದನ್ನು ಈ ರೀತಿ ಬದಲಾಯಿಸಿ

ಆಧಾರ್ ಕಾರ್ಡ್ ಲಾಕ್ ಮಾಡುವುದು ಹೇಗೆ (How to lock Aadhaar Card)?
>> ಆಧಾರ್ ಕಾರ್ಡ್ ಲಾಕ್ (Aadhaar Card Lock) ಮಾಡಲು, ನೀವು ಮೊದಲು uidai.gov.in ವೆಬ್‌ಸೈಟ್‌ಗೆ ಹೋಗಬೇಕು.
>> ಆಧಾರ್ ಸೇವೆಗಳಲ್ಲಿ ಆಧಾರ್ ಅನ್ನು ಲಾಕ್ ಮತ್ತು ಅನ್ಲಾಕ್ ಮಾಡುವ ಆಯ್ಕೆಯನ್ನು ನೀವು ನೋಡುತ್ತಿರಿ. ಆ ಆಯ್ಕೆಯನ್ನು ಕ್ಲಿಕ್ ಮಾಡಿ.
>> ಅದರ ನಂತರ ಲಾಕ್ ಯುಐಡಿ ಕ್ಲಿಕ್ ಮಾಡಿ ಮತ್ತು ಅಲ್ಲಿ ನಿಮ್ಮ 12 ಅಂಕೆ ಆಧಾರ್ ಸಂಖ್ಯೆಯನ್ನು ನಮೂದಿಸಿ.
>> ಆಧಾರ್ ಸಂಖ್ಯೆಯನ್ನು ನಮೂದಿಸಿದ ನಂತರ, ನೀವು ಆಧಾರ್‌ನಲ್ಲಿ ನೀಡಲಾದ ವಿವರಗಳಾದ ಹೆಸರು ಮತ್ತು ಪಿನ್ ಕೋಡ್ ಅನ್ನು ಸಹ ನಮೂದಿಸಬೇಕಾಗುತ್ತದೆ.
>> ನಂತರ ಕ್ಯಾಪ್ಚಾ ಕೋಡ್ ನಮೂದಿಸಿ ಮತ್ತು ಸಲ್ಲಿಸಿ.
>> ಇದರ ನಂತರ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯಲ್ಲಿ ಒಟಿಪಿ ಬರುತ್ತದೆ.
>> ನೀವು ಈ ಒಟಿಪಿಯನ್ನು ನಮೂದಿಸಿದ ಕೂಡಲೇ ನಿಮ್ಮ ಆಧಾರ್ ಲಾಕ್ ಆಗುತ್ತದೆ.
>>ಇದೇ ಪ್ರಕ್ರಿಯೆಯ ಮೂಲಕ ನೀವು ಆಧಾರ್ ಅನ್ನು ಅನ್ಲಾಕ್ ಕೂಡ ಮಾಡಬಹುದು.

ಇದನ್ನೂ ಓದಿ- UIDAI Aadhaar Alert: ನಿಮ್ಮ ಆಧಾರ್ ಸಂಖ್ಯೆಯಿಂದ ಬ್ಯಾಂಕ್ ಖಾತೆ ಹ್ಯಾಕ್ ಆಗುವ ಅಪಾಯವಿದೆಯೇ? ಯುಐಡಿಎಐ ಹೇಳಿದ್ದೇನು?

ನೀವು SMS ಮೂಲಕವೂ ಆಧಾರ್ ಕಾರ್ಡ್ ಅನ್ನು ಲಾಕ್ ಮಾಡಬಹುದು:
** ಆಧಾರ್ ಅನ್ನು ಲಾಕ್ ಮಾಡಲು ನೀವು SMS ಅನ್ನು ಸಹ ಬಳಸಬಹುದು.
** ಇದಕ್ಕಾಗಿ ನೀವು 16 ಅಂಕಿಯ ವಿಐಡಿ ಸಂಖ್ಯೆಯನ್ನು ಹೊಂದಿರಬೇಕು. ಇಲ್ಲದಿದ್ದರೆ, ನೀವು ಅದನ್ನು ಯುಐಡಿಎಐ ವೆಬ್‌ಸೈಟ್‌ನಲ್ಲಿ ರೆಸಿಡೆಂಟ್ ಪೋರ್ಟಲ್ ಮೂಲಕ ರಚಿಸಬಹುದು.
** ಇದರ ನಂತರ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯಿಂದ 1947 ಗೆ SMS ಮಾಡಬೇಕು. ಈ ಸಂದೇಶದಲ್ಲಿ, ನೀವು GETOTP ಅನ್ನು ಟೈಪ್ ಮಾಡುವ ಮೂಲಕ ಆಧಾರ್ ಸಂಖ್ಯೆಯ ಕೊನೆಯ 4 ಅಂಕೆಗಳನ್ನು ನಮೂದಿಸಬೇಕು.
** ನೀವು ಸಂದೇಶವನ್ನು ಕಳುಹಿಸಿದ ತಕ್ಷಣ, ನೀವು ಯುಐಡಿಎಐನಿಂದ ಸಂದೇಶವನ್ನು ಪಡೆಯುತ್ತೀರಿ, ಇದರಲ್ಲಿ 6 ಅಂಕಿಯ ಒಟಿಪಿ ನೀಡಲಾಗುತ್ತದೆ.
** ಒಟಿಪಿ ಪಡೆದ ನಂತರ, ನೀವು ಇನ್ನೊಂದು ಸಂದೇಶವನ್ನು ಕಳುಹಿಸಬೇಕು. ಇದರಲ್ಲಿ, ನೀವು ಆಧಾರ್ ಸಂಖ್ಯೆಯ ಕೊನೆಯ 4 ಅಂಕೆಗಳನ್ನು LOCKUID ಮತ್ತು ನಿಮಗೆ ಬಂದ OTP ಸಂಖ್ಯೆಯೊಂದಿಗೆ ಬರೆಯಬೇಕಾಗಿದೆ.
** ಈ ಸಂದೇಶದ ನಂತರ, ಯುಐಡಿಎಐ ನಿಮ್ಮ ಆಧಾರ್ ಸಂಖ್ಯೆಯನ್ನು ಲಾಕ್ ಮಾಡುತ್ತದೆ ಮತ್ತು ನಿಮಗೆ ದೃಢೀಕರಣ ಸಂದೇಶವನ್ನು ಕಳುಹಿಸುತ್ತದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News