Airtel ಬಳಕೆದಾರರಿಗೆ ಸಿಹಿ ಸುದ್ದಿ : ಪ್ರತಿ ದಿನ ಸಿಗಲಿದೆ 500MB ಫ್ರೀ ಡೇಟಾ

ಏರ್‌ಟೆಲ್  249 ರೂ. ಪ್ಲಾನ್‌ ನಲ್ಲಿ ಈ ಹಿಂದೆ ನೀಡಲಾಗಿದ್ದ ಎಲ್ಲಾ ಪ್ರಯೋಜನಗಳು ಹಾಗೇ ಇರಲಿದೆ. ಅದರ ಜೊತೆಗೆ 500MB ಉಚಿತ ಡೇಟಾವನ್ನು ಕೂಡ ಸೇರಿಸಿದೆ.

Written by - Ranjitha R K | Last Updated : Nov 15, 2021, 12:11 PM IST
  • Airtel ಗ್ರಾಹಕರಿಗೆ ಸಿಗಲಿದೆ ಅದ್ಬುತ ಪ್ಯಾಕೇಜ್‌
  • ಪ್ರತಿ ದಿನ ಸಿಗಲಿದೆ 500MB ಡೇಟಾ ಆಫರ್‌
  • ಈಗಿರುವ ಪ್ಲಾನ್‌ ನಲ್ಲಿ ಸಿಗಲಿದೆ ಹೆಚ್ಚುವರಿ ಪ್ರಯೋಜನ
Airtel ಬಳಕೆದಾರರಿಗೆ ಸಿಹಿ ಸುದ್ದಿ : ಪ್ರತಿ ದಿನ ಸಿಗಲಿದೆ 500MB ಫ್ರೀ ಡೇಟಾ title=
Airtel ಗ್ರಾಹಕರಿಗೆ ಸಿಗಲಿದೆ ಅದ್ಬುತ ಪ್ಯಾಕೇಜ್‌ (file photo)

ನವದೆಹಲಿ : ಭಾರತದ ಅತ್ಯಂತ ಹಳೆಯ ಟೆಲಿಕಾಂ ಕಂಪನಿಗಳಲ್ಲಿ ಒಂದಾದ ಏರ್‌ಟೆಲ್ (Airtel) ಗ್ರಾಹಕರಿಗಾಗಿ ಉತ್ತಮ ಪ್ಯಾಕೇಜ್ ಅನ್ನು ಪರಿಚಯಿಸಿದೆ. ಕಂಪನಿಯು ಈಗ  249 ರೂ ರೀಚಾರ್ಜ್ ಯೋಜನೆಯೊಂದಿಗೆ (Recharge plan) 500MB ಉಚಿತ ದೈನಂದಿನ ಡೇಟಾವನ್ನು ನೀಡಲು ಪ್ರಾರಂಭಿಸಿದೆ. ಏರ್‌ಟೆಲ್ ಥ್ಯಾಂಕ್ಸ್ ಅಪ್ಲಿಕೇಶನ್ (Airtel thanks App) ಮೂಲಕ ಬಳಕೆದಾರರು ಪ್ರತಿದಿನ 0.5 GB ಅಥವಾ 500 MB ಡೇಟಾವನ್ನು ಪಡೆದುಕೊಳ್ಳಬಹುದು. ಈ ವಿಶೇಷ ಕೊಡುಗೆಯು ಈ ನಿರ್ದಿಷ್ಟ ಪ್ರಿಪೇಯ್ಡ್ ರೀಚಾರ್ಜ್ ಯೋಜನೆಗೆ (Prepaid recharge plan) ಮಾತ್ರ ಮಾನ್ಯವಾಗಿರುತ್ತದೆ.  TelecomTalk ನ ವರದಿಯ ಪ್ರಕಾರ, ಇದು ಹೊಸ ಯೋಜನೆ ಅಲ್ಲ, ಆದರೆ ಏರ್‌ಟೆಲ್ ಅಸ್ತಿತ್ವದಲ್ಲಿರುವ ಯೋಜನೆಗೆ ಹೊಸ ಪ್ರಯೋಜನಗಳನ್ನು ಸೇರಿಸಿದೆ.

