32 ಇಂಚಿನ ಟಿವಿ ದರದಲ್ಲಿ 50 ಇಂಚಿನ ಸ್ಮಾರ್ಟ್ LED ಟಿವಿ ಲಭ್ಯ.!

Smart TV Deal: ಹಬ್ಬಗಳ ಹಿನ್ನೆಲೆಯಲ್ಲಿ ಆಯ್ದ ಸ್ಮಾರ್ಟ್ ಟಿವಿಗಳ ಖರೀದಿಯ ಮೇಲೆ ಗ್ರಾಹಕರಿಗೆ ಭಾರೀ ರಿಯಾಯಿತಿ ನೀಡಲಾಗುತ್ತಿದೆ. ಈ ಮೂಲಕ ದುಬಾರಿ ತಿವಿಹಳನ್ನು ಕೂಡಾ ಅಗ್ಗದ ಬೆಲೆಗೆ ಖರೀದಿಸುವುದು ಸಾಧ್ಯವಾಗುತ್ತದೆ.   

Written by - Ranjitha R K | Last Updated : Sep 29, 2022, 01:11 PM IST
  • ಭಾರತದಲ್ಲಿ ಸ್ಮಾರ್ಟ್ ಎಲ್ ಇಡಿ ಟಿವಿಗಳ ಬೇಡಿಕೆ ಹೆಚ್ಚುತ್ತಿದೆ.
  • ಕೈಗೆಟುಕುವ ಬೆಲೆಯಲ್ಲಿ ಖರೀದಿಸಬಹುದು ಸ್ಮಾರ್ಟ್ ಎಲ್ ಇಡಿ ಟಿವಿ
  • ರಿಯಾಯಿತಿ ದರದಲ್ಲಿ ಮಾರಾಟವಾಗುತ್ತಿದೆ ಸ್ಮಾರ್ಟ್ ಟಿವಿ
  32 ಇಂಚಿನ ಟಿವಿ ದರದಲ್ಲಿ 50 ಇಂಚಿನ ಸ್ಮಾರ್ಟ್ LED ಟಿವಿ ಲಭ್ಯ.!  title=
Smart TV Deal (file photo)

Smart TV Deal: ಭಾರತದಲ್ಲಿ ಸ್ಮಾರ್ಟ್ ಎಲ್ ಇಡಿ ಟಿವಿಗಳ ಬೇಡಿಕೆ ಹೆಚ್ಚುತ್ತಿದೆ. ಈ ಟಿವಿಗಳು ಸಾಕಷ್ಟು ದುಬಾರಿಯಾಗಿರುತ್ತವೆ. ಆದರೆ, ಈಗ ಈ ಟಿವಿಗಳನ್ನು ಕೈಗೆಟುಕುವ ಬೆಲೆಯಲ್ಲಿ ಖರೀದಿಸಬಹುದು. ಆಯ್ದ ಸ್ಮಾರ್ಟ್ ಟಿವಿಗಳ ಖರೀದಿಯ ಮೇಲೆ ಗ್ರಾಹಕರಿಗೆ ಭಾರೀ ರಿಯಾಯಿತಿ ಸಿಗುತ್ತಿದೆ. ಹಬ್ಬದ  ಸೀಸನ್ ನಲ್ಲಿ ಸ್ಮಾರ್ಟ್ ಟಿವಿಗಳನ್ನು ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗುತ್ತಿದೆ. 