ಪ್ರತಿದಿನ ಸಿಗಲಿದೆ 2GB ಡೇಟಾ : 
ಏರ್‌ಟೆಲ್ (Airtel) 249 ರೂ. ಪ್ಲಾನ್‌ ನಲ್ಲಿ ಈ ಹಿಂದೆ ನೀಡಲಾಗಿದ್ದ ಎಲ್ಲಾ ಪ್ರಯೋಜನಗಳು ಹಾಗೇ ಇರಲಿದೆ. ಅದರ ಜೊತೆಗೆ 500MB ಉಚಿತ ಡೇಟಾವನ್ನು ಕೂಡ ಸೇರಿಸಿದೆ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಈ ಯೋಜನೆಯಲ್ಲಿ ದಿನಕ್ಕೆ 1.5GB ಉಚಿತ ಡೇಟಾವನ್ನು (free data) ನೀಡಲಾಗುತ್ತಿತ್ತು ಮತ್ತು ಈಗ ದೈನಂದಿನ ಒಟ್ಟು ಡೇಟಾ ಮಿತಿಯನ್ನು 2GB ಗೆ ಹೆಚ್ಚಿಸಲಾಗಿದೆ. ಹೆಚ್ಚುವರಿಯಾಗಿ, ಈ ಯೋಜನೆಯು ಏರ್‌ಟೆಲ್ ಥ್ಯಾಂಕ್ಸ್ (Airtel thanks app) ಪ್ರಯೋಜನಗಳೊಂದಿಗೆ ಅನಿಯಮಿತ ಧ್ವನಿ ಕರೆ, ದಿನಕ್ಕೆ 100 SMS ಅನ್ನು ಸಹ ನೀಡುತ್ತದೆ.
 
ಇದನ್ನೂ ಓದಿ Google Play Store: ಪ್ರಚಲಿತ Smart TV App ನಿಷೇಧಿಸಿದ Google, ನಿಮ್ಮ ಬಳಿಯೂ ಇದ್ದರೆ ತಕ್ಷಣ ಡಿಲೀಟ್ ಮಾಡಿ

ಏರ್‌ಟೆಲ್ ರೂ 249 ಪ್ಲಾನ್‌ : 
ಏರ್‌ಟೆಲ್‌ನ 249 ರೂ ಪ್ಲಾನ್‌ನ ಮಾನ್ಯತೆಯು 28 ದಿನಗಳವರೆಗೆ ಇರಲಿವೆ. ಈ ಯೋಜನೆಯಲ್ಲಿ ಪ್ರತಿದಿನ 1.5GB ಡೇಟಾ ಲಭ್ಯವಿದೆ. ಅಂದರೆ 42GB ಡೇಟಾ 28 ದಿನಗಳವರೆಗೆ ಲಭ್ಯವಿದೆ. ಈಗ ಬಳಕೆದಾರರು ಈ ಯೋಜನೆಯಲ್ಲಿ 56GB ಡೇಟಾವನ್ನು ಪಡೆಯಲಿದ್ದಾರೆ. ಅಂದರೆ, ದಿನಕ್ಕೆ 2GB ಡೇಟಾ ಸಿಗಲಿದೆ. 

500MB ಹೆಚ್ಚುವರಿ ಡೇಟಾವನ್ನು ಪಡೆದುಕೊಳ್ಳುವುದು ಹೇಗೆ ?
500MB ಹೆಚ್ಚುವರಿ ಉಚಿತ ಡೇಟಾವನ್ನು ಬಳಸಲು ಬಳಕೆದಾರರು ತಮ್ಮ ಏರ್‌ಟೆಲ್ ಸಿಮ್ ಕಾರ್ಡ್ (Airtel Sim card) ಅನ್ನು  249 ರೂ. ಪ್ಯಾಕ್‌ನೊಂದಿಗೆ ರೀಚಾರ್ಜ್ (Recharge plan) ಮಾಡಬೇಕಾಗುತ್ತದೆ. ಒಂದು ವೇಳೆ ಏರ್‌ಟೆಲ್ ಥ್ಯಾಂಕ್ಸ್ ಆ್ಯಪ್ ಈಗಾಗಲೇ ಹೊಂದಿಲ್ಲದಿದ್ದರೆ ಅದನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕು. ಏರ್‌ಟೆಲ್ ಥ್ಯಾಂಕ್ಸ್ ಅಪ್ಲಿಕೇಶನ್ ಒಪನ್‌ ಮಾಡಿ, ಉಚಿತ 500MB ಡೇಟಾ ಆಯ್ಕೆಯನ್ನು ರಿಡೀಮ್ ಮಾಡಿಕೊಳ್ಳಬಹುದು. 28 ದಿನಗಳವರೆಗೆ ಬಳಕೆದಾರರು ಪ್ರತಿದಿನ ಡೇಟಾವನ್ನು ರಿಡೀಮ್ ಮಾಡುವ ಪ್ರಕ್ರಿಯೆಯನ್ನು ಪುನರಾವರ್ತಿಸಬೇಕಾಗುತ್ತದೆ.

ಇದನ್ನೂ ಓದಿ : iPhone 13ರ ಮೇಲೆ ಸಿಗಲಿದೆ ಹಿಂದೆದೂ ಸಿಗದ Discount, ಸಿಗಲಿದೆ 37 ಸಾವಿರ ರೂ ಗಳ ಭರ್ಜರಿ ರಿಯಾಯಿತಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News