ಒನ್ ಪ್ಲಸ್ ಯು 1 ಎಸ್ 126 ಸೆಂ.ಮಿ 50 ಇಂಚು ಸ್ಮಾರ್ಟ್ ಟಿವಿ :
4K ರೆಸಲ್ಯೂಶನ್, ಹೆಚ್ ಡಿಆರ್ 10+  ಸರ್ಟಿಫಿಕೇಶನ್  30W ಡಾಲ್ಬಿ ಆಡಿಯೋ, ಜೊತೆಗೆ ಹ್ಯಾಂಡ್ಸ್ ಫ್ರೀ ವಾಯ್ಸ್ ಕಂಟ್ರೋಲ್ ಮತ್ತು ಬೆಜೆಲ್-ಲೆಸ್ ವಿನ್ಯಾಸವನ್ನು ಒಳಗೊಂಡಿರುವ ಈ ಸ್ಮಾರ್ಟ್ ಟಿವಿಯಲ್ಲಿ ಇನ್ನೂ ಅನೇಕ ಉತ್ತಮ ವೈಶಿಷ್ಟ್ಯಗಳನ್ನು ಕಾಣಬಹುದು. ಈ ಸ್ಮಾರ್ಟ್ ಎಲ್ ಇಡಿ ಟಿವಿಯನ್ನು 34,999 ರೂಪಾಯಿಗೆ ಖರೀದಿಸಬಹುದು.  ಈ ಸ್ಮಾರ್ಟ್ ಟಿವಿಯ ಬೆಲೆ  49,999 ರೂಪಾಯಿ ಆಗಿದ್ದರೂ, ಈ ಟಿವಿಯ ಮೇಲೆ 30 ಪ್ರತಿಶತದಷ್ಟು ರಿಯಾಯಿತಿ ನೀಡಲಾಗುತ್ತಿದೆ. 

ಇದನ್ನೂ ಓದಿ : ಕೈಗೆಟುಕುವ ಬೆಲೆಯಲ್ಲಿ ಜಬರ್ದಸ್ತ್ ಫೋನ್ ಬಿಡುಗಡೆ ಮಾಡಲು ಒಪ್ಪೋ ಸಿದ್ಧತೆ

ಸೋನಿ ಬ್ರೆವಿಯಾ 125.7 ಸೆಂ.ಮಿ 50 ಇಂಚು ಅಲ್ಟ್ರಾ ಹೆಚ್ ಡಿ (4ಕೆ ) ಸ್ಮಾರ್ಟ್ ಟಿವಿ :
ಈ ಸ್ಮಾರ್ಟ್ ಟಿವಿ ಅತ್ಯುತ್ತಮ ವೈಶಿಷ್ಟ್ಯಗಳನ್ನು ಹೊಂದಿದೆ. ಇದರ ದೊಡ್ಡ ವೈಶಿಷ್ಟ್ಯವೆಂದರೆ ಈ ಸ್ಮಾರ್ಟ್ ಟಿವಿಯನ್ನು ಭಾರತದಲ್ಲಿಯೇ ತಯಾರಿಸಲಾಗಿದೆ. ಈ ಟಿವಿ  ಗೂಗಲ್ ಟಿವಿ, ಓಕೆ ಗೂಗಲ್, ಅಲೆಕ್ಸಾ, ಡಾಲ್ಬಿ ಆಡಿಯೊ ಮತ್ತು ಲೈವ್ ಕಲರ್‌ನಂತಹ ಅತ್ಯುತ್ತಮ ವೈಶಿಷ್ಟ್ಯಗಳನ್ನು ಹೊಂದಿದೆ. ಇದರ ಬೆಲೆ 50900 ರೂಪಾಯಿ. ಆದರೆ, ಈ ಸ್ಮಾರ್ಟ್ ಟಿವಿ ಖರೀದಿ ಮೇಲೆ 38 ಶೇಕಡಾ ರಿಯಾಯಿತಿ ನೀಡಲಾಗುತ್ತಿದೆ. 

ಇದನ್ನೂ ಓದಿ : ಫ್ಲಿಪ್‌ಕಾರ್ಟ್‌ನಲ್ಲಿ ಕೇವಲ 35 ಸಾವಿರಕ್ಕೆ ಐಫೋನ್ 13 ಖರೀದಿಸಿದವನಿಗೆ ಕಾದಿತ್ತು ಶಾಕ್..!

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